ಲಿಫ್ಟ್ ಬರುವುದನ್ನು ಶಾಂತಿಯಿಂದ ನಿರೀಕ್ಷಿಸಿ. ಬಟನ್‌ನ್ನು ಮೇಲಿಂದ ಮೇಲೆ ಒತ್ತಬೇಡಿ.

ಲಿಫ್ಟ್ ಬಟನ್‌ನ್ನು ಒತ್ತಲೇಬೇಕಿದ್ದರೆ ಕೇವಲ 1 ಅಥವಾ 2 ಸಲ ಮಾತ್ರ ಒತ್ತಿ. ಅದೂ ಕೂಡ ಅತ್ಯಂತ ಮೃದುವಾಗಿ. ಕೆಲವರಂತೂ ಜೋರಾಗಿ ಬಟನ್‌ ಒತ್ತುವುದರಿಂದ ಲಿಫ್ಟ್ ಬೇಗನೇ ಕೆಳಗೆ ಬಂದುಬಿಡುತ್ತದೆ ಎಂದು ಭಾವಿಸುತ್ತಾರೆ.

ಲಿಫ್ಟ್ ಬಂದುಬಿಟ್ಟಿದೆ ಹಾಗೂ ನೀವು ಯಾರೊಂದಿಗೋ ಮಾತನಾಡುತ್ತಿದ್ದೀರಿ, ಆಗ ಲಿಫ್ಟ್ ನ್ನು ತಡೆಯಲು ಹೋಗಬೇಡಿ. ಮತ್ತೊಂದು ಸಲ ಲಿಫ್ಟ್ ಬರುವತನಕ ನಿರೀಕ್ಷಿಸಿ. ಬೇರೆಯವರಿಗೆ ಹೋಗಲು ಅವಕಾಶ ಕೊಡಿ.

lift-att

ಸಾಮಾನ್ಯ ಶಿಷ್ಟಾಚಾರದ ಪ್ರಕಾರ ವಯಸ್ಸಾದವರು, ಮಕ್ಕಳು ಹಾಗೂ ಮಹಿಳೆಯರಿಗೆ ಮೊದಲು ಹೋಗಲು ಅವಕಾಶ ಕೊಡಿ. 2 ನಿಮಿಷ ತಡವಾದರೆ ಏನೂ ತೊಂದರೆಯಾಗುವುದಿಲ್ಲ.

ಯಾರಾದರೂ ಅನಾರೋಗ್ಯಪೀಡಿತ ವ್ಯಕ್ತಿ ವೀಲ್ ‌ಚೇರ್‌ ಅಥವಾ ಸ್ಟ್ರೆಚರ್‌ ಮೂಲಕ ಲಿಫ್ಟ್ ಪ್ರವೇಶಿಸುತ್ತಿದ್ದರೆ ಮೊದಲು ಅವರಿಗೆ ದಾರಿ ಬಿಡಿ.

ಲಿಫ್ಟ್ ನಲ್ಲಿ ಯಾರಾದರೂ ಪರಿಚಿತರು ಸಿಕ್ಕರೆ ಬೇರೆಯವರನ್ನು ಗಮನದಲ್ಲಿಟ್ಟುಕೊಂಡು ಮಾತುಕತೆ ನಡೆಸಿ. ಲಿಫ್ಟ್ ನಲ್ಲಿ ಜೋರು ಜೋರಾಗಿ ಮಾತನಾಡುವುದರಿಂದ, ನಗುವುದರಿಂದ ಬೇರೆಯವರಿಗೆ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ಸಾಧ್ಯತೆ ಇದೆ.

ಲಿಫ್ಟ್ ನಲ್ಲಿ ತೀರಾ ಅಗತ್ಯವಿದ್ದರಷ್ಟೇ ಮೊಬೈಲ್‌ನಲ್ಲಿ ಮಾತನಾಡಿ. ಅದೂ ಕೂಡ ಸಂಕ್ಷಿಪ್ತವಾಗಿ ಮೆಲ್ಲಗಿನ ಧ್ವನಿಯಲ್ಲಿ ಮಾತನಾಡಿ.

ನೀವು ಲಿಫ್ಟ್ ನಲ್ಲಿ ಪ್ರವೇಶ ಮಾಡಿಬಿಟ್ಟಿದ್ದೀರಿ. ಬಳಿಕ ಯಾರೋ ಲಿಫ್ಟ್ ನಲ್ಲಿ ಪ್ರವೇಶಿಸಲು ಯತ್ನಿಸುತ್ತಾರೆ. ಆಗ ಒಮ್ಮೆಲೆ ಬಾಗಿಲು ಮುಚ್ಚಿಬಿಟ್ಟರೆ ಅದು ಅತ್ಯಂತ ಅಶೋಭನೀಯ ಎನಿಸುತ್ತದೆ.

ನೀವು ಸೀರೆಯಂತಹ ಪೋಷಾಕು ಅಥವಾ ದೊಡ್ಡ ದುಪಟ್ಟಾ ಹೊಂದಿದ್ದರೆ ಅದನ್ನು ಕೈಯಲ್ಲಿ ಸರಿಯಾಗಿ ಹಿಡಿದುಕೊಂಡು ಒಳಗೆ ಪ್ರವೇಶಿಸಿ. ಅದು ಎಲ್ಲಿಯಾದರೂ ಸಿಲುಕುವ, ಬೇರೆಯವರಿಗೆ ತಗುಲುವ ಸಾಧ್ಯತೆಗಳು ಇರುತ್ತವೆ.

- ಅಂಜನಾ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ