ಇದೆಂಥ ಮೌಲಿಕ ಹಕ್ಕು? : ಅಮೆರಿಕಾದ ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೂ ಶಸ್ತ್ರಾಸ್ತ್ರ ಇಟ್ಟುಕೊಳ್ಳುವ ಮೌಲಿಕ ಹಕ್ಕು ನೀಡಿದೆ. ಈ ಹಕ್ಕನ್ನು 1791ರಲ್ಲಿ, ಪ್ರತಿ ನಾಗರಿಕರೂ ಕಳ್ಳಕಾಕರ ವಿರುದ್ಧ ತಮ್ಮ ಆತ್ಮರಕ್ಷಣೆಗಾಗಿ ಇರಿಸಿಕೊಳ್ಳಬಹುದು, ಆಡಳಿತ ಸರ್ಕಾರ ಜೋರು ಜಬರ್ದಸ್ತು ಮಾಡಿದರೆ ಅದರ ವಿರುದ್ಧ ನಿಲ್ಲಬಹುದು, ಎಂಬ ತರ್ಕ ಹೂಡಿ ಇದನ್ನು ಕೊಟ್ಟಿತ್ತು. ಆದರೆ ಇತ್ತೀಚೆಗೆ ಉದ್ದೇಶರಹಿತ ಹತ್ಯಾಕಾಂಡಗಳು ಸತತ ಹೆಚ್ಚುತ್ತಲೇ ಇವೆ, ಹೀಗಾಗಿ ಗನ್ ಕಂಟ್ರೋಲ್ ಕಾನೂನು ಜಾರಿಗೊಳಿಸಬೇಕೆಂಬ ಆಗ್ರಹವಿದೆ. ಆದರೆ ಇದರ ವಿರುದ್ಧ ಜನತೆ ಶಸ್ತ್ರಾಸ್ತ್ರ ಕೇವಲ ಭಯಪಡಿಸಲಿಕ್ಕಾಗಿ ಮಾತ್ರ ಎನ್ನುತ್ತದೆ. ಹೀಗಾಗಿ ಮಿಚಿಗನ್ ರಾಜ್ಯದಲ್ಲಿ ಇದರ ವಿರುದ್ಧ ಒಂದು ಮೆರವಣಿಗೆ ಹೊರಡಿಸಿ, ಜನತೆ ಓವರ್ ಸೈಜ್‌ನ ನಕಲಿ ಬಂದೂಕು ಇರಿಸಿಕೊಂಡು, ತಮಗೆ ದೊರೆತ ಮೌಲಿಕ ಹಕ್ಕನ್ನು ಕಿತ್ತುಕೊಳ್ಳಬೇಡಿ ಎಂದು ಹುಯಿಲೆಬ್ಬಿಸಿತು.
ಹ್ಯಾಟ್‌ನ್ನು ನೋಡುವುದೋ ಅದನ್ನು ಧರಿಸಿದವಳನ್ನೋ? : ಕಾಲಕ್ಕೆ ತಕ್ಕಂತೆ ಹ್ಯಾಟ್ ಹೇಗಿರಬೇಕೆಂದರೆ, ಅದನ್ನು ನೋಡಿದ ಜನ ಯಾವುದನ್ನು ನೋಡುವುದೆಂಬಂತೆ ಗೊಂದಲಗೊಳ್ಳಬೇಕು. ನಮ್ಮಲ್ಲಿ ತಲೆಯ ಮೇಲೆ ಸೆರಗು ಹೊದ್ದು, ಸೌಂದರ್ಯ ಮರೆಮಾಚುವ ಬದಲು, ಫ್ಯಾಷನ್‌ಗೆ ತಕ್ಕಂತೆ ಹ್ಯಾಟ್ ಹೀಗಿದ್ದರೆ ಸೌಂದರ್ಯ ಸಿರಿ ಇಮ್ಮಡಿಸುತ್ತದಲ್ಲವೇ?
ಅಲ್ಲ....ಅಲ್ಲ, ರೇಪ್ ತಯಾರಿಯಲ್ಲ : ಯೂಕ್ರೇನ್‌ನ ಫೇಮಸ್ ಪ್ರೊಟೆಸ್ಟರ್‌ನ್ನು ಕಂಟ್ರೋಲ್‌ಗೆ ತಯಾರಾಗುತ್ತಿದೆ. ತಮ್ಮ ಮೇಲುಡುಗೆಯನ್ನು ಕಳಚಿ, ಬಾಡಿ ಪೇಂಟ್ ಮಾಡಿಸಿಕೊಳ್ಳುತ್ತಾ ಕೋಟ್ಯಂತರ ಯುವತಿಯರು ಪೊಲೀಸರಿಗೊಂದು ದೊಡ್ಡ ತಲೆನೋವಾಗಿದ್ದಾರೆ. ಪಬ್ಲಿಕ್ ಕಾರ್ಯಕ್ರಮ ಕವರ್ ಮಾಡುವ ಟಿವಿ ಕ್ಯಾಮೆರಾ, ಸದಾ ಇವರತ್ತಲೇ ಇರುತ್ತದೆ. ಅಸಹಾಯಕ ಪೊಲೀಸರು ಏನೂ ಮಾಡಲಾರದವರಾಗಿದ್ದಾರೆ. ತಮ್ಮ ಮಾಟವಾದ ದೇಹವನ್ನು ತಮ್ಮಿಷ್ಟ ಬಂದಂತೆ ಪ್ರದರ್ಶಿಸುತ್ತೇವೆ ಎನ್ನುವ ಇವರನ್ನು ತಡೆಯುವವರುಂಟೆ?
ಮುಸುಕಿನ ಹಿಂದಿರುವವರು ಯಾರು? : ಇದು ಯಾವುದೋ ಹೊಸ ಸಿನಿಮಾದ ಪೊಲೀಸರ ಪೋಷಾಕು ಇರಬಹುದೆಂದು ಭಾವಿಸದಿರಿ. ಅಡಿಯಿಂದ ಮುಡಿಯಲರೆಗೆ ರಬ್ಬರ್‌ನಿಂದ ಆಲೃತವಾದ ಈ ಪೋಷಾಕು, ಜಪಾನಿ ಭಾಷೆಯಲ್ಲಿ ಜೆನ್ ಶಿನ್ ತೇತ್ಸೂ ಎನಿಸಿದೆ. ಕೆಲವರಂತೂ ಇದನ್ನು ಧರಿಸಿ ಕುಳಿತು ಹರಟೆಹೊಡೆಯುವ ಕ್ಲಬ್‌ನ್ನೇ ತೆರೆದಿದ್ದಾರೆ, ಅದುವೇ ಜಿತಾಯಿ ಕ್ಲಬ್. ಈ ಮುಸುಕಿನ ಡ್ರೆಸ್‌ನ ಹಿರಿಮೆ ಎಂದರೆ, ಯಾರು ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಮೂರನೆಯವರಿಗೆ ಗೊತ್ತೇ ಆಗುವುದಿಲ್ಲ. ಇದು ಬುರ್ಖಾ ಅಲ್ಲ, ಅದಕ್ಕಿಂತ ಹೆಚ್ಚು ಯಶಸ್ವಿಯಾದುದು. ಏಕೆಂದರೆ ಇದರಡಿ ಏನನ್ನೂ ಧರಿಸಬೇಕಿಲ್ಲ, ದೇಹದ ಉಬ್ಬು ತಗ್ಗುಗಳನ್ನು ಸ್ಪಷ್ಟಪಡಿಸುತ್ತದೆ, ಉಸಿರಾಟಕ್ಕೂ ತೊಂದರೆ ಇಲ್ಲ.
ನಾವೇ ಸೂಪರ್ ಹೀರೋಗಳು : ಕಾಮಿಕ್ಸ್ ಹೀರೋಗಳಾದ ಸೂಪರ್ ಮ್ಯಾನ್, ಬ್ಯಾಟ್ ಮ್ಯಾನ್, ಮ್ಯಾಂಡ್ರೇಕ್ ಮುಂತಾದವರು ಓದುಗರನ್ನು ಬಹಳ ಮರುಳು ಮಾಡಿದ್ದಾರೆ. ಚೀನಾದಲ್ಲಿ ಒಂದು ದಿನ, 532 ಮಂದಿ ಇಂಥ ಕಾಮಿಕ್ಸ್ ಕ್ಯಾರೆಕ್ಟರ್ ವೇಷದಲ್ಲಿ ಬಂದು ಪ್ರೇಕ್ಷಕರಿಗೆ ದಂಗುಬಡಿಸಿ ರೆಕಾರ್ಡ್ ಮಾಡಿದರು. ಆ ರೆಕಾರ್ಡ್‌ನ್ನು ಮುರಿಯಬೇಕೆಂದು ವಾಶಿಂಗ್ಟನ್‌ನಲ್ಲಿ ಪ್ರಯತ್ನಿಸಲಾಯಿತು. ಆದರೆ ಇಲ್ಲಿ ಕೇವಲ 237 ಪಾತ್ರಗಳು ಮಾತ್ರ ಕಾಣಿಸಿದವು. ರೆಕಾರ್ಡ್ ಆಗದಿದ್ದರೇನಂತೆ..... ಮುಖಕ್ಕೆ ಬಣ್ಣ ಹಚ್ಚಿದ ಖುಷಿಯಂತೂ ಉಂಟು!