ರಾಮು : ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಒಬ್ಬ ಮಹಿಳೆ ಇದ್ದಾಳೆ ಅನ್ನೋದೂ ಸತ್ಯ.

ಶ್ಯಾಮು : ಅದನ್ನು ನಾನೂ ಒಪ್ತೀನಿ. ಆ ಮಹಿಳೆ ಅವನಿಗೆ ಎಷ್ಟು ಕಾಟ ಕೊಡ್ತಾಳೇಂದ್ರೆ ಅವನು ದುಃಖಿತನಾಗಿ ತನ್ನ ಕೆಲಸದಲ್ಲಿ ತಲ್ಲೀನನಾಗುತ್ತಾನೆ, ಶ್ರಮಹಿಸಿ ಕೆಲಸ ಮಾಡ್ತಾನೆ. ಯಶಸ್ಸು ತಾನಾಗೇ ಬರುತ್ತೆ.

ಈ ಪ್ರಪಂಚದಲ್ಲಿ 2 ಕೆಲಸ ಬಹಳ ಕಷ್ಟ. ಮೊದಲನೆಯದು ನಮ್ಮ ಐಡಿಯಾನ ಇನ್ನೊಬ್ಬರ ತಲೆಗೆ ತುಂಬುವುದು. ಎರಡನೇಯದು ಇನ್ನೊಬ್ಬರ ಹಣಾನ ನಮ್ಮ ಜೇಬಿಗೆ ಹಾಕ್ಕೊಳ್ಳೋದು.

ಮೊದಲನೇ ಕೆಲಸದಲ್ಲಿ ನಿಪುಣರಾದವರನ್ನು ಟೀಚರ್‌ ಅಂತಾರೆ.

ಎರಡನೇ ಕೆಲಸದಲ್ಲಿ ನಿಪುಣರಾದವರನ್ನು ಬಿಸ್‌ ನೆಸ್‌ ವುಮನ್‌ ಅಂತಾರೆ. ಮೇಲಿನ ಎರಡೂ ಕೆಲಸದಲ್ಲಿ ನಿಪುಣರಾದವರನ್ನು ಹೆಂಡತಿ ಅನ್ನುತ್ತಾರೆ.

ಮಹಿಳೆ : ನನ್ನ ಗಂಡನಿಗೆ ಪ್ರಮೋಶನ್‌ ಸಿಗಲಿ. ಹಣ, ಬಂಗಲೆ, ವಾಹನ ಎಲ್ಲಾ ಸಿಗಲಿ. ನನಗೇನೂ ಬೇಡ. ಎಲ್ಲ ಅವರಿಗೇ ಸಿಗಲಿ. ಆಮೇಲೆ.... ನಾನು ಅವರಿಂದ ಎಲ್ಲ ಕಿತ್ಕೋತೀನಿ.

ಒಬ್ಬ ಪೆದ್ದ ಪುರುಷ ತನ್ನ ಹೆಂಡತಿಗೆ ಸ್ವಲ್ಪ ಹೊತ್ತು ತೆಪ್ಪಗಿರು ಅನ್ನುತ್ತಾನೆ.

ಆದರೆ ಒಬ್ಬ ಬುದ್ಧಿವಂತ ಪುರುಷ ನಿನ್ನ ತುಟಿಗಳು ಮೌನವಾಗಿರುವಾಗ ನಿನ್ನ ಮುಖ ಬಹಳ ಸುಂದರವಾಗಿರುತ್ತದೆ ಅನ್ನುತ್ತಾನೆ.

ಒಂದು ಪುಸ್ತಕದ ಲಕ್ಷಾಂತರ ಪ್ರತಿಗಳು ಮಾರಾಟವಾದವು. ಅದಕ್ಕೆ ಕಾರಣ ಟೈಪಿಂಗ್‌ ನಲ್ಲಾದ ಒಂದು ಸಣ್ಣ ತಪ್ಪು.

ಪುಸ್ತಕದ ಹೆಸರು, `ಆ್ಯನ್‌ ಐಡಿಯಾ ಕೆನ್‌ ಚೇಂಜ್‌ ಯುವರ್‌ ಲೈಫ್‌.' ಅದು `ಆ್ಯನ್‌ ಐಡಿಯಾ ಕೆನ್‌ ಚೇಂಜ್‌ ಯುವರ್‌ ವೈಫ್‌' ಎಂದು ತಪ್ಪಾಗಿ ಅಚ್ಚಾಗಿತ್ತು.

ಪತ್ನಿ : ರೀ, ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ?

ಪತಿ : ಬಹಳಷ್ಟು!

ಪತ್ನಿ : ಅದೇ ಎಷ್ಟು?

ಪತಿ : ಎಷ್ಟೂಂದ್ರೆ ನಿನ್ನಂಥವಳೇ ಇನ್ನೊಬ್ಬಳನ್ನು ಮದುವೆ ಆಗುವಷ್ಟು.

ಪತಿ : ಈಗ ನೀನೇ ಈ ಮನೆಯನ್ನು ಕನಸಿನ ಮನೆಯನ್ನಾಗಿ ಮಾಡಬಹುದು. ನನಗೆ ನೆಮ್ಮದಿಯ ಕ್ಷಣಗಳನ್ನು ನೀಡಬಹುದು.

ಪತ್ನಿ : ಹೌದಾ.... ಹೇಗೆ?

ಪತಿ : ತೌರುಮನೆಗೆ ಹೋಗಿ.

ಒಬ್ಬ ಪ್ರಸಿದ್ಧ ಸಂತರು ಪ್ರವಚನ ನೀಡುತ್ತಿದ್ದರು, ``ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳನ್ನು ಒಬ್ಬ ಮಹಿಳೆಯ ಬಾಹುಗಳಲ್ಲಿ ಕಳೆದೆ. ಆದರೆ ಅವಳು ನನ್ನ ಪತ್ನಿಯಲ್ಲ.....''

ಕೇಳುವವರು ಆಶ್ಚರ್ಯದಿಂದ ಮೂಕರಾಗಿದ್ದರು.

ಸ್ವಲ್ಪ ಹೊತ್ತು ಸುಮ್ಮನಿದ್ದ ಸಂತರು ಮುಂದೆ ಹೇಳಿದರು, ``ಅಂದಹಾಗೆ ಅವಳು ನನ್ನ ತಾಯಿ.''

ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.

ಅಲ್ಲೊಬ್ಬ ಆತುರಗಾರನಿದ್ದ. ಇದನ್ನು ಮನೆಯಲ್ಲಿ ಹೇಳಿ ಹೆಂಡತಿಯ ಹೊಟ್ಟೆ ಉರಿಸಬೇಕೆಂದುಕೊಂಡ.

ಅವನು ಮನೆಗೆ ಬಂದು ಹೆಂಡತಿಗೆ ಹೇಳಿದ, ``ನನ್ನ ಬದುಕಿನ ಅತ್ಯಂತ ಸುಂದರ ಕ್ಷಣಗಳನ್ನು ಒಬ್ಬ ಮಹಿಳೆಯ ಬಾಹುಗಳಲ್ಲಿ ಕಳೆದಿದ್ದೇನೆ. ಆದರೆ ಅವಳು ನನ್ನ ಹೆಂಡತಿ ಅಂದರೆ ನೀನಲ್ಲ.''

ಅನು ಸ್ವಲ್ಪ ಹೊತ್ತು ಅಲ್ಲೇ ನಿಂತು ಎರಡನೇ ಸಾಲನ್ನು ನೆನೆಸಿಕೊಳ್ಳಲು ಪ್ರಯತ್ನಿಸಿದ. ಆದರೆ ಎದುರಿಗೆ ಕ್ರೋಧತಪ್ತಳಾಗಿದ್ದ ಹೆಂಡತಿಯನ್ನು ಕಂಡು ಅವನಿಗೆ ಯಾವುದೂ ನೆನಪಾಗಲಿಲ್ಲ. ನಂತರ ಮುಂದೆ ಒಂದು ದಿನ ಅವನಿಗೆ ಎರಡನೇ ಸಾಲು ನೆನಪಾದಾಗ ಆಸ್ಪತ್ರೆಯ ಬೆಡ್‌ ರೂಮಿನಲ್ಲಿ ಬಿದ್ದುಕೊಂಡು ನರಳುತ್ತಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ