ವಿಶ್ವಸಂಸ್ಥೆಯ ಒಂದು ಅಂತಾರಾಷ್ಟ್ರೀಯ ಅಂಗಸಂಸ್ಥೆಯ ಅಧ್ಯಕ್ಷರ ಹುದ್ದೆಗೆ ಸಂದರ್ಶನ ನಡೆಯುತ್ತಿತ್ತು.
ಪ್ರಶ್ನೆ : 5ರ ಮಧ್ಯೆ 4ನ್ನು ಬರೆದು ತೋರಿಸಿ.
ಚೀನೀ : ಇದು ಸಾಧ್ಯವೇ ಇಲ್ಲ ಬಿಡಿ!
ಜಪಾನಿ : ಇದನ್ನು ನಾವು ಒಪ್ಪುವುದೇ ಇಲ್ಲ!
ಅಮೆರಿಕನ್ : ಈ ಪ್ರಶ್ನೆಯೇ ತಪ್ಪು!
ಬ್ರಿಟನ್ : ಗೂಗಲ್ ನಲ್ಲಿ ಇದಕ್ಕೆ ಉತ್ತರ ಇಲ್ಲ!
ಭಾರತೀಯ : ವೆರಿ ಸಿಂಪಲ್ IV
ಭಾರತೀಯರಲ್ಲದೆ ಬೇರಾರು ಹೀಗೆ ಉತ್ತರಿಸಬಲ್ಲರು.
ಟೀಚರ್ : ರಾತ್ರಿ ಹೊತ್ತು ಸೊಳ್ಳೆಗಳು ಬಂದು ಕಚ್ಚಿದರೆ ಏನು ಮಾಡುವುದು?
ಗುಂಡ : ನಿದ್ದೆಯಿಂದ ಎದ್ದು ಅದನ್ನು ಬಡಿದುಹಾಕಿ ಮತ್ತೆ ಮಲಗುವುದು, ಅದಕ್ಕಿಂತ ಹೆಚ್ಚಿಗೆ ಏನು ಮಾಡುವುದು? ಅದನ್ನು ಎಡಗೈಲಿ ಹಿಡಿದು ಸಾರಿ ಹೇಳಿಸಲು ನಾವೇನು ರಜನೀಕಾಂತಾ?
ಒಳ್ಳೆ ಮೂಡ್ ನಲ್ಲಿದ್ದ ಕಲ್ಲೇಶಿ ಆಫೀಸ್ ಮಧ್ಯೆ ಬಿಡುವು ಮಾಡಿಕೊಂಡು, ``ಹಾರಲೇ... ನಾ ಹಾಡಲೇ?'' ಎಂದು ಖುಷಿಯ ಎಮೋಜಿ ಹಾಕಿದ್ದ.
ಹತ್ತೇ ನಿಮಿಷಗಳಲ್ಲಿ ಉಗ್ರರೂಪಿಣಿ ಹೆಂಡತಿ ಕಮೆಂಟ್ ಮಾಡಿದ್ದಳು, ``ಹೇಗಾದರೂ ಸರಿ, ಮನೆಗೆ ಬರುವಾಗ ಮರ್ಯಾದೆಯಾಗಿ ತರಕಾರಿ ತಗೊಂಡು ಬನ್ನಿ!''
ನಮ್ಮ ನಾಡಿನ ವೈದ್ಯರು ಬಿಡುವಾಗಿದ್ದಾಗ ಎಂಥ ಚಿತ್ರ ತಯಾರಿಸಬಹುದು?
ಎದುರು ಮನೇಲಿ ಡಾಕ್ಟರ್ ಪಕ್ಕದ್ಮನೇಲಿ ನರ್ಸು
ಒಂದೇ ಬೆಡ್ಡು ಇಬ್ಬರು ಪೇಶೆಂಟ್!
ರಕ್ತದಾನಿ ಇರಲಿ ಎಲ್ಲೆಲ್ಲೂ
ಕೊರೋನಾಗೊಂದು ಕಾಲ ಡೆಲ್ಟಾಗೆ ಈಗ ಕಾಲ
ಕಿಡ್ನಿ ದಾನಕ್ಕಿಂತ ದೇವರಿಲ್ಲ
ಆಪರೇಶನ್ ಕಿಡ್ನಿ ರಾಕೆಟ್
ನೆಗಡಿ ಇರಲಿ ಕೆಮ್ಮೂ ಬರಲಿ
ಸೀನ ಗೆಳೆಯರ ಜೊತೆ ಪಾರ್ಟಿ ಮುಗಿಸಿ ಮನೆಗೆ ಬಂದ. ಹಿರಿಯರಿಗೆ ತನ್ನ ಕರಾಮತ್ತು ಗೊತ್ತಾಗಬಾರದೆಂದು, ಗಂಭೀರವಾಗಿ ವ್ಯಾಪ್ ಟಾಪ್ ತೆರೆದು ಓದಲು ಕುಳಿತ.
ತಂದೆ : ಯಾಕೋ ಸೀನ, ಇವತ್ತೂ ಕುಡ್ಕೊಂಡು ಬಂದೆಯಾ......?
ಸೀನ : ಖಂಡಿತಾ ಇಲ್ಲ ಅಪ್ಪ....? ಇವತ್ತಂತೂ ಕುಡಿದೇ? ಇಲ್ಲ!
ತಂದೆ : ಮತ್ಯಾಕೋ ಓದೋದಿಕ್ಕೆ ಅಂತ ಸೂಟ್‌ಕೇಸ್ ತೆರೆದು ಮುಂದೆ ಇಟ್ಕೊಂಡು ಅದನ್ನೇ ನೋಡ್ತಿದ್ದೀಯಾ?
ರಾಮಯ್ಯ : ಈ ವಯಸ್ಸಿನಲ್ಲಿ ಆ ಹೆಂಗಸು ಹೀಗಾ ಹೇಳುವುದು?
ಸೋಮಯ್ಯ : ಅಂಥಾದ್ದು ಏನಾಯಿತು?
ರಾಮಯ್ಯ : ನಮ್ಮ ಪಕ್ಕದ ಮನೆಗೆ ಹೊಸದಾಗಿ ಬಂದ ಹೆಂಗಸನ್ನು ಠುಸ್ ಪುಸ್ ಅಂತ ನಾಜೂಕಾಗಿದ್ದಾಳಲ್ಲ ಅಂತ `ಐ ಲವ್ ಯೂ' ಅಂದ್ರೇನು? ಅಂತ ಕೇಳಿದರೆ, `ನಾನು ನಿನ್ನನ್ನು ಪ್ರೇಮಿಸುವೆ` ಅನ್ನುವುದೇ?
ಈ ವಯಸ್ಸಿನಲ್ಲಿ ಆಕೆ ಹೀಗೆ ಆಡಬಾರದಿತ್ತು ಅನಿಸಿತು, ಸೋಮಯ್ಯ, ನೀನೇನು ಹೇಳ್ತೀಯಾ?
ಸನ್ಯಾಸಿ : ಬಹಳ ದಿನ ಮಾತನಾಡದೆ ಇರುವುದಕ್ಕೆ ನಾವು ಮೌನ ವ್ರತ ಅನ್ನುತ್ತೇವೆ.
ಸಂಸಾರಿ : ಅಂಥ ಗಂಡಸನ್ನು ನಾವು ವಿವಾಹಿತ ಅಂತೀವಿ!
ರೋಗಿ : ಡಾಕ್ಟರ್, ನನಗೊಂದು ವಿಚಿತ್ರ ಕಾಯಿಲೆ, ಸಹಾಯ ಮಾಡಿ.
ಡಾಕ್ಟರ್ : ಏನಪ್ಪಾ ನಿನಗೆ ಅಂಥ ಕಾಯಿಲೆ!
ರೋಗಿ : ನಾನು ನಿದ್ದೆ ಮಾಡಿದ 10 ನಿಮಿಷಕ್ಕೇ ಕೋತಿಗಳು ಬಂದು ಕನಸಿನಲ್ಲಿ ಫುಟ್ ಬಾಲ್ ಆಡುತ್ತವೆ.
ಡಾಕ್ಟರ್ : ಹೌದಾ....? ಒಳ್ಳೆ ಸ್ಲೀಪಿಂಗ್ ಟ್ಯಾಬ್ಲೆಟ್ಸ್ ಕೊಡ್ತೀನಿ, ಇವತ್ತು ರಾತ್ರಿಯಿಂದ ತಗೋ.
ರೋಗಿ : ಆದರೆ ಇವತ್ತು ಬೇಡ, ನಾಳೆಯಿಂದ ತಗೋತೀನಿ.