ಪತಿ : ನೀನು ಬಹಳ ಮುದ್ದಾಗಿರುವೆ!

ಪತ್ನಿ : ಥ್ಯಾಂಕ್ಸ್.

ಪತಿ : ನೀನು ನಿಜಕ್ಕೂ ರಾಜಕುಮಾರಿ ತರಹ ಕಾಣ್ತಿದೀಯ…..

ಪತ್ನಿ : ಥ್ಯಾಂಕ್ಸ್, ಸೋ ಮಚ್‌ ಡಿಯರ್‌. ಮತ್ತೆ ಏನು ಮಾಡ್ತಿದ್ದೀರಿ?

ಪತಿ : ಏನಿಲ್ಲ… ಹೀಗೆ ಫ್ರೀ ಆಗಿದ್ದೆ. ಒಂದಿಷ್ಟು ಜೋಕ್‌ ಮಾಡೋಣ ಅನ್ನಿಸ್ತು…….

ಕಿಟ್ಟಿ ಪೊಲೀಸ್‌ ಸ್ಟೇಷನ್‌ಗೆ ಓಡಿಬಂದ.

ಕಿಟ್ಟಿ : ಸಾರ್‌, ಬೇಗ ನನ್ನ ಅರೆಸ್ಟ್ ಮಾಡಿ, ಒಳಗೆ ಹಾಕಿ… ಪ್ಲೀಸ್‌….

ಪೊಲೀಸ್‌ : ಯಾಕ್ರಿ… ಅಂಥಾದ್ದು ಏನು ಮಾಡಿದ್ರಿ?

ಕಿಟ್ಟಿ : ಕೋಪ ಬಂದು ದೊಣ್ಣೆಯಿಂದ ಹೆಂಡತಿ ತಲೆಗೆ ಬಡಿದೆ…

ಪೊಲೀಸ್‌ : ಅಯ್ಯೋ ಪಾಪ, ಆಕೆ ಸತ್ತು ಹೋಗಿರಬೇಕು ಪಾಪಪ್ರಜ್ಞೆಯಿಂದ ಅರೆಸ್ಟ್ ಮಾಡಿಸಿಕೊಳ್ಳೋಕ್ಕೇ ಬಂದ್ರಾ….

ಕಿಟ್ಟಿ : ಕರ್ಮ…. ಆ ಅದೃಷ್ಟ ನನಗೆಲ್ಲಿ ಬರಬೇಕು? ಹೇಗೋ ಬಚಾವಾದ ಅವಳು ಅದೇ ದೊಣ್ಣೆ ಹಿಡಿದು ನನ್ನನ್ನು ಅಟ್ಟಿಸಿಕೊಂಡು ಬರ್ತಿದ್ದಾಳೆ.

ಹೊಸದಾಗಿ ಮದುವೆಯಾದ ಗಂಡಸರಿಗೆ ಕಿವಿಮಾತು :

ಹೆಂಡತಿ ಏನಾದರೂ ಹೇಳಿದರೆ ಕುತ್ತಿಗೆಯನ್ನು ಮೇಲಿನಿಂದ ಕೆಳಕ್ಕೆ 2 ಬಾರಿ ಆಡಿಸಿ, ಇದು ನಿಮ್ಮ ನೆಮ್ಮದಿಯ ವೈವಾಹಿಕ ಜೀವನಕ್ಕೆ ನಾಂದಿ.

ಅಪ್ಪಿತಪ್ಪಿಯೂ ಕುತ್ತಿಗೆಯನ್ನು ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಆಡಿಸುತ್ತಿರಬೇಡಿ. ಇದು ಮುಂದೆ ಅಪಾಯಕಾರಿಯಾದೀತು!

ಹೆಂಡತಿ : ನನಗೆ ನಿಮ್ಮ ಮೇಲೆ ಕೋಪ ಬಂದಿದೆ!

ಗಂಡ : ನಾನೇನೇ ಮಾಡಿದೆ? ಮಾತು ಶುರು ಮಾಡುವುದಕ್ಕೆ ಮೊದಲೇ `ಸಾರಿ` ಅಂದುಬಿಟ್ಟೆನಲ್ಲ !

ಹೆಂಡತಿ : ಅದಕ್ಕೆ ನಂಗೆ ಜಗಳ ಆಡುವ ಮೂಡ್‌ ಇಲ್ಲದಂತೆ ಮಾಡಿಬಿಟ್ರಲ್ಲ ಅಂತ ಕೋಪ!

ಮನೆಯಲ್ಲಿ ಗುಂಡನಿಗೆ ಮದುವೆ ಮಾಡಿಸಿಬಿಡೋಣ ಎಂಬ ಮಾತು ಕೇಳಿಬರುತ್ತಿತ್ತು. ಆಗ ಗುಂಡನಿಗೆ ತನಗೆ ಎಲೆಕ್ಷನ್‌ನಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಕ್ಕಷ್ಟೆ ಸಂತೋಷವಾಯಿತು. ಮನೆಯವರು ಹುಡುಗಿ ತೋರಿಸಲು ಕರೆದೊಯ್ದಾಗ ತಾನು ಸೆಲೆಕ್ಟ್ ಆದಷ್ಟೇ ಹೆಮ್ಮೆಪಟ್ಟ. ಮದುವೆಯಾದ 2 ತಿಂಗಳಲ್ಲಿ ತಾನು ಮುಖ್ಯಮಂತ್ರಿಯೇ ಆದಂತೆ ಗರ್ವಪಟ್ಟ. ಆದರೆ 1 ವರ್ಷ ಕಳೆಯುವುಷ್ಟರಲ್ಲಿ ಯಾವುದೋ ಅಪರಾಧದ ಪ್ರಕರಣದಲ್ಲಿ ಸಿಕ್ಕಿಬಿದ್ದವನಂತೆ ಈ ಜೀವಾವಧಿ ಶಿಕ್ಷೆಯಿಂದ ಪಾರಾಗುವುದು ಹೇಗಪ್ಪ ಎಂದು ಚಡಪಡಿಸತೊಡಗಿದ.

ಪತ್ನಿ : ಏನ್ರೀ…ನಾನು ಕೂದಲು ಕಟ್‌ ಮಾಡಿಸಲೇ?

ಪತಿ : ಕಟ್‌ ಮಾಡಿಸು.

ಪತ್ನಿ : ಇಷ್ಟುದ್ದ ಬೆಳೆಸಲು ಎಷ್ಟು ಕಷ್ಟಪಟ್ಟಿದ್ದೀನಿ ಗೊತ್ತಾ?

ಪತಿ : ಕಟ್‌ ಮಾಡಿಸಬೇಡ.

ಪತ್ನಿ : ಆದರೆ… ಈಗೆಲ್ಲ ಶಾರ್ಟ್‌ ಹೇರ್‌ ಕಟ್‌ ಫ್ಯಾಷನ್‌ ಎನಿಸಿದೆ.

ಪತಿ : ಹಾಗಿದ್ದರೆ ಕಟ್‌ ಮಾಡಿಸು.

ಪತ್ನಿ : ಆದರೆ…. ಈ ಫ್ಯಾಷನ್‌ ಹೆಚ್ಚು ದಿನ ಉಳಿಯದಿದ್ರೆ?

ಪತಿ : ಕಟ್‌ ಮಾಡಿಸಬೇಡ.

ಪತ್ನಿ : ನನ್ನ ಮುಖಕ್ಕೆ ಶಾರ್ಟ್‌ ಹೇರ್‌ ಕಟ್‌ ಒಪ್ಪುತ್ತೆ ಅಂತ ಮೊನ್ನೆ ಕಿಟೀ ಪಾರ್ಟಿಯಲ್ಲಿ ಎಲ್ಲರೂ ಹೇಳ್ತಿದ್ದರು. ಏನು ಮಾಡಲಿ?

ಪತಿ : ಕಟ್‌ ಮಾಡಿಸು.

ಪತ್ನಿ : ಆದರೆ…. ಶಾರ್ಟ್‌ ಹೇರ್‌ನಿಂದ ಜಡೆ ಹೆಣೆಯಲಾಗದು.

ಪತಿ : ಕಟ್‌ ಮಾಡಿಸಬೇಡ.

ಪತ್ನಿ : ಆದ್ರೂ ಒಂದ್ಸಲ ಕಟ್‌ ಮಾಡಿ ಪ್ರಯೋಗ ಮಾಡಿಬಿಡಲೇ ಅಂತ ಯೋಚಿಸ್ತಿದ್ದೀನಿ.

ಪತಿ : ಕಟ್‌ ಮಾಡಿಸು.

ಪತ್ನಿ : ಆಮೇಲೆ ಕೆಟ್ಟದಾಗಿ ಕಾಣಿಸಿದರೆ….?

ಪತಿ : ಕಟ್‌ ಮಾಡಿಸಬೇಡ.

ಪತ್ನಿ : ಏನೇ ಆಗಲಿ… ಕಟ್‌ ಮಾಡಿಸಿಯೇ ಬಿಡ್ತೀನಿ!

ಪತಿ : ಕಟ್‌ ಮಾಡಿಸು.

ಪತ್ನಿ : ಆಮೇಲೆ ಸೂಟ್‌ ಆಗದಿದ್ದರೆ ಏನು ಮಾಡೋದು ಅಂತ!

ಪತಿ : ಕಟ್‌ ಮಾಡಿಸಬೇಡ.

ಪತ್ನಿ : ಶಾರ್ಟ್‌ ಹೇರ್‌ ಮ್ಯಾನೇಜ್‌ ಮಾಡೋದು ಸುಲಭ.

ಪತಿ : ಕಟ್‌ ಮಾಡಿಸು.

ಪತ್ನಿ : ಸರಿ ಹೋಗುತ್ತೋ ಇಲ್ವೋ ಅಂತ ಭಯ.

ಪತಿ : ಕಟ್‌ ಮಾಡಿಸಬೇಡ.

ಪತ್ನಿ : ಸರಿ… ಏನೇ ಆಗಲಿ, ಕಟ್‌ ಮಾಡಿಸೋದು ಅಂತ ಡಿಸೈಡ್‌ ಮಾಡಿಬಿಟ್ಟೆ.

ಪತಿ : ಕಟ್‌ ಮಾಡಿಸು.

ಪತ್ನಿ : ಮತ್ತೆ ಪಾರ್ಲರ್‌ಗೆ ಯಾವಾಗ ಹೋಗೋದು?

ಪತಿ : ಕಟ್‌ ಮಾಡಿಸಬೇಡ.

ಪತ್ನಿ : ರೀ…. ಯಾವಾಗ ಕಾರಿನಲ್ಲಿ ನನ್ನ ಪಾರ್ಲರ್‌ಗೆ ಕರೆದುಕೊಂಡು ಹೋಗ್ತೀರಾ ಅಂದೆ?

ಪತಿ : ಕಟ್‌ ಮಾಡಿಸು.

ಪತ್ನಿ : ಏನಾಯ್ತು ನಿಮಗೆ…? ಯಾಕೆ ಹಾಗೆ ಹೇಳಿದ್ದನ್ನೇ ಹೇಳ್ತಿದ್ದೀರಿ?

ಪತಿ : ಕಟ್‌ ಮಾಡಿಸಬೇಡ.

ಪತ್ನಿ ಪತಿಯನ್ನು ತಕ್ಷಣ ವೈದ್ಯರ ಬಳಿ ಕರೆದೊಯ್ದಾಗ, ಅವರು ನಿಮ್ಹಾನ್ಸ್ ಗೆ ರೆಫರ್‌ ಮಾಡಿ ಅಲ್ಲಿ ಅತನನ್ನು ಅಡ್ಮಿಟ್‌ಮಾಡಿಸಿದರು.

ಅಂದಿನಿಂದ ಯಾರೇ ಅವನನ್ನು ನೋಡಲು ಹೋಗಲಿ, ಎರಡೇ ಮಾತು ಬಾಯಿಂದ ಬರುತ್ತಿದೆ.

`ಹಾಗಿದ್ದರೆ… ಕಟ್‌ ಮಾಡಿಸು…..’

`ಹಾಗಿದ್ದರೆ….. ಕಟ್‌ ಮಾಡಿಸಬೇಡ…..’

ಪತ್ನಿ : ನೋಡಿ, ಇದೇ ಡ್ರೆಸ್‌ನ್ನು ನಾನು ಕಳೆದ 7 ವರ್ಷಗಳಿಂದ ಸತತ ಬಳಸುತ್ತಿದ್ದೇನೆ. ಆದರೂ ಇದರ ಫಿಟಿಂಗ್ಸ್ ಹಾಗೆ ಇದೆ. ನೀವು ನೋಡಿದ್ರೆ ನನ್ನ `ಡುಮ್ಮಿ!’ ಅಂತೀರಿ….

ಪತಿ : ಥೂ ನಿನ್ನ…. ಸ್ವಲ್ಪನಾದ್ರೂ ನಾಚಿಕೆ ಪಟ್ಕೋ! ಇದು ಡ್ರೆಸ್‌ ಅಲ್ಲ…. ಶಾಲು!

ಭಾಷಾ ಪ್ರಯೋಗದ ಪರಿ ಗಮನಿಸಿ:

ಮನೆಗೆ ಹೋದ ಗಂಡ ಹೆಂಡತಿಯ ಅವತಾರ ಗಮನಿಸಿ, ಇದೇನೇ ಒಳ್ಳೆ ಕೊಲೆಗಡುಕಳ ಹಾಗೆ ಕಾಣ್ತಿದ್ದಿ ಎಂದು ತಿಳಿಗನ್ನಡದಲ್ಲಿ ಕೇಳಿದರೆ, 2 ದಿನಗಳ ಕಾಲ ಅವನಿಗೆ ಊಟವೇ ಇರಲಿಲ್ಲ.

ಮತ್ತೊಮ್ಮೆ ಅವಳನ್ನು ಗಮನಿಸಿ ಯಾಕೆ ಹಾಗೆ ಕೂತಿದ್ದಿ, ಎಂದಾಗ ಶಾರೂಖ್‌ ಡೈಲಾಗ್‌ ಅಂತ ಆ ಸಂಜೆ ಟೀ ಜೊತೆ ಪಕೋಡ ಸಿಕ್ಕಿತು.

ಇನ್ನೊಮ್ಮೆ ಇಂಗ್ಲಿಷ್‌ನಲ್ಲಿ, ಬೇಬಿ ಯೂ ಆರ್‌ ಲುಕಿಂಗ್‌ ಕಿಲರ್‌! ಎಂದಾಗ ರಾತ್ರಿ ಊಟಕ್ಕೆ ಮಸಾಲೆ ವಡೆ ಜೊತೆ ಪಾಯಸ ಇತ್ತು.

ಬಹು ದಿನಗಳ ನಂತರ ಗೆಳೆಯರಾದ ಗುಂಡ ಕಿಟ್ಟಿ ಭೇಟಿ ಆದರು.

ಕಿಟ್ಟಿ : ನಾನು ಮದುವೆ ಆಗಬೇಕು ಅಂತಿದ್ದೇನೆ. ಪ್ರತಿ ದಿನ ಏನೋ ಒಂದಿಷ್ಟು ಬೇಯಿಸುವ ಅಥವಾ ಹೊರಗಡೆ ತಿನ್ನುವ, ಮನೆ ಕಸ ಗುಡಿಸು, ಪಾತ್ರೆ ತೊಳಿ, ಆಗಾಗ ಬಟ್ಟೆ ಒಗಿ… ಸಾಕಾಗಿದೆಯಪ್ಪ.

ಗುಂಡ : ವಿಚಿತ್ರವಾಗಿದೆಯಲ್ಲ….? ಇದೇ ಕಾರಣಗಳಿಂದ ರೋಸಿಹೋಗಿ ನಾನು ಡೈವೋರ್ಸ್‌ ಪಡೆಯೋಣ ಎಂದುಕೊಂಡಿದ್ದೇನೆ.

ಗಂಡಹೆಂಡತಿ ಮಧ್ಯೆ ವಾಗ್ವಾದ ತಾರಕಕ್ಕೆ ಏರಿತ್ತು. ಕೊನೆಗೆ ಹೆಂಡತಿ ಕಿರುಚಿದಳು, “ಹೆಚ್ಚು ಸ್ಮಾರ್ಟ್‌ಆಗಿರಲು ಪ್ರಯತ್ನಿಸಬೇಡಿ. ನಿಮ್ಮ ಬಳಿ ಎಷ್ಟು ಬುದ್ಧಿ ಇದೆಯೋ ಅಷ್ಟು ನನ್ನ ಬಳಿ ಪ್ರತಿ ಸಲ ಕೆಟ್ಟಿರುತ್ತದೆ!”

ನಿಮ್ಮ ಪತ್ನಿ ಡಬಲ್ ಸಿಮ್ ಫೋನ್‌ ಬಳಸುತ್ತಿದ್ದರೆ, ಅವೆರಡನ್ನೂ ಆಕೆಯ ಹೆಸರಲ್ಲೇ (ಒಂದು ಸಣ್ಣ ಅಕ್ಷರದ ವ್ಯತ್ಯಾಸದಲ್ಲಿ) ಸೇವ್ ಮಾಡಿ. ವೈಫ್‌ -1 ಮತ್ತು ವೈಫ್‌-2 ಎಂದು ಸೇವೇ ಮಾಡಲೇಬೇಡಿ. ಈ ಬಹುಮೂಲ್ಯ ಸಲಹೆಯನ್ನು ಇದೀಗ ತಾನೇ ಕೈ ಮುರಿದುಕೊಂಡು ಆಸ್ಪತ್ರೆ ಸೇರಿದ ಗುಂಡ ಗೆಳೆಯರಿಗೆ ಮೆಸೇಜ್‌ ಮಾಡಿ ತಿಳಿಸಿದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ