ಬಹಳಷ್ಟು ಸಲ ಬೇಡವಾದ ಅತಿಥಿಗಳು ಸೀಳು ಬಿಟ್ಟ ಮನೆಯ ಕಿಟಕಿ, ಶೀಟುಗಳಿಂದ ಒಳಗೆ ನುಗ್ಗುತ್ತಾರೆ. ಅವರು ಬೇರಾರೂ ಅಲ್ಲ ಇರುವೆಗಳು. ಇರುವೆಗಳಿಗೆ ಆಹಾರವೆಂದರೆ ಬಹಳ ಆಕರ್ಷಣೆ. ಹೀಗಾಗಿ ಮನೆಯಲ್ಲಿನ ಆಹಾರವನ್ನು ಸುರಕ್ಷಿತವಾಗಿಡುವುದು ನಿಮ್ಮ ಮುಖ್ಯ ಕರ್ತವ್ಯವಾಗಬೇಕು. ಇರುವೆಗಳಿಂದ ಆಹಾರವನ್ನು ರಕ್ಷಿಸಿಡಲು ನೀವು ಯಾವುದೇ ರಾಸಾಯಿನಿಕವನ್ನು ಸಿಂಪಡಿಸಲು ಇಷ್ಟಪಡುವುದಿಲ್ಲ. ಏಕೆಂದರೆ ಅದರಿಂದ ಅಲರ್ಜಿ ಉಂಟಾಗಬಹುದೆನ್ನುವ ಆತಂಕ ನಿಮ್ಮನ್ನು ಕಾಡುತ್ತಿರುತ್ತದೆ. ಕೆಲವು ಮನೆ ಉಪಾಯಗಳನ್ನು ಅನುಸರಿಸುವುದರ ಮೂಲಕ ಇರುವೆಗಳ ಸಮಸ್ಯೆಯಿಂದ ಮುಕ್ತರಾಗಬಹುದು.

ಎಡಿಬಲ್ ಎಲೆಗಳು : ಇರುವೆಗಳು ತಮ್ಮ ತೂಕದ 50 ಪಟ್ಟು ತೂಕವನ್ನು ಎತ್ತಬಲ್ಲ ಸಾಮರ್ಥ್ಯ ಹೊಂದಿರುತ್ತವೆ. ಅವು ದೊಡ್ಡ  ಎಲೆಯನ್ನು ಎತ್ತಿಕೊಂಡು ಒಯ್ಯುತ್ತವೆ. ಪುದೀನಾ ಎಲೆ ಇರುವೆಗಳಿಗೆ ವಿಷದಂತೆ ಕೆಲಸ ಮಾಡುತ್ತದೆ.

ಸೋಪ್ನೀರಿನ ದ್ರಾವಣ : ಈ ದ್ರಾವಣ ಇರುವೆಗಳಿಂದ ಮುಕ್ತಿ ಕಂಡುಕೊಳ್ಳುವ ಅತ್ಯಂತ ಸುಲಭ ಉಪಾಯವಾಗಿದೆ. ಎರಡು ಚಮಚ ಸೋಪ್‌ ದ್ರಾವಣವನ್ನು ನೀರಿನಲ್ಲಿ ಮಿಶ್ರಣಗೊಳಿಸಿ ಒಂದು ಬಾಟಲ್‌ನಲ್ಲಿ ತುಂಬಿಸಿಡಿ. ಈ ಮಿಶ್ರಣವನ್ನು ಕಿಟಕಿ, ಬಾಗಿಲುಗಳು ಹಾಗೂ ಎಲ್ಲೆಲ್ಲಿ ಬಿರುಕುಗಳಿವೆಯೊ ಅಲ್ಲಲ್ಲಿ ಸಿಂಪಡಿಸಿ. ಆದರೆ ಅದನ್ನು ಒರೆಸಬೇಡಿ. ಈ ದ್ರಾವಣ ಆಹಾರದ ವಾಸನೆಯನ್ನು ಹೋಗಲಾಡಿಸುತ್ತದೆ. ಈ ಕಾರಣದಿಂದ ಇರುವೆಗಳು ಆಹಾರದ ತನಕ ತಲುಪಲು ಸಾಧ್ಯವಾಗುವುದಿಲ್ಲ.

ಕಾರ್ನ್ವೀಲ್‌ : ಇದು ಇರುವೆಗಳ ವಿರುದ್ಧ ಅಸ್ತ್ರದ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದು ಮನುಷ್ಯರಿಗೆ, ಪ್ರಾಣಿಗಳಿಗೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡದು. ಇದನ್ನು ಸೇವಿಸುತ್ತಿದ್ದಂತೆಯೇ ಇರುವೆಗಳು ಸತ್ತುಹೋಗುತ್ತವೆ.

ಚಾಕ್ಅಥವಾ ಬೇಬಿ ಪೌಡರ್‌: ಇರುವೆಗಳ ತೊಂದರೆಯಿಂದ ರಕ್ಷಿಸಿಕೊಳ್ಳುವ ಅತ್ಯಂತ  ಹಳೆಯ ಉಪಾಯವಿದು. ಚಾಕ್‌ ಪೌಡರ್‌ಅಥವಾ ಟಾಲ್ಕಮ್ ಪೌಡರ್‌ ಇರುವೆಗಳನ್ನು ದೂರ ಇರಿಸುವ ನೈಸರ್ಗಿಕ ವಿಧಾನವಾಗಿದೆ. ಬೇಬಿ ಪೌಡರ್‌ನಲ್ಲಿ ಕಾರ್ನ್‌ ಸ್ಟಾರ್ಚ್ ಇರುತ್ತದೆ. ಇದು ಇರುವೆಗಳನ್ನು ಓಡಿಸಲು ನೆರವಾಗುತ್ತದೆ. ಇರುವೆಗಳು ಮೇಲಿಂದ ಮೇಲೆ ಬರುತ್ತಿದ್ದರೆ ನೀವು ಆ ಜಾಗದ ಮೇಲೆ ಇದನ್ನು ಹಾಕಬಹುದು.

ಏರ್ಟೈಟ್ಡಬ್ಬಿಗಳನ್ನು ಬಳಸಿ : ಆಹಾರ ವಸ್ತುಗಳನ್ನು ಏರ್‌ ಟೈಟ್‌ ಡಬ್ಬಿಗಳಲ್ಲಿ ಇಡಿ. ಇದರಿಂದ ನೀವು ಆಹಾರಗಳನ್ನು ತಾಜಾ ಆಗಿಡಬಹುದು. ಜೊತೆಗೆ ನೊಣ ಮತ್ತು ಇರುವೆಯಂತಹ ಕ್ರಿಮಿಕೀಟಗಳಿಂದ ಆಹಾರವನ್ನು ರಕ್ಷಿಸಬಹುದು. ಒಂದು ದೊಡ್ಡ ಹರಿವಾಣದಲ್ಲಿ ನೀರು ಹಾಕಿಟ್ಟು ಅದರ ನಡುಭಾಗದಲ್ಲಿ ಇಡಿ. ಇದು ಒಂಥರ ನಡುಗಡ್ಡೆಯಿದ್ದಂತೆ. ಹೀಗೆ ಮಾಡುವುದರಿಂದ ಇರುವೆಗಳು ಆಹಾರ ವಸ್ತುವಿನ ತನಕ ತಲುಪುದಿಲ್ಲ.

ವಿನಿಗರ್‌ : ಇದನ್ನು ಆಹಾರದಲ್ಲಿ ಬಳಸಲಾಗುತ್ತದೆ. ಇರುವೆಗಳನ್ನು ಓಡಿಸಲು ಕೂಡ ಇದು ನೆರವಾಗುತ್ತದೆ ಎಂಬ ಸಂಗತಿ ನಿಮಗೆ ಗೊತ್ತೇ? ತನ್ನ ಹುಳಿ ಗುಣದಿಂದಾಗಿ ವಿನಿಗರ್‌ ಬ್ಯಾಕ್ಟೀರಿಯಾ ಹಾಗೂ ಕೀಟಾಣುಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ಇದರ ವಾಸನೆಯ ಕಾರಣದಿಂದ ಇರುವೆಗಳು ಅದರ ಹತ್ತಿರಕ್ಕೆ ಕೂಡ ಸುಳಿಯುವುದಿಲ್ಲ. ಅದರ ಬಳಕೆಯಿಂದ ಮನೆ ಸ್ವಚ್ಛ ಮತ್ತು ಇರುವೆ ಮುಕ್ತವಾಗಿರುತ್ತದೆ.

ಏನನ್ನೂ ಬೀಳಿಸಬೇಡಿ : ಎಷ್ಟೋ ಸಲ ಫ್ರಿಜ್‌ ಕೆಳಭಾಗದಲ್ಲಿ ಆಹಾರದ ತುಣುಕುಗಳು ಬಿದ್ದಿರುತ್ತವೆ. ಅದು ನಿಮ್ಮ ಗಮನಕ್ಕೆ ಬರುವುದಿಲ್ಲ. ಅಂತಹ ಆಹಾರದ ತುಣುಕುಗಳ ಸುತ್ತ ಇರುವೆಗಳು ಮುತ್ತಿಕೊಳ್ಳುತ್ತವೆ. ಆ ಜಾಗದಲ್ಲಿ ಇನ್ನಷ್ಟು ಇರುವೆಗಳು ಸೇರಿಕೊಂಡು ಮನೆ ಕಸದ ತೊಟ್ಟಿಯ ತರಹ ಗೋಚರಿಸುತ್ತದೆ. ಯಾವುದಾದರೂ ಆಹಾರದ ತುಣುಕು ನೆಲದ ಮೇಲೆ ಬಿದ್ದಾಗ ಅದನ್ನು ಆ ಕ್ಷಣವೇ ತೆಗೆದು ಹಾಕಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ