ಏಪ್ರಿಲ್ ‌ನೇ ತಾರೀಖಿನಂದು ದಿನ ಪತ್ರಿಕೆಯಲ್ಲಿ ಜಾಹೀರಾತೊಂದು ಬಂದಿತ್ತು. ಆ ಜಾಹೀರಾತಿನಲ್ಲಿ `ಒಳ್ಳೆಯ ಕಂಡೀಶನ್‌ನಲ್ಲಿ ಇರುವ ಮರ್ಸಿಡಿಸ್‌ ಬೆಂಝ್ ಕಾರು ಮಾರಾಟಕ್ಕಿದೆ. ಬೆಲೆ ಕೇವಲ 100/ ರೂ. ಮಾತ್ರ. ಆಸಕ್ತರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸುವುದು,' ಎಂದು ವಿಳಾಸ ಕೊಟ್ಟಿದ್ದರು. 100 ರೂ.ಗೆ ಮರ್ಸಿಡಿಸ್‌ ಕಾರು ಅಂದರೆ ನಂಬಲಸಾಧ್ಯದ ವಿಷಯವೇ! ಅದೂ ಅಲ್ಲದೆ ಏಪ್ರಿಲ್ ‌ನೇ ತಾರೀಖಾದ್ದರಿಂದ `ಏಪ್ರಿಲ್ ಫೂಲ್' ಮಾಡಲು ಪ್ರಕಟವಾದ ಜಾಹೀರಾತು ಎಂದು ಎಲ್ಲರೂ ನೆನೆಸಿ ಅಲಕ್ಷ್ಯ ಮಾಡಿದರು.

ಆದರೆ ಒಬ್ಬ ವ್ಯಕ್ತಿ ಮಾತ್ರ ಏನಾದರಾಗಲಿ ಆ ವಿಳಾಸಕ್ಕೆ ಹೋಗಿ ವಿಚಾರಿಸಿಕೊಂಡು ಬಂದರಾಯಿತು ಎಂದು ಆ ಮನೆಗೆ ಹೋಗಿ ಕಾಲಿಂಗ್‌ ಬೆಲ್ ‌ಒತ್ತಿದ. ಮಧ್ಯ ವಯಸ್ಸಿನ ಮಹಿಳೆ ಬಂದು ಬಾಗಿಲು ತೆರೆದಳು.``ಮೇಡಂ, ನೀವೇನಾ ಮರ್ಸಿಡಿಸ್‌ ಕಾರು ಮಾರಾಟಕ್ಕಿದೆ ಎಂದು ಜಾಹೀರಾತು ಕೊಟ್ಟಿದ್ದು....?''

``ಹೌದು ನಾನೇ ಆ ಜಾಹೀರಾತು ಕೊಟ್ಟಿದ್ದು.''

``ನಾನು ಕಾರು ನೋಡಬಹುದಾ ಮೇಡಂ.....''

``ಓ.... ಅದಕ್ಕೇನಂತೆ, ಬನ್ನಿ ಅವಶ್ಯವಾಗಿ ನೋಡಿ,'' ಎಂದು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಗ್ಯಾರೇಜ್‌ ನಲ್ಲಿದ್ದ ಕಾರನ್ನು ತೋರಿಸಿದಳು.

ಕಾರನ್ನು ನೋಡಿ ದಂಗಾದ ಆ ವ್ಯಕ್ತಿ, ``ಇದೇನು ಮೇಡಂ, ಹೊಸ ಕಾರು....'' ಎಂದು ಕೇಳಿದ.

``ಹೊಸದೇನಲ್ಲ.... ಆದಾಗಲೇ 18000 ಕಿ.ಮೀ. ಓಡಿದೆ,'' ಎಂದಳು ಮಹಿಳೆ.

``ಆದರೂ ಕಾರಿನ ಬೆಲೆ ಕೇವಲ 100 ರೂ. ಅಂತ ಪ್ರಕಟವಾಗಿದೆ. ಒಂದು ವೇಳೆ ಪ್ರಿಂಟ್‌ ಮಿಸ್ಟೇಕ್‌ ಏನಾದ್ರೂ ಆಗಿದೆಯಾ ಮೇಡಂ?''

``ಯಾವ ಪ್ರಿಂಟ್‌ ಮಿಸ್ಟೇಕೂ ಇಲ್ಲ. ನಾನೇ ಇದರ ಬೆಲೆ ಕೇವಲ 100 ರೂ. ಅಂತ ಹಾಕಿಸಿದ್ದು. ನಿಮಗೆ ಕಾರು ಒಪ್ಪಿಗೆಯಾದರೆ 100 ರೂ. ಕೊಟ್ಟು ಕಾರನ್ನು ಒಯ್ಯಬಹುದು,'' ಎಂದಳಾಕೆ.

ಆ ವ್ಯಕ್ತಿ ನಡುಗುವ ಕೈಗಳಿಂದ ನೂರು ರೂ. ನೋಟನ್ನು ಆ ಮಹಿಳೆಗೆ ನೀಡಿದ. ಅದಕ್ಕೆ ಆ ಮಹಿಳೆ ರಸೀತಿಯನ್ನೂ ಸಹ ನೀಡಿದ್ದಲ್ಲದೆ, ಕಾರಿನ ಎಲ್ಲಾ ಡಾಕ್ಯುಮೆಂಟ್‌ ಗಳನ್ನು ಅವನಿಗೆ ಕೊಟ್ಟಳು.

ಕೈಯಲ್ಲಿ ಡಾಕ್ಯುಮೆಂಟ್‌ತೆಗೆದುಕೊಂಡ ವ್ಯಕ್ತಿ, ``ಮೇಡಂ, ನೀವು ತಪ್ಪು ತಿಳಿಯದಿದ್ದರೆ ಒಂದು ಮಾತು ಕೇಳ್ತೀನಿ. ಇಷ್ಟು ನಿಕೃಷ್ಟ ಬೆಲೆಗೆ ಈ ಕಾರು ಮಾರುತ್ತಿರುವ ಹಿಂದಿನ ಸಸ್ಪೆನ್ಸ್ ಏನು ಅಂತ ಹೇಳಿ ಮೇಡಂ, ಪ್ಲೀಸ್‌......'' ಎಂದ.

``ಇದರಲ್ಲಿ ಯಾವ ಸಸ್ಪೆನ್ಸೂ ಇಲ್ಲ. ನನ್ನ ಸ್ವರ್ಗೀಯ ಪತಿಯ ಮಾತನ್ನು ನಡೆಸಿ ಕೊಡುತ್ತಿದ್ದೇನೆ ಅಷ್ಟೇ. ನನ್ನ ಪತಿ ವಿಲ್ ‌ನಲ್ಲಿ ತನ್ನ ಮರಣಾನಂತರ ತಮ್ಮ ಈ ಮರ್ಸಿಡಿಸ್‌ ಕಾರನ್ನು ಮಾರಬೇಕು. ಮಾರಿದ ಸಂಪೂರ್ಣ ಹಣವನ್ನು ತನ್ನ ಸೆಕ್ರೆಟರಿ ದೀಪಾಳಿಗೆ ಕೊಡಬೇಕು ಅಂತ ಬರೆದಿದ್ದರು. ಆದ್ದರಿಂದ ಅದನ್ನು 100 ರೂ.ಗೆ ಮಾರಿದೆ ಅಷ್ಟೆ.....''

ರಾಮು : `ಚೆಕ್‌ ಬೌನ್ಸ್ ಆಯ್ತು,' ಅನ್ನೋದು ಹಳೇ ಮಾತು. ಈಗದು ಬದಲಾಗಿದೆ.

ಸೋಮು : ಅದೇನು ಹಾಗಂತಿಯಾ...?

ರಾಮು : ಹೌದು, ಈಗೆಲ್ಲ `ಬ್ಯಾಂಕೇ ಬೌನ್ಸ್ ಆಗೋಯ್ತು!' ಅನ್ನೋದೇ ಕಾಲಕ್ಕೆ ತಕ್ಕ ಮಾತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ