ಭರವಸೆಯಲ್ಲೇ ಯಶಸ್ಸು ಅಡಗಿದೆ : ಆಟೋಟಗಳು ವಿಶ್ವವಿಡೀ ಹುಡುಗಿಯರಿಗೆ ನೀಡಿರುವ ಆತ್ಮವಿಶ್ವಾಸವನ್ನು ಯಾವುದೇ ಪುಸ್ತಕ ಅಥವಾ ರಾಜಕೀಯ ನೀಡಿಲ್ಲ. ಹೆಂಗಸರನ್ನು ಅಬಲೆ ಎನ್ನುವವರ ಬಾಯಿ ಬಡಿಯಲೆಂದೇ ಈ ಕ್ರೀಡಾಪಟುಗಳು ತಯಾರಾಗಿದ್ದಾರೆ. ಇವರುಗಳು ಗಾಳಿಯಲ್ಲಿ ತೇಲುವವರಂತೆ 40-50 ಕಿ.ಮೀ. ಮ್ಯಾರಥಾನಿನಲ್ಲಿ ಓಡುತ್ತಾರೆ ಅಥವಾ 150-200 ಕಿಲೋ ಭಾರ ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಗಂಡಸರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ನ್ಯಾಷನಲ್ ಗೇಮ್ಸ್ ನಲ್ಲಿ 3ನೇ ನಂಬರ್ ನಲ್ಲಿ ಗೆಲ್ಲುವ ಹುಡುಗಿಯರಿಗಿಂತ ದುರ್ಬಲರಾಗಿ ಕಾಣುತ್ತಾರೆ. ಈ ಐಡೆಂಟಿಟಿಯನ್ನು ಈ ಹೆಂಗಸರು ತಾವೇ ಗಳಿಸಿದ್ದಾರೆ, ಯಾರೂ ಬಿಟ್ಟಿಯಾಗಿ ಏನೂ ನೀಡಿಲ್ಲ!
ವಿಜ್ಞಾನದ ಸೌಲಭ್ಯ : ಅಮೆರಿಕಾದಲ್ಲೂ ಸಹ ಮಕ್ಕಳು ಎಲ್ಲಿ ಹುಟ್ಟಬೇಕು ಎಂಬ ನಿರ್ಧಾರ ಸ್ಟೇಟಸ್ ಸ್ಟೇಟ್ ಮೆಂಟ್ ಆಗಿಹೋಗಿದೆ ಹಾಗೂ ಲಾಂಗ್ ಬೀಚ್ ನ ಮೆಮೋರಿಯಲ್ ಕೇರ್ ಚಿಲ್ಡ್ರನ್ ಹಾಸ್ಪಿಟಲ್, ಇಂಥ ಉನ್ನತ ಆಯ್ಕೆಗಳಲ್ಲಿ ಒಂದೆನಿಸಿದೆ. ಇಲ್ಲಿ ಡೆಲಿವರಿ ಮಾಡಿಸಿಕೊಳ್ಳುವುದು ಎಂದರೆ ಅದು ನಿಮ್ಮ ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಏಕೆಂದರೆ ಈ ಆಸ್ಪತ್ರೆಯ ನ್ಯಾಷನಲ್ ರಾಕಿಂಗ್ ಅಮೆರಿಕಾದಲ್ಲೇ ಅತಿ ಉಚ್ಚ ದರ್ಜೆಯದು. ರಸ್ತೆಯ ಬದಿ ಬದಿಯಲ್ಲೂ ಮಕ್ಕಳು ಹುಟ್ಟುತ್ತಿರುತ್ತವೆ, ಆದರೆ ಇದೀಗ ಆಧುನಿಕ ವಿಜ್ಞಾನ ತಂತ್ರಜ್ಞಾನದ ಕೌಶಲ್ಯ ಹಾಗೂ ಹಣದ ಬೆಂಬಲ ಇದ್ದರೆ, ಮಕ್ಕಳ ಹುಟ್ಟು ಅದೇಕೆ ವಿಶಿಷ್ಟ ಆಗಬಾರದು?
ಕೆಲಸದಿಂದ ಐಡೆಂಟಿಟಿ : ಟ್ರಿನಿಟಿ ಐರಿಶ್ ಡ್ಯಾನ್ಸ್ ಕಂಪನಿ ತನ್ನ ಅನುಭವ, ಪ್ರಯೋಗಗಳಿಗೆಂದೇ ಹೆಸರಾಗಿದೆ. ಕ್ಲಾಸಿಕ್ ಐರಿಶ್ ಡ್ಯಾನ್ಸ್ ಗೆ ಮಾಡರ್ನ್ ಲುಕ್ಸ್ ನೀಡುವುದು ಸುಲಭವೇನಲ್ಲ. ಆದರೆ ವಿಶ್ವದ ಎಲ್ಲೆಡೆ ನಿಮ್ಮದೇ ಐಡೆಂಟಿಟಿ ಗಿಟ್ಟಿಸಬೇಕೆಂದರೆ, ಉದ್ದನೇ ಸೀರೆಯುಟ್ಟು ನರ್ತಿಸುವುದೊಂದೇ ಅಲ್ಲ. ಎಲ್ಲಿಗೇ ಹೋಗಲಿ, ಬಂದಿರುವ ಪ್ರೇಕ್ಷಕರ ಹಣಕ್ಕೆ ಮೋಸವಾಗದಂತೆ ಅವರೆದುರು ಪ್ರೆಸೆಂಟೇಶನ್ ನೀಡುವುದು ಸುಲಭವಲ್ಲ. ಈ ತಂಡದಲ್ಲಿ 16 ಜನ ನರ್ತಕರು ಒಟ್ಟಿಗೇ ವೇದಿಕೆ ಮೇಲೆ ಬಂದು ಕುಣಿಯುತ್ತಾರೆ, ಈ ಕೊರಿಯೋಗ್ರಫಿ ನೋಡಿಯೇ ತಣಿಯಬೇಕು!
ಆತ್ಮವಿಶ್ವಾಸ ಅತ್ಯಗತ್ಯ : ಹೆಂಗಸರ ಹಾರ್ಸ್ ರೈಡಿಂಗ್ ಶೂ ಸದಾ ಫ್ಯಾಷನ್ ಸ್ಟೇಟ್ ಮೆಂಟ್ ಎನಿಸಿದೆ. ಇದನ್ನು ರೈಡಿಂಗ್ ಗೆ ಹೊರಡುವಾಗ ಧರಿಸಿದರೂ ಸರಿ ಯಾವ ಈವ್ನಿಂಗ್ ಪಾರ್ಟಿಗೆ, ಈ ಲಾಂಗ್ ಬೂಟ್ ಗಂಡಸ್ತನದ ಗುರುತಾಗಿದೆ. ಇದರಲ್ಲಿನ ವೈಶಿಷ್ಟ್ಯ ಎಂದರೆ, ಈ ಶೂ ಬಳ್ಳಿ ನಡುವಿನ, ತೆಳು ಕಾಯದ, ಸ್ಮಾರ್ಟ್, ಸೆಲ್ಫ್ ಕಾನ್ಛಿಡೆಂಟ್ ಉಳ್ಳ ತರುಣಿಯರಿಗೇ ಹೆಚ್ಚು ಒಪ್ಪುತ್ತದೆ. ಅಮೆರಿಕಾದ ಒಂದು ಕಂಪನಿ ಸ್ಟ್ರಾಟೆಝೆಂ ಮೀಡಿಯಾ, ಮುಂದಿನ 5-6 ರ್ಷಗಳಲ್ಲಿ ಇದರ ಟ್ರೆಂಡ್ ಹೇಗಿರುತ್ತದೆ ಎಂಬ ವರದಿ ಸಿದ್ಧಪಡಿಸಿದೆ. ಆಗ ತಯಾರಕರಿಗೂ ತಮ್ಮ ಗ್ರಾಹಕರ ಬೇಡಿಕೆಗಳ ಬಗ್ಗೆ ಒಂದು ಐಡಿಯಾ ಬರುತ್ತದೆ.
ಇದರಲ್ಲಿ ನಾಚಿಕೆ ಏನು ಬಂತು? : ತಾನು ಬಸುರಿ ಎಂದು ತೋರಿಸಿಕೊಳ್ಳಲು ಹೆಚ್ಚು ನಾಚಿಕೊಳ್ಳುವ ನಮ್ಮ ಭಾರತೀಯ ಹುಡುಗಿಯರಂತಲ್ಲ ಈ ಕ್ರೀಸೀ ಟೈಗನ್. ಈಕೆ ಖುಷಿ ಖುಷಿಯಾಗಿ, ಸ್ವಿಮ್ ಸೂಟ್ ಧರಿಸಿ ತುಂಬು ಗರ್ಭಿಣಿಯಾದರೂ ಹೀಗೆ ಹಾಯಾಗಿ ಸಾಗರ ತೀರದಲ್ಲಿ ಕುಳಿತು ಫೋಟೋ ತೆಗೆಸಿಕೊಂಡಿದ್ದಾಳೆ. ಈ ತರಹದ ಸ್ಟಂಟ್ ಶೋ, ಬಿಸ್ ನೆಸ್ ಮತ್ತು ರಾಜಕೀಯದಲ್ಲಿ ಅನಿವಾರ್ಯ. ಸ್ಲೀವ್ ಲೆಸ್ ಟೀ ಶರ್ಟ್‌ಧರಿಸಿ ಕೊರೆಯುವ ಚಳಿಯಲ್ಲಿ ಮುಂಜಾನೆ ಜಾಗಿಂಗ್ ಓಡುವುದಲ್ಲ, ಇಂಥ ದಿಟ್ಟತನ ತೋರಿಸಲಿಕ್ಕೂ ಗತ್ತು ಬೇಕು!