ಪ್ರಜಾಪ್ರಭುತ್ವದ ಆಡಳಿತದಲ್ಲಿ ಸಹಜವಾಗಿಯೇ ಜನರಿಂದ ಬಹುಮತವಾಗಿ ಆಯ್ಕೆಯಾದ ಆಡಳಿತ ಪಕ್ಷವೊಂದಿದ್ದರೆ, ಬಹುಮತ ಪಡೆಯದ ವಿರೋಧ ಪಕ್ಷ ಎರಡೂ ಸಹಾ ಇರುತ್ತದೆ. ಪ್ರಜಾಪ್ರಭುತ್ವ ಆಡಳಿತದಲ್ಲಿ ರಾಜ್ಯ/ದೇಶದ ಹಿತದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಯಾವ ರೀತಿಯಾದ ಉತ್ತರದಾಯಿತ್ವ ಇರುತ್ತದೆಯೋ ಅಷ್ಟೇ ಹಕ್ಕು ವಿರೋಧ ಪಕ್ಷಕ್ಕೂ ಇದ್ದು, ವಿರೋಧ ಪಕ್ಷವು ಸರ್ಕಾರದ ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ಶಾಸನವನ್ನು ಪರಿಶೀಲಿಸುತ್ತದೆ ಮತ್ತು ಪರ್ಯಾಯ ನೀತಿಗಳನ್ನು ಒದಗಿಸುತ್ತದೆ ಮತ್ತು ಆಡಳಿತ ಪಕ್ಷಕ್ಕೆ ಮತ ಹಾಕದ ನಾಗರಿಕರನ್ನು ಪ್ರತಿನಿಧಿಸುತ್ತದೆ. ರಚನಾತ್ಮಕ ಟೀಕೆಗಳನ್ನು ನೀಡುವ ಮೂಲಕ ಮತ್ತು ವೈವಿಧ್ಯಮಯ ದೃಷ್ಟಿಕೋನಗಳನ್ನು ಪರಿಗಣಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಆಡಳಿತ ಪಕ್ಷದ ಸರ್ವಾಧಿಕಾರತ್ವವನ್ನು ತಡೆಯುವ ಮೂಲಕ ಪ್ರಜಾಪ್ರಭುತ್ವದ ನಿರ್ಣಾಯಕ ಕಾವಲುಗಾರನಾಗಿ( Watch dog) ಕಾರ್ಯನಿರ್ವಹಿಸುತ್ತದೆ.
ಹಾಗೆಂದ ಮಾತ್ರಕ್ಕೆ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಮತ್ತು ಆಡಳಿತ ಪಕ್ಷದ ಮೇಲಿನ ಕುತ್ಸುಕದಿಂದಾಗಿ ಆಡಳಿತ ಪಕ್ಷದ ಪ್ರತಿಯೊಂದು ನಡೆಯನ್ನೂ ಟೀಕಿಸುವುದು ಉತ್ತಮವಾದ ವಿರೋಧ ಪಕ್ಷದ ಲಕ್ಷಣವಲ್ಲಾ. 2026ರ ಮೇ 10, ಭಾನುವಾರದಂದು ಹೈದರಾಬಾದ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಜಾಗತಿಕವಾತಿ ಪ್ರಸ್ತುತ ನಡೆಯುತ್ತಿರುವ ಅನಿಶ್ಚಿತ ಯುದ್ದವನ್ನು ಮನದಲ್ಲಿಟ್ಟುಕೊಂಡು ಭಾರತೀಯ ನಾಗರಿಕರು ಚಿನ್ನದ ಖರೀದಿ ಮತ್ತು ವಿದೇಶಿ ಪ್ರಯಾಣವನ್ನು ಒಂದು ವರ್ಷದವರೆಗೆ ಮುಂದೂಡಬೇಕೆಂದು ಕೇಳಿಕೊಂಡಿದ್ದಲ್ಲದೇ, ಸಾರ್ವಜನಿಕ ಸಾರಿಗೆ ಮತ್ತು ವಿದ್ಯುತ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಅನಗತ್ಯವಾಗಿ ಇಂಧನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಸಾಧ್ಯವಾದಷ್ಟು ಮನೆಯಿಂದ ಕೆಲಸ ಮಾಡುವ ಪದ್ಧತಿ(Work from home)ಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಸಾಧ್ಯವಾದಷ್ಟೂ ದೇಶೀಯ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದರು.
ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಹೇಳದೇ ಕೇಳದೇ ವಿದೇಶಕ್ಕೆ ಹೋಗಿ ಅಲ್ಲಿ ದೇಶವಿರೋಧಿ ಶಕ್ತಿಗಳೊಡನೆ ಸಭೆ ಮಾಡಿ ಅವರು ಹೇಳಿಕೊಟ್ಟ ಟೂಲ್ ಕಿಟ್ ಗಳನ್ನು ದೇಶದ ಜನರ ಮೇಲೆ ಹೇರಿ ಅನಗತ್ಯವಾಗಿ ದೇಶದ ಪ್ರಜೆಗಳನ್ನು ಗೊಂದಲಕ್ಕೀಡು ಮಾಡುವ, ಕಳೆದ ೧೨ ವರ್ಷಗಳಿಂದಲೂ ಕೇಂದ್ರದಲ್ಲಿ ಅಧಿಕಾರವಿಲ್ಲದೇ ಸತತವಾಗಿ ೯೯ ಚುನಾವಣೆಗಳಲ್ಲಿ ಸೋಲು ಕಂಡು ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಕಾಂಗ್ರೇಸ್ಸಿನ ಚಿರಯ್ಯೌವನಿಗ, ಸ್ವಘೋಷಿತ ಭಾವೀ ಪ್ರಧಾನಿ ಮತ್ತು ಪ್ರಸ್ತುತ ನಾಮಕಾವಾಸ್ತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂದಿಯವರಿಗೆ ಪ್ರಧಾನಿಗಳ ಮಿತವ್ಯಯದ ಕರೆ ಕೇಳುತ್ತಿದ್ದಂತಯೇ, ಇದು ಸರ್ಕಾರದ ವೈಫಲ್ಯಕ್ಕೆ ಪುರಾವೆಗಳು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜನಸಾಮಾನ್ಯರಿಗೆ ನೀಡಿರುವ ‘ತ್ಯಾಗ’ದ ಕರೆಗಳನ್ನು ಕುರಿತಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿರುವುದು ನಿಜಕ್ಕೂ ಆತನ ಬೌದ್ಧಿಕ ಮಟ್ಟ ಮತ್ತು ಮಾನಸಿಕ ದೌರ್ಬಲ್ಯತೆಯನ್ನು ತೋರಿಸುತ್ತಿರುವುದಲ್ಲದೇ, ವಿನಾಕಾರಣ ದೇಶದ ಜನರನ್ನು ಬಡಕಾಯಿಸಿ ದೇಶದಲ್ಲಿ ಆಂತರಿಕ ದಂಗೆಯನ್ನು ಉಂಟು ಮಾಡಲು ಹೊರಟಿರುವ ದುಷ್ಟತನ ಆತನದಲ್ಲಿ ಎದ್ದು ಕಾಣುತ್ತಿದೆ.
ಚಿನ್ನ ಖರೀದಿಸಬೇಡಿ, ವಿದೇಶಕ್ಕೆ ಹೋಗಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ, ರಸಗೊಬ್ಬರ ಮತ್ತು ಅಡುಗೆ ಎಣ್ಣೆ ಬಳಕೆ ತಗ್ಗಿಸಿ, ಮೆಟ್ರೋದಲ್ಲಿ ಪ್ರಯಾಣಿಸಿ, ಮನೆಯಿಂದಲೇ ಕೆಲಸ ಮಾಡಿ. ಇವು ಕೇವಲ ಉಪದೇಶಗಳಲ್ಲ ಇವು ಸರ್ಕಾರದ ವೈಫಲ್ಯದ ಸಾಕ್ಷಿಗಳು.12 ವರ್ಷಗಳಲ್ಲಿ ದೇಶವನ್ನು ಎಂತಹ ಸ್ಥಿತಿಗೆ ತಂದಿದ್ದಾರೆಂದರೆ, ಜನರು ಏನನ್ನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ಸರ್ಕಾರವೇ ಹೇಳುವಂತಾಗಿದೆ. ಪ್ರತಿ ಬಾರಿಯೂ ಜವಾಬ್ದಾರಿಯನ್ನು ಜನರ ಮೇಲೆ ಹಾಕಿ, ತಾವು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ.ದೇಶವನ್





