ದೇಶದ ಸ್ವಚ್ಛ ನಗರಿ ಎಂದೇ ಖ್ಯಾತಿ ಪಡೆದಿರುವ ಮಧ್ಯಪ್ರದೇಶದ ಇಂದೋರ್​ನ ಭಗೀರಥಪುರದಲ್ಲಿ ಸಂಭವಿಸಿದ ಕುಲುಷಿತ ನೀರು ಸೇವನೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. 26 ಮಂದಿ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿದ್ದು, ಪುರಸಭೆಯಿಂದ ಸರಬರಾಜು ಮಾಡಲಾದ ಕಲುಷಿತ ಕುಡಿಯುವ ನೀರನ್ನು ಸೇವಿಸಿ 2,000 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ವಾರ ಇಂದೋರ್‌ನ ಭಾಗೀರಥಪುರ ಪ್ರದೇಶದ 100 ಕ್ಕೂ ಹೆಚ್ಚು ನಿವಾಸಿಗಳು ಪುರಸಭೆ ಸರಬರಾಜು ಮಾಡುತ್ತಿದ್ದ ನೀರು ಕುಡಿದು ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಆಡಳಿತವು ಅಧಿಕೃತವಾಗಿ ಸಾವಿನ ಸಂಖ್ಯೆಯನ್ನು ದೃಢಪಡಿಸದಿದ್ದರೂ, ಹಿರಿಯ ಜಿಲ್ಲಾ ಅಧಿಕಾರಿಯೊಬ್ಬರು ಸಾವಿನ ಸಂಖ್ಯೆ 14 ದಾಟಿದೆ ಎಂದು ಹೇಳಿದ್ದಾರೆ.

ಘಟನೆಯ ನಂತರ, ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ (ಐಎಂಸಿ) ನ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ (ಪಿಎಚ್‌ಇ) ಇಲಾಖೆಯ ಉಸ್ತುವಾರಿ ಉಪ-ಎಂಜಿನಿಯರ್ ಶುಭಂ ಶ್ರೀವಾಸ್ತವ ಅವರನ್ನು ವಜಾಗೊಳಿಸಲಾಗಿದೆ. ವಲಯ ಅಧಿಕಾರಿ ಶಾಲಿಗ್ರಾಮ್ ಸಿಟೋಲ್ ಮತ್ತು ಸಹಾಯಕ ಎಂಜಿನಿಯರ್ ಯೋಗೇಶ್ ಜೋಶಿ ಅವರನ್ನು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸೂಚನೆ ಮೇರೆಗೆ ಅಮಾನತುಗೊಳಿಸಲಾಯಿತು.ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಕಚೇರಿಯ ಹೇಳಿಕೆಯ ಪ್ರಕಾರ, ಅಧಿಕಾರಿಗಳು 7,992 ಮನೆಗಳನ್ನು ಸಮೀಕ್ಷೆ ಮಾಡಿದ್ದಾರೆ. ಇದುವರೆಗೆ 39,854 ಜನರನ್ನು ಪರೀಕ್ಷಿಸಿದ್ದಾರೆ. ಈ ಪೈಕಿ 2,456 ಶಂಕಿತ ಪ್ರಕರಣಗಳನ್ನು ಗುರುತಿಸಿ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬುಧವಾರದ ವೇಳೆಗೆ, 212 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 50 ಜನರನ್ನು ಡಿಸ್​ಚಾರ್ಜ್​ ಮಾಡಲಾಗಿದೆ. ಆದರೆ 162 ಜನರನ್ನು ಇನ್ನೂ ಆಸ್ಪತ್ರೆಯಲ್ಲೇ ಇರಿಸಲಾಗಿದೆ. ಇದರಲ್ಲಿ 26 ಮಂದಿ ತೀವ್ರ ನಿಗಾ ಘಟಕಗಳಲ್ಲಿದ್ದಾರೆ ಎನ್ನಲಾಗಿದೆ.

ಘಟನೆಯ ತನಿಖೆಗಾಗಿ ಮೂವರು ಸದಸ್ಯರ ತನಿಖಾ ಸಮಿತಿ ರಚಿಸಲಾಗಿದೆ. ಸಮಿತಿಯು ಐಎಎಸ್ ಅಧಿಕಾರಿ ನವಜೀವನ್ ಪನ್ವರ್ ಅವರ ನೇತೃತ್ವದಲ್ಲಿದ್ದು, ಸೂಪರಿಂಟೆಂಡೆಂಟ್ ಎಂಜಿನಿಯರ್ ಪ್ರದೀಪ್ ನಿಗಮ್ ಮತ್ತು ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಶೈಲೇಶ್ ರೈ ಸದಸ್ಯರಾಗಿದ್ದಾರೆ. ಪೀಡಿತ ಪ್ರದೇಶದಲ್ಲಿ ಹೊಸ ನೀರು ಸರಬರಾಜು ಮಾರ್ಗವನ್ನು ಹಾಕಲು ಆಗಸ್ಟ್‌ನಲ್ಲಿ ನೀಡಲಾದ ಟೆಂಡರ್ ಅನ್ನು ಪೂರ್ಣಗೊಳಿಸುವಲ್ಲಿನ ವಿಳಂಬವನ್ನು ಸಹ ಸಮಿತಿ ಪರಿಶೀಲಿಸುತ್ತದೆ.

ಸಂಪುಟ ಸಚಿವ ಮತ್ತು ಇಂದೋರ್-1 ಶಾಸಕ ಕೈಲಾಶ್ ವಿಜಯವರ್ಗಿಯಾ ಈ ಘಟನೆಯನ್ನು “ದುರದೃಷ್ಟಕರ” ಎಂದು ಬಣ್ಣಿಸಿದ್ದು, ಮೃತರ ಕುಟುಂಬ ಸದಸ್ಯರಿಗೆ ತಲಾ 2 ಲಕ್ಷ ರೂ.ಗಳ ಚೆಕ್ ವಿತರಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ