ಹೊಸ ಟ್ರೆಂಡ್‌ಗೆ ಹೆಚ್ಚು ಒತ್ತು ನೀಡುತ್ತಿರುವ ಈ ದಿನಗಳಲ್ಲಿ, ಪ್ರತಿ ಕ್ಷೇತ್ರದಲ್ಲೂ ಹೊಸದನ್ನು ಹುಡುಕುತ್ತಿದೆ ಇಂದಿನ ಜನತೆ, ಮಾಡಿದ್ದೇ ಫ್ಯಾಷನ್ನು, ಆಡಿದ್ದೇ ಆಟ, ಹಾಡಿದ್ದೇ ಹಾಡು! ಪಾಶ್ಚಾತ್ಯ ಸಂಸ್ಕೃತಿ ಎಲ್ಲೆಡೆ, ಎಲ್ಲಾ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಿಬಿಟ್ಟಿದೆ. ಕೆಂಚರ ಹಾಡು, ಅವರ ಸಂಸ್ಕೃತಿ ಇಂದಿನ ಜನತೆಯನ್ನು, ಅದರಲ್ಲೂ ಯುವಜನತೆಯನ್ನು ಹುಚ್ಚೆಬ್ಬಿಸುತ್ತಿದೆ, ಎಲ್ಲಿಗೋ ಎಳೆದುಕೊಂಡು ಹೋಗುತ್ತಿದೆ. ಇಂತಹ ಕಾಲದಲ್ಲಿ ಹೊಸತನದ ಆವಿಷ್ಕಾರವನ್ನು ಹುಡುಕುವ ಸಲುವಾಗಿ ಪ್ರಸಿದ್ಧ ಗಾಯಕಿಯೋರ್ವರು ಮುಂದಾಗಿದ್ದಾರೆ.

ಅಲ್ಲೆಲ್ಲೋ ಒಂದೆಡೆ ಏರೋಬಿಕ್ಸ್ ನಡೆಯುತ್ತಿದೆ ಎಂದರೆ, ಒಂದಷ್ಟು ದೂರದಲ್ಲಿ ಲಯಬದ್ಧ ಪಾಶ್ಚಾತ್ಯ ಸಂಗೀತ ಕಿವಿಗಪ್ಪಳಿಸುತ್ತಿರುತ್ತದೆ. ವುಡನ್‌ ಫ್ಲೋರ್‌ ಆಗಿದ್ದರಂತೂ ಅಲ್ಲಿ ಕುಣಿಯುವವರ ಹೆಜ್ಜೆನಾದ ಅಷ್ಟೇ ಲಯಬದ್ಧವಾಗಿರುತ್ತದೆ. ಆ ವೆಸ್ಟ್ರನ್‌ ಮ್ಯೂಸಿಕ್‌ ಬದಲಿಗೆ ನಮ್ಮ ಕನ್ನಡ ಕವಿಗಳ ಹಾಡುಗಳನ್ನು ಅದರ ಸೊಗಡನ್ನು ಅಲ್ಲಿ ಸೇರಿಸಿದರೆ, ವಾವ್ ‌ಎಂತಹ ಆಲೋಚನೆ, ಸೊಗಸಾಗಿದೆ.... ಇಂಥ ಒಂದು ಸಣ್ಣ ಆಲೋಚನೆ ಬಂದದ್ದೇ ತಡ, ಕಾರ್ಯನಿರತರಾದರು. ತಂಡವೊಂದನ್ನು ತಯಾರು ಮಾಡಿಕೊಂಡು, ಪ್ರಾಜೆಕ್ಟನ್ನು ಕೈಗೆತ್ತಿಕೊಂಡೇಬಿಟ್ಟರು, ಅವರೇ ಪ್ರಸಿದ್ಧ ಗಾಯಕಿ ಇಂದೂ ವಿಶ್ವನಾಥ್‌.

ದಿ. ರಾಮಣ್ಣ ಹಾಗೂ ಶಾರದಾಂಬ ದಂಪತಿಗಳ ಮಗಳಾಗಿ ಜನಿಸಿದರು. ಓದಿ ಬೆಳದದ್ದು ಚಿಕ್ಕಮಗಳೂರಿನಲ್ಲಿ. ಬಾಲ್ಯದಿಂದಲೂ ಸಂಗೀತದಲ್ಲಿ ಅಪಾರ ಆಸಕ್ತಿ. ಶಾಲಾ ದಿನಗಳಲ್ಲಿ ಹತ್ತು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತ, ಸ್ಛೂರ್ತಿ ಹೊಂದಿ, ಜನರ ಮೆಚ್ಚುಗೆ ಆಶೀರ್ವಾದಗಳಿಂದ ಬೆಳೆಯುತ್ತ ಬಂದರು. ಬಿ.ಕಾಂ ಪದವಿ ಪಡೆದ ನಂತರ ವಿಶ್ವನಾಥ್‌ರನ್ನು ಮದುವೆಯಾಗಿ ಬೆಂಗಳೂರಿಗೆ 1975ರಲ್ಲಿ ಬಂದರು.

ಗುರು ಮುತ್ತಾಚಾರ್‌ರ ಬಳಿ ಸಂಗೀತ ಕಲಿತು, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಐದು ವರ್ಷಗಳ ಕಾಲ ಹಿಂದೂಸ್ಥಾನಿ ಗಾಯನವನ್ನು ಅಭ್ಯಸಿಸಿದ್ದಾರೆ. ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಹಿನ್ನೆಲೆ ಗಾಯಕಿ ಡಿಪ್ಲೊಮಾ ತರಬೇತಿ ಪಡೆದರು. ಅದೇ ಸಮಯದಲ್ಲಿ ಆಕಾಶವಾಣಿಯವರು ಆಡಿಷನ್‌ ಕರೆದರು. ಇದು ಇವರ ಬಾಳಿನಲ್ಲಾದ `ಟರ್ನಿಂಗ್‌ ಪಾಯಿಂಟ್‌.' ಆಡಿಷನ್‌ ಮುಗಿದು `ಎ' ಗ್ರೇಡ್‌ ಸಿಂಗರ್‌ ಹಾಗೂ `ಎ' ಗ್ರೇಡ್‌ ಸಂಗೀತ ನಿರ್ದೇಶಕಿಯಾಗಿ ಆಯ್ಕೆಯಾದಾಗ ಆದ ಆನಂದ ಅಷ್ಟಿಷ್ಟಲ್ಲ.

ಆಕಾಶವಾಣಿಗೆ ಅಡಿಯಿಡುತ್ತಿದ್ದಂತೆ ಇವರ ಸಂಗೀತ ಬಳಗ ಬೆಳೆಯಿತು. ಸನ್ಮಿತ್ರರ ಒಡನಾಟದಿಂದ ಸ್ನೇಹ ಬಳಗ ಬೆಳೆಯಿತು. ದೂರದರ್ಶನದಲ್ಲೂ `ಎ' ಗ್ರೇಡ್‌ ಆರ್ಟಿಸ್ಟ್ ಆಗಿ ತಮ್ಮ ಕಲಾಕ್ಷೇತ್ರದಲ್ಲಿ ನೆಲೆ ನಿಂತರು.

ಕಲಾಕ್ಷೇತ್ರಕ್ಕೆ ಕಾಲಿಡಲು ನೂರಾರು ಮಂದಿ ಆಸೆಯಿಂದ ಪ್ರಯತ್ನಪಡುತ್ತಾರೆ. ಕಲಾದೇವತೆ ಕೆಲವರನ್ನು ಮಾತ್ರವೇ ಆಯ್ದುಕೊಳ್ಳುತ್ತಾಳೆ. ಅದೊಂದು ಕಾಲವಿತ್ತು. ಇದ್ದದ್ದು ಒಂದೇ ಚಾನಲ್ ದೂರದರ್ಶನ, ವಾರಕ್ಕೊಂದು ಫಿಲಂ, 13 ವಾರಗಳ ಧಾರಾವಾಹಿ, ಹೀಗೆ ಬಹಳವೇ ಲಿಮಿಟೆಡ್‌ ಆಗಿತ್ತು. ಆ ದಿನಗಳಲ್ಲಿ ತಮ್ಮ ಸುಶ್ರಾವ್ಯ ಕಂಠದಿಂದ ದೇವರನಾಮ, ಸುಗಮಸಂಗೀತ ಗೀತೆಗಳನ್ನು ಕೇಳುಗರಿಗೆ ನೀಡುವ ಮುಖೇನ ಇಂದೂ ಖ್ಯಾತನಾಮರಾದರು. ಅವರ ಹಲವಾರು ಸುಪ್ರಸಿದ್ಧ ಹಾಡುಗಳು ಇಂದಿಗೂ ಕಿವಿಯಲ್ಲಿ ರಿಂಗುಣಿಸುತ್ತಿರುತ್ತವೆ. ಮುಂಜಾನೆಯ ರೇಡಿಯೋದಲ್ಲಿ ಸಂಜೆಯ ಟಿ.ವಿ.ಯಲ್ಲಿ ಇಂದೂ ವಿಶ್ವನಾಥ್‌ ತಮ್ಮದೇ ಶೈಲಿಯ ಹಾಡುಗಳಿಂದ ಕಾಣಿಸುತ್ತಿದ್ದರು. ಇಂದು ತಮ್ಮ ಪ್ರತಿಭೆ ಪರಿಶ್ರಮಗಳಿಂದ ವಿದೇಶಗಳಲ್ಲಿಯೂ ಹಾಡುಗಾರಿಕೆಯ ಸುಧೆಯನ್ನು ಹರಿಸುತ್ತಿದ್ದಾರೆ. ಸಂಗೀತ ಸರಸ್ವತಿಯ ಸೇವೆಯಲ್ಲಿ ನಿರತರಾಗಿದ್ದಾರೆ. `ನಿಶೆಯು ಸುರಿಯಲು, ಉಷೆಯು ಬೆಳಗಲು,' ಹಾಡಿನಲ್ಲಿನ ಭಾವ, ಸಾಯಿ ಭಜನೆಗಳಲ್ಲಿನ ಭಕ್ತಿ, ಹೀಗೇ ಇವರ ಗೀತೆಗಳಲ್ಲಿನ ದನಿ ಮನದಲ್ಲಿ ನಿಂತು, ಗುನ್‌ಗುನ್‌ ಮಾಡುವಂತೆ ಆಕರ್ಷಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ