ವ್ಯರ್ಥ ಮಾತುಗಳಿಂದ ಕೆಲಸವಾಗುವುದಿಲ್ಲ

ಸ್ಮೃತಿ ಇರಾನಿಯವರು ಜವಾಹರ್‌ಲಾಲ್ ‌ನೆಹರೂ ವಿಶ್ವವಿದ್ಯಾಲಯ ಮತ್ತು ಹೈದರಾಬಾದ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧಗಳಿಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ನೀಡಿದ ಉತ್ತರ, ತರ್ಕಗಳು, ಕುತರ್ಕಗಳು, ಸತ್ಯ, ಅರ್ಧಸತ್ಯ ಮತ್ತು ಉತ್ತಮ ತಥ್ಯಗಳಿಂದ ಕೂಡಿದ್ದವು. ಆದರೆ ಒಪ್ಪಬೇಕಾದ ವಿಷಯವೆಂದರೆ ಟಿ.ವಿ. ಸ್ಕ್ರೀನ್‌ ಅವರಿಗೆ ಸಾಕಷ್ಟು ವಿಷಯಗಳನ್ನು ಕಲಿಸಿದೆ. ಈಗ ಅವರು ಓತಪ್ರೋತವಾಗಿ ಮಾತನಾಡುತ್ತಾರೆ. ಅವರ ಅಂಗ ಮುದ್ರೆಗಳಂತೂ ಅವರ ಬಾಯಿಗಿಂತ ತುಸು ಹೆಚ್ಚೇ ಮಾತಾಡುತ್ತವೆ. ಇಟಾಲಿಯನ್‌ ಭಾಷೆಯನ್ನು ಬರೀ ಬಾಯಿಯಿಂದ ಮಾತ್ರವಲ್ಲದೆ, ಕೈಗಳು, ಕಣ್ಣುಗಳೂ ಮತ್ತು ಶರೀರದಿಂದಲೂ ಮಾತನಾಡಲಾಗುತ್ತದೆ ಎನ್ನುತ್ತಾರೆ. ಯಾರಾದರೂ ಇಟಾಲಿಯನ್‌ರೊಂದಿಗೆ ಮಾತಾಡುವಾಗ ಅವರು ಕೈಗಳು, ಕಾಲುಗಳು, ಕುತ್ತಿಗೆ ಅಂದರೆ ಇಡೀ ಶರೀರೀ ಭಾಷೆಯಂತೆ ಚಲಿಸುತ್ತದೆ. ಇಟಾಲಿಯನ್‌ ಸೋನಿಯಾ ಗಾಂಧಿಯ ಪಾರ್ಟಿಯ ಪ್ರಶ್ನೆಗಳಿಗೆ ಉತ್ತರ ಕೊಡುವಲ್ಲಿ ಸ್ಮೃತಿ ಇರಾನಿ ಈ ಕಲೆಯನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡರು.

ಸ್ಮೃಮತಿ ಇರಾನಿ ಉತ್ಸಾಹದಿಂದ ಮಾತಾಡಿದರು. ಆದರೆ ವಿದ್ಯಾರ್ಥಿಗಳ ಸಂಘರ್ಷ ಮತ್ತು ದಲಿತರೊಂದಿಗೆ ಹೆಚ್ಚುತ್ತಿರುವ ದುರ್ವ್ಯವಹಾರ ಬರೀ ಮಾತುಗಳಿಂದ ದೂರಾಗುವುದಿಲ್ಲ. ಮನೆಯಲ್ಲಿ ಪಲ್ಯ ಏಕೆ ಸೀದುಹೋಯ್ತು, ಮಗ ಪರೀಕ್ಷೆಯಲ್ಲೇಕೆ ಫೇಲಾದ, ಮಗಳು ಏಕೆ ತಡವಾಗಿ ಮನೆಗೆ ಬಂದಳು ಇತ್ಯಾದಿಗಳಿಗೆ ಅರ್ಧ ಮುಕ್ಕಾಲು ಗಂಟೆಗಳ ವಾಕ್‌ ಪ್ರಹಾರ ಸಮಸ್ಯೆಗೆ ಪರಿಹಾರ ಕೊಡುವುದಿಲ್ಲ. ಸಮಸ್ಯೆಯಂತೂ ದೃಢವಾದ ಹೆಜ್ಜೆ ಇಡುವುದರಿಂದಲೇ ದೂರಾಗುತ್ತದೆ. ಮನೆಗಳಲ್ಲಿ ವಿವಾದಗಳನ್ನು ಬರೀ ಮಾತುಗಳಿಂದಲೇ ಪರಿಹರಿಸಲು ಪ್ರಯತ್ನಿಸುವುದರಿಂದ ಅವು ಪರಿಹಾರವಾಗುವುದಕ್ಕಿಂತ ಹೆಚ್ಚು ಪೋಷಿಸಲ್ಪಡುತ್ತದೆ.

ನಮ್ಮ ದೇಶದಲ್ಲಿ ದಲಿತರೊಂದಿಗಿನ ದುರ್ವರ್ತನೆ ಶತಮಾನಗಳಿಂದ ನಡೆಯುತ್ತಿದೆ. ಅವರೂ ಸಹ ಶತಮಾನಗಳಿಂದ ಇದು ನಮ್ಮ ವಿಧಿಯಲ್ಲಿ ಬರೆದಿದೆ, ಹಿಂದಿನ ಜನ್ಮದ ಕರ್ಮಫಲ ಎಂದು ಯೋಚಿಸುತ್ತಿದ್ದರು. ಹೀಗೆಯೇ ಮಹಿಳೆಯರೂ ಯೋಚಿಸುತ್ತಿದ್ದರು. ಹೆಚ್ಚಿನ ಮಹಿಳೆಯರು ಶತಮಾನಗಳವರೆಗೆ ಸಾಮಾಜಿಕ ದುರ್ವರ್ತನೆಗೆ ತುತ್ತಾಗಿದ್ದರು. ವಿಧವೆಯರಾಗುವುದು, ಬಂಜೆಯರಾಗುವುದು, ಬರೀ ಹೆಣ್ಣುಮಕ್ಕಳಿಗೆ ಜನ್ಮ ನೀಡುವುದು, ಗಂಡ ಬೇರೆ ಹೆಣ್ಣುಗಳ ಬಳಿ ಹೋಗುವುದು, ಗಂಡ ಮತ್ತು ಮಕ್ಕಳು ಹಾಳಾಗುವುದು ಅವರು ಬಡವರು, ಮೂಡನಂಬಿಕೆ ಇರುವವರು, ತಿರಸ್ಕೃತರೂ ಆಗಿದ್ದರೆ ತಪ್ಪು ಅವರದೇ ಎಂದು ಎಲ್ಲರ ದೋಷವನ್ನು ಮಹಿಳೆಯರ ಮೇಲೆ ಹೊರೆಸುತ್ತಾರೆ.

ಸ್ಮೃತಿ ಇರಾನಿ ಮಹಿಳೆಯರ ದುಃಖ ಅರ್ಥ ಮಾಡಿಕೊಳ್ಳುತ್ತಾ ಸಮಾಜದ ದೊಡ್ಡ ಭಾಗವಾದ ದಲಿತರು, ಶೂದ್ರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಹುದಿತ್ತು, ಅವರಿಗಾಗಿ ಏನಾದರೂ ಮಾಡಬಹುದಿತ್ತು. ಆದರೆ ಅವರು ಅದೇ ಸಾಮಾಜಿಕ ಅಂಧಾನುಕರಣೆ ಅನುಕರಿಸಿದರು. ಅದು ಸಮಸ್ಯೆಗೆ ಪರಿಹಾರವಾಗಿರದೆ ಸಮಸ್ಯೆಯ ಮೂಲವಾಗಿದೆ.

ಮಹಿಳೆಯರೊಂದಿಗೂ ಹೀಗೇ ಆಗುತ್ತದೆ. ಏಕೆಂದರೆ ದೌರ್ಜನ್ಯಕ್ಕೊಳಗಾದ ಪ್ರತಿ ಸೊಸೆಯೂ ತಾನು ಅತ್ತೆಯಾದ ಬಳಿಕ ತನ್ನ ಸೊಸೆಯ ಮೇಲೆ ಅದರ ಸೇಡು ತೀರಿಸಿಕೊಳ್ಳುತ್ತಾಳೆ. ಅದು `ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ' ಎಂಬಂತೆ ಮನೆ ಮನೆಯ  ಕಥೆಯಾಗಿದೆ. ದಲಿತರು, ಶೂದ್ರರು ಮತ್ತು ಹಿಂದುಳಿದವರ ಬಗ್ಗೆ ಅನ್ಯಾಯಗಳು ಗಲ್ಲಿ ಗಲ್ಲಿಯ ಕಥೆಯಾಗಿವೆ.

ಸಮಾಜದ ನಾಯಕರು, ಧಾರ್ಮಿಕವಾದಿ ಮುಖಂಡರ ಯಶಸ್ಸೆಂದರೆ ಅವರು ಯಾವಾಗಲೂ ಸಂಸ್ಕೃತಿ, ಸಂಸ್ಕಾರಗಳು, ರೀತಿ ರಿವಾಜುಗಳು, ಧರ್ವೋಪದೇಶಗಳ ಬಗ್ಗೆ ಮಾತನಾಡಿ ಯಥಾಸ್ಥಿತಿ ಕಾಯ್ದುಕೊಳ್ಳುತ್ತಾರೆ. ಸಾಮಾಜಿಕ ತುಳಿತಕ್ಕೊಳಗಾಗಿದ್ದು, ಅನ್ಯಾಯವನ್ನು ಸಹಿಸುವವರು ಕಟಕಟೆಯಲ್ಲಿ ನಿಂತಿರುತ್ತಾರೆ. ಸ್ಮೃತಿ ಇರಾನಿಯವರು ನಟಿಸಿದ ಧಾರಾವಾಹಿಗಳಲ್ಲಿ ನಿರ್ದೋಷಿ ಮಹಿಳೆಯರು, ಹುಡುಗಿಯರು, ಸೊಸೆಯಂದಿರು, ಪತ್ನಿಯರಿಗೆ ಸಮಾಜದಲ್ಲಿ ಶೋಷಿತರಾದ ದಲಿತರಿಗೆ ಆದಂತೆಯೇ ಆಗುತ್ತದೆ. ಕೆಲವು ಧಾರಾವಾಹಿಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ವಿವಶರಾಗುತ್ತಾರೆ, ಕೆಲವು ಕಡೆ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ, ಕೆಲವು ಕಡೆ ಕೋಣೆಗಳಲ್ಲಿ ಬಂಧಿತರಾಗಿ ಇರಬೇಕಾಗುತ್ತದೆ, ಕೆಲವು ಕಡೆ ತಲೆಮರೆಸಿಕೊಂಡು ಮಥುರಾ, ಕಾಶಿಗೆ ಹೋಗಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ