ಇರುವಂತೆಯೇ ಸ್ವೀಕರಿಸಿ

ನರೇಂದ್ರ ಮೋದಿಯವರ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಚುನಾವಣೆಗಳ ಅದ್ಭುತ ಗೆಲುವು ದೇಶದ ನಕಾಶೆಯನ್ನೇ ಬದಲಿಸಿಬಿಟ್ಟಿದೆ. 2014ರ ಗೆಲುವನ್ನು ಒಂದು ಆಕಸ್ಮಿಕ ಎಂದು ತಿಳಿಯಲಾಗಿತ್ತು. ಆದರೆ ಈ ಎರಡು ರಾಜ್ಯಗಳಲ್ಲಿನ ಗೆಲುವಿನ ಬಳಿಕ ಒಂದು ಹೊಸ ರೀತಿಯ ಭಾರತೀಯ ಜನತಾ ಪಾರ್ಟಿ ಒಂದು ಹೊಸ ರೀತಿಯ ರಾಜಕಾರಣವನ್ನು ನಡೆಸುವುದು ನಿಶ್ಚಿತವಾಗಿದೆ. ಭಾಜಪ ಸರ್ಕಾರಗಳಿಲ್ಲದ ಇತರ ರಾಜ್ಯಗಳಲ್ಲಿಯೂ ಭಾರತೀಯ ಜನತಾ ಪಾರ್ಟಿ ಆಕ್ರಮಣಶೀಲವಾಗಿರುತ್ತದೆ ಮತ್ತು 2014 ಹಾಗೂ 2017ರ ಅನುಭವಗಳನ್ನು ಪುನರಾವರ್ತಿಸುತ್ತದೆ.

ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಗೆಲುವುಗಳು ಭಾರತೀಯ ಜನತಾ ಪಾರ್ಟಿಯನ್ನು 1947 ರಿಂದ 1975ರವರೆಗಿನ ಕಾಂಗ್ರೆಸ್‌ನ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿದೆ. ಇತರ ಪಾರ್ಟಿಗಳ ರಾಜ್ಯ ಸರ್ಕಾರಗಳ ಬಳಿ ಭಾರತೀಯ ಜನತಾ ಪಾರ್ಟಿಯ ಸರ್ಕಾರದ ಕಾರ್ಯಸೂಚಿಯನ್ನು ಜಾರಿಗೆ ತರುವುದು ಬಿಟ್ಟು ಬೇರಾವುದೇ ಉಪಾಯವಿಲ್ಲ.

ಕಾಂಗ್ರೆಸ್‌ನ 2004 ರಿಂದ 2014ರವರೆಗಿನ ಸುಧಾರಣೆಗಳನ್ನು ಒಪ್ಪದ ಜನತೆ ಅದಕ್ಕೆ ಭ್ರಷ್ಟಾಚಾರದ ಭಾರೀ ದಂಡವನ್ನಂತೂ ವಿಧಿಸಿತು. ರಾಜಕಾರಣದಲ್ಲಿ ಬರೀ ನಿಲ್ಲುವುದಷ್ಟೇ ಸಾಕಾಗುವುದಿಲ್ಲ. ತಮ್ಮನ್ನು ವಿಕ್ರಯಿಸಿಕೊಳ್ಳುವುದೂ ಅಗತ್ಯ. ನರೇಂದ್ರ ಮೋದಿಯವರನ್ನು ಎದುರಿಸುವುದು ಈಗ ಕಾಂಗ್ರೆಸ್‌ಗೆ ಮತ್ತು ಇತರ ಪಕ್ಷಗಳು ಹಾಗೂ ಅವರ ಮೈತ್ರಿಕೂಟಗಳಿಗೆ ಸಾಧ್ಯವಿಲ್ಲ.

ಈಗ ಭಾರತೀಯ ಜನತಾ ಪಾರ್ಟಿಗೆ ಅಭಿವೃದ್ಧಿ ಕಾರ್ಯಸೂಚಿಯ ಸೋಗನ್ನು ಹಾಕುವುದೂ ಅಗತ್ಯವಿಲ್ಲ. ಅದಕ್ಕೆ ಭ್ರಷ್ಟಾಚಾರ ಮುಕ್ತ ಭಾರತವನ್ನಾಗಲೀ, ಸ್ವಚ್ಛ ಭಾರತವನ್ನಾಗಲೀ ಮಾಡುವುದು ಬೇಕಾಗಿಲ್ಲ. ಅದು ಜಾತಿಗಳು, ಸಂತರು, ಮಠಾಧಿಪತಿಗಳ ಸೈನ್ಯ ಮತ್ತು ಮೂಢನಂಬಿಕೆ ಇರುವವರ ಆಸರೆಯಿಂದ ಧರ್ಮದ ಆಸರೆ ಪಡೆದು ಹೊಸ ರಾಜಕಾರಣ ಮಾಡುತ್ತಿರುವುದು ವಿಚಿತ್ರವೇನಲ್ಲ.

ಸಾಮಾನ್ಯ ವ್ಯಕ್ತಿ ಶತಮಾನಗಳಿಂದ ತಮ್ಮ ಹೊಟ್ಟೆ ಹಾಗೂ ತಮ್ಮ ಬದುಕನ್ನು ಧರ್ಮ, ರೀತಿ ನೀತಿ, ಪರಂಪರೆಯ ಹೆಸರಿನಲ್ಲಿ ತ್ಯಾಗ ಮಾಡುತ್ತಿದ್ದಾರೆ ಹಾಗೂ ಅದರಲ್ಲಿಯೇ ತಮ್ಮ ಅಸ್ತಿತ್ವನ್ನು ಕಾಣುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ಇತರ ಪಾರ್ಟಿಗಳೂ ಸಹ ಇದನ್ನೇ ಉಪಯೋಗಿಸಿದ್ದಾರೆ. ಆದರೆ ಭಾಜಪಾದ ರೀತಿಯಿಂದಲ್ಲ.

ಸುದ್ದಿ ಸಮಾಚಾರ

ನರೇಂದ್ರ ಮೋದಿಗೆ ಸಿಕ್ಕ ಗೆಲುವು ಅವರ ಸರ್ಕಾರಕ್ಕೆ ದೇಶದ ಅರ್ಥ ವ್ಯವಸ್ಥೆ ಮತ್ತು ಸಮಾಜದ ಜೊತೆ ಹೊಸ ಪ್ರಯೋಗ ಮಾಡುವ ಸ್ವಾತಂತ್ರ್ಯ ಕೊಟ್ಟಿದೆ. ಈಗ ಸರ್ಕಾರ ವಿರೋಧದ ಬಗ್ಗೆ ಚಿಂತಿಸದೆ ಕೆಲಸ ಮಾಡಬಹುದು. ಈಗ ಸಂವಿಧಾನ ಹಾಗೂ ರಾಜಕಾರಣದ ಪರಂಪರೆಗಳನ್ನು ಇಂದಿರಾ ಗಾಂಧಿ 1969 ರಿಂದ 1977ರ ನಡುವೆ ಇಟ್ಟಿದ್ದಂತೆಯೇ ಅದೇ ದೃಷ್ಟಿಯಲ್ಲಿ ಇಡಬಹುದಾಗಿದೆ.

ಸರ್ಕಾರದ ವಿರೋಧಿಗಳಿಗೆ ಈಗ 4 ಬಾರಿ ಯೋಚಿಸಿ ಹೇಳುವ ಧೈರ್ಯ ಮಾಡಬೇಕಾಗಿದೆ. ಏಕೆಂದರೆ ಜನತೆ ಬ್ಯಾಲಟ್‌ ಮೆಷಿನ್‌ಗಳ ಮೂಲಕ ಒಂದು ಹೊಸ ತೀರ್ಮಾನ ತೆಗೆದುಕೊಂಡಿದ್ದಾರೆ. ಈಗ ಈ ತೀರ್ಮಾನ ಒಳ್ಳೆಯದೋ ಕೆಟ್ಟದ್ದೊ ಎಂಬ ವಾದಕ್ಕೆ ಎಡೆಯಿಲ್ಲ.

ಮದುವೆಯ ನಂತರ ಮನೆಗೆ ಸೊಸೆ ಅಥವಾ ಪತ್ನಿ ಬಂದರೆ ಅವಳ ಕೊರತೆಗಳ ಬಗ್ಗೆ ಗಮನ ಕೊಡುವುದರಿಂದ ಯಾವುದೇ ಲಾಭವಿಲ್ಲ. ಯಾವುದು ಹೇಗಿದೆಯೋ ಅದರಂತೆಯೇ ಸ್ವೀಕರಿಸುವುದು ಒಳ್ಳೆಯದು. ಒಂದು ವೇಳೆ ಪಂಚಾಯಿತಿದಾರರು ಅಂದರೆ ಜನತೆಯ ಅಭಿಪ್ರಾಯ, ಪರಿಪೂರ್ಣ ಅಭಿಪ್ರಾಯದೊಂದಿಗೆ ಗೆದ್ದು ಯಾವುದಾದರೂ ಸರ್ಕಾರ ರಚಿತವಾದರೆ ಅದನ್ನು ಸ್ವೀಕರಿಸಲೇಬೇಕು.

ಪ್ರಶಂಸನೀಯ ನಿರ್ಧಾರ

ಹೆಂಡತಿಯರು ಸುಪ್ರೀಂ ಕೋರ್ಟ್‌ಗೆ ಕೃತಜ್ಞತೆ ತಿಳಿಸಬೇಕು. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಿಂದ 500 ಮೀಟರ್‌ ವ್ಯಾಪ್ತಿಯೊಳಗೆ ಮದ್ಯ ಮಾರಾಟ ಹಾಗೂ ವಿತರಣೆಯ ಮೇಲೆ ಪ್ರತಿಬಂಧ ಹೇರಿದೆ. ಒಂದಷ್ಟು ಮದ್ಯ ಸೇವಿಸಿ ಚಾಲಕರು ಡ್ರೈವಿಂಗ್‌ನ ಮಜ ಅನುಭವಿಸುತ್ತಿದ್ದರು. ಚಾಲಕರಿಗೇನೊ ಅದು ಮಜ ಎನಿಸುತ್ತಿತ್ತು. ಹೆಂಡತಿಯರಿಗೆ ಮಾತ್ರ ಅದು ಸಜೆಗಿಂತ ಕಡಿಮೆ ಅನಿಸುತ್ತಿರಲಿಲ್ಲ. ಹೆದ್ದಾರಿಯಲ್ಲಿ ಕುಡಿದು ಗಾಡಿ ಓಡಿಸುವವರು ಯಾವಾಗ ಯಾವ ಆಪತ್ತಿಗೆ ಸಿಲುಕುತ್ತಾರೋ ಹೇಳಲಿಕ್ಕಾಗದು. ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ ಮದ್ಯ ಸೇವನೆಯೇ ಆಗಿರುತ್ತದೆ.

ದೇಶದ ಬಹಳಷ್ಟು ನಗರಗಳ ಮುಖಾಂತರ ಹೆದ್ದಾರಿಗಳು ಹಾದು ಹೋಗುತ್ತವೆ. ದೊಡ್ಡ ಹೋಟೆಲ್ ಗಳಿಂದ ಹಿಡಿದು ಡಾಬಾ ತನಕ ಎಲ್ಲೆಲ್ಲೂ ಮದ್ಯವನ್ನು ಯಥೇಚ್ಛವಾಗಿ ಮಾರಲಾಗುತ್ತಿತ್ತು. ಹೆದ್ದಾರಿ ಬದಿಯ ಎಷ್ಟೋ ಹೋಟೆಲ್ ಗಳಲ್ಲಿ ಗಂಡಸರು ತಮ್ಮ ಹೆಂಡತಿಯರ ಎದುರೇ ಮದ್ಯ ಕುಡಿಯುತ್ತಿದ್ದರು. ಹೆಂಡತಿಯರು ಸುಮ್ಮನೆ ಕುಳಿತುಕೊಳ್ಳುವ ಹೊರತು ಬೇರೇನೂ ಮಾಡಲು ಆಗುತ್ತಿರಲಿಲ್ಲ.

ಸುಪ್ರೀಂ ಕೋರ್ಟ್‌ ದೇಶಾದ್ಯಂತ ಅರ್ಧಕ್ಕಿಂತ ಹೆಚ್ಚು ಮದ್ಯದಂಗಡಿಗಳನ್ನು ಮುಚ್ಚುವ ಬಗ್ಗೆ ತೀರ್ಪು ನೀಡಿತು. ಈಗ ಹೆದ್ದಾರಿ ಪಕ್ಕ ಮದ್ಯ ಸೇವಿಸಬೇಕೆಂದರೆ, ಅರ್ಧ ಕಿ.ಮೀ.ಗೂ ಹೆಚ್ಚಿನ ದೂರ ಅದರಲ್ಲೂ ಕಿಷ್ಕಿಂಧೆ ದಾರಿಯಲ್ಲಿ ಹೋಗಬೇಕಾಗುತ್ತದೆ. ಮದ್ಯದ ದುಷ್ಪರಿಣಾಮ ಹೆಚ್ಚಾಗಿ ಮಹಿಳೆಯರ ಮೇಲೆಯೇ ಆಗುತ್ತದೆ. ಪತಿಯ ಜೊತೆಗೆ ತಾವು ಅಷ್ಟಿಷ್ಟು ಕುಡಿಯುವ ಮಹಿಳೆಯರಿಗೂ ಇದರ ಪರಿಣಾಮ ಆಗದೇ ಇರುವುದಿಲ್ಲ. ಇದು ಮನೆಯ ಆದಾಯಕ್ಕೆ ಕನ್ನ ಹಾಕುತ್ತದೆ. ಗಳಿಸುವ ವ್ಯಕ್ತಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚಿನ ವರ್ಷಗಳಲ್ಲಿ ತಾಯಂದಿರಿಗೂ ತಮ್ಮ ಮಗ-ಮಗಳು ಕುಡಿದು ಏನೇನು ರಾದ್ಧಾಂತ ಮಾಡಬಹುದು ಎಂಬ ಆತಂಕ ಕಾಡುತ್ತಿರುತ್ತದೆ.

ರಸ್ತೆ ಪಕ್ಕದಲ್ಲಿ ಮದ್ಯ ಮಾರಾಟ ನಿಲ್ಲಿಸುವುದರಿಂದ ಮದ್ಯದ ಹರಿವು ನಿಂತೇ ಬಿಡುತ್ತದೆ ಎಂದಲ್ಲ. ಆದರೆ ಒಂದು ಸಂದೇಶವಂತೂ ಹೋಗಿಯೇ ಹೋಗುತ್ತದೆ, ಮದ್ಯ ಸೇವನೆಯಿಂದ ಕೇವಲ ದುರಂತಗಳಷ್ಟೇ ಸಂಭವಿಸುವುದಿಲ್ಲ, ಅದನ್ನು ಪಡೆದುಕೊಳ್ಳಲು ಸಾಕಷ್ಟು ಪರಿತಪಿಸಬೇಕಾಗುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ಸಿಗರೇಟ್‌ಗೆ ನಿರ್ಬಂಧ ಹೇರಿರುವುದರಿಂದ ಬಸ್‌, ರೈಲು, ಹೋಟೆಲ್‌, ಪಾರ್ಕ್‌ಗಳಲ್ಲಿ ಧೂಮಪಾನದ ಹೊಗೆ ಕಂಡುಬರುತ್ತಿಲ್ಲ. ಗೋಮಾಂಸದ ಮೇಲೆ ಪ್ರತಿಬಂಧ ಹೇರುವ ಈ ನಿರ್ಧಾರ ಭಾಜಪಾ ಸರ್ಕಾರದ್ದಲ್ಲ, ಸುಪ್ರೀಂ ಕೋರ್ಟ್‌ನದು. ಇದರಲ್ಲಿ ಯಾವುದೇ ಕಂದಾಚಾರ ಗೋಚರಿಸದೆ, ವ್ಯವಹಾರ ಕೌಶಲತೆ ಮಾತ್ರ ಕಂಡುಬರುತ್ತದೆ.

ದೇಶದಲ್ಲಿ ಮದ್ಯದ ಅಮಲು ಜಾಸ್ತಿಯಾಗುತ್ತಿದೆ. ಜನರು ದೇವಸ್ಥಾನಗಳಲ್ಲಿ ಮನಬಂದಂತೆ ಖರ್ಚು ಮಾಡುವ ಹಾಗೆ, ಮದ್ಯಕ್ಕೂ ಯಥೇಚ್ಛವಾಗಿ ಖರ್ಚು ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ನಿರ್ಬಂಧ ನಶೆಯ ಮೇಲೆ ಕಡಿವಾಣ ಹಾಕಿಯೇ ಹಾಕುತ್ತದೆ. ಅದರಿಂದ ಉಳಿತಾಯವಾಗುವ ಹಣವನ್ನು ಅಗತ್ಯ ವಸ್ತುಗಳ ಮೇಲೆ, ಔಷಧಗಳಿಗಾಗಿ ಹಾಗೂ ಸೀರೆಗಳಿಗಾಗಿ ವಿನಿಯೋಗಿಸಬಹುದು.

ಸ್ಕೈಸ್ ಪಾಯಿಂಟ್‌ ಅಂಬಿಕಾನಗರ

ಆ ಧೈರ್ಯಕ್ಕೊಂದು ಸವಾಲ್!

ದೆಹಲಿಯ ಮಧ್ಯಮ ವರ್ಗದವರು ವಾಸಿಸುವ ಒಂದು ಕಾಲೋನಿಯಲ್ಲಿ ನಡೆದ ಘಟನೆ. ಪಕ್ಕದ ಮನೆಯವನೊಬ್ಬ ಅಣ್ಣನ ಮೇಲೆ ಹಲ್ಲೆ ನಡೆಸಿದ ಘಟನೆಯಲ್ಲಿ ತಂಗಿ ಮೃತಪಟ್ಟಿದ್ದು ನಿಜಕ್ಕೂ ಖೇದದ ಸಂಗತಿ. ಆದರೆ ಈ ಘಟನೆ ಮಹಿಳೆಯರು ತಾವೇ ರೂಪಿಸಿಕೊಂಡ ಚಿಪ್ಪಿನಿಂದ ಹೊರಬರುತ್ತಿರುವುದನ್ನು ಬಿಂಬಿಸುತ್ತದೆ.ಈ ಘಟನೆಯಲ್ಲಿ ನಡೆದದ್ದಿಷ್ಟು. ಮೃತಳ ಸೋದರ ತನ್ನ ಹೆಂಡತಿಯನ್ನು ಚುಡಾಯಿಸುತ್ತಾನೆಂದು ಹೇಳಿ ಚಾಕೂ ತೆಗೆದುಕೊಂಡು ಅವರ ಮನೆಗೆ ನುಗ್ಗುತ್ತಾನೆ. 23 ವರ್ಷದ ಜ್ಯೋತಿ ತನ್ನ ಸೋದರನನ್ನು ಕಾಪಾಡಲೆಂದು ಮಧ್ಯ ಪ್ರವೇಶ ಮಾಡುತ್ತಾಳೆ, ಹಲ್ಲೆ ಮಾಡಿದ ವ್ಯಕ್ತಿಯನ್ನು ಹಿಡಿದುಕೊಳ್ಳಲು ಯತ್ನಿಸುತ್ತಾಳೆ. ಆದರೆ ಹಲ್ಲೆಕೋರ ಚಾಕುವಿನಿಂದ ಅವಳಿಗೆ ಚುಚ್ಚುತ್ತಾನೆ. ಅಣ್ಣನನ್ನು ಕಾಪಾಡಲು ಹೋದ ತಂಗಿ ತನ್ನ ಜೀವವನ್ನೇ ತ್ಯಾಗ ಮಾಡುತ್ತಾಳೆ.

ಹುಡುಗಿಯರ ಮನಸ್ಸಿನಲ್ಲಿ ಕೀಳರಿಮೆಯನ್ನು ಧರ್ಮ ಇಂಚಿಂಚು ತುಂಬಿದೆ. ಬಾಲ್ಯದಿಂದಲೇ ಅವರನ್ನು ಹುಡುಗರಿಗಿಂತ ದುರ್ಬಲ ಎಂದು ಭಾವಿಸಲಾಗಿದೆ. ಅವರನ್ನು ತಮ್ಮದೇ ಆದ ಚಿಪ್ಪಿನಲ್ಲಿ ಇರುವಂತೆ ಕಲಿಸಲಾಗಿದೆ. ಅವರನ್ನು ನಾಲ್ಕು ಗೋಡೆಗಳ ಮಧ್ಯೆ ಪರದೆಗಳ ಹಿಂದೆ, ಬುರ್ಖಾಗಳ ಹಿಂದೆ ಇರುವಂತೆ ಮಾಡಲಾಗಿದೆ. ಅವರಿಗೆ ಹೊರಗಿನ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಕೊಡುವುದಿಲ್ಲ. ಈ ಕಾರಣದಿಂದಾಗಿ ಅವರ ಮಾಂಸಖಂಡಗಳು ಸದೃಢಗೊಳ್ಳುವುದಿಲ್ಲ. ದುರ್ಬಲ ಮಾಂಸಖಂಡಗಳ ಕಾರಣದಿಂದ ಅವರು ಗರ್ಭದಲ್ಲಿ ಮಗುವನ್ನೂ ಸಹ ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ.

ಒಂದು ವೇಳೆ ಜ್ಯೋತಿ ತನ್ನ ಅಣ್ಣನನ್ನು ಉಳಿಸಲು ಹನುಮಾನ್‌ ಚಾಲಿಸಾ ಓದಲು ಕುಳಿತಿದ್ದರೆ ಇಲ್ಲಿ ಅವನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುತ್ತದೆ ಎಂದು ಯೋಚಿಸಿ ತಾನೂ ಅಡಗಿ ಕುಳಿತಿದ್ದರೆ ಅವಳ ಅಣ್ಣನ ಜೀವ ಉಳಿಯುತ್ತಿತ್ತೇ? ನೆರೆಮನೆಯ ವ್ಯಕ್ತಿ ಅವಳ ಅಣ್ಣನನ್ನು ಸಾಯಿಸಿ, ಇನ್ನು ಯಾರ ಯಾರ ಜೀವ ತೆಗೆಯುತ್ತಿದ್ದನೋ ಏನೊ? ಅದನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ.

ಮಹಿಳೆಯರಲ್ಲಿ ಆರಂಭದಲ್ಲಿ ಅಂದರೆ ಬಾಲ್ಯದಲ್ಲಿ ಆತ್ಮವಿಶ್ವಾಸ ಅತ್ಯಂತ ಉನ್ನತ ಮಟ್ಟದಲ್ಲಿಯೇ ಇರುತ್ತದೆ. ನಿಸರ್ಗ ಪುರುಷ ಮತ್ತು ಮಹಿಳೆಯರಲ್ಲಿ ಇಟ್ಟಿರುವ ವ್ಯತ್ಯಾಸ ಅತ್ಯಂತ ಕಡಿಮೆ. ಹೆಚ್ಚಿನ ಜಾನುವಾರುಗಳಲ್ಲಿ ಹೆಣ್ಣು ಪ್ರಾಣಿಯೇ ಅಧಿಕಾರ ಚಲಾಯಿಸುತ್ತದೆ. ಮನುಷ್ಯ ಯಾವ ಪ್ರಾಣಿಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡಿರುವನೋ ಆ ಪ್ರಾಣಿಗಳನ್ನು ಬಿಟ್ಟು ಬೇರೆ ಸ್ವತಂತ್ರ ಪ್ರಾಣಿಗಳ ಬಗ್ಗೆ ವಿಚಾರ ಮಾಡಿದಾಗ, ಪ್ರಾಣಿಗಳು, ಪಕ್ಷಿಗಳು, ಕೀಟಗಳು ಈ ಮುಂತಾದವುಗಳಲ್ಲಿ ಲಿಂಗಬೇಧ ಸ್ವಲ್ಪ ಇಲ್ಲ. ನಾಗರಿಕತೆ ಸುರಕ್ಷತೆಯನ್ನೇನೊ ನೀಡಿದೆ. ಆದರೆ ಮಹಿಳೆಯರನ್ನು ಧರ್ಮದ ಸಂಕೋಲೆಯಲ್ಲಿ ದುರ್ಬಲಗೊಳಿಸಿದೆ ಹಾಗೂ ಅಂಥವರ ಮೇಲೆಯೇ ದೌರ್ಜನ್ಯಗಳು, ಅತ್ಯಾಚಾರಗಳು ನಡೆಯುತ್ತಿವೆ.

और कहानियां पढ़ने के लिए क्लिक करें...