ಒಂದು ಸಲ ಜೇನ್ನೊಣವೊಂದು ನನ್ನ ಕುತ್ತಿಗೆಯ ಭಾಗದಲ್ಲಿ ಕಚ್ಚಿತು. ತಕ್ಷಣವೇ ನನ್ನ ಪತಿ ಆಲೂಗಡ್ಡೆಯ ಒಂದು ತುಂಡನ್ನು ಕತ್ತರಿಸಿ ಜೇನ್ನೊಣ ಕಚ್ಚಿದ ಜಾಗದಲ್ಲಿ ಇರಿಸಿದರು. ಹೀಗೆ ಮಾಡುವುದರಿಂದ ಕಚ್ಚಿದ ಭಾಗದಲ್ಲಿ ಅದರ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಆದರೆ ಹಲವು ದಿನಗಳ ಕಾಲ ಅಷ್ಟಿಷ್ಟು ನೋವು ಇದ್ದೇ ಇರುತ್ತದೆ.

ರಾಜೀವ್ ಮತ್ತು ಸೋನಿಯಾ ಒಂದು ದಿನ ಮಕ್ಕಳ ಜೊತೆ ಪಿಕ್ನಿಕ್‌ಗೆ ಹೋದರು. ಮಕ್ಕಳಲ್ಲಿ ಯಾರೊ ಒಬ್ಬರು ಕಡಜಗಳ ಗೂಡಿಗೆ ಕಲ್ಲೆಸೆದರು. ಅದರ ಪರಿಣಾಮ ಎಂಬಂತೆ ಕಡಜಗಳ ಗುಂಪು ಎಲ್ಲರ ಮೇಲೆ ಹಲ್ಲೆ ನಡೆಸಿ ಕಚ್ಚಿದವು. ಅವರು ಹಲವು ದಿನಗಳ ಕಾಲ ಅನಾರೋಗ್ಯಕ್ಕೆ ತುತ್ತಾದರು. ಒಳ್ಳೆಯ ಸಂಗತಿ ಏನೆಂದರೆ, ಅವರಲ್ಲಿ ಯಾರೊಬ್ಬರೂ ವಿಷದ ವಿರುದ್ಧ ಅಲರ್ಜಿಕ್‌ ಆಗಿರಲಿಲ್ಲ. ಯಾರಾದರೂ ಅದರ ವಿಷದ ವಿರುದ್ಧ ಅಲರ್ಜಿಕ್‌ ಆಗಿದ್ದರೆ ಅವರು ಬದುಕುಳಿಯುವುದು ಕಷ್ಟ ಆಗುತ್ತಿತ್ತು.

ಜೇನ್ನೊಣಗಳು ಕೂಡ ಅಪಾಯಕಾರಿ : ಜೇನ್ನೊಣವೊಂದು ಮನುಷ್ಯನನ್ನು ಕಚ್ಚಿದಾಗ ಸ್ವತಃ ಜೇನ್ನೊಣವೇ ಸಾಯುತ್ತದೆ. ಏಕೆಂದರೆ ಅದು ಮನುಷ್ಯನನ್ನು ಕಚ್ಚಿದಾಗ ದೇಹದಲ್ಲಿ ಹೂತುಹೋಗುವ ಮುಳ್ಳಿನಂತಹ ಭಾಗ ಅದರ ಹೊಟ್ಟೆಯ ಒಂದು ಪ್ರಮುಖ ಭಾಗವೇ ಆಗಿರುತ್ತದೆ. ಜೇನ್ನೊಣ ಕಚ್ಚುವಾಗ ಅದು ಮನುಷ್ಯನ ದೇಹದಲ್ಲಿಯೇ ಮುರಿದಿದ್ದರೆ, ಅದನ್ನು ತೆಗೆಯದೇ ಇದ್ದಾಗ ಅದರ ವಿಷ ದೇಹದಲ್ಲಿ ಪಸರಿಸುತ್ತದೆ. ಹೀಗಾಗಿ ನೋವಾಗುತ್ತದೆ.

ವಿಹಂಗಮ

ಪರಾಗ ಸ್ಪರ್ಶ ಕ್ರಿಯೆಯಲ್ಲಿ ಜೇನ್ನೊಣಗಳ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಜೇನುತುಪ್ಪವನ್ನು ಜನರು ಅತ್ಯಂತ ಉತ್ಸಾಹದಿಂದಲೇ ಸವಿಯುತ್ತಾರೆ. 2001ನೇ ಸಾಲಿನಲ್ಲಿ ಬಳಕೆಗೆ ಬಂದ ನಿಕೋಟಿನೈಡ್‌ ಪೆಸ್ಟಿಸೈಡ್ಸ್ ಜೇನ್ನೊಣಗಳ ಒಂದು ಪ್ರಕಾರವನ್ನು ನಾಶಗೊಳಿಸಿತು. ಕೆಲವೊಂದು ಬಗೆಯ ಜೇನ್ನೊಣಗಳನ್ನು ನಮ್ಮ ಇಂದಿನ ಯುವಜನತೆ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಈ ಬಗೆಯ ಜೇನ್ನೊಣಗಳ ಸಂಖ್ಯೆ ಶೇ.70 ರಷ್ಟು ನಿರ್ನಾಮವಾಗಿವೆ. ಒಂದು ಕಾಲಕ್ಕೆ ಇತಿಹಾಸ ಸೃಷ್ಟಿಸಿದ್ದ ಈ ಜೇನ್ನೊಣಗಳು ಹಾಗೂ ಇತರೆ ಜೀವಿಗಳ ಪಾತ್ರದ ಕುರಿತಂತೆ ಸ್ವಲ್ಪ ತಿಳಿದುಕೊಳ್ಳಬೇಕು.

sos

ಜೇನ್ನೊಣಗಳೆಂಬ ಸೈನಿಕರು : `ಸಿಕ್ಸ್ ಲೆಗ್ಡ್ ಸೋಲ್ಜರ್‌' ಎಂಬ ಪುಸ್ತಕದ ಪ್ರಕಾರ, ಯುದ್ಧದಲ್ಲಿಯೂ ಜೇನ್ನೊಣಗಳನ್ನು ಬಳಸಿಕೊಳ್ಳಲಾಗಿತ್ತು. ಇದು ಮನುಷ್ಯ ಗುಹೆಯಲ್ಲಿ ವಾಸಿಸುತ್ತಿದ್ದ ಕಾಲದಲ್ಲಿ ಯುದ್ಧ ಮಾಡುತ್ತಿದ್ದ ಒಂದು ಜನಾಂಗದ ಜನರು ಜೇನುಗೂಡುಗಳನ್ನು ರಾತ್ರಿಯ ಸಮಯದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತರುತ್ತಿದ್ದರು. ಬಳಿಕ ಜೇನುಗೂಡುಗಳನ್ನು ಹಸಿಮಣ್ಣಿನಿಂದ ಬಚ್ಚಿಡುತ್ತಿದ್ದರು. ಏಕೆಂದರೆ ಅ ಗೂಡಿನಿಂದ ಹೊರಬರದಂತೆ ನೋಡಿಕೊಳ್ಳುತ್ತಿದ್ದರು. ಯಾರ ಮೇಲಾದರೂ ದಾಳಿ ಮಾಡಬೇಕೆನಿಸಿದಾಗ ಆ ಜೇನುಗೂಡುಗಳನ್ನು ಅವರ ಮೇಲೆ ಎಸೆದುಬಿಡುತ್ತಿದ್ದರು. ಮಣ್ಣಿನಿಂದ ಮುಕ್ತಗೊಳ್ಳುತ್ತಿದ್ದಂತೆ ಜೇನ್ನೊಣಗಳು ಅಲ್ಲಿದ್ದವರ ಮೇಲೆ ಮುಗಿಬಿದ್ದು ಕಚ್ಚುತ್ತಿದ್ದವು. ಜೇನ್ನೊಣಗಳಿಂದ ಕಚ್ಚಿಸಿಕೊಂಡು ದಾಳಿಕೋರರು ಹೊರಗೆ ಬರುತ್ತಿದ್ದಂತೆ ಅಡಗಿ ಕುಳಿತವರು ಅವರನ್ನು ಹಿಡಿದು ತಮ್ಮ ಸೇಡು ತೀರಿಸಿಕೊಳ್ಳುತ್ತಿದ್ದರು.

ಬೈಬಲ್ ನ ಹಳೆಯ ಗ್ರಂಥಗಳಲ್ಲಿ ಜೇನ್ನೊಣಗಳು, ಕಡಜಗಳನ್ನು ದಾಳಿಗೆ ಬಳಸಿಕೊಳ್ಳುವ ಯುಕ್ತಿಯ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ಯೆಹೋಷುವಾನ ಅಧ್ಯಾಯ 24 :12ರ ಪ್ರಕಾರ, ನಾನು ವೈರಿಯನ್ನು ಹೊರಗೆ ಎಳೆಯಲು ಕಡಜಗಳನ್ನು ಕಳಿಸಿದ್ದೇನೆ. ಅವು ಅವರನ್ನು ಹೊರಗೆಳೆದುಕೊಂಡು ಬರುತ್ತವೆ. ಅಮೋರೈಟ್‌ನ ಇಬ್ಬರು ರಾಜರನ್ನು ಕೂಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ