ಇಬ್ಬರು ಯುವತಿಯರು ಒಟ್ಟಿಗಿರುವುದು ಹೆಚ್ಚು ಸುಖದಾಯಕ

ಮನೆಯವರ ದೂರಿನ ಪ್ರಕಾರ ಪೊಲೀಸರು 2 ವರ್ಷಗಳ ಕಾಲ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಒಟ್ಟಿಗಿರುವುದನ್ನು ಪತ್ತೆ ಮಾಡಿದರು. ಅವರಿಬ್ಬರೂ ತಮ್ಮ ಕುಟುಂಬಗಳ ವಿರುದ್ಧ ಹೊರಗೆ ಹೋಗಿ ಒಟ್ಟಿಗೇ ಇರಲು ತೀರ್ಮಾನಿಸಿದ್ದರೆಂದು ತಿಳಿದುಬಂತು. ಒಬ್ಬಳು ಜಯಪುರ್‌ನಲ್ಲಿ ಅಕೌಂಟೆಂಟ್‌ ಆಗಿದ್ದರೆ, ಇನ್ನೊಬ್ಬಳು ರಿಸೆಪ್ಶನಿಸ್ಟ್ ಆಗಿದ್ದಾಳೆ.

ಇಬ್ಬರಲ್ಲೂ ದೈಹಿಕ ಸಂಬಂಧವಿತ್ತೇ ಅಥಾವ ಇಲ್ಲವೇ ಎಂದು ಇನ್ನೂ ಪರೀಕ್ಷಿಸಿಲ್ಲ. ಪೊಲೀಸರು ಮಧ್ಯೆ ಪ್ರವೇಶಿಸಲು ಕಾರಣವೇನೆಂದರೆ ಮನೆಯವರು ಅವರಿಬ್ಬರ ಅಪಹರಣವಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಸಂತೋಷದ ವಿಷಯವೇನೆಂದರೆ ಪೊಲೀಸರು ಇಬ್ಬರ ಹೇಳಿಕೆ ಪಡೆದು ಅವರನ್ನು ಬಿಟ್ಟುಬಿಟ್ಟರು. ನಿಮ್ಮ ಹೆಣ್ಣುಮಕ್ಕಳಿಗೆ ಬುದ್ಧಿ ಹೇಳುವುದಾದರೆ ಹೇಳಿ ಎಂದು ಎರಡೂ ಮನೆಯವರಿಗೆ ತಿಳಿಸಿದರು.

ಇಬ್ಬರು ಯುವತಿಯರು ಒಟ್ಟಿಗಿರುವುದು ಈಗ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿ ಯುವಕನೊಂದಿಗೆ ಒಟ್ಟಿಗಿರುವುದು ಯುವತಿಗೆ ಹೊರೆಯಾಗುತ್ತದೆ. ಅವಳಿಗೆ ಯಾವಾಗಲೂ ಗರ್ಭಿಣಿಯಾಗುವ ಭಯ ಇದ್ದೇ ಇರುತ್ತದೆ. ನೆರೆಯವರು, ಸಹೋದ್ಯೋಗಿಗಳ ವ್ಯಂಗ್ಯ ಬಾಣಗಳಿಗೂ ಗುರಿಯಾಗಬೇಕಾಗುತ್ತದೆ. ಇಬ್ಬರು ಹುಡುಗಿಯರು ಒಟ್ಟಿಗಿದ್ದರೆ ಸಾಮಾನ್ಯವಾಗಿ ಆಪತ್ತುಗಳಿರುವುದಿಲ್ಲ. ಸಮಾಜ ಕೊಂಚ ಸಹಾಯ ಮಾಡುತ್ತದೆ. ಅವರು ಮುಚ್ಚಿದ ಬಾಗಿಲಿನ ಹಿಂದೆ ಹೇಗೇ ಇದ್ದರೂ ಅವರನ್ನು ರೇಗಿಸುವುರಿಂದ ಜನ ರಕ್ಷಿಸುತ್ತಾರೆ.

ಒಂದುವೇಳೆ  ಹಳ್ಳಿಗಳಿಂದ ಬಂದು ನಗರಗಳಲ್ಲಿ ಇರಬೇಕೆಂದರೆ ಇಬ್ಬರು ಮೂವರು ಹುಡುಗಿಯರು ಒಟ್ಟಿಗಿರುವುದು ಹೆಚ್ಚು ಒಳ್ಳೆಯದು ಹಾಗೂ ಸುಲಭವಾಗಿದೆ. ಒಂದುವೇಳೆ ಅವರ ನಡುವೆ ಲೈಂಗಿಕ ಸಂಬಂಧವಿದ್ದರೆ ಬಹುಶಃ ಹುಡುಗರ ಹಸ್ತಕ್ಷೇಪ ಇರುವುದಿಲ್ಲ. ಅವರು ಆರಾಮವಾಗಿ ವರ್ಷಗಟ್ಟಲೇ ಜೊತೆಗಿರಬಹುದು. ಹಣದ ವಿಷಯವಾಗಿ ವಿವಾದ ಉಂಟಾಗಬಹುದು. ಆದರೆ  ಸ್ತ್ರೀ-ಪುರುಷರ ವಿವಾದಗಳಿಗೂ ಕಾರಣವಾಗಬಹುದು.

ಮನೆಗಳಿಂದ ದೂರವಿರುವ ಹುಡುಗಿಯರ ತಂದೆತಾಯಿಯರಿಗೂ ಈ ಸ್ಥಿತಿ ಸುಖದಾಯಕಾಗಿರುತ್ತದೆ. ಏಕೆಂದರೆ ಇದರಲ್ಲಿನ ಗೆಳೆತನ ಅಥವಾ ಸೋದರಿ ಭಾವನೆ ಹೆಚ್ಚು ಸುರಕ್ಷಿತ, ಸ್ನೇಹಭರಿತ ಹಾಗೂ ಶಾಶ್ವತ ಆಗಿರುತ್ತದೆ. ಹುಡುಗಿಯರು ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.

ಮೇಲಿನ ಹುಡುಗಿಯರ ನಾಪತ್ತೆ ಪ್ರಸಂಗದಲ್ಲಿ ಅವರು ಮನೆಯವರಿಗೆ ಹೇಳಿ ಹೊರಟರೇ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಎಂದು ಮನೆಯವರಿಗೆ ತಿಳಿದಿತ್ತು. ಏಕೆಂದರೆ 2 ವರ್ಷವೆಂದರೆ ದೊಡ್ಡ ಗಲಾಟೆಯೇ ಆಗಬೇಕಿತ್ತು. ಜನ ಕಥೆಗಳನ್ನು ಕಟ್ಟಲಿ ಎಂದು ಅವರು ಬಯಸುವುದಿಲ್ಲ. ಅಸಲಿಗೆ ಮನೆಯವರು ಇಂತಹ ಸಂಬಂಧಗಳನ್ನು ಮದುವೆಗೆ ಮುಂಚೆ ಪ್ರೋತ್ಸಾಹಿಸಬೇಕು. ಏಕೆಂದರೆ ಇಬ್ಬರು ಹುಡುಗಿಯರು ಸೋದರಿಯರಾಗಿರದೆ ಒಟ್ಟಿಗಿದ್ದರೆ, ತಾವು ಒಟ್ಟಿಗಿರುವಲ್ಲಿ ಯಾವ ರೀತಿಯ ಕೊಡುಕೊಳ್ಳುವ ವ್ಯವಹಾರ ಮಾಡಬೇಕು ಮತ್ತು ಎಂತಹ ಇಚ್ಛೆಗಳನ್ನು ಹೊಂದಿರಬೇಕು ಎಂದು ತಿಳಿದಿರುತ್ತಾರೆ. ಇದೇ ಜ್ಞಾನ ಮದುವೆಯ ಬಳಿಕ ಕೆಲಸಕ್ಕೆ ಬರುತ್ತದೆ. ಇಬ್ಬರು ಹುಡುಗಿಯರು ಜೊತೆಗಿದ್ದರೆ ವಾಸ್ತವಿಕತೆ ತಿಳಿಯುತ್ತದೆ ಮತ್ತು ಅವರಿಬ್ಬರೂ ಉತ್ತಮ ಪತ್ನಿಯರಾಗುತ್ತಾರೆ.

ಮೇಕಪ್‌ನಿಂದ ಹೆಚ್ಚು ಆತ್ಮವಿಶ್ವಾಸ

ಉದ್ಯೋಗಸ್ಥ ಮಹಿಳೆಯರು ಆಫೀಸ್‌ಗೆ ಅತಿಯಾಗಿ ಮೇಕಪ್‌ ಮಾಡಿಕೊಂಡು ಅಥವಾ ಕೇವಲ ಮುಖ ತೊಳೆದುಕೊಂಡು ಹೋಗಬಹುದು. ಕೂದಲು ಹಾಗೆಯೇ ಬಿಟ್ಟುಕೊಂಡು ಪುರುಷರ ಹಾಗೆ ಆಫೀಸ್‌ಗೆ ಬರಬಹುದು. ಈ ಕುರಿತಾದ ಪ್ರಶ್ನೆ ಸಾಕಷ್ಟು ದಿನಗಳಿಂದ ಚರ್ಚೆಯಲ್ಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ