ಇಂದಿನ ಧಾವಂತದ ಜೀವನದಲ್ಲಿ ದೈಹಿಕ ಹಾಗೂ ಭಾವನಾತ್ಮಕ ಸುರಕ್ಷತೆಯ ಜೊತೆ ಜೊತೆಗೆ, ಆರ್ಥಿಕ ಸುರಕ್ಷತೆ ಕೂಡ ಅತ್ಯಂತ ಅವಶ್ಯ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾಗುವುದು ಉತ್ತಮ. ಜೀವವಿಮೆ ಹೆಚ್ಚಿನ ವಿವರ ತಿಳಿಯೋಣವೇ……..?

ಮಹಿಳೆಯರು ಇಂದಿನ ದಿನಗಳಲ್ಲಿ ಪುರುಷರ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿದ್ದಾರೆ. ಇಂದಿನ ಸಾಕ್ಷರ ಮಹಿಳೆ ಕೇವಲ ಮನೆಯ ಜವಾಬ್ದಾರಿಯನ್ನಷ್ಟೇ ನಿರ್ವಹಿಸುವುದಿಲ್ಲ, ಮನೆಯ ಹೊರಗೆ ಕೂಡ ತನ್ನ ಅಸ್ತಿತ್ವಕ್ಕೆ ಒಂದು ಹೊಸ ಛಾಪು ಕೊಡುತ್ತಿದ್ದಾಳೆ. ಆಕೆ ಮನೆಯ ಆರ್ಥಿಕ ಜವಾಬ್ದಾರಿಗಳನ್ನು ಕೂಡ ಸುಲಭವಾಗಿ ನಿರ್ವಹಿಸುತ್ತಿದ್ದಾಳೆ. ಇಂತಹದರಲ್ಲಿ ಅವರ ಅನುಪಸ್ಥಿತಿಯಲ್ಲಿ ಕುಟುಂಬದಲ್ಲಿ ಉಂಟಾಗುವ ಆರ್ಥಿಕ ಹಾನಿಯನ್ನು ತುಂಬಿಕೊಳ್ಳಲು ಅವರು ವಿಮೆ ವ್ಯಾಪ್ತಿಗೆ ಒಳಪಡುವುದು ಅತ್ಯವಶ್ಯಕ.

ಉಳಿತಾಯಕ್ಕಿಂತ ಅಗತ್ಯ ಮುಖ್ಯ

ಹಾಗೆ ನೋಡಿದರೆ ಜೀವವಿಮೆಯನ್ನು ಬಹಳಷ್ಟು ಜನರು ಉಳಿತಾಯ ಎಂದು ಭಾವಿಸುತ್ತಾರೆ. ಆದರೆ ಜೀವವಿಮೆ ಎನ್ನುವುದು ಉಳಿತಾಯಕ್ಕಿಂತ ಹೆಚ್ಚಾಗಿ ಅಗತ್ಯವಾಗಿದೆ. ಏಕೆಂದರೆ ಇದರಿಂದ ದೊಡ್ಡವರಾಗುತ್ತಿರುವ ಮಕ್ಕಳ ಶಿಕ್ಷಣ, ಉದ್ಯೋಗ ಹಾಗೂ ಮದುವೆಯಂತಹ ಜೀವನದ ಹಲವು ಮಹತ್ವದ ಜವಾಬ್ದಾರಿಗಳನ್ನು ಪೂರ್ತಿಗೊಳಿಸಲು ನೆರವಾಗುತ್ತದೆ. ಇದರ ಇನ್ನೂ ಅನೇಕ ಲಾಭಗಳಿವೆ. ಅ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರನ್ನು ಸ್ವಾವಲಂಬಿಯಾಗಿಸುವಲ್ಲಿ ನೆರವಾಗುತ್ತದೆ.

ಮಹಿಳೆಯರಿಗೆ ಅಗತ್ಯ ಜೀವವಿಮೆ

ಇನ್ನೂ ಕೆಲವು ಲಾಭಗಳ ಬಗ್ಗೆ ನಾವು ನಿಮಗೆ ವಿವರಿಸುತ್ತೇವೆ :

- ``ನಾನು ಹೋದ ಬಳಿಕ ನನ್ನ ಮಕ್ಕಳ ಗತಿಯೇನು?'' ``ಗಂಡ ಮನೆಯ ಸಮಸ್ತ ಜವಾಬ್ದಾರಿಗಳನ್ನು ನಿಭಾಯಿಸಬಹುದೇ?'' ಈ ಪ್ರಶ್ನೆಗಳು ನಿಮ್ಮನ್ನು ಆಗಾಗ ಪೀಡಿಸುತ್ತಿರಬಹುದು. ನಿಮ್ಮ ಚಿಂತೆ, ಆತಂಕ ಸಹಜವೇ ಆಗಿದೆ. ಇಂದಿನ ದುಬಾರಿ ಬೆಲೆ ಏರಿಕೆಯ ದಿನಗಳಲ್ಲಿ ಒಬ್ಬರಿಂದಲೇ ಮನೆ ನಡೆಯೋದು ಕಷ್ಟ. ಮನೆಯ ಕೆಲವು ಜವಾಬ್ದಾರಿಗಳನ್ನು ನೀವು ವಹಿಸಿಕೊಳ್ಳಬೇಕು. ನಿಮ್ಮ ಸಂಬಳ ಬಹುದೊಡ್ಡ ಜವಾಬ್ದಾರಿಗಳನ್ನು ನಿಭಾಯಿಸಲು ನೆರವಾಗದೇ ಇರಬಹುದು. ಆದರೆ ಚಿಕ್ಕಪುಟ್ಟ ಉಳಿತಾಯಗಳು ಇಂತಹ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರಬಹುದು. ಇದರಲ್ಲಿ ಜೀವವಿಮೆಯ ಪಾತ್ರ ಬಹು ಮುಖ್ಯವಾಗಿದೆ. ಏಕೆಂದರೆ ಒಂದೇ ಸಲಕ್ಕೆ ದೊಡ್ಡ ಮೊತ್ತ ನಿಮ್ಮ ಕೈಗೆ ಸೇರುತ್ತದೆ.

- ಇತ್ತೀಚಿನ ವರ್ಷಗಳಲ್ಲಿ ಜೀವವಿಮೆಯ ಜೊತೆಗೆ ಉಳಿತಾಯ ಮತ್ತು ಕ್ರಿಟಿಕಲ್ ಇಲ್ ನೆಸ್‌ (ರೋಗಗಳು ಮತ್ತು ಗರ್ಭಾವಸ್ಥೆ)ನ್ನು ಕೂಡ ಕವರ್‌ ಮಾಡುವಂತಹ ವಿಮೆ ಪಾಲಿಸಿಗಳು ಬಂದಿವೆ. ಈ ಪಾಲಿಸಿ ವಿಶೇಷವಾಗಿ ಮನೆ ಹಾಗೂ ಹೊರಗೆ ಎರಡೂ ಕಡೆ ಜವಾಬ್ದಾರಿ ನಿಭಾಯಿಸುವ ಉದ್ಯೋಗಸ್ಥ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಇಂತಹ ಸ್ಥಿತಿಯಲ್ಲಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಈ ರೀತಿಯ ಪಾಲಿಸಿಗಳು ಆರ್ಥಿಕವಾಗಿ ನೆರವಾಗುತ್ತವೆ.

- ಒಂದುವೇಳೆ ಕುಟುಂಬ ನಿಮ್ಮ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದ್ದರೆ, ನೀವು ಟರ್ಮ್ ಇನ್‌ಶ್ಯೂರೆನ್ಸ್  ಪಾಲಿಸಿ ತೆಗೆದುಕೊಳ್ಳಬೇಕು. ಈ ಪಾಲಿಸಿಯಿಂದ ಮೆಚ್ಯೂರಿಟಿ ಸಂದರ್ಭದಲ್ಲಿ ಯಾವುದೇ ಮೊತ್ತ ದೊರೆಯುವುದಿಲ್ಲ. ಆದರೆ ಕಡಿಮೆ ಮೊತ್ತದ ಪ್ರೀಮಿಯಂನಲ್ಲಿ ಬಹುದೊಡ್ಡ ಕವರೇಜ್‌ ಲಭಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ