ಅನಾದಿ ಕಾಲದಿಂದಲೂ ಹೆಣ್ಣು ಗಂಡಿನ ಅಡಿಯಾಳಾಗಿ, ಸಮಾಜದಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಹಿಂಸೆ ಅನುಭವಿಸುತ್ತಲೇ ಬಂದಿದ್ದಾಳೆ. ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದು ಈ ಸ್ಥಿತಿಯಲ್ಲಿ ಬಹಳ ಬದಲಾವಣೆಗಳಾಗಿವೆ, ಸ್ಥಿತಿ ಸುಧಾರಿಸಿದೆ. ಕಾಲಕ್ಕೆ ತಕ್ಕಂತೆ ನಮ್ಮ ದೇಶದಲ್ಲಿ ಕ್ರಮೇಣ ಕೆಲವು ಬದಲಾವಣೆಗಳಾಗಿ ಹೆಣ್ಣು ಗಂಡಿಗೆ ಸರಿಸಮನವಾಗಿ ಹೆಜ್ಜೆ ಹಾಕುವಂತಾಗಿದೆ. ಈ ಕುರಿತು ವಿವರವಾಗಿ ಒಂದು ಕಣ್ಣೋಟ ಹರಿಸೋಣವೇ....?

ಇತ್ತೀಚೆಗೆ ಮೇಕ್‌ ಇನ್‌ ಇಂಡಿಯಾದ ಆಧಾರದಿಂದ ತಯಾರಾದ ನೌಕೆ ತಾರಿಣಿಯಲ್ಲಿ ಸವಾರರಾಗಿ ಹೊರಟ ಮಹಿಳಾ ಅಧಿಕಾರಿಗಳು ಹೊಸದೊಂದು ಕ್ರಾಂತಿಕಾರಕ ಸಾಹಸಿ ಅಭಿಯಾನಕ್ಕೆ ಕಾರಣಕರ್ತರಾಗಿದ್ದಾರೆ.

19  ಸೆಪ್ಟೆಂಬರ್‌ 2017 ರಂದು ಐಶ್ವರ್ಯಾ, ಎಸ್‌. ವಿಜಯಾ, ವರ್ತಿಕಾ ಜೋಷಿ, ಪ್ರತಿಭಾ ಜಾಮ್ವಲಾ, ಪಿ. ಸ್ವಾತಿ ಮತ್ತು ಪಾಯಲ್ ಗುಪ್ತ ತಾರಿಣಿಯಲ್ಲಿ ತಮ್ಮ ಪ್ರಯಾಣ ಶುರು ಮಾಡಿದ್ದರು. 19 ಮೇ 2018ರಲ್ಲಿ ಅವರು 21,600 ನಾಟಿಕ್‌ ಮೈಲ್ಸ್ ಅಂದರೆ 216 ಸಾವಿರ ಸಾಗರ ಮೈಲಿಗಳನ್ನು ದಾಟಿ ಸುರಕ್ಷಿತವಾಗಿ ಮರಳಿ ಬಂದಿದ್ದರು. ಈ ಅಭಿಯಾನಕ್ಕಾಗಿ ಸುಮಾರು 254 ದಿನಗಳ ಕಾಲ ತೆಗೆದುಕೊಂಡಿದ್ದರು ಹಾಗೂ ಇದರ ಜೊತೆಗೆ ಈ ಆವರು ನೇವಿ ಮಹಿಳಾ ಅಧಿಕಾರಿಗಳು ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಿಸಿದರು. 21 ಮೇ, 2018 ರಂದು ಅವರು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಪೋಲೆಂಡ್‌, ದ.ಆಫ್ರಿಕಾಗಳಲ್ಲಿ ಪ್ರಯಾಣ ಹೊರಟು ಗೋವಾ ತಲುಪಿದರು. ಅವರ ಮುಂದೆ ಅನೇಕ ಸವಾಲುಗಳಿದ್ದವು. ಗಂಡಸರಂತೆಯೇ ಇವರು ಯಶಸ್ವಿಯಾಗಿ ಅದನ್ನು ಸಾಧಿಸಿದ್ದರು. ಇವರೇ ಇಂದಿನ ಆಧುನಿಕ ಹೆಂಗಸರು, ತಮ್ಮಲ್ಲಿ ಬದಲಾದ ಛವಿ ತುಂಬಿಕೊಂಡಿದ್ದಾರೆ, ಮುಂದೆ ನುಗ್ಗಿ ಯಾವುದೇ ಅಪಾಯವನ್ನು ಎದುರಿಸುವ ಸಾಮರ್ಥ್ಯ ಉಳ್ಳವರಾಗಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆ. ಸ್ವಾತಂತ್ರ್ಯದ 7 ದಶಕಕ್ಕಿಂತಲೂ ಹೆಚ್ಚಿನ ಈ ಕಾಲದಲ್ಲಿ ನಮ್ಮ ದೇಶದ ಹೆಂಗಸರ ಜೀವನ ಬಹಳಷ್ಟು ಬದಲಾಗಿದೆ. ಅವರ ಸ್ಥಿತಿ ಎಷ್ಟೋ ಸುಧಾರಿಸಿದೆ. ಅವರಿಗೆ ಎಷ್ಟೋ ಹೊಸ ಹಕ್ಕುಗಳು ದೊರಕಿವೆ. ಹಲವಾರು ಬಂಧನಗಳಿಂದ ಮುಕ್ತಿ ದೊರಕಿವೆ. ಎಷ್ಟೋ ಹಕ್ಕುಗಳನ್ನು ಪಡೆಯುವುದಕ್ಕಾಗಿ ನಿರಂತರ ಹೋರಾಟ ನಡೆಸಿದ್ದಾರೆ. ಹಲವಾರು ಕಡೆ ಯಶಸ್ಸಿನ ತುದಿ ತಲುಪಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಗಂಡಸರನ್ನೂ ಮೀರಿಸಿದ್ದಾರೆ. ಆದರೆ ಒಂದು ವಿಷಯವಂತೂ ನಿಜ. ಅವರ ಜೀವನ ಹಿಂದಿನ ಕಾಲದಂತೆಯೇ ಯಾತನಾಮಯವಾಗಿದೆ. ಇಂದಿಗೂ ಸಹ ಅವರಿಗೆ ಸಮಾಜದಲ್ಲಿ ಎರಡನೇ ದರ್ಜೆಯೇ ಖಾಯಂ, ಇಂದಿಗೂ ಅವರ ದೈಹಿಕ ಶೋಷಣೆ ತಪ್ಪಿಲ್ಲ. ಅವರ ಕೈ ಈಗಲೂ ಖಾಲಿ ಖಾಲಿ. ಈ 75 ವರ್ಷಗಳಲ್ಲಿ ಹೆಂಗಸರ ಜೀವನದಲ್ಲಿ ಆದ ಬದಲಾವಣೆಗಳನ್ನು ಗಮನಿಸೋಣವೇ?

ಸಕಾರಾತ್ಮಕ ಬದಲಾವಣೆ : ಸಮಾಜ ಮತ್ತು ಕುಟುಂಬದಲ್ಲಿ ಹೆಂಗಸರ ಸ್ಥಿತಿ ನಿಧಾನವಾಗಿ ಸರಿಹೋಗುತ್ತಿದೆ, ಎಷ್ಟೋ ಸಕಾರಾತ್ಮಕ ಪರಿವರ್ತನೆಗಳು ಕಂಡುಬರುತ್ತಿವೆ. ಇಂದಿನ ಸುಶಿಕ್ಷಿತ ನಾರಿ ತನ್ನ ವ್ಯಕ್ತಿತ್ವದ ಐಡೆಂಟಿಟಿ ನೀಡಲು, ಯೋಗ್ಯತೆಯನ್ನು ಸಮಾಜಕ್ಕೆ ತಿಳಿಸಿಕೊಡಲು ಹೆಣ್ಣು ಸುಶಿಕ್ಷಿತಳಾಗಲೇಬೇಕು. ಆಗ ಮಾತ್ರ ಅವಳು ತನ್ನ ಹಕ್ಕುಗಳನ್ನು ತಿಳಿಯಲು, ಕರ್ತವ್ಯಗಳನ್ನು ಗುರುತಿಸಲು, ಜವಾಬ್ದಾರಿ ನಿಭಾಯಿಸಲು ಸಮರ್ಥಳಾಗುತ್ತಾಳೆ. ಹೆಂಗಸರ ಪ್ರಗತಿಯಲ್ಲಿ ಶಿಕ್ಷಣ ಎಲ್ಲಕ್ಕಿಂತ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಸ್ವಾತಂತ್ರ್ಯದ ನಂತರ ಹೆಂಗಸರಿಗೆ ಸಮಾನ ಹಕ್ಕುಗಳು ಸಿಗತೊಡಗಿವೆ, ಶಿಕ್ಷಣದ ಸೌಲಭ್ಯ ಹೆಚ್ಚಿದೆ. ಇಲ್ಲಿಂದಲೇ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆಯ ಈ ಹೆಂಗಸರ ಪ್ರಪಂಚ ಬದಲಾಗತೊಡಗಿತು. ಶಿಕ್ಷಣದ ಕಾರಣ ಹೆಂಗಸರ ಚೇತನ ಜಾಗೃತಗೊಂಡಿದೆ. ಅವರು ಪರಂಪರಾಗತ, ಪ್ರಾಚೀನ ಕಾಲದ ಯೋಚನಾಧಾಟಿಯಿಂದ ಹೊರಬರಲು ಸಾಧ್ಯವಾಗಿದೆ ಹಾಗೂ ತಮ್ಮ ಹಕ್ಕುಗಳ ಕುರಿತು ಜಾಗರೂಕರಾಗುತ್ತಿದ್ದಾರೆ. ಸುಶಿಕ್ಷಿತರಾದ ಕಾರಣ ನೌಕರಿಗಾಗಿ ಮನೆಯಿಂದ  ಹೊರಗೆ ಹೊರಡುತ್ತಿದ್ದಾರೆ. ಗಂಡಸರ ಈ ಸಮಾಜದಲ್ಲಿ ತಮ್ಮ ಸ್ಥಾನವನ್ನು ಸುನಿಶ್ಚಿತಗೊಳಿಸಿ, ಆರ್ಥಿಕ ರೂಪದಲ್ಲಿ ಸ್ವಾವಲಂಬಿಗಳಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ