ಬಹುಮುಖ ಪ್ರತಿಭೆ ಸಾಹಿತ್ಯವೆಂದರೆ ಇವರಿಗೆ ಬಹಳ ಪ್ರೀತಿ. ತರಾಸು ಅವರಂತಹ ಭವ್ಯ ಪ್ರತಿಭೆಗಳ ನಾಡಿನಲ್ಲಿ ಹುಟ್ಟಿರುವುದರಿಂದ ಸಹಜವಾಗಿಯೇ ಸಾಹಿತ್ಯದಲ್ಲಿ ಆಸಕ್ತಿ.

ಚಿತ್ರದುರ್ಗ ಎಂದಾಗ ನಮ್ಮ ಮನಸ್ಸಿಗೆ ಬರುವುದು ಒನಕೆ ಓಬವ್ವ. ಶೌರ್ಯ, ಧೈರ್ಯ, ತ್ಯಾಗ, ಮಮತೆಗಳನ್ನು ತನ್ನೊಡಲೊಳಗೆ ತುಂಬಿಸಿಕೊಂಡ ಮಹಿಳೆ ಓಬವ್ವ. ಯಾರೂ ಮರೆಯಲಾರದ ವ್ಯಕ್ತಿತ್ವ ಆಕೆಯದು. ಅಂತಹ ವೀರ ನಾಡಿನಲ್ಲಿ ಹುಟ್ಟಿರುವ ಕಿರಣ್‌ ಪ್ರಸಾದ್‌ ರಾಜನಹಳ್ಳಿ ಬಹುಮುಖ ಪ್ರತಿಭೆಯ ಮಹಿಳೆ. ಸಾಹಿತ್ಯವೆಂದರೆ ಇವರಿಗೆ ಬಹಳ ಪ್ರೀತಿ. ತರಾಸು ಅವರಂತಹ ಭವ್ಯ ಪ್ರತಿಭೆಗಳ ನಾಡಿನಲ್ಲಿ ಹುಟ್ಟಿರುವುದರಿಂದ ಸಹಜವಾಗಿಯೇ ಸಾಹಿತ್ಯದಲ್ಲಿ ಆಸಕ್ತಿ. ಶಾಲೆಯಲ್ಲಿದ್ದಾಗಲೇ ಪ್ರಬಂಧಗಳನ್ನು ಬರೆದು ಶಿಕ್ಷಕರಿಂದ ಭೇಷ್‌ ಎನ್ನಿಸಿಕೊಂಡದ್ದುಂಟು. ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವಂತೆ ಮುಂದೆ ಸಾಹಿತಿಯಾಗುವ ಲಕ್ಷಣಗಳು ಅಂದೇ ಎದ್ದು ಕಾಣುತ್ತಿದ್ದವು. ಮದುವೆಯಾಗಿ ಮಕ್ಕಳು ಚಿಕ್ಕವರಿದ್ದಾಗ ಸ್ವಲ್ಪ ಕಾಲ ಬರವಣಿಗೆಯ ವೇಗ ಕಡಿಮೆಯಾದರೂ, ನಂತರ ಮಕ್ಕಳು ಸ್ವಲ್ಪ ದೊಡ್ಡವರಾದೊಡನೆಯೇ ಮತ್ತೆ ಇವರ ಸಾಹಿತ್ಯದ ಕಾಯಕ ಮುಂದುವರಿಯಿತು. ಬಿ.ಎಸ್‌ಸಿ., ಎಂ.ಎ. ಮಾಡಿ ನಂತರ ವಜ್ರಗಳ ಪರಿಶೀಲನೆ ಮತ್ತು ಚಿತ್ರಕಲೆಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಹವ್ಯಾಸಿ ಹ್ಯಾಂ ಮತ್ತು ಎಸ್ಪಿರ್ಯಾಂಟೋ ವಿಶ್ವ ಭಾಷಾ ತಜ್ಞೆಯಾಗಿದ್ದಾರೆ. ಇವರು ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ವತಿಯಿಂದ ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆಯಾಗಿ ಅಮೆರಿಕಾದ ಟೆಕ್ಸಾಸ್‌ ರಾಜ್ಯದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಅಧ್ಯಯನ ಮಾಡಿ ಬಂದಿದ್ದಾರೆ. ಅಮೆರಿಕಾದ ಸ್ಥಳೀಯ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.

ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಕೆನ್‌ ಕಲಾ ಶಾಲೆಯಲ್ಲಿ ಚಿತ್ರಕಲೆಯಲ್ಲಿ ಅಭ್ಯಾಸ ಮಾಡಿರುವ ಇವರ ಚಿತ್ರಕಲಾ ಕೃತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡಿವೆ. ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ರಚಿಸಿದ ಮಕ್ಕಳ ಕಾದಂಬರಿಗೂ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಇವರು ರಚಿಸಿದ ಲೇಖನ ಬೆಂಗಳೂರು ವಿಶ್ವವಿದ್ಯಾಲಯದ ಪುಸ್ತಕದಲ್ಲಿ ಪಾಠವಾಗಿದೆ. ಇವರು ಬರೆದ ಪ್ರಬಂಧ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಸಂಪುಟದಲ್ಲಿ ಪ್ರಕಟವಾಗಿದೆ. ದೂರದರ್ಶನದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇವರು ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಮಕ್ಕಳ ಕಥೆಗಳು, ವೈಜ್ಞಾನಿಕ ಕಥೆಗಳು, ಪ್ರವಾಸ ಕಥನ, ಆರ್ಥಿಕ ಕ್ಷೇತ್ರ... ಈ ರೀತಿ ಕಿರಣ್‌ ಎಲ್ಲೆಡೆ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರಶಸ್ತಿ, ಪ್ರೇಮಾ ಭಟ್‌ ದತ್ತಿನಿಧಿ, ವಾಡ್ಲಿ ಮಾಧ್ಯಮ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಪುರಸ್ಕಾರ, ಕನ್ನಡ ಕೌಸ್ತುಭ ಪ್ರಶಸ್ತಿ, ಸಾಧನ ರತ್ನ, ಓ.ವೈ.ಪಿ. ಪ್ರಶಸ್ತಿ, ನ್ಯಾಷನಲ್ ಬುಕ್‌ ಟ್ರಸ್ಟ್ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವುದೇ ಅಲ್ಲದೆ, ಸಂಚಾರ ಪಾಲಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಚಂದನದಲ್ಲಿ ಬೆಳಗು ಮತ್ತು ಉದಯ ಟಿ.ವಿ.ಯಲ್ಲಿ  ಸಂವೇದನೆ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದಾರೆ. ಅಮೆರಿಕಾದ ಹಿಲ್ ಕಂಟ್ರಿ ನ್ಯೂಸ್‌ ಪತ್ರಿಕೆಯಲ್ಲಿ ಅಂಕಣಗಳನ್ನು ಬರೆದಿದ್ದಾರೆ.

ಒಟ್ಟಾರೆ ಸಾಹಿತ್ಯದ ವಿವಿಧ ಕ್ಷೇತ್ರಗಳಿಗೆ ತಮ್ಮ ಅಪಾರ ಕೊಡುಗೆಯನ್ನು ನೀಡಿರುವ ಕಿರಣ್‌ ನಿಜಕ್ಕೂ ಅಭಿನಂದನಾರ್ಹರು ಅಲ್ಲವೇ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ