ಜೀಬಾ ಘಾಟಕ್ ಮಿಸೆಸ್‌ ಪೇಜೆಂಟ್‌

ಶ್ರೀಮತಿಯರಿಗಾಗಿ ನಡೆದ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕೇಳಿದ ಪ್ರಶ್ನೆ. ನಿಮಗೆ ಅವಕಾಶ ಸಿಕ್ಕರೆ ಮುಂದೆ ನೀವು ಏನಾಗ ಬಯಸುತ್ತೀರಾ? ಉತ್ತರಕ್ಕಾಗಿ ನೀಡಿದ ನಾಲ್ಕು ಆಯ್ಕೆಗಳು 1. ಹೋಮ್ ಮೇಕರ್‌, 2. ಐ.ಎ.ಎಸ್‌. ಆಫೀಸರ್‌ 3. ಹಾಲಿವುಡ್‌ನ ತಾರೆ 4. ಕ್ರೀಡಾಪಟು.

ಅದಕ್ಕೆ ಅಭ್ಯರ್ಥಿಯೊಬ್ಬರು ನೀಡಿದ ಉತ್ತರ, ``ನಾನು ಹೋಮ್ ಮೇಕರ್‌ ಅರ್ಥಾತ್‌ ಗೃಹಿಣಿಯಾಗಲು ಬಯಸುತ್ತೇನೆ. ಏಕೆಂದರೆ ಒಂದು ಕುಟುಂಬಕ್ಕೆ ಗೃಹಿಣಿ ಬೆನ್ನುಮೂಳೆ ಇದ್ದಂತೆ, ತನ್ನ ಕೆಲಸದ ಮೂಲಕ ಪೂರ್ಣವಾಗಿ ತನ್ನ ಕುಟುಂಬದ ಎಲ್ಲರಿಗೂ ಸಹಕಾರ ನೀಡುತ್ತಾಳೆ. ಆಕೆಯ ಕರ್ತವ್ಯ ನಿರ್ವಹಣೆ ಸರಿಯಾಗಿದ್ದಾಗಲೇ ತನ್ನ ಮಕ್ಕಳು ಮುಂದಿನ ಜನಾಂಗ ಮೇಲೆ ಹೇಳಿದ ಎಲ್ಲ ಹುದ್ದೆಗಳನ್ನೂ ಪಡೆಯಲು ಸಾಧ್ಯ. ಆದ್ದರಿಂದ ಹೋಮ್ ಮೇಕರ್‌ ಆಗಿಯೇ ನನ್ನ ಕರ್ತವ್ಯವನ್ನು ನಿಭಾಯಿಸಲು ಇಷ್ಟಪಡುತ್ತೇನೆ.''

ಸ್ಪರ್ಧೆಯ ಫಲಿತಾಂಶವನ್ನು ನೀವು ಈಗಾಗಲೇ ಊಹಿಸಿರಬೇಕು. ಆ ಅಭ್ಯರ್ಥಿ ಮೊದಲನೇ ಸ್ಥಾನವನ್ನು ಗಿಟ್ಟಿಸಿಕೊಂಡರು. ಕಳೆದ ವರ್ಷ ಏಪ್ರಿಲ್ ‌ರಲ್ಲಿ ನಡೆದ ಮಿಸೆಸ್‌ ಇಂಡಿಯಾ ಪೇಜೆಂಟ್‌, ಗೃಹಿಣಿಯರ ಸೌಂದರ್ಯ ಸ್ಬಧೆಯಲ್ಲಿ ಜೀಬಾ ಘಾಟಕ್‌ ದಕ್ಷಿಣ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದು, ದಕ್ಷಿಣ ವಿಭಾಗದ ಕಿರೀಟವನ್ನು ಪಡೆದರು. ಮುಂದಿನ ಜೂನ್‌ ತಿಂಗಳಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಇದೆ. ಅಲ್ಲೂ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸ ಜೀಬಾ ಅವರದು. ಐವತ್ತರ ಹರೆಯದ ಈಕೆಯದು ಆಕರ್ಷಕ ವ್ಯಕ್ತಿತ್ವ. ಆದರೆ ಅದರ ಜೊತೆಯಲ್ಲಿಯೇ ಕಂಡೂ ಕಾಣದ ವ್ಯಥೆಯೊಂದು ಅಲ್ಲಿ ಗೋಚರವಾಗುತ್ತದೆ.

ಮೂಲತಃ ಮುಂಬೈ. ಶಿಕ್ಷಣ ಮುಂಬೈನಲ್ಲಿಯೇ. ನಂತರ ತಂದೆಯ ಜೊತೆ ದುಬೈಗೆ ಹೋದರು. ಅಲ್ಲಿ ಗಗನಸಖಿಯಾಗಿ ಎಮರೈಟ್ಸ್ ಏರ್‌ಲೈನ್ಸ್ ನಲ್ಲಿ ಐದು ವರ್ಷಗಳ ಕಾಲ ಕೆಲಸ ನಿರ್ವಹಣೆ, ನಂತರ ಮಾರ್ಕೆಟಿಂಗ್‌ ಉದ್ಯಮದಲ್ಲಿ ಪಾದಾರ್ಪಣೆ. ಅಲ್ಲಿಯೇ ಪ್ರೇಮಾಂಕುರ ಮತ್ತು ಅನಿಮೇಶ್‌ ಘಾಟಕ್‌ ಅವರೊಂದಿಗೆ ಅಂತರ್ಜಾತೀಯ ವಿವಾಹ. ಎಲ್ಲ ಚೆನ್ನಾಗಿಯೇ ನಡೆಯುತ್ತಿದ್ದಾಗ 2008ರ ರಿಸೆಶನ್‌ ಇವರ ಜೀವನದ ದಿಕ್ಕನ್ನೇ ಬದಲಾಗುವಂತೆ ಮಾಡಿತು.

``ಆದರೆ ಮೂಲತಃ ನಾನೋರ್ವ ಹೋರಾಟಗಾರ್ತಿ. ನನ್ನ ಜೀವನದಲ್ಲಿ ನನಗ್ಯಾರೂ ದಾರಿ ತೋರುವವರಿರಲಿಲ್ಲ. ಯಾವ ರೀತಿಯ ಆರ್ಥಿಕ ಸಹಾಯವನ್ನೂ ಯಾರಿಂದಲೂ ಪಡೆಯಲಿಲ್ಲ. ಬಹಳ ಕಷ್ಟಪಟ್ಟೇ ನನ್ನ ಜೀವನದಲ್ಲಿ ಅಷ್ಟು ಎತ್ತರಕ್ಕೆ ಏರಿದ್ದು,'' ಎನ್ನುತ್ತಾರೆ. ಆದರೆ ಒಮ್ಮೆಲೇ ಆದ ಕುಸಿತದಿಂದ ಘಾಸಿಗೊಂಡರು. ತನ್ನಂತೆ ನೋವಿನಲ್ಲಿರುವವರಿಗೆ, ``ನನ್ನ ಕಥೆ ದಾರಿ ದೀಪವಾಗಲಿ ಮತ್ತು ಅವರಲ್ಲಿ ಆತ್ಮವಿಶ್ವಾಸ ಮೂಡಲಿ,'' ಎನ್ನುವುದು ಇವರ ಅಭಿಪ್ರಾಯ. ಸ್ವಲ್ಪ ದಿನಗಳಲ್ಲೇ ವಿಂಡ್ಸ್ ಆಫ್‌ ಚೇಂಜ್, ಕತ್ತಲೆಯಿಂದ ಬೆಳಕಿನೆಡೆಗೆ ಪುಸ್ತಕವನ್ನು ಬಿಡುಗಡೆ ಮಾಡುವ ಅಭಿಪ್ರಾಯವಿದೆ. ಅವರು ಹೇಳುವಂತೆ ಮಹಿಳೆ ಮತ್ತು ಮಹಿಳೆಯರ ಮಧ್ಯೆ ಸೌಹಾರ್ದತೆ ಹೆಚ್ಚಬೇಕಿದೆ. ಅನೇಕ ಬಾರಿ ಮಹಿಳೆಯೇ ಮತ್ತೊಬ್ಬ ಮಹಿಳೆಯ ದುಃಖಕ್ಕೆ ಕಾರಣವಾಗುತ್ತಾಳೆ. ಆದರೆ ಅವಳು ಮತ್ತೊಬ್ಬರ ನೋವನ್ನು ಮರೆಸಲಿಕ್ಕೂ ಸಾಧ್ಯವಿದೆ. ಮುಂಬರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಗೆಲ್ಲುವ ಆತ್ಮವಿಶ್ವಾಸವಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ