ಬಹೂಪಯೋಗಿ ಮಾಹಿತಿ! : ಈಗ ಫ್ಯಾಷನ್ ಫಾಲೋ ಮಾಡುವುದು ಅಂದ್ರೆ ಎಲ್ಲ ತರಹದ ತಿಪ್ಪರಲಾಗ ಹಾಕಲೇಬೇಕಾಗುತ್ತದೆ. ಇದನ್ನು ಸಾಧಿಸಲೆಂದೇ ಸ್ಟೈಲ್ ಎಕ್ಸ್ ಪರ್ಟ್ ವೆಬ್ ಸೈಟ್ ಸ್ಟೀಚ್ ಫಿಕ್ಸ್ ತನ್ನ ಸಬ್ ಸ್ಕ್ರೈಬರ್ಸ್ ಫ್ಯಾಷನ್ ಕುರಿತಾದ ಕ್ವಿಜ್ ಪ್ರಶ್ನೆ ಕೇಳುವ ಅವಕಾಶ ಕಲ್ಪಿಸಿದ್ದಾಳೆ. ಅವಳು ಇದಕ್ಕಾಗಿಯೇ ಈಗ ತಖ್ತೋಚಿಯನ್ ಎಂಬ ಸ್ಟೈಲ್ ಎಕ್ಸ್ ಪರ್ಟ್ ನ್ನು ನೇಮಿಸಿಕೊಂಡಿದ್ದಾಳೆ. ಅವಳು ಈ ವಿಷಯದಲ್ಲಿ ವಿಶ್ವ ಶ್ರೇಷ್ಠಳು, ಹೀಗಾಗಿ ಹುಡುಗಿಯರಿಗೆ ಫ್ಯಾಷನ್ ಕುರಿತ ಸೂಕ್ತ ಮಾಹಿತಿ ನೀಡುತ್ತಾಳೆ. ಯಾವ ಪಾರ್ಟಿಗೆ ಎಂಥ ಡ್ರೆಸ್, ಎಂಥ ಕಾಂಬಿನೇಶನ್ ಇರಬೇಕು ಇತ್ಯಾದಿ. ಇಂದಿನ ಆಧುನಿಕ ಪೀಳಿಗೆಯವರ ಎಲ್ಲಾ ಸಂದೇಹ ಪರಿಹರಿಸುತ್ತಾಳೆ, ಇದಂತೂ ನಿಜಕ್ಕೂ ಬಹೂಪಯೋಗಿ!

ಸುಂದರಿಯನ್ನು ನೋಡುದೋ ಅವಳ ಡ್ರೆಸ್ನ್ನೋ...? : ಕಿಯಾರ ಆದಿರಾ ಒಂದು ಹೊಸ ಆಲ್ಪಂ ಲಾಂಚ್ ಮಾಡಿದ್ದಾಳೆ, ಆದರೆ ಇಲ್ಲಿ ಇವಳ ಡ್ರೆಸ್ ಗಮನಿಸಿ! ಇಲ್ಲಿಂದ ಹಾಡನ್ನು ಕೇಳಿಸಲಾಗದು. ಇಂಥ ಗಾಯಕಿಯರು ಪಾಪ್ಯುಲರ್ ಆಗಲು ಏನೆಲ್ಲ ಸರ್ಕಸ್ ಮಾಡಬೇಕಾಗುತ್ತದೆ ಎಂದರೆ, ಈ ಫೋಟೋ ಶೂಟ್ ಗಮನಿಸಿದರೆ ನಿಮಗೇ ಅದು ಸ್ಪಷ್ಟವಾಗುತ್ತದೆ.

ಸಾಕಿನ್ನು ಈ ಚಿತ್ರಹಿಂಸೆ! : ವಿಶ್ವವಿಡೀ ಇಸ್ರೇಲ್ ಗಾಝಾದಲ್ಲಿ ಅನುಭವಿಸುತ್ತಿರುವ ಬರ್ಬರ ಭೀಕರತೆಗೆ ಮೂಕಸಾಕ್ಷಿಯಾಗಿದೆ. ಏಕೆಂದರೆ ಗಾಝಾದಲ್ಲಿ ವಾಸಿಸುತ್ತಿರುವ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಅಮಾಯಕ ಮಕ್ಕಳು, ಹೆಂಗಸರು, ಗಂಡಸರು ಈ ಬೇಟೆಗೆ ಬಲಿಯಾಗುತ್ತಿದ್ದಾರೆ. ಹಮಾಸ್ ಗಾರ ಮೇಲೆ ದಾಳಿ ನಡೆಸಿ, ಇಸ್ರೇಲ್ ನಲ್ಲಿ 1500ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಹಾಗೂ 200 ಮಂದಿ ಸೆರೆಯಾಗಿದ್ದಾರೆ. ವಿಶ್ವದೆಲ್ಲೆಡೆಯ ನಾಯಕರು, ಹಮಾಸ್ ಈ ಬೀಭತ್ಸ ಹಿಂಸೆ ಶುರು ಮಾಡಿದ್ದು ಎಂಬುದನ್ನು ಮರೆಯಬಾರದು. ಹೀಗಾಗಿ ನ್ಯೂಯಾರ್ಕ್ ನಲ್ಲಿ ಯೆಹೂದಿ ಹೆಂಗಸರು ಇದರ ವಿರುದ್ಧ ಹೀಗೆ ಪ್ರದರ್ಶನ ನಡೆಸಿದರು. ಎರಡೂ ಕಡೆಯ ಮಕ್ಕಳು, ಹೆಂಗಸರು ಭೀಕರ ಸಾ ಸಾಯುತ್ತಿದ್ದಾರೆ. ದುಷ್ಟ ಅಧಕಾರಳ್ಳರು ಮಾತ್ರ ತಮ್ಮ ದರ್ಪ ಮೆರೆಯುತ್ತಿದ್ದಾರೆ!ಪ್ರೀತಿ

ಭರಿತ ಕಾಂಪ್ರಮೈಸ್ : ಡಿಸೆಂಬರ್ ತಿಂಗಳು ಎಂದರೆ ಅಮೆರಿಕಾದಲ್ಲಿ ಎಲ್ಲೆಲ್ಲೂ ಥ್ಯಾಂಕ್ಸ್ ಗಿವಿಂಗ್ ಉತ್ಸವ ಆಗಿರುತ್ತದೆ. ಅದನ್ನವರು ಅತಿ ಉತ್ಸಾಹದಿಂದ ಆಚರಿಸುತ್ತಾರೆ. ಆ ದಿನಗಳಲ್ಲಿ ಅಮೆರಿಕಾ ತಲುಪಿದ ಬಿಳಿಯರು ಹಾಗೂ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ಸ್, ಇಬ್ಬರ ನಡುವೆ ಹಳೆಯ ದ್ವೇಷ ಮರೆತು, ಪ್ರೀತಿವಾತ್ಸಲ್ಯಗಳ ಕಾಂಪ್ರಮೈಸ್ ನಡೆಯುತ್ತದೆ. ಇಬ್ಬರೂ ಕೂಡಿ ಮೊದಲ ಬಾರಿಗೆ 1619, 1621ರಲ್ಲಿ ಒಟ್ಟಿಗೆ ಊಟ ಮಾಡಿ ಇದನ್ನು ಚರಿತ್ರಾರ್ಹವಾಗಿಸಿದರು. ಮೂಲ ನಿವಾಸಿಗಳಿಗೆ ಇದು ಬಹು ಸಂಭ್ರಮ ಎನಿಸಿದರೆ, ಬಿಳಿಯರೂ ಸಹ ಪರಿವಾರದವರೆಲ್ಲ ಕೂಡಿ ಒಂದೇ ಸೂರಿನಡಿ ಊಟ ಮಾಡುತ್ತಾ ಸಡಗರಿಸುತ್ತಾರೆ. ಮುಖ್ಯವಾಗಿ ಈ ದಿನ ಬಡಮಕ್ಕಳಿಗೆಂದು ಶ್ರೀಮಂತ ಸಂಘ ಸಂಸ್ಥೆಗಳು ಅನೇಕ ರುಚಿಕರ ಸ್ವೀಟ್ಸ್, ಉಡುಗೊರೆ ಹಂಚುತ್ತವೆ. ಅಮೆರಿಕಾ ಏನೋ ಶ್ರೀಮಂತ ರಾಷ್ಟ್ರವೇ, ಆದರೆ ಅಲ್ಲಿನ ಎಲ್ಲರೂ ಶ್ರೀಮಂತರಲ್ಲ!





