ಕಳೆದ ವರ್ಷ ನಾನು ನಾಗ್ಪುರದಲ್ಲಿರುವ ಜೈನ ಕುಟುಂಬವೊಂದರ ಮನೆಗೆ ಭೇಟಿಕೊಟ್ಟಿದ್ದೆ. ದಾರಿಯಲ್ಲಿ ನನಗೆ ಈ ಕುಟುಂಬ ಧಾರ್ಮಿಕ ಪರಂಪರೆಯನ್ನು ಅನುಸರಿಸುವಂಥದ್ದು. ಅವರು ಸೂರ್ಯಾಸ್ತಕ್ಕಿಂತ ಮುಂಚೆಯೇ ಊಟ ಮಾಡಿ ಮುಗಿಸುತ್ತಾರೆ. ನೆಲದೊಳಗೆ ಬೆಳೆಯುವ ಯಾವುದೇ ತರಕಾರಿಗಳನ್ನು ಸೇವಿಸುವುದಿಲ್ಲ ಎನ್ನುವುದು ಕೂಡ ತಿಳದುಬಂತು. ನಾನು ಅವರ ಡ್ರಾಯಿಂಗ್‌ ರೂಮಿನಲ್ಲಿ ಪ್ರವೇಶಿಸಿದಾಗ ಕುದುರೆಯ ಚರ್ಮದಿಂದ ಮಾಡಿದ ಕಾರ್ಪೆಟ್‌ ಹಾಸಿರುವುದು ಕಂಡುಬಂತು. ಮರಿ ಕುದುರೆಗಳನ್ನು ಸಾಯಿಸಿ ಅವುಗಳ ಚರ್ಮ ಬೇರ್ಪಡಿಸಿ, ಬಳಿಕ ಸೂಕ್ಷ್ಮ ಹೊಲಿಗೆ ಹಾಕಿ ಕಾರ್ಪೆಟ್‌ ಸಿದ್ಧಪಡಿಸಲಾಗುತ್ತದೆ. ಅಂತಹ ಕಾರ್ಪೆಟ್‌ನ್ನು ಭಾರಿ ಶ್ರೀಮಂತರು ಮಾತ್ರವೇ ಖರೀದಿಸಲು ಸಾಧ್ಯ.

`ಅದು ನಕಲಿ ಸಿಂಥೆಟಿಕ್‌ ಬಣ್ಣದ್ದು’ ಎಂದು ಅವರು ಹೇಳಿದರು. ನಾನು ಚರ್ಮದ ಮೇಲೆ ಅಂಟಿಕೊಂಡಿದ್ದ ಕೂದಲು ತೋರಿಸಿದೆ. ಇವು ಅಮೆರಿಕಾದಲ್ಲಿ ತಯಾರಾಗುತ್ತವೆ. ಜನರು ಫರ್‌ಕೋಟ್‌, ಚಪ್ಪಲಿ, ಸಾಫ್ಟ್ ಟಾಯ್ಸ್ ಕೂಡ ಖರೀದಿಸುತ್ತಾರೆ. ಅವು ಅಗ್ಗವಾಗಿರುವುದನ್ನು ನೋಡಿ ಬಹುಶಃ ಇವು ಅಸಲಿ ಅಲ್ಲ ಎಂದು ನಂಬುತ್ತಾರೆ.

ಅದು ಸತ್ಯ ಅಲ್ಲ : ಹ್ಯೂಮನ್‌ ಸೊಸೈಟಿ ಇಂಟರ್‌ನ್ಯಾಷನಲ್ ಕಂಡುಕೊಂಡಿದ್ದೇನೆಂದರೆ, ಬಹಳಷ್ಟು ಉತ್ಪನ್ನಗಳು ನಕಲಿ ಆಗಿರದೆ ಅಸಲಿ ಆಗಿರುತ್ತವೆ. ಅವು ಆ್ಯಕ್ರೆಲಿಕ್‌, ಪೆಟ್ರೋಲಿಯಂ ಉತ್ಪನ್ನಗಳಿಂದ ಮಾಡಲಾಗಿರುವುದಿಲ್ಲ. ಚರ್ಮ ಅಥವಾ ತುಪ್ಪಳ (ಫರ್‌)ದಿಂದಲೇ ತಯಾರಿಸಿದ್ಧವಾಗಿರುತ್ತವೆ. ಬಹಳಷ್ಟು ಸ್ಟೋರ್‌ಗಳು `ನೋ ಫರ್‌’ ನೀತಿ ಅನುಸರಿಸುತ್ತವೆ. ವಾಸ್ತವದಲ್ಲಿ ಅವು ಫರ್‌ನಿಂದಲೇ ಅಂದರೆ ಪ್ರಾಣಿಗಳ ತುಪ್ಪಳದಿಂದ ಸಿದ್ಧಪಡಿಸಿದ್ದಾಗಿರುತ್ತವೆ. ಬೂಟ್ಸ್ ಕ್ಲಿಪ್‌ ನಕಲಿ ಫರ್‌ನಿಂದಲ್ಲ, ಅವು ಅಸಲಿ ಮಿಂಕ್‌ ಎಂಬ ಪ್ರಾಣಿಯ ತುಪ್ಪಳದಿಂದ ಮಾಡಿದುದಾಗಿರುತ್ತದೆ. ಟಾಸ್ಕೊ ಸ್ಟೋರ್‌ನ ರಿಂಗ್‌ ಮತ್ತು ಫ್ಯಾಟ್‌ ಫೇಸ್‌ ಉಡುಗೆಗಳು ಮೊಲದ ಚರ್ಮದಿಂದ ಮಾಡಿದವಾಗಿರುತ್ತವೆ. ಅರ್ಬನ್‌ ಔಟ್‌ಫಿಟ್ಸ್ ಗಳು ಅಸಲಿಯಾಗಿದ್ದು, ಅವುಗಳನ್ನು `ಫೇಕ್‌ ಫರ್‌’ ಎಂಬ ಹೆಸರಿನಲ್ಲಿ ಮಾರಲಾಗುತ್ತದೆ.

ನಕಲಿ ಹೆಸರಿನಲ್ಲಿ ಅಸಲಿ ಮಾರಾಟ : ಬಹಳಷ್ಟು ಜನರಿಗೆ ಗೊತ್ತಿರದೇ ಇರುವ ಒಂದು ವಿಚಾರವೆಂದರೆ, ಬೆಕ್ಕಿನ ಫರ್‌ನಿಂದ ತಯಾರಿಸಲ್ಪಟ್ಟ ಲೈನಿಂಗ್‌ ಚಪ್ಪಲಿಗಳನ್ನು ಮಿಸ್‌ಗೈಡ್‌ ಕಂಪನಿ ಮಾರಾಟ ಮಾಡುತ್ತದೆ. ಹೌಸ್‌ ಆಫ್‌ ಫ್ರಾಸರ್‌, ಲಿಲಿ ಲುಲೂ, ಅಮೆಜಾನ್‌, ಎಎಸ್‌ ಓ ಎಸ್‌ ಅಸಲಿ ಫರ್‌ನ್ನು ನಕಲಿ ಫರ್‌ ಹೆಸರಿನಲ್ಲಿ ಮಾರಾಟ ಮಾಡುತ್ತದೆ. ಏಕೆಂದರೆ ಪ್ರಾಣಿ ದಯಾ ಸಂಘದವರು ಅಸಲಿ ಫರ್‌ನಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿದರೆ ಸಂಬಂಧಪಟ್ಟವರಿಗೆ ದೂರು ಸಲ್ಲಿಸುತ್ತಾರೆ ಎಂಬುದು ಅವರಿಗೆ ಗೊತ್ತು.

ಪ್ರಾಣಿಗಳ ಚರ್ಮದಿಂದ ಮಾಡಿದ ಫರ್‌ : ನೈಮನ್‌  ಮಾರ್ಕಸ್‌ ಕೋಹ್ಸ್‌ ಫಾರೆರ್‌ನಂತಹ ಸ್ಟೋರ್‌ಗಳು `ನೋ ಫರ್‌’ ನೀತಿಯನ್ನು ಅನುಸರಿಸುವ ವಿಶ್ವಾಸವನ್ನು ಗ್ರಾಹಕರಿಗೆ ಕೊಡುತ್ತವೆ. ಆದರೆ ವಾಸ್ತವದಲ್ಲಿ ಅಲ್ಲಿ ಅಸಲಿ ಫರ್‌ನಿಂದ ಮಾಡಿದ ಉತ್ಪನ್ನಗಳನ್ನೇ ಮಾರಾಟ ಮಾಡಲಾಗುತ್ತದೆ. ಈ ವಸ್ತುಗಳು ಅಗ್ಗವಾಗಿರುವುದರಿಂದ ಅವು ನಕಲಿಯಾಗಿರುತ್ತವೆ ಎಂದು ಜನರು ಯೋಚಿಸುತ್ತಾರೆ. ವಾಸ್ತವ ಸಂಗತಿಯೇನೆಂದರೆ, ಈಗ ಆಧುನಿಕ ಡೈರಿ ಫಾರ್ಮ್ ಗಳ ಹಾಗೆ, ಅವುಗಳನ್ನು ಫಾರ್ಮ್ ಗಳಲ್ಲಿ ಸಾಕಿ ಅತ್ಯಂತ ಕ್ರೂರ ರೀತಿಯಲ್ಲಿ ಬೆಳೆಯುವಂತೆ ಮಾಡಿ, ಅವುಗಳ ಚರ್ಮವನ್ನು  ಬಗೆ ಬಗೆಯ ಉತ್ಪನ್ನಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಆಧುನಿಕ ತಂತ್ರಜ್ಞಾನ ಹಾಗೂ ಔಷಧಿಗಳ ಕಾರಣದಿಂದ ಇವುಗಳ ಉತ್ಪಾದನೆ ಖರ್ಚು ಅತ್ಯಂತ ಕಡಿಮೆಯಾಗಿದೆ.

ಅವುಗಳ ನೋವು ಯಾರಿಗೂ ಗೊತ್ತಾಗುವುದಿಲ್ಲ : ಜಾಲರಿಯಂತಹ ಪಂಜರಗಳಲ್ಲಿ ಇಡಲ್ಪಡುವ ಈ ಪ್ರಾಣಿಗಳನ್ನು ಪೋಲೆಂಡ್‌, ಚೀನಾ, ಕಜಕಿಸ್ತಾನ್‌ ದೇಶಗಳಲ್ಲಿ ಸಾಕಲಾಗುತ್ತದೆ. ಅಲ್ಲಿ ಪ್ರಾಣಿ ದಯಾ ಸಂಘಗಳದ್ದೇನೂ ನಡೆಯುವುದಿಲ್ಲ. ಟ್ಯಾನ್ಸಿ ಹಾಸ್ಕಿನ್ಸ್ ಎಂಬ ಲೇಖಕರೊಬ್ಬರು ಇಂಗ್ಲೆಂಡ್‌ನ `ದಿ ಗಾರ್ಜಿಯನ್‌’ ಪತ್ರಿಕೆಯಲ್ಲಿ ಹೀಗೆ ಬರೆದಿದ್ದಾರೆ. ಫರ್‌ ಫಾರ್ಮ್ ನಲ್ಲಿ 7.5 ಕೋಟಿ ಪ್ರಾಣಿಗಳನ್ನು ಚಿಕ್ಕ ಚಿಕ್ಕ ಪಂಜರಗಳಲ್ಲಿ ಇಡಲಾಗುತ್ತದೆ. ಅಲ್ಲಿ ಅವುಗಳಿಗೆ ರೋಗ ತಗಲುತ್ತದೆ, ಗಾಯಗಳಾಗುತ್ತವೆ.

ಪ್ರತಿ ವಸ್ತುವಿನ ಹಿಂದೆ ಪ್ರಾಣಿಗಳ ನರಳುವಿಕೆ : ಎಷ್ಟೋ ಕಡೆ ಅವುಗಳಿಗೆ ಔಷಧಿ ನೀಡಿ ಬಹುಬೇಗ ಬೆಳವಣಿಗೆ ಹೊಂದುವಂತೆ ಮಾಡಲಾಗುತ್ತದೆ. ಏಕೆಂದರೆ ಎಷ್ಟು ಸಾಧ್ಯವೋ ಅಷ್ಟು ಬೇಗ ಚರ್ಮ ಸಿಗುವಂತಾಗಲಿ ಎಂಬುದು ಅವರ ದುರಾಲೋಚನೆ. ಈ ಕಾರಣದಿಂದ ಫರ್‌ನಿಂದ ಮಾಡಲ್ಪಟ್ಟ ವಸ್ತುಗಳು ಈಗ ಸಾಕಷ್ಟು ಅಗ್ಗವಾಗಿವೆ. ತೋಳ, ನರಿ, ಮೊಲ, ರಾಕೂನ್‌, ನಾಯಿ, ಬೆಕ್ಕುಗಳ ವ್ಯಾಪಾರ ಈಗ ಅತ್ಯಂತ ಕಡಿಮೆ ಬೆಲೆಯದ್ದಾಗಿದೆ.

– ಮೇನಕಾ ಗಾಂಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ