ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್​ಸಿಎಲ್​) ಮೆಟ್ರೋ ಪ್ರಯಾಣ ದರವನ್ನು ಶೇ.5ರಷ್ಟು ಹೆಚ್ಚಿಸಿದ್ದು, ಫೆ.9ರಿಂದ ನೂತನ ದರ ಜಾರಿಯಾಗಲಿದೆ.

ಸಾರ್ವಜನಿಕರ ವಿರೋಧದ ನಡುವೆಯೂ ಮೆಟ್ರೋ ಪ್ರಯಾಣ ದರ ಏರಿಕೆಗೆ ನಿರ್ಧರಿಸಿದ್ದ ಬಿಎಂಆರ್​ಸಿಎಲ್​, ದರ ನಿಗದಿ ಸಮಿತಿ (ಎಫ್​ಎಫ್​ಸಿ) ಶಿಫಾರಸಿನಂತೆ ವಾರ್ಷಿಕ ಶೇ.5ರಷ್ಟು ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಇದಕ್ಕೆ ರಾಜ್ಯ ಸರ್ಕಾರವೂ ಅನುಮತಿ ನೀಡಿದ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಹೆಚ್ಚಾಗಿದೆ.

ಕಿ.ಮೀ. ಆಧಾರದಲ್ಲಿ ಹೊಸ ದರವನ್ನು ನಿಗದಿಪಡಿಸಿದ್ದು, ಕನಿಷ್ಠ 1 ರೂ.ನಿಂದ ಗರಿಷ್ಠ 5 ರೂ. ವರಗೆ ಹೆಚ್ಚಾಗಿದೆ. ಸ್ಮಾರ್ಟ್​ಕಾರ್ಡ್​ / ಎನ್​ಸಿಎಂಸಿ ಪ್ರಯಾಣಿಕರಿಗೆ ರಿಯಾಯಿತಿ ಮುಂದುವರೆದಿದೆ.

ಹಸಿರು ಮಾರ್ಗದ ರೇಷ್ಮೆ ಸಂಸ್ಥೆ- ಮಾದಾವರದವರೆಗೆ ಹಾಗೂ ನೇರಳೆ ಮಾರ್ಗದ ವೈಟ್​ಫೀಲ್ಡ್​ – ಚಲ್ಲಘಟ್ಟದವರೆಗೆ ಪ್ರಸ್ತುತ 90 ರೂ. ದರ ಇದೆ. ಶೇ.5ರಷ್ಟು ಹೆಚ್ಚಳದ ನಂತರ ಅದು 95 ರೂ. ಆಗಲಿದೆ. ಆರ್​.ವಿ.ರಸ್ತೆ – ಬೊಮ್ಮಸಂದ್ರ ಮಾರ್ಗದಲ್ಲಿ ಪ್ರಸ್ತುತ 60 ರೂ. ಇದ್ದು, 63 ರೂ. ಆಗಲಿದೆ. ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಕನಿಷ್ಠ 10 ರೂ. ಇದ್ದು, ಅದು 11 ರೂ. ಆಗಲಿದೆ.

ಬಿಎಂಆರ್​ಸಿಎಲ್​ ಪ್ರಕಾರ 7.5 ವರ್ಷಗಳ ನಂತರ ಪರಿಷ್ಕೃತ ದರ ಅನ್ವಯಿಸುವುದಿದ್ದರೆ ಸರಾಸರಿ ಶೇ.51.55 ರಷ್ಟು ಟಿಕೆಟ್​ ದರ ಹೆಚ್ಚಾಗುತ್ತದೆ. ಒಮ್ಮೆಗೆ ದರ ಹೆಚ್ಚಿಸಿದಲ್ಲಿ ಪ್ರಯಾಣಿಕರಿಗೆ ತೀವ್ರ ಹೊರೆಯಾಗುವ ಹಿನ್ನೆಲೆಯಲ್ಲಿ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರ ಜಾರಿಗೆ ತರಲಾಗಿದೆ. ಮೆಟ್ರೋ ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡಾವಾರು ವೆಚ್ಚ ಅಥವಾ ವಾರ್ಷಿಕ ಶೇ.5ರಲ್ಲಿ ಯಾವುದು ಕಡಿಮೆಯೋ ಅದನ್ನು ಟಿಕೆಟ್​ ಬೆಲೆ ಏರಿಕೆಗೆ ಪರಿಗಣಿಸಲು ನಿರ್ಧರಿಸಲಾಗಿದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ದರ ಏರಿಕೆ ಆಗುತ್ತದೆ ಎಂದು ಬಿಎಂ ಆರ್​ಸಿಎಲ್​ ಹೇಳಿದೆ.

ಈ ವಿಧಾನವು ಹಣದುಬ್ಬರ ಮತ್ತು ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಪ್ರಯಾಣಿಕರನ್ನು ತೀವ್ರವಾದ ದರ ಏರಿಕೆಗಳಿಂದ ರಕ್ಷಿಸುತ್ತದೆ ಎಂದು ನಿಗಮ ಸ್ಪಷ್ಟಪಡಿಸಿದೆ.

ಬಿಎಂಆರ್​ಸಿಎಲ್​ನಿಂದ ಎಫ್​ಎಫ್​ಸಿ ಶಿಫಾರಸು ಮಾಡಲಾದ ದರವನ್ನು ಜಾರಿಗೆ ತಂದ ದಿನದಿಂದ ಒಂದು ವರ್ಷ ಮುಕ್ತಾಯಗೊಂಡ ನಂತರ ಕಾರ್ಯಗತಗೊಳ್ಳುವಂತೆ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಜಾರಿಗೆ ತರಲಾಗುವುದು. 96.10 ಕಿ.ಮೀ.ಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ 1 ರೂ. ಹಾಗೂ ಗರಿಷ್ಠ 5 ರೂ.ನಷ್ಟು ಹೆಚ್ಚಳವಾಗಲಿದೆ. ದರ ನಿಗದಿ ಸಮಿತಿಯ ನಿಬಂಧನೆಗಳಿಗೆ ಅನುಗುಣವಾಗಿ, ಪರಿಷ್ಕರಣೆಯನ್ನು ಶೇ.5ಕ್ಕೆ ಸೀಮಿತಗೊಳಿಸಲಾಗಿದೆ ಎಂದು ವಿವರಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ