ಸಾಧಾರಣವಾಗಿ ನಮಗೆ ಅವಶ್ಕಕತೆ ಇರುವುದೆಲ್ಲವೂ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗ್ಗೆಯೇ ಗೊಣಗುತ್ತಲೇ ಇರುವವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತೇವೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಾಕಿ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಹಾಕಿದರೂ, ಛೇ.. ದಿನಾಗಲೂ ಅದೇ ಹುಳಿ, ಸಾರು ಪಲ್ಯಾನಾ… ಎಂದು ಗೊಣಗುತ್ತಾ ಅಗ್ಗಾಗ್ಗೆ ಸ್ನೇಹಿತರ ಜೊತೆಯಲ್ಲಿ ಜಂಕ್ ಫುಡ್ ತಿನ್ನತ್ತಾರೆ‌ ಮಕ್ಕಳು. ಕಳೆದ ತಿಂಗಳು ಮಗಳು ಶೈಕ್ಷಣಿಕ ಪ್ರವಾಸಕ್ಕೆಂದು ಎರಡು ವಾರಗಳ ಕಾಲ ಉತ್ತರ ಭಾರತದ ಕೆಲವು ಪ್ರದೇಶಗಳಿಗೆ ಹೋಗುವಾಗ, ನಿಮ್ಮ ಊಟದ ತಿಂದು ಸಾಕು ಸಾಕಾಗಿ ಹೋಗಿದೆ. ಅಬ್ಬಾ! ಎರಡು ವಾರಗಳ ಕಾಲ ರುಚಿ ರುಚಿಯಾಗಿ ಉತ್ತರ ಭಾರತೀಯ ತಿನಿಸುಗಳನ್ನು ತಿನ್ನಬಹುದು ಎಂದು ಅಮ್ಮನೊಂದಿಗೆ ಕೊಚ್ಚಿಕೊಂಡು ಹೋಗಿದ್ದ ನಮ್ಮ ಮಗಳು ಅಲ್ಲಿಗೆ ಹೋದ ಎರಡೇ ದಿನಗಳಲ್ಲಿ, ಅಮ್ಮಾ ಇಲ್ಲಿಯ ಉಟವೇ ಸರಿ ಇಲ್ಲಾ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟಕ್ಕೂ ಚಪಾತಿ/ರೋಟಿ ತಿಂದು ತಿಂದು ಸಾಕಾಗಿದೆ. ಅದೂ ಅಲ್ದೇ, ಒಂದು ತಿಂಡಿಗೆ 100-150/- ಆದ್ರೇ ಇನ್ನು ಊಟ ಮಾಡಬೇಕಾದರೆ, 250-300/- ರೂಪಾಯಿ ಖರ್ಚಾಗುತ್ತದೆ ಎಂದು ಗೋಳಾಡಿದ್ದಳು. ಪ್ರವಾಸವೆಲ್ಲವೂ ಮುಗಿದು ದೆಹಲಿಯಿಂದ ಬೆಂಗಳೂರಿನ ರೈಲು ಹತ್ತಿದ ಕೂಡಲೇ ಅಮ್ಮಾ ನಾನು ಬಂದ ಕೂಡಲೇ ಅನ್ನಾ, ತಿಳಿ ಸಾರು ಮತ್ತು ಪಲ್ಯ ಮಾಡಿಡಿ. ನಾಲಿಗೆ ಎಲ್ಲಾ ಕೆಟ್ಟು ಹೋಗಿದೆ ಎಂದು ಹೇಳಿದ್ದಲ್ಲದೇ, ಮನೆಗೆ ಬಂದ ನಂತರ ಸ್ನಾನ ಮತ್ತು ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಿ ಪಟ್ಟಾಗಿ ಒಂದು ಚೂರು ಚಕಾರ ಎತ್ತದೇ, ಅಮ್ಮಾ ಮಾಡಿದ್ದ ಅಡುಗೆಯನ್ಣೇ ಆಹಾ.. ಓಹೋ.. ಎಂದು ಸವಿಯುತ್ತಾ. ಹೊಟ್ಟೇ ಭರ್ತಿ ಗಡದ್ದಾಗಿ ತಿಂದು ಡರ್ ಎಂದು ತೇಗಿ ಗೊರ್ ಎಂದು ನಿದ್ದೆ ಮಾಡಿ ಎದ್ದಾಗಲೇ ನಮ್ಮ ಮಗಳಿಗೆ ಮನೆಯ ಊಟದ ಮತ್ತು ಅಮ್ಮನ ಕೈ ರುಚಿ ಮತ್ತು ಅದರ ಮೌಲ್ಯ ಗೊತ್ತಾದದ್ದು ಎಂಬ ವಿಷಯವನ್ನು ಕೆಲ ವಾರಗಳ ಹಿಂದೆಯೂ ನಿಮಗೆ ತಿಳಿಸಿದ್ದೆ.

WhatsApp Image 2023-04-19 at 05.57.22

ಈಗ ಅಂತಹದ್ದೇ ಅನುಭವ ನನಗೂ ಸಹಾ ಅಗಿದ್ದು ಅದರ ಸುಂದರ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕಚೇರಿಯ ಕೆಲಸ ನಿಮಿತ್ತ ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ದೆಹಲಿಗೆ ಬರಬೇಕಿತ್ತು. ವಿಮಾನ ಬೆಳಿಗೆ 6:10 ಕ್ಕೆ ಇದ್ದ ಕಾರಣ, ಹಿಂದಿನ ರಾತ್ರಿ ಸರಿಯಾಗಿ ನಿದ್ದೆಯೂ ಇರದೇ, ಬೆಳ್ಳಬೆಳಿಗ್ಗೆ 3:30ಕ್ಕೆಲ್ಲಾ ಎದ್ದು ಸ್ನಾನಸಂಧ್ಯಾವಂದನೆಗಳನ್ನೆಲ್ಲಾ ಮುಗಿಸಿ, ವಿಮಾನ ನಿಲ್ಡಾಣಕ್ಕೆ ಬರುವಷ್ಟರಲ್ಲಿ 4:30 ಅಗಿತ್ತು. ನಂತರ ಅರ್ಧ ಮುಕ್ಕಾಲು ಗಂಟೆಗಳಲ್ಲಿ Baggage & Check-in ಎಲ್ಲಾ ಮುಗಿಸಿ, ಇನ್ನೂ ಸಮಯ ಇದ್ದ ಕಾರಣ, ಹಾಗೇ, ಸುಮ್ನೇ ತಮಾಷೆ ಮಾಡುವ ಸಲುವಾಗಿ ಶಿವಮೊಗ್ಗ ಟಿಕೆಟ್ ಗಾಗಿ ಹೈಕಮಾಂಡ್ ನಿಂದೆ ಕರೆ ಬಂದಿರುವ ಕಾರಣ, ದೆಹಲಿಗೆ ಹೋಗುತ್ತಿದೇನೆ ಎಂದು Boarding Pass ಜೊತೆ ನನ್ನದೊಂದು ಫೋಟೋ Statusನಲ್ಲಿ ಅದರ ಅಡಿಯಲ್ಲಿ ಸುಳ್ಸುದ್ದಿ ಎಂದು ಬರೆದಿದ್ದರೂ, ನನ್ನ ಮೇಲಿನ ನಂಬಿಕೆ ಮತ್ತು ವಿಶ್ವಾಸದಿಂದ ಅನೇಕ ಹಿತೈಷಿಗಳು ಮೇಲಿಂದ ಮೇಲೆ ಶುಭ ಕೋರಲು ಆರಂಭಿಸಿದರೆ, ಇನ್ನು ವಿಮಾನದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರಿಂದ ಇನ್ನೂ ಅನೇಕರು, ನನ್ನ ಕುಟುಂಬದವರಿಗೂ ಕರೆ ಮಾಡಿ ಅಭಿನಂದನೆ ತಿಳಿಸಿದಾಗ, ಅಗಷ್ಟೇ ನಿದ್ದೆಯಿಂದ ಏಳುತ್ತಿದ್ದ ನನ್ನ ಕುಟುಂಬದವರಿಗೆ ಈ ಬಗ್ಗೆ ಏನೂ ತಿಳಿಯದೇ ಕಕ್ಕಾ ಬಿಕ್ಕಿಯಾಗಿ ನಂತರ ನನ್ನ Statusಅನ್ನು ನೋಡಿದ ಮಗಳು ನನ್ನ ಕುಚೇಷ್ಟೆಯನ್ನು ತಿಳಿಸಿದಾಗಲೇ ಮನೆಯವರಿಗೆ ಒಂದು ಕಡೆ ಹುಸಿ ಕೋಪ ಮತ್ತೊಂಡೆಡೆ ನಗುವೂ ಬಂದಿತ್ತಂತೆ. ಅಯ್ಯೋ ಈ ವಯಸ್ಸಿನಲ್ಲೇ ನಿಮ್ಮಪ್ಪ ಹೀಗೆ ಆಡ್ತಾರೆ. ಇನ್ನು ವಯಸ್ಸಾದ ಮೇಲೆ ಇವರೊಂದಿಗೆ ಹೇಗಪ್ಪಾ ಏಗೋದು? ಎಂದು ತನ್ನ ಮಕ್ಕಳೊಂದಿಗೆ ಅಳಲನ್ನು ತೋಡಿಕೊಂಡಳಂತೆ ನಮ್ಮಾಕಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ