ನಾವೆಲ್ಲಾ ಚಿಕ್ಕವರಿದ್ದಾಗಿ ರೇಡಿಯೋ ಕೇಳಿಕೊಂಡೇ ಬೆಳೆದವರು. ಪ್ರತಿದಿನ ಬೆಳಿಗ್ಗೆ 5:55 ಕ್ಕೆ ವಂದೇ ಮಾತರಂನಿಂದ ಆರಂಭವಾಡರೆ 8 ಗಂಟೆಯ  ಆಂಗ್ಲ ವಾರ್ತಾ ಪ್ರಸಾರದ ವರೆಗೂ ನಿರಂತರವಾಗಿ ನಮಗೆ ಸಮಯ ಗೊತ್ತಾಗುತ್ತಿದ್ದದ್ದೇ ಪ್ರತೀದಿನವೂ ಸಮಯಕ್ಕೆ ಸರಿಯಾಗಿ ಪ್ರಸಾರವಾಗುತ್ತಿದ್ದ ವಿವಿಧ  ರೇಡಿಯೋ  ಕಾರ್ಯಕ್ರಮಗಳಿಂದಲೇ. ಬೆಳಿಗ್ಗೆ 7:20 ರಿಂದ 7:35ರವರೆಗೂ ಪ್ರಸಾರವಾಗುತ್ತಿದ್ದ  ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಮಕ್ಕಳ ದೇಶಭಕ್ತಿ ಗೀತ ಗಾಯನದ ಅಭ್ಯಾಸ ನಮಗೆ ಬಹಳ ನೆಚ್ಚಿನ ಕಾರ್ಯಕ್ರಮವಾಗಿದ್ದು, ಆ ಕಾರ್ಯಕ್ರಮದ ಮೂಲಕ ತಕ್ಕ ಮಟ್ಟಿಗೆ ಕರ್ನಾಟಕ ಸಂಗೀತ ಮತ್ತು ಚೆನ್ನಾಗಿಯೇ ಶಿಶುಗೀತೆ, ಭಾವಗೀತೆ ಮತ್ತು ದೇಶಭಕ್ತಿ ಗೀತೆಗಳ ಪರಿಚಯ ಮಾಡಿಕೊಟ್ಟ ನಾಡಿನ  ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು ಮತ್ತು ಸಂಯೋಜಕರಾದ  ಶ್ರೀ ಎಚ್ ಕೆ ನಾರಾಯಣ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಕನ್ನಡದಲ್ಲಿ ಸುಗಮ ಸಂಗೀತ ಮತ್ತು ಭಾವಗೀತೆಗಳು ಎಂದಾಕ್ಷಣ ನಮಗೆ ಥಟ್ ಅಂತಾ ನೆನಪಾಗೋದೇ ದಿಗ್ಗಜರಾದ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಮತ್ತು ಸಿ ಅಶ್ವಥ್. ಅಚ್ಚರಿಯ ವಿಷಯವೆಂದರೆ, ಇವರೆಲ್ಲರಿಗೂ ಮುಂಚೆ ಮತ್ತು ಇವರೆಲ್ಲರಿಗಿಂತಲೂ  ಹೆಚ್ಚಾಗಿ ಕನ್ನಡ ನಾಡಿನ ಅತಿ ಹೆಚ್ಚು ಸಂಖ್ಯೆಯ ಕವಿಗಳ ಗೀತೆಗಳಿಗೆ, ರಾಗಸಂಯೋಜನೆಮಾಡಿ, ಕವಿತೆಗಳನ್ನು ಗೀತೆಗಳ ರೂಪದಲ್ಲಿ  ಕ್ಯಾಸೆಟ್ ರೂಪದಲ್ಲಿ ಪ್ರಚಾರಕ್ಕೆ ಹೊರತಂದ ಖ್ಯಾತಿಯ ಪಡೆದವರೇ ಶ್ರೀ ಎಚ್ ಕೆ ನಾರಾಯಣ ಎಂದರೂ ತಪ್ಪಾಗದು.

ಸಂಗೀತ, ಸಾಹಿತ್ಯ, ನೃತ್ಯ ಮತ್ತು ಶಿಲ್ಪಕಲೆಗಳ ಬೀಡಾದ ಹಾಸನದ ಹೊಳೆನರಸಿಪುರದ ಬಳಿಯ ಸಣ್ಣ ಗ್ರಾಮದಲ್ಲಿ. ಸಂಗೀತಗಾರರಾಗಿದ್ದಂತಹ ಶ್ರೀ ಕೇಶವಯ್ಯ ಮತ್ತು ಸಣ್ಣಮ್ಮ ದಂಪತಿಗಳ ಮಗನಾಗಿ ಮೇ 14, 1934 ಜನಿಸಿದರು. ಅದರ ಜೊತೆ ಅವರ ಸೋದರ ಮಾವ ಶ್ರೀ ಎಮ್. ಪಿ. ನಾಗಮುತ್ತು ಅದಾಗಲೇ ಖ್ಯಾತ  ಸಂಗೀತಕಾರರಾಗಿ ಆಕಾಶವಾಣಿಯ ಸಂಗೀತ ವಿಭಾಗದಲ್ಲಿ ಕೆಲಸಮಾಡುತ್ತಿದ್ದರು. ಮನೆಯಲ್ಲೇ ಇಂತಹ  ಸಂಗಿತದ ವಾತಾವರಣವಿದ್ದ ಕಾರಣ, ಅವರಿಗೆ ಆರು ವರ್ಷವಿದ್ದಾಗಲೇ ನಾರಾಯಣರು ಮತ್ತು ಅವರ ತಮ್ಮ ಕೇಶವ ಮೂರ್ತಿ ಇಬ್ಬರೂ ಸಹಾ ತಮ್ಮ ತಂದೆಯವರಿಂದಲೇ ಪಿಟೀಲು ವಾದನದ ಮೂಲಕ ಸಂಗೀತಾಭ್ಯಾಸವನ್ನು ಆರಂಭಿಸಿ, ಮುಂದೇ ನಾರಾಯಣರು ಗಾಯನದಲ್ಲೇ ಪ್ರಾವೀಣ್ಯತೆಯನ್ನು ಪಡೆದರೆ, ಅವರ ತಮ್ಮ ಶ್ರೀ ಎಚ್. ಕೆ. ಕೇಶವ ಮೂರ್ತಿಗಳು ಕರ್ನಾಟಕ ಸಂಗೀತದ ಪ್ರಸಿದ್ಧ ಪಿಟೀಲು ವಾದಕರಾಗಿ ಹೆಸರು ಗಳಿಸಿದರು.

ಸಂಗೀತದಲ್ಲೇ ಹೆಚ್ಚಿನ  ಅಭ್ಯಾಸ ನಡೆಸುವ ಸಲುವಾಗಿ ನಾರಾಯಣರು ಮೈಸೂರಿನ ಹಿರಿಯ ಸಂಗೀತಗಾರರಾದ ಶ್ರೀ ಆರ್. ಕೆ. ಶ್ರೀಕಂಠನ್ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಗಾಯನ ಸಂಗೀತ ಪಾಠಗಳನ್ನು ಪಡೆದು ನಂತರದ ದಿನಗಳಲ್ಲಿ ನಾರಾಯಣ ಅವರು ಶ್ರೀ ಆರ್. ಕೆ. ಶ್ರೀಕಂಠನ್ ಅವರ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಹೋದದ್ದು ಇತಿಹಾಸ. ಹೀಗೆ ಶಾಸ್ತ್ರೀಯವಾಗಿ ಸಂಗೀತ ಕಲಿತು ಬಹಳ ಸಣ್ಣ ವಯಸ್ಸಿನಲ್ಲಿಯೇ ತಮ್ಮ ಮಾವನಂತೆ ನಾರಾಯಣರೂ ಸಹಾ ಆಕಾಶವಾಣಿಗೆ ಪಾದಾರ್ಪಣೆ ಮಾಡಿದರು. ಆ ಸಮಯದಲ್ಲಿ ಗೀತೆಯೊಂದಕ್ಕೆ ಅವರು ಹಾಕಿದ  ಸ್ವರಪ್ರಸ್ತಾವನೆ ಸ್ವತಃ ಅವರ ಗುರುಗಳಾದ, ವಿದ್ವಾನ್ ಶ್ರೀ ಅರ್. ಕೆ. ಶ್ರೀಕಂಠನ್  ಅಲ್ಲದೆ, ಎಲ್ಲರಿಂದಲೂ ಪ್ರಶಂಸೆಯನ್ನು ಗಿಟ್ಟಿಸಿಕೊಂಡ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ, ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕರಾಗಿ ನೇಮಕಗೊಂಡು ಎಲ್ಲರಿಂದಲೂ  ಎಚ್.ಕೆ.ಎನ್ ಎಂದೆ ಪ್ರಖ್ಯಾತರಾದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ