ಗುಂಡ ಶೇರು ಮಾರ್ಕೆಟ್‌ನಲ್ಲಿ ಸಿಕ್ಕಾಪಟ್ಟೆ ಹಣ ಹೂಡಿ ಬಹುತೇಕ ಎಲ್ಲವನ್ನೂ ಕಳೆದುಕೊಂಡು ಬೇಸತ್ತಿದ್ದ. ಮನೆಗೆ ಬಂದು ತಲೆಯ ಮೇಲೆ ಕೈಹೊತ್ತು ಕುಳಿತವನಿಗೆ, ದಢೂತಿ ಹೆಂಡತಿ ಬಂದು ತಂಬಿಗೆ ನೀರು ಕೊಟ್ಟಳು. ``ಕಳೆದ 2 ವರ್ಷದಲ್ಲಿ ನಾನು ಹೂಡಿದ  ಏಕೈಕ ಖರ್ಚು, ತಿಂಗಳು ತಿಂಗಳಿಗೂ ಹಿಗ್ಗುತ್ತಲೇ ಇದೆ!'' ಎಂದು ಅವಳನ್ನು ನೋಡಿ ಹೇಳಿದಾಗ, ತಲೆಬುಡ ಅರ್ಥವಾಗದೆ ಅವಳು ಕಕ್ಕಾಬಿಕ್ಕಿಯಾದಳು.

ಪತಿ ಆ ದಿನ ಬೆಳಗ್ಗೆ ಒಳ್ಳೆ ಮೂಡ್‌ನಲ್ಲಿದ್ದ. ಫೇಸ್‌ಬುಕ್‌ ಓಪನ್‌ಮಾಡಿ ಹೊಸದಾಗಿ ಪೇಸ್ಟ್ ಮಾಡಿದ.`ಇವತ್ತಿನ ದಿನ ಬಹಳ ಮನಮೋಹಕವಾಗಿದೆ! ಇಂದು ಇಡೀ ದಿನ ಹಾಯಾಗಿ ಕಳೆಯಬಹುದು.'

ಇವನ ಪತ್ನಿ ಅದಕ್ಕೆ ಲೈಕ್‌ ಕೊಡುತ್ತಾ ಕಮೆಂಟ್‌ ಮಾಡಿದಳು ಚಾಲೆಂಜ್‌ ಅಕ್ಸೆಪ್ಟೆಡ್‌.

ಗುಂಡ ಆಫೀಸಿಗೆ ಹೊರಡಲೆಂದು ಬೆಳ್ಳಂಬೆಳಗ್ಗೆ ಸರ್ಕಾರಿ ಬಸ್‌ ಹತ್ತಿದ. ಕಂಡಕ್ಟರ್‌ ಇವನನ್ನು ಕಂಡು ಮುಗುಳ್ನಗುತ್ತಾ, ``ನಿನ್ನೆ ರಾತ್ರಿ 11 ಘಂಟೆ ದಾಟಿತ್ತು. ನೀವು ಸೇಫ್‌ ಆಗಿ ಮನೆ ತಲುಪಿದಿರಿ ತಾನೇ?''

ಗುಂಡ : ಯಾಕೆ? ನಿನ್ನೆ ರಾತ್ರಿ  ನನಗೆ ಅಂಥದ್ದೇನಾಗಿತ್ತು?

ಕಂಡಕ್ಟರ್‌: ನೀವು ಕಂಟ್ರೋಲ್‌ನಲ್ಲಿ ಇರಲಿಲ್ಲ.

ಗುಂಡ : ಏ.... ಏ.... ಏನು ಹೇಳ್ತಿದ್ದಿ? ನಾನೇನು ನಿನ್ನ ಬಳಿ ಹಾಗೆ ಹೇಳಿದೆನೇ? ಬೇರೆಯವರ ತರಹ ಬಿದ್ದೆನೇ.... ಕೆಟ್ಟ ಮಾತನಾಡಿದೆನೇ? ಏನು ಮಾಡಿದೆ?

ಕಂಡಕ್ಟರ್‌: ಅದೆಲ್ಲ ಮಾಮೂಲಿ ಬಿಡಿ, ಅದಕ್ಕೆ ನಾವು ತಲೆ ಕೆಡಿಸಿಕೊಳ್ಳೋದಿಲ್ಲ. ನಿನ್ನೆ ನೀವು ಬಸ್ಸು ಹತ್ತಿ ಅರ್ಧ ದಾರಿ ಬಂದ ಮೇಲೆ, ಒಬ್ಬ ಮೇಡಂ ಬಸ್ಸು ಹತ್ತಿದರು. ತಕ್ಷಣ ನೀವು ಸೀಟ್‌ನಿಂದ ಎದ್ದು ಅವರಿಗೆ ಕೂರಲು ದಾರಿ ಮಾಡಿಕೊಟ್ಟಿರಿ.

ಗುಂಡ : ಹಾಗಿದ್ದರೆ ಇದರಲ್ಲಿ ತಪ್ಪೇನು? ಹೀಗೆ ನಡೆದುಕೊಳ್ಳಬೇಕಾದುದು ಮಾನವೀಯತೆ. ಅದು ನನ್ನ ಪರನಾರಿ ಸೋದರತ್ವದ ಗುಣ ತೋರಿಸುತ್ತೆ. ಆಕೆ ಮೇಲೆ ಬಿದ್ದು ತಪ್ಪಾಗಿ ನಡೆದುಕೊಂಡಿದ್ದರೆ ನೀನು ನನ್ನನ್ನು ಆಕ್ಷೇಪಿಸಬೇಕು. ಒಬ್ಬ ಹೆಂಗಸಿಗೆ ಹೀಗೆ ಸೀಟ್‌ ಆಫರ್‌ ಮಾಡಿದ್ದೇ ತಪ್ಪೇ?

ಕಂಡಕ್ಟರ್‌: ಅಪರಾಧವಂತೂ ಖಂಡಿತಾ ಅಲ್ಲ. ಆದರೆ ಇಡೀ ಬಸ್ಸಿಗೆ ನೀವಿಬ್ಬರೇ ಪ್ಯಾಸೆಂಜರ್ಸ್‌, ಅಲ್ಲಿಂದ ಕೊನೆಯ ಸ್ಟಾಪ್‌ಬರುವವರೆಗೂ ನೀವು ಪಾಪ, ನಿಂತೇ ಇದ್ದಿರಿ!

ಪತ್ನಿ : ನನ್ನ ನಾಲಿಗೆ ಎಲ್ಲಾ ಒಡೆದು ಗಾಯವಾಗಿದೆ ಗೊತ್ತಾ? ಎಷ್ಟು ಕಷ್ಟ ಆಗ್ತಿದೆ!

ಪತಿ : ಹ್ಞೂಂ ಮತ್ತೆ.... ನೀನು ಅದಕ್ಕೆ ಸ್ವಲ್ಪವಾದ್ರೂ ರೆಸ್ಟ್ ಕೊಟ್ಟರೆ ತಾನೇ?

ಒಂದು ದಿನ ಗುಂಡ ತನ್ನ ಹೆಂಡತಿಯ ಜೊತೆ ಸಂತೆಗೆ ಹೋಗಿದ್ದ. ಅಲ್ಲಿ ಎಲ್ಲಾ ಕಡೆ ಸುತ್ತಾಡಿ, ವಾಪಸ್‌ ಹೊರಡಲಿದ್ದಾಗ, ಅಲ್ಲೇ ಟೆಂಟ್‌ ಹಾಕಿದ್ದ ಒಬ್ಬ ಕಲಾವಿದ ಹೇಳಿದ, ``ಸಾರ್‌, ನಿಮ್ಮ ಶ್ರೀಮತಿಯವರ ಒಂದು ಸುಂದರ ಪೇಂಟಿಂಗ್‌ ಮಾಡಿ ಕೊಡ್ತೀನಿ ಇರಿ. ಕೇವಲ 500/ ರೂ. ಕೊಡಿ ಸಾಕು. ಪೇಂಟಿಂಗ್‌ ಹೇಗಿರುತ್ತೆ ಅಂದ್ರೆ ನೀವು ನೋಡಿದಾಗೆಲ್ಲ ಎದ್ದು ಬಂದು ಮಾತನಾಡುವಂತೆ......''

ಕಲಾವಿದ ಮುಂದುವರಿಸುವ ಮೊದಲೇ ಗುಂಡ ತಡೆಯುತ್ತಾ, ``ಬೇಡ ಬೇಡ.... ನಿನ್ನ ಪೇಂಟಿಂಗ್‌ ಸಹವಾಸವೇ ಬೇಡ. ಮೊದಲೇ ನಾನ್‌ ಸ್ಟಾಪ್‌ ಮಾತನಾಡ್ತಾಳೆ, ಇನ್ನು ಪೇಂಟಿಂಗೂ ಜೊತೆಗೆ ಸೇರಿಕೊಂಡುಬಿಟ್ಟರೆ... ನಾನೇನು ಮನೆಗೆ ಹೋಗಬೇಕೋ ಬೇಡವೋ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ