ಮೊಬೈಲ್‌, ಕಂಪ್ಯೂಟರ್‌, ಟಿವಿಗಳಿಂದ ನಿಮ್ಮ ದೃಷ್ಟಿಯನ್ನು ತುಸು ಸರಿಸಿರಿ. ಗಾಜಿನ ಗೋಡೆಗಳ ಆಫೀಸ್‌ ಅಥವಾ ಮನೆಯ ಸಿಮೆಂಟ್‌ ಗೋಡೆಗಳ ಆವರಣದಿಂದ ತುಸು ಹೊರಬನ್ನಿ.  ಏಕೆಂದರೆ ಇದುವೇ ನಿಮಗೆ ಎಲ್ಲವನ್ನೂ ಮರೆತು ಮೋಜು, ಮಸ್ತಿ ಉಡಾಯಿಸಲು ಸೂಕ್ತ ಸಮಯ. ಮಕ್ಕಳ ಜೊತೆ ಸೇರಿಕೊಂಡು ಆನೆಗಳಿಗೆ ಸ್ನಾನ ಮಾಡಿಸಲು, ಕಟ್ಟಿಗೆಯ ಸೇತುವೆ ದಾಟಲು, ಬಾತುಕೋಳಿಗಳ ಗುಂಪಿನೊಂದಿಗೆ ಆಟವಾಡಿ, ಕುಣಿದಾಡಲು ಇದೀಗ ಸೂಕ್ತ ಸಮಯ. ಬನ್ನಿ, ಖುಷಿ ಮತ್ತು ಪ್ರೀತಿಯಲ್ಲಿ ಮಿಂದೇಳಿ. ಇಟ್ಸ್ ಟೈಂ ಟು ಕಮ್ ಔಟ್‌ಪ್ಲೇ!

ಹೌದು, ಪ್ರತಿನಿತ್ಯದ ಯಾಂತ್ರಿಕ, ನೀರಸ ದಿನಚರಿಗೆ ಬೈ ಬೈ ಹೇಳಿ ಮಕ್ಕಳು, ಕುಟುಂಬದ ಜೊತೆ ಕೇರಳದ ಪ್ರವಾಸಕ್ಕೆ ಹೊರಟುಬಿಡಿ, ಅಲ್ಲಿನ ರೋಮಾಂಚನವನ್ನು ಮನದಣಿಯೆ ಸವಿಯಿರಿ.

ಸಾಗರದ ಸರ್‌ಪ್ರೈಸಸ್‌ ನೀಲಾಕಾಶವನ್ನಂತೂ ನೀವು ದಿನ ನೋಡುತ್ತಲೇ ಇರುತ್ತೀರಿ, ಆದರೆ ಉಕ್ಕಿ ಬರುವ ಅಲೆಗಳ ಮೇಲೆ ಇಡೀ ದಿನದ ವಿವಿಧ ಕಾಲಘಟ್ಟಗಳಲ್ಲಿ ಬಣ್ಣ ಬದಲಾಯಿಸುವ ಅವಕಾಶವನ್ನು ನೋಡುವುದು ಬಲು ರೋಮಾಂಚಕಾರಿ. ನೀವು ಸಾಗರತೀರಗಳನ್ನು ಹೆಚ್ಚಾಗಿ ಬಯಸುವವರಾದರೆ, ಅಗತ್ಯವಾಗಿ ಕೇರಳ ಪ್ರವಾಸಕ್ಕೆ ಸಜ್ಜಾಗಿ. ಇಲ್ಲಿ ನೀಲಿ ಸಾಗರ ತೀರದಲ್ಲಿ ತೂಗಾಡುವ ರಾಶಿ ರಾಶಿ ತೆಂಗಿನ ಮರಗಳ ನೆರಳಲ್ಲಿ ಸರ್ಫಿಂಗ್‌ ನಡೆಸುವ ಮಜವೇ ಬೇರೆ! ಸಾಗರದ ಉಬ್ಬರವಿಳಿತಗಳ ಅಲೆಗಳ ಮಧ್ಯೆ ನಿಮ್ಮ ರೇಂಜರ್‌ ಸೀಳಿಕೊಂಡು ಮುನ್ನುಗ್ಗುವ ರೋಮಾಂಚಕಾರಿ ಸಾಹಸ ವರ್ಣನಾತೀತ. ಸರ್ಫಿಂಗ್‌ ನಂತರ ಇಲ್ಲಿ ಲಭ್ಯವಿರುವ ವೈವಿಧ್ಯಮಯ ಸೀಫುಡ್ಸ್ ನಿಂದ ನಿಮ್ಮ ಹಸಿವನ್ನು ತಣಿಸಿ, ಬಾಯಿ ಚಪ್ಪರಿಸಿ.

ಸಾಗರ ತೀರದಲ್ಲಿ ನಿಮಗೆ ಬೇಕಾದಷ್ಟು ಸರ್ಪ್ರೈಸಸ್‌ ಕಾದಿವೆ. ನಿಮಗೆ ಇವನ್ನೆಲ್ಲ ನೋಡಿ ನಲಿಯುವ, ಆನಂದಿಸುವ ಆಕಾಂಕ್ಷೆ ಇರಬೇಕಷ್ಟೆ. ಇಲ್ಲಿನ ಬೆಸ್ತರ ಜೊತೆ ದೋಸ್ತಿ ಮಾಡಿ. ಅವರು ಹೇಗೆ ಮೀನು ಹಿಡಿಯುತ್ತಾರೆಂದು ಗಮನಿಸಿ. ಸಾಗರ ತಟದಲ್ಲಿ ನಿಂತು ಸೂರ್ಯೋದಯ, ಸೂರ್ಯಾಸ್ತಗಳನ್ನು ನೋಡಿ ಸಂಭ್ರಮಿಸಿ. ಆಗ ಉಕ್ಕಿ ಬರುವ ಹೆದ್ದೆರೆಗಳೊಂದಿಗೆ ಚಿನ್ನಾಟವಾಡಿ. ಇಲ್ಲಿನ ಕವಡೆ, ಕಪ್ಪೆಚಿಪ್ಪು ಆರಿಸಿ ಮಾಲೆ ಕಟ್ಟಿ ಧರಿಸಿ ಆನಂದಿಸಿ. ಕೇರಳದ ಸಾಗರತೀರ ವಿಶ್ವದ ಎಲ್ಲಾ ಪ್ರವಾಸಿಗರನ್ನೂ ತನ್ನತ್ತ ಕೈ ಬೀಸಿ ಕರೆಯುತ್ತದೆ, ಆಕರ್ಷಿಸುತ್ತದೆ. ಇಲ್ಲಿನ ಪ್ರಮುಖ ಸಮುದ್ರ ತಟಗಳೆಂದರೆ ಚೇರೈ, ಬೇಕ್‌, ಕಪ್ಪಡ್‌, ಕೋಲಂ, ಧರ್ಮದಂ, ಮರಾರಿ ಕೊಚ್ಚಿನ್‌, ಇತ್ಯಾದಿ.

ಫನ್‌ ಆ್ಯಕ್ಟಿವಿಟೀಸ್‌

ಫ್ರೆಂಡ್ಸ್  ಫ್ಯಾಮಿಲಿ ಜೊತೆ ಕ್ವಾಲಿಟಿ ಟೈಂ ಕಳೆಯುವುದಕ್ಕಾಗಿ ಬೀಚ್‌ಲಸ್ಯಾಂಡ್‌, ರೇನ್ ಫಾರೆಸ್ಟ್ ಯಾ ಹೌಸ್‌ಬೋಟ್‌ಗಳ ಜೊತೆಗಿಂತ ಮತ್ತಾವುದು ಬೆಟರ್‌? ಇಂಥದರಲ್ಲಿ ಕೆಲವು ಫನ್‌ ಆ್ಯಕ್ಟಿವಿಟೀಸ್‌ ಕೂಡ ಇದ್ದುಬಿಟ್ಟರೆ ಇನ್ನು ಹೇಳಲಿಕ್ಕೇನು? ಬೀಚ್‌ಸ್ಯಾಂಡ್‌ ಮೇಲೆ ಫ್ಯಾಮಿಲಿ ಕ್ರಿಕೆಟ್‌ ಟೂರ್ನಮೆಂಟ್‌, ಸ್ಲೋ ಸೈಕ್ಲಿಂಗ್‌, ಫುಟ್‌ಬಾಲ್‌ ಇತ್ಯಾದಿಗಳ ಮಜಾ ಪಡೆಯಿರಿ. ನಿಮ್ಮ ಪ್ರತಿಯೊಂದು ಕ್ಷಣಗಳನ್ನೂ ಕ್ರಮಬದ್ಧ ವಿಧಾನದಲ್ಲಿ ಫೋಟೋ ಮೂಲಕ ಸಂಗ್ರಹಿಸುತ್ತಿರಿ, ಸಾಧ್ಯವಾದರೆ ವಿಡಿಯೋ ಶೂಟ್‌ ಕೂಡ ಮಾಡಿ. ನಿಮ್ಮವರೊಂದಿಗೆ ಕಳೆದ ಈ ಅಮೂಲ್ಯ ಕ್ಷಣಗಳು ಎಂದೆಂದಿಗೂ ಅನನ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ