ಭವಿಷ್ಯ ನಿಮಗೆ ನೀಡಲಿದೆ ಏನನ್ನೂ ಕೇಳದು : ಇದೀಗ ವಿಶ್ವದೆಲ್ಲೆಡೆ ಎಂಥ ಮನೆಗಳು ಸಿಗಲಿವೆ ಎಂದರೆ, ಅಲ್ಲಿಗೆ ಹೋದ ಮೇಲೆ ನೀವು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋದಂತೆ ಅನಿಸುತ್ತದೆ. ಅಮೆರಿಕಾದ ಸೇಂಟ್‌ಪಾಲ್, ರೋರ್‌ವಿಲೆ ಹಾಗೂ ಲಿಟಿಲ್ ‌ಕೆನಡಾಗಳಲ್ಲಿ ಭೂತಾನಿನ ಸುಮಾರು 2000 ಪರಿವಾರಗಳು ಲಹೋಟ್‌ ಶಂಪಾ ಎಂಬಲ್ಲಿಂದ ಗುಳೆ ಹೊರಟು ಇಂಥ ಕಡೆ ತಲುಪಿವೆ. ಇವರುಗಳಲ್ಲಿ ಒಂದು ಪರಿವಾರಕ್ಕೆ ಸೇರಿದ ಮಂಗಳಾ, ಮಗಳು ವಂದನಾ, ಪತಿ ಗೇಬ್ರಿಯಲ್ ಮುಂತಾದವರು 10 ವರ್ಷಗಳಿಂದ ಇಲ್ಲಿ ಹಾಯಾಗಿ ನೆಲೆಸಿದ್ದಾರೆ. ಹೀಗೆ ಮೈಗ್ರೇಶನ್‌ ಹೊರಟವರ ವಿರುದ್ಧ ಹರಿಹಾಯುವುದು ಅರ್ಥಹೀನ ಹಾಗೂ ನಮ್ಮ ಸರ್ಕಾರ ಅನಗತ್ಯವಾಗಿ ಅಸ್ಸಾಂ ರಾಜ್ಯದಲ್ಲಿ ಈ ಕುರಿತು ಹುಯಿಲೆಬ್ಬಿಸಿ ಜನರ ಗಮನನ್ನು ವಿಕಾಸದಿಂದ ವಿನಾಶದತ್ತ ಕೊಂಡೊಯ್ಯುತ್ತಿದೆ.

ಕಲೆಯ ಕಮಾಲ್ ‌:  ಡ್ಯಾನ್ಸ್ ನಲ್ಲಿ ಈ ತರಹದ ಕಲಾ ಪ್ರಕಾರ ಪ್ರದರ್ಶನ  ಸುಲಭವೇನಲ್ಲ. ಆದರೆ ಫೆಸಿಫಿಕ್‌ ನಾರ್ತ್‌ ವೆಸ್ಟ್ ನ ಬ್ಯಾಲೆ ಡ್ಯಾನ್ಸರ್‌ ಲೇಟಾ ಬಿಯಾ ಸೂಚಿ ಪ್ರಕಾರ, ಮನದಲ್ಲಿ ಶ್ರದ್ಧೆ ತುಂಬಿರಲು, ಬೇರೆ ಕಡೆಯಿಂದಾದರೂ ಇರುವುದನ್ನು ಸುಧಾರಿಸಬೇಕೆಂಬ ದೃಢ ಸಂಕಲ್ಪ ತುಂಬಿರಲು, ನಿಮ್ಮ ಸ್ವಸಾಮರ್ಥ್ಯದ ಮೇಲೆ ನಂಬಿಕೆ ಇರಲು ಎಂಥ ಸ್ಪರ್ಧೆಯನ್ನಾದರೂ ಎದುರಿಸಬಹುದು. ಸಾಮಾನ್ಯವಾಗಿ ಯಶಸ್ಸಿನ ಪಿತ್ತ ನೆತ್ತಿಗೇರಿದರೆ ಎಲ್ಲ ಎಡವಟ್ಟಾಗುತ್ತದೆ.

ಇದೆಂಥ ಅದ್ಭುತ : ಫೆಮ್ ಡಿಸ್ಟ್ರೋಲ್ ನಿರ್ದೇಶಿಸಿದ ಈ ಡ್ಯಾನ್ಸ್ ಪರ್ಫಾರ್ಮೆನ್ಸ್ ಅಭಿನಯ, ಕ್ರಿಯೇಟಿವ್‌, ಸಮಕಾಲೀನ ಮೂರರ ಸಂಗಮ ಎನಿಸಿದೆ. ಡ್ಯಾನ್ಸ್ ಎಂದರೆ ಕೇವಲ ಕೈಕಾಲನ್ನು ಆಡಿಸುವುದಷ್ಟೇ ಅಲ್ಲ, ಆ ಅದ್ಭುತ ಕಲೆಯ ಮೂಲಕ ವೀಕ್ಷಕರ ಮನಗೆಲ್ಲುವುದು ಅಥವಾ ಬೆರಗಾಗಿಸುವುದು ಎಲ್ಲರ ಕೈಗೆಟುಕುವಂಥದ್ದಲ್ಲ. ಪತ್ನಿಯರು ಪತಿಯರನ್ನು ಬೆರಳ ತುದಿಯಲ್ಲೇ ಕುಣಿಸುತ್ತಾರೆ, ನಿಜ. ಆದರೆ ಅವರ ಪರ್ಫಾರ್ಮೆನ್ಸ್ ಥಿಯೇಟರ್‌ನಲ್ಲಲ್ಲ.... ಮನೆಗಷ್ಟೇ ಸೀಮಿತ.

ಇವು ಭೂತಪ್ರೇತಗಳಲ್ಲ! : ಇವು ಭೂತಪ್ರೇತಗಳಂಥ ಡ್ರೆಸ್‌ ಅಷ್ಟೇ ಹೊರತು ಅಂಥವು ಮಸಣದಿಂದ ಎದ್ದುಬಂದಿಲ್ಲ. ಅಮೆರಿಕಾದಲ್ಲಿ ಇತ್ತೀಚೆಗೆ ನಡೆದ ಹ್ಯಾಲೋವೀನ್‌ ಉತ್ಸವದಲ್ಲಿ ಈ ತರಹದ ಚಿತ್ರವಿಚಿತ್ರ ಡ್ರೆಸೆಸ್‌ ಧರಿಸಿ ಅಲ್ಲಿನವರು ಸಂಭ್ರಮಿಸಿದರು. ನಡುರಾತ್ರಿಯಲ್ಲಿ ಇಂಥ ಅವತಾರದಲ್ಲಿ ದಿಢೀರ್‌ ಎಂದು ಯಾರಾದರೂ ವಕ್ರಿಸಿದರೆ, ಯಾರ ಗುಂಡಿಗೆ ತಾನೇ ಬಾಯಿಗೆ ಬರದು....!

ಮೋಜು ಮಸ್ತಿಗಾಗಿ ಜವಾಬ್ದಾರಿಗೆ ಟಾಟಾ : ಕ್ರೆಮಿಲಾ ಕೆಬೆಲೋ ಸ್ಪ್ಯಾನಿಶ್‌ ಮೂಲದ 21 ವರ್ಷದ ಖ್ಯಾತ ಗಾಯಕಿ. ಆಕೆಯ ಮೊದಲ ವಿಡಿಯೋ ಬ್ಲಾಕ್‌ ಬಸ್ಟರ್‌ ಎಂಬಂತೆ ಮಾರಾಟವಾಯಿತು. ಇದೀಗ ಆಕೆ ಪ್ರೆಗ್ನೆಂಟ್‌ ಎಂದು ಎಲ್ಲೆಲ್ಲೂ ಗಾಳಿಮಾತು ಹರಡಿದೆ. ಹೌದೋ ಅಲ್ಲವೋ..... ಅವಳಂತೂ ಇದನ್ನು ಸಾರಾಸಗಟಾಗಿ ಅಲ್ಲಗಳೆದಿದ್ದಾಳೆ. ಕೆರಿಯರ್‌ನ ಆರಂಭದಲ್ಲೇ ಯಾರಾದರೂ ಮದುವೆ ಅಥವಾ ಇಂಥ ಎಡವಟ್ಟು ಮಾಡಿಕೊಂಡರೆ ಅವರು ಉದ್ಧಾರ ಆಗೋದು ಹೇಗೆ? ವಿಶ್ವದೆಲ್ಲೆಡೆ ಹೆಂಗಸರು ಹೆಸರು ಗಳಿಸಲು ಇಂಥ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಯಸುತ್ತಾರೆ.

ಕ್ರೋಧಂ ಅನರ್ಥ ಸಾಧನಂ : ಮಾಸ್‌ ಮರ್ಡರ್‌ಗಳನ್ನು ಭಯೋತ್ಪಾದಕರಷ್ಟೇ ಮಾಡುವುದಿಲ್ಲ, ಅತಿಯಾದ ಕೋಪಿಷ್ಟರೂ ಮಾಡುತ್ತಾರೆ. ಅಮೆರಿಕಾದ, ದಕ್ಷಿಣ ಕೆರೋಲಿನಾ ಪ್ರಾಂತ್ಯದ ಜೇಮ್ಸ್ ಕೆಸ್ಟರ್‌ ಎಂಬಾತ ಅತಿ ಕೋಪದಲ್ಲಿ, ಸಿಟಿ ಆಫೀಸ್‌ನಲ್ಲಿ ಕೆಲಸಕ್ಕಿದ್ದ ಒಬ್ಬ ಹೆಂಗಸಿನ ಸಾವಿಗೆ ಬಂದಿದ್ದ ನೆಂಟರಿಷ್ಟರ ಮೇಲೆ ಕಾರು ಹತ್ತಿಸಿದ್ದಾನೆ! ಈ ಪ್ರಕರಣದಲ್ಲಿ ನೆಂಟರಿಷ್ಟರ ಯಾವುದೋ ನಿರ್ಧಾರ ಈತನಿಗೆ ಇಷ್ಟವಾಗಿರಲಿಲ್ಲ. 11 ಜನರ ಬದುಕು ಸಾವಿನಂಚಿನಲ್ಲಿದೆ. ಹೀಗಾಗಿ ಜಡ್ಜ್ ಸಾಹೇಬರು ಈತನಿಗೆ 80 ಸುದೀರ್ಘ ವರ್ಷಗಳ ಶಿಕ್ಷೆ ವಿಧಿಸಿದರಂತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ