ಪ್ರತಿದಿನದ ಮುಂಜಾನೆಯ ಹಾಗೆ ಇವತ್ತು ಕೂಡ ಸುಮೇಧಾಗೆ ಸಾಕಷ್ಟು ಗಡಿಬಿಡಿಯಿಂದ ಕೂಡಿತ್ತು. ಗಂಡ, ಇಬ್ಬರು ಮಕ್ಕಳು, ಅತ್ತೆ ಮಾವ ಮತ್ತು ಸ್ವತಃ ತನಗಾಗಿ ಉಪಾಹಾರ ಸಿದ್ಧಪಡಿಸಿಕೊಳ್ಳಬೇಕಿತ್ತು. ಈ ಕಾರಣದಿಂದ ಅಡುಗೆಮನೆಯಿಂದ ಡೈನಿಂಗ್‌ಟೇಬಲ್ ತನಕ ಮುಂಜಾನೆಯಿಂದ ಈವರೆಗೆ ಏನಿಲ್ಲವೆಂದರೂ 15-20 ಸಲ ಸುತ್ತಾಡಿದ್ದಳು. ಗಡಿಬಿಡಿಯಾಗಿ ಅದೆಷ್ಟೋ ಸಲ ಆಕೆಯ ಕಾಲುಗಳು ಜಾರುವ ಸ್ಥಿತಿಯಲ್ಲಿದ್ದವು. ಆದರೂ ಆಕೆ ಸಂಭಾಳಿಸಿಕೊಂಡು ಓಡಾಡುತ್ತಿದ್ದಳು.

ಮನೆಯ ಕೆಲಸದ ಜೊತೆಗೆ ಆಫೀಸಿಗೆ ಹೋಗಬೇಕೆಂಬ ಧಾವಂತ ಆಕೆಗೆ ಅಡುಗೆ ಮನೆಗೆಲಸಗಳನ್ನು ಬೇಗ ಬೇಗನೇ ಮುಗಿಸಲೇಬೇಕೆಂಬ ಒತ್ತಡಕ್ಕೆ ಸಿಲುಕಿಸಿದ್ದವು. ಗಡಿಬಿಡಿಯಲ್ಲಿ ಆಕೆಯ ಕೈಗಳು ಯಾವಾಗ ಒಲೆಯ ಮೇಲೆ ಇಟ್ಟಿದ್ದ ಪಾತ್ರೆಯನ್ನು ಮುಟ್ಟಿದ್ದೇ ಗೊತ್ತಾಗಲಿಲ್ಲ. ಕೈಯಲ್ಲೆಲ್ಲ ಗುಳ್ಳೆಗಳು ಎದ್ದವು. ಆಫೀಸಿಗೆ ಹೋಗುವುದಿರಲಿ, ಆಕೆಗೆ 4-5 ದಿನಗಳ ಕಾಲ ಮನೆಗೆಲಸಗಳನ್ನು ಮಾಡುವುದೂ ಕಷ್ಟಕರವಾಯಿತು.

ಸುಮೇಧಾಳಂತೆ ಅದೆಷ್ಟೋ ಮಹಿಳೆಯರು, ಅಡುಗೆಮನೆಯಲ್ಲಿ ಸಂಭವಿಸುವ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಮನೆಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಸಂಬಂಧಪಟ್ಟಂತೆ ನಡೆಸಿದ ಒಂದು ಅಧ್ಯಯನ ಕೂಡ ಇದೇ ಸಂಗತಿಯನ್ನು ಬಿಂಬಿಸುತ್ತದೆ.

ಅಧ್ಯಯನದ ಪ್ರಕಾರ, ಶೇ.46ರಷ್ಟು ಮನೆಗಳಲ್ಲಿ ಸಂಭವಿಸುವ ಅಪಘಾತಗಳು ಮುಂಜಾನೆ ಹೊತ್ತಿನಲ್ಲಿಯೇ ಸಂಭವಿಸುತ್ತವೆ. ಅದರಲ್ಲಿ ಶೇ.66ರಷ್ಟು ಮಹಿಳೆಯರೇ ಗಾಯಗೊಳ್ಳುತ್ತಾರೆ. ಅಧ್ಯಯನದಲ್ಲಿ ಉಲ್ಲೇಖಿಸಲಾದ ಒಂದು ಗಮನಾರ್ಹ ಸಂಗತಿಯೇನೆಂದರೆ ಹೆಚ್ಚಿನ ಅಪಘಾತಗಳು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಘಟಿಸುತ್ತವೆ. ಅಂದಹಾಗೆ ಅಡುಗೆಮನೆಯ ಕೆಲಸಗಳನ್ನು ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಡುತ್ತಾರೆ. ಈ ಕಾರಣದಿಂದ ಅಡುಗೆಮನೆಗೆ ಸಂಬಂಧಪಟ್ಟ ದುರ್ಘಟನೆಗಳಲ್ಲಿ ಮಹಿಳೆಯರ ಪಾಲೇ ಅಧಿಕ ಸಂಖ್ಯೆಯಲ್ಲಿರುತ್ತದೆ.

ಈ ತೆರನಾದ ಅಪಘಾತಗಳಿಂದ ರಕ್ಷಿಸಿಕೊಳ್ಳಲು ಕೆಲವೊಂದು ಸಲಹೆಗಳು :

ಸ್ವಚ್ಛತೆ ದುರ್ಘಟನೆಗಳಿಗೆ ಕಡಿವಾಣ

ಅಡುಗೆಮನೆ ಸ್ವಚ್ಛತೆಯಿಂದ ಕೂಡಿದ್ದರೆ, ಅನೇಕ ಅಪಘಾತಗಳನ್ನು ತಡೆಯಬಹುದು. ಉದಾಹರಣೆಗೆ ಚಿಮಣಿಯ ಸ್ವಚ್ಛತೆಯನ್ನೇ ತೆಗೆದುಕೊಳ್ಳಿ. ಅದರಲ್ಲಿ ಬಹುಬೇಗ ಸ್ನಿಗ್ಧ ಪದಾರ್ಥ ಜಮೆಗೊಳ್ಳುತ್ತದೆ. ಅದನ್ನು ಮೇಲಿನಿಂದ ಮೇಲೆ ಸ್ವಚ್ಛಗೊಳಿಸದೇ ಇದ್ದರೆ, ಅದೇ ಸ್ನಿಗ್ಧತೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿ ದೊಡ್ಡ ದುರ್ಘಟನೆಯೇ ಸಂಭವಿಸಬಹುದು.

ಅದರ ಹೊರತಾಗಿ ಅಡುಗೆಮನೆಯ ನೆಲ ಸ್ವಚ್ಛವಾಗಿರುವುದು ಅತ್ಯವಶ್ಯ. ಅದರಿಂದ ಹಲವು ಅಪಘಾತಗಳನ್ನು ತಡೆಗಟ್ಟಬಹುದು. ಈ ಕುರಿತಂತೆ ರಿಯಾಲಿಟಿ ಶೋ `ಮಾಸ್ಟರ್‌ ಶೆಫ್ಸ್'ನ ಟಾಪ್‌ ಫೈನಲಿಸ್ಟ್ ವಿಜಯಲಕ್ಷ್ಮಿ ಹೀಗೆ ಹೇಳುತ್ತಾರೆ, ``ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ನೆಲದ ಮೇಲೆ ನೀವೇನಾದರೂ ಬಿದ್ದರೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ನೀರನ್ನು ಒರೆಸುವ ಕೆಲಸ ಮಾಡಬೇಕು. ಏಕೆಂದರೆ ನೀರು ಬಿದ್ದ ಜಾಗದ ಮೇಲೆ ಕಾಲಿಟ್ಟರೆ, ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೈಯಲ್ಲಿ ಬಿಸಿ ಪಾತ್ರೆ ಅಥವಾ ಭಾರವಾದ ವಸ್ತು ಏನಾದರೂ ಇದ್ದರೆ ಹೆಚ್ಚು ಪೆಟ್ಟು ತಗುಲುವ ಸಾಧ್ಯತೆ ಇರುತ್ತದೆ.''

ಒದ್ದೆ ನೆಲದ ಮೇಲೆ ಜಾರುವುದರ ಹೊರತಾಗಿ ಅಡುಗೆಮನೆಯಲ್ಲಿ ಜಾರಿ ಬೀಳಲು ಇನ್ನೂ ಅನೇಕ ಕಾರಣಗಳಿರಬಹುದು. ಅವೆಂದರೆ ಅಡುಗೆಮನೆಯಲ್ಲಿ ಎತ್ತರದ ಜಾಗದಲ್ಲಿ ಇಟ್ಟ ಸಾಮಾನುಗಳನ್ನು ಕೆಳಗಿಳಿಸಲು ಯಾವಾಗಲೂ ಏಣಿಯನ್ನು ಬಳಸಿ. ಕುರ್ಚಿ ಅಥವಾ ಮೇಜಿನ ಮೇಲೆ ಖಂಡಿತ ನಂಬಿಕೆ ಇಡಬೇಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ