ನರೇಂದ್ರ ಮೋದಿಯವರ ಸಾವಿರ ಭಾಷಣಗಳ ದಾವೆಯ ನಡುವೆಯೂ, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಕಾಟ ಕಡಿಮೆ ಆಗಿಲ್ಲ ಹಾಗೂ ಕಲಂ 370 ಬಹುಶಃ ಸಡಿಲ ಆಗಿರುವಂತಿದೆ, ಆದರೆ ಅಲ್ಲಿ ಭಯೋತ್ಪಾದಕರಂತೂ ಖಂಡಿತಾ ಕಡಿಮೆಯಾಗಿಲ್ಲ. ಕಳೆದ ನವೆಂಬರ್ ಕೊನೆಯ ವಾರದಲ್ಲಿ ಭಯೋತ್ಪಾದಕರ ದಾಳಿ ಸತತ ಮುಂದುವರಿದಿತ್ತು. ಅವರು ಪ್ಯಾರಾಟ್ರೂಪರ್ ಸಚಿನ್ ವಾರ್ ಮತ್ತು ಕ್ಯಾಪ್ಟನ್ ಎಂ.ವಿ. ಪ್ರಾಂಜ್, ಕ್ಯಾಪ್ಟನ್ ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜೀದ್ ಹಾಗೂ ಲಾನ್ಸ್ ನಾಯಕ್ ಸಂಜಯ್ ಬಿಷ್ಟ್ ರನ್ನು ನಿರ್ದಯವಾಗಿ ಕೊಂದಿದ್ದಾರೆ.
ಸರ್ಕಾರ ಸಂವಿಧಾನದ ಕಲಂ 370 ಜೊತೆ ಹೀಗೆ ಮಾಡಬಾರದಿತ್ತು, ನಮ್ಮ ದೇಶದ ಯಾವ ಸೈನಿಕರೂ ಭಯೋತ್ಪಾದಕರಿಂದ ಸಾಯದೆ ಇದ್ದಾಗ ಮಾತ್ರ, ಈ ಕ್ರಮ ಯಶಸ್ವಿ ಎನ್ನಬಹುದಿತ್ತು. ಈಗ ಸೈನಿಕರಷ್ಟೇ ಸತ್ತಿದ್ದಾರೆ, ಈ ಹಾಳು ಭಯೋತ್ಪಾದಕರು ಸಾಮಾನ್ಯ ಜನರನ್ನು ಉಳಿಸುತ್ತಾರೆಂದು ಏನು ಗ್ಯಾರಂಟಿ? ವ್ಯತ್ಯಾಸ ಇಷ್ಟೆ, ಮೋದಿಮಯಂ ಆಗಿರುವ ಮೀಡಿಯಾ ಇಂಥ ಸುದ್ದಿ ಬಿತ್ತರಿಸುವ ಬದಲಿಗೆ, ಇಸ್ರೇಲ್ V/S ಗಾಝಾದ ಯುದ್ಧ ತೋರಿಸುತ್ತಿರುತ್ತದೆ, ಚುನಾವಣೆಯ ಪ್ರಚಾರದ ಭರಾಟೆ ಇದ್ದೇ ಇರುತ್ತದೆ.

ಇಲ್ಲಿನ ವಿಡಂಬನೆ ಎಂದರೆ, ಪ್ರತಿ ಸೈನಿಕರ ದುಃಖಾಂತ್ಯದ ನಂತರ ಬಿಜೆಪಿ ನೇತಾರರು, ಫೋಟೋಗ್ರಾಫರ್ ಗಳ ದಂಡು ಕಟ್ಟಿಕೊಂಡು, ಹುತಾತ್ಮರ ಮನೆಗೆ ಚೆಕ್ ಕೊಂಡು ಹೋಗುತ್ತಾರೆ ಹಾಗೂ ಸತ್ತರ ದುಃಖ ಸಂಕಟಗಳನ್ನು ತಮ್ಮ ಪಬ್ಲಿಸಿಟಿಯ ಅಸ್ತ್ರವಾಗಿಸಿಕೊಳ್ಳುತ್ತಾರೆ. ಈ ನೇತಾರರು ಹುತಾತ್ಮನ ಪತ್ನಿ, ತಾಯಿ, ತಂಗಿಯರಿಗೆ ಚೆಕ್ ಕೊಡುತ್ತಾ, ತಾವು ಪೋಸ್ ನೀಡುತ್ತಾ ನಿಂತುಬಿಡುತ್ತಾರೆ. ತಾವು ಹುತಾತ್ಮರಿಗೆ ಎಂಥ ಮಹಾನ್ ಸಹಾಯ ಮಾಡುತ್ತಿದ್ದೇವೆ ಎಂದು ಜನತೆ ಎದುರು ಬೀಗುತ್ತಾರೆ. 2-3 ತಿಂಗಳ ನಂತರ ಮೃತ ಸೈನಿಕರ ಪರಿವಾರದವರ ಜೊತೆ ಏನು ನಡೆಯಿತು ಎಂದು ಯಾರಿಗೂ ಏನೂ ಗೊತ್ತಾಗೋಲ್ಲ, ಏಕೆಂದರೆ ಮಿಲಿಟರಿ ಕಛೇರಿಗಳಲ್ಲಿ ಕಾನೂನಿನ ಶಾಸನ ಅಷ್ಟು ಕಠೋರವಾಗಿರುತ್ತದೆ.
ದೊಡ್ಡ ವಿಷಯ ಅಂದ್ರೆ, ಕಲಂ 370 ತೊಲಗಿದ ನಂತರ ಭಯೋತ್ಪಾದಕರಿಗೆ ಅಲ್ಲೇನು ಕೆಲಸ? ಬಿಜೆಪಿ ಸದಾ ಪ್ರಚಾರ ಮಾಡುವುದೆಂದರೆ, ಭಯೋತ್ಪಾದನೆಯ ಬುಡದಲ್ಲೇ ಈ ಕಲಂ 370 ಇದೆ, ಇದನ್ನು ಕಿತ್ತು ಹಾಕಿದ ನಂತರ ನಮ್ಮ ಸೈನಿಕರು ಹೀಗೆ ಸಾಯಬೇಕೇಕೆ? ಹಾಗಾದರೆ ಇಲ್ಲಿನ ಮುಖ್ಯ ದೋಷ ಈ ಪ್ರಚಾರದ್ದೇ ಆಗಿದೆ. ಇದನ್ನು ಅಚ್ಚುಕಟ್ಟಾಗಿ ರೂಪಿಸಿ, ಟಿವಿಗಳಲ್ಲಿ ಪ್ರದರ್ಶಿಸುವ ಪರಿಯನ್ನು ನೋಡಬೇಕು!
ಹೀಗೆ ಸೇನೆಯಲ್ಲಿ ನೌಕರಿಗೆಂದು ಸೇರುವವರು ಘಳಿಗೆಗೊಂಡು ಗಂಡಾಂತರ ಎದುರಿಸುತ್ತಾ, ಅಂಗೈಯಲ್ಲೇ ಪ್ರಾಣ ಹಿಡಿದುಕೊಂಡು ಇರಬೇಕಾಗುತ್ತದೆ. ಅವರಿಗೂ ಸಹ ತಮ್ಮ ಸರ್ಕಾರ ತಮಗೆ ಸಮರ್ಪಕ ಸಮರ್ಥನೆ ನೀಡಲಿ ಎಂದಿರುವುದಿಲ್ಲವೇ? ಇವರ ಸಾವಿಗೆ ಜನತೆ ಕಣ್ಣೀರು ಮಿಡಿಯುವುದು ಸರಿ, ಆದರೆ ಇದನ್ನೇ ಪ್ರಚಾರದ ಅಸ್ತ್ರ ಮಾಡಿಕೊಂಡರೆ.....? ದೊಡ್ಡದಾಗಿ ಭಾಷಣಗಳಲ್ಲಿ ಮಾತ್ರ ಭಯೋತ್ಪಾದನೆ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಘೋಷಿಸುವುದು ತಪ್ಪುತ್ತಿಲ್ಲ. ಇದೀಗ ಆ ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ, ಇದರಿಂದ ಸೈನಿಕರ ಮನೆಯವರು ನೆಮ್ಮದಿಯಾಗಿರಿ ಎಂದು ಹೇಳುವುದಷ್ಟೆ. ಆದರೆ ಮಗನ ಹೆಣ ಮನೆಗೆ ಬಂದಾಗ ಮಾತ್ರ ಆ ಮನೆಯವರ ಸಂಕಟ ಮುಗಿಲು ಮುಟ್ಟುತ್ತದೆ.





