ಫೆಸ್ಟಿವಲ್ ‌ಸೀಸನ್‌ ಸಂತಸದ ವಾತಾವರಣ ತರುತ್ತದೆ. ಹೀಗಿರುವಾಗ ಕಾರ್ಪೋರೇಟ್‌ ವರ್ಲ್ಡ್ ಕೂಡ ಈ ಪರಿಸ್ಥಿತಿಯನ್ನು ಇನ್ನೂ ಹೆಚ್ಚು ಸಂತಸಮಯವನ್ನಾಗಿ ಮಾಡಿ ಬಿಸ್‌ನೆಸ್‌ ಹೆಚ್ಚಿಸಲು ಬಯಸುತ್ತದೆ. ಫೆಸ್ಟಿವಲ್‌ನ ಈ ಸೀಸನ್‌ನಲ್ಲಿ ಮನೆಗಳು, ಫ್ಲ್ಯಾಟ್‌ಗಳು ಮತ್ತು ಕಾರುಗಳು ಖರೀದಿಸಲ್ಪಡುತ್ತವೆ. ಕಾರ್ಪೋರೇಟ್‌ ವರ್ಲ್ಡ್ ಹೆಚ್ಚಾಗಿ 30-40 ವರ್ಷದ ಜನರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತನ್ನ ಯೋಜನೆ ಮಾಡುತ್ತದೆ. ಆ ವಯಸ್ಸಿನವರು ತಮ್ಮ ಮನೆಗಳನ್ನು ಅಲಂಕರಿಸಲು ಇಚ್ಛಿಸುತ್ತಾರೆ. ಉದ್ಯೋಗಸ್ಥರಾದ ಅಂತಹವರು ಒಂದೇ ಕಂತಿನಲ್ಲಿ ಹಣ ಕೊಡಲು ಸಾಧ್ಯವಾಗುವುದಿಲ್ಲ. ಆಗ ಅವರು ಬಹಳಷ್ಟು ಸಣ್ಣಪುಟ್ಟ ವಸ್ತುಗಳನ್ನು ಇಎಂಐ ಅಂದ್ರೆ ಈಸಿ ಮಂಥ್ಲಿ ಇನ್‌ಸ್ಟಾಲ್‌ಮೆಂಟ್‌ನಲ್ಲಿ ತೆಗೆದುಕೊಳ್ಳುತ್ತಾರೆ. ಬಿಸ್‌ನೆಸ್ ಮಾಡುವವರು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ದೀಪಾವಳಿಯಲ್ಲಿ ಇಂತಹ ಆಫರ್‌ ತರುತ್ತಾರೆ. 20-30 ಸಾವಿರ ರೂ.ಗಳ ವಸ್ತುಗಳನ್ನು ಹಲವಾರು ಬಾರಿ ಬಡ್ಡಿಯನ್ನು ವಜಾ ಮಾಡಲಾಗುತ್ತದೆ. ಬರೀ ಕಾರ್ಪೋರೇಟ್‌ ವರ್ಲ್ಡ್ ಅಷ್ಟೇ ಅಲ್ಲ, ಬ್ಯಾಂಕುಗಳು ಕೂಡ ಅಂತಹ ಸಂದರ್ಭಗಳ ಲಾಭ ಪಡೆಯಲು ಮನೆಗಳು ಹಾಗೂ ಫ್ಲ್ಯಾಟ್‌ಗಳ ಇಎಂಐಯನ್ನು ಅಗ್ಗವಾಗಿ ಮಾಡುತ್ತವೆ. ಇನ್ನು ಕೆಲವು ತಮ್ಮ ಪ್ರೋಸೆಸಿಂಗ್‌ ಫೀಸ್‌ನ್ನು ಝೀರೋ ಮಾಡುತ್ತವೆ. ಈ ದೀಪಾವಳಿಯಲ್ಲಿ ಹೋಮ್ ಲೋನ್ ಮತ್ತು ಅದರ ಇಎಂಐ ಬಗ್ಗೆ ಬ್ಯಾಂಕ್‌ ಹೊಸ ಆಫರ್‌ಗಳನ್ನು ಕೊಡಬಹುದೆಂದು ಭರವಸೆ ಇಟ್ಟುಕೊಳ್ಳಬಹುದು.

ಕಾರ್ಲೋನ್ ಆಫರ್ತಿಳಿದುಕೊಳ್ಳಿ

5 ಲಕ್ಷಕ್ಕಿಂತ ಹೆಚ್ಚು ಬೆಲೆಯ ಕಾರುಗಳು ದುಬಾರಿಯಾದ್ದರಿಂದ ಅವುಗಳ ಇಎಂಐನಲ್ಲೂ ಬದಲಾವಣೆ ಆಗಬಹುದು. ಹೀಗಿರುವಾಗ ದೀಪಾವಳಿಯಲ್ಲಿ ಕಾರು ಲೋನ್‌ನ ಇಎಂಐ ತೆಗೆದುಕೊಳ್ಳುವ ಮೊದಲು ಸರಿಯಾಗಿ ಪರೀಕ್ಷಿಸಿ ನೋಡಿ. ಹೋಮ್ ಲೋ‌ನ್‌ ನಂತರ ಹೆಚ್ಚು ಇಎಂಐ ಕಾರು ಲೋನ್‌ಗೇ ಹೋಗುತ್ತದೆ. ಕಾರು ಮಾರುವ ಡೀಲರ್‌ಗಳು ಈ ವಿಷಯವನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ಫೆಸ್ಟಿವಲ್ ‌ಆಫರ್‌ನಲ್ಲಿ ಎಂತಹ ಘೋಷಣೆ ಮಾಡುತ್ತಾರೆಂದರೆ ದುಬಾರಿಯಾದರೂ ಕಾರು ಖರೀದಿಸುವುದು ಜನಸಾಮಾನ್ಯರ ಜೇಬಿಗೆ ಹೊರೆಯಾಗುವುದಿಲ್ಲ. ಮಾರುಕಟ್ಟೆ ತಜ್ಞರು ಹೇಳುವುದೇನೆಂದರೆ ಬೆಲೆಯೇರಿಕೆ ಹಬ್ಬಗಳ ಮೋಜಿಗೆ ಕಿರಿಕಿರಿಯುಂಟು ಮಾಡುತ್ತವೆ. ಆದ್ದರಿಂದ ಇತರ ವಸ್ತುಗಳಾದ ಎ.ಸಿ., ದುಬಾರಿ ಮೊಬೈಲ್‌, ಫ್ರಿಜ್‌, ಫರ್ನೀಚರ್‌, ಎಲ್ಇಡಿ ಟಿ.ವಿ., ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ಗೂ ಇಎಂಐ ಪಡೆಯಲಾಗುವುದು.

ಮಾರುಕಟ್ಟೆ ತಜ್ಞರು ಹೇಳುವುದೇನೆಂದರೆ ಈಗ ಜನರಿಗೆ ಹಣ ಉಳಿಸಿ ಯಾವುದಾದರೂ ವಸ್ತು ಖರೀದಿಸಲು ಸಮಯವಿಲ್ಲ. ಅವರು ವಸ್ತುಗಳನ್ನು ಖರೀದಿಸಿ ಕಂತುಗಳಲ್ಲಿ ತೀರಿಸುತ್ತಿದ್ದಾರರೆ. ಹೀಗಿರುವಾಗ ಇಎಂಐ ಅತ್ಯಂತ ಅಗತ್ಯ. ಉತ್ಪನ್ನಗಳನ್ನು ಮಾರುವ ಕಂಪನಿಗಳೂ ಸಹ ಇಎಂಐಯನ್ನು ಸುಲಭ ಮಾಡುತ್ತಿವೆ. ಫೆಸ್ಟಿವಲ್ ‌ಸಮಯದಲ್ಲಿ ಇಂತಹ ಬಹಳಷ್ಟು ಆಫರ್‌ಗಳನ್ನು ಪ್ರಚಾರಕ್ಕೆ ತಯರಾಗುತ್ತದೆ.

ಅಸೋಚೆಮ್ ನ ಡೈರೆಕ್ಟರ್‌ ಜನರಲ್ ಡಿ.ಎಸ್‌. ರಾವತ್‌ ಹೀಗೆ ಹೇಳುತ್ತಾರೆ. ``ಬೆಲೆಯೇರಿಕೆಯಿಂದ ಜನರಲ್ಲಿ ವಸ್ತುಗಳನ್ನು ಕೊಳ್ಳುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಕಂಪನಿಗಳು ಆ ನಷ್ಟವನ್ನು ತಡೆದುಕೊಳ್ಳಬೇಕು. ಕಂಪನಿಗಳು ಮತ್ತು ಮಾರುಕಟ್ಟೆ ಎರಡಕ್ಕೂ ಬೆಲೆಯೇರಿಕೆ ನಷ್ಟವುಂಟು ಮಾಡುತ್ತದೆ. ಈ ನಷ್ಟವನ್ನು ತಡೆಯುವಲ್ಲಿ ಇಎಂಐ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇಎಂಐ ಮೂಲಕ ಪೂರ್ತಿ ಹಣ ಕೊಡದಿದ್ದರೂ ವಸ್ತುವನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು. ಅದರಿಂದ ಹಬ್ಬದ ಮೋಜೂ ಸಿಗುತ್ತದೆ ಜೇಬಿಗೂ ಹೊರೆಯಾಗಿರುವುದಿಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ