ಮನೆ ದೊಡ್ಡದು ಅಥವಾ ಚಿಕ್ಕದಿರಲಿ, ಮನೆಯವರೆಲ್ಲರೂ ಕೈಗೂಡಿಸಿದರೆ ಮಾತ್ರ ಈ ಕೆಲಸ ಸುಲಭಸಾಧ್ಯ. ಹಬ್ಬದ ಗಡಿಬಿಡಿಯ ಸಂದರ್ಭದಲ್ಲಿ ಪ್ರತಿ ಕೋಣೆಯನ್ನೂ ವಿಭಿನ್ನವಾಗಿಯೇ ಕ್ಲೀನ್‌ ಮಾಡಬೇಕಾಗುತ್ತದೆ. ಅಂದರೆ ಅಡುಗೆಮನೆ ಅಥವಾ ಬಾತ್‌ರೂಂ, ಬೆಡ್‌ರೂಂ ಅಥವಾ ಡೈನಿಂಗ್‌ ರೂಂ ಇತ್ಯಾದಿಗಳನ್ನು ಬೇರೆ ಬೇರೆ ವಿಧಾನಗಳಲ್ಲೇ ಶುಚಿಗೊಳಿಸಬೇಕು. ಇದನ್ನು ಎಚ್ಚರಿಕೆಯಿಂದ ಮಾಡದಿದ್ದರೆ ಮನೆಯಲ್ಲಿ ಹೆಚ್ಚಾಗುವ ಕೀಟಾಣುಗಳು ಇಡೀ ಕುಟುಂಬದ ಆರೋಗ್ಯ ಹದಗೆಡಿಸುತ್ತವೆ.

ಸ್ಟೀಂ ಕ್ಲೀನಿಂಗ್

ಸಾಮಾನ್ಯವಾಗಿ ಗೃಹಿಣಿಯರು ನೀರಿಗೆ ಕೆಮಿಕಲ್ಸ್, ಸೋಪ್‌ ಪೌಡರ್‌, ಕಾಸ್ಟಿಕ್‌ ಸೋಡ ಬಳಸುತ್ತಾರೆ. ಈ ವಸ್ತುಗಳ ಸತತ ಉಜ್ಜುವಿಕೆಯಿಂದ ಮನೆಗೆ ಹೊಳಪನ್ನೇನೋ ತರಬಹುದು, ಆದರೆ ಮನೆ ಪೂರ್ತಿಯಾಗಿ ಸ್ವಚ್ಛಗೊಳ್ಳುತ್ತದೆ ಎಂದೇನೂ ಗ್ಯಾರಂಟಿ ಇಲ್ಲ. ಆದರೆ ಸ್ಟೀಂ ಕ್ಲೀನರ್ಸ್‌ ಮಾತ್ರ 99.9% ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತವೆ. ಇದರಲ್ಲಿನ ವೈಶಿಷ್ಟ್ಯವೆಂದರೆ ಕುದಿ ನೀರಿನಿಂದ 1000 ಸೆ. ತಾಪಮಾನದಲ್ಲಿ ಆವಿ ತಯಾರಿಸಿ ಅದರಿಂದ ಕೊಳೆಯನ್ನು ಶುಚಿಗೊಳಿಸುತ್ತದೆ. ಸ್ಟೀಂ ಕ್ಲೀನಿಂಗ್‌ಗೆ ಆಧಾರ ಕಾರ್ಚರ್‌ ಸ್ಟೀಂ ಕ್ಲೀನಿಂಗ್‌ ಸಿಸ್ಟಂ ಜೊತೆ ಮಲ್ಟಿಪಲ್ ಆ್ಯಕ್ಸೆಸರೀಸ್‌ ದೊರಕುತ್ತದೆ, ಇವನ್ನು ವಿಭಿನ್ನ ವಿಧಾನಗಳಿಂದ ಗೃಹೋಪಕರಣಗಳ ಬೇರೆ ಬೇರೆ ಭಾಗಗಳನ್ನು ಶುಚಿಗೊಳಿಸಬಹುದು.

ನಾಝಲ್ಸ್ : ಇವನ್ನು ಕೊಳೆಯಾದ ಅತಿ ಗಟ್ಟಿ ಜಾಗಗಳನ್ನು ಶುಭ್ರಗೊಳಿಸಲು ಬಳಸುತ್ತಾರೆ. ಉದಾ: ಮನೆಯ ನೆಲ. ನಡು ಬಗ್ಗಿಸಿ ನೆಲ ಗುಡಿಸುವುದು, ಸಾರಿಸುವುದು ಪ್ರತಿಯೊಬ್ಬರ ಕೈಲೂ ಆಗುವಂಥ ಕೆಲಸಗಳಲ್ಲ. ಇದರಲ್ಲಿ ಕೊಳೆ ಒಂದು ಹಂತದವರೆಗಷ್ಟೇ ಶುಭ್ರಗೊಳ್ಳುತ್ತದೆ. ಆದರೆ ಸ್ಟೀಂ ನಾಝಲ್ ಆವಿಯಿಂದ ನೆಲದ ಸ್ವಚ್ಛತೆ ನಿಮಗೆ ಎದ್ದು ಕಾಣಿಸುತ್ತದೆ.

ಬ್ರಶ್ಅಟ್ಯಾಚ್ಮೆಂಟ್ಸ್ : ಸಿಂಕ್‌ಕಿಚನ್‌ ಸ್ಲಾಬ್ಸ್ ನ್ನು ಶುಚಿಗೊಳಿಸಲು ಈಗ ನಿಮ್ಮ ಕೈಗಳನ್ನು ತಿಕ್ಕಿ ತಿಕ್ಕಿ ನೋಯಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಸ್ಟೀಂ ಕ್ಲೀನಿಂಗ್‌ ಸಿಸ್ಟಂನಲ್ಲಿ ಬ್ರಶ್‌ ಅಟ್ಯಾಚ್‌ಮೆಂಟ್ಸ್ ಸಹ ಇರುತ್ತವೆ, ಇವು ಸುಲಭವಾಗಿ ಸಿಂಕ್‌ಸ್ಲಾಬ್ಸ್ ನ್ನು ಶುಭ್ರಗೊಳಿಸುತ್ತವೆ.

ಸ್ಟೀಂ ಹೌಸೆಸ್‌ : ಸಾಮಾನ್ಯವಾಗಿ ಬಾತ್‌ರೂಮುಗಳಲ್ಲಿ ಟೈಲ್ಸ್ ಇದ್ದೇ ಇರುತ್ತವೆ. ಬಾತ್‌ರೂಮನ್ನು ಶುಚಿಗೊಳಿಸುವುದಕ್ಕಿಂತ ಅಸಲಿಗೆ ಟೈಲ್ಸ್ ನಡುವಿನ ಸೀಳಿನಲ್ಲಿ ಹೆಚ್ಚು ಕೊಳೆ ಜಮೆಗೊಂಡಿರುತ್ತದೆ. ಇಂಥ ಕೊಳೆಯ ನಿವಾರಣೆಗೆ ಸ್ಟೀಂ ಹೌಸೆಸ್‌ ಪರ್ಫೆಕ್ಟ್ ಸಾಧನವಾಗಿದೆ.

ಕ್ಲಾತ್ಕಿಟ್‌ : ಓವನ್‌, ಫ್ರಿಜ್‌, ಮಿರರ್‌ಗಳನ್ನು ಶುಭ್ರಗೊಳಿಸಲು ಬಟ್ಟೆ ಇಲ್ಲದಿದ್ದರೆ ಆಗುವುದಿಲ್ಲ. ಸ್ಟೀಂ ಕ್ಲೀನಿಂಗ್‌ ಸಿಸ್ಟಂನ ಕ್ಲಾತ್ ಕಿಟ್‌, ಇಂಥ ವಸ್ತುಗಳನ್ನು ಶುಚಿಗೊಳಿಸುವಲ್ಲಿ ಹೆಚ್ಚು ಸಹಾಯಕ.

ಸ್ಟೀಂ  ಕ್ಲೀನಿಂಗ್ ಲಾಭಗಳು

ಇದರ ಮೂಲಕ ಶುಭ್ರಗೊಳಿಸುವುದು ಸುಲಭ. ಇಲ್ಲಿ ಯಾವುದೇ ಬಗೆಯ ಕೆಮಿಕಲ್ಸ್ ಬಳಕೆ ಆಗಿಲ್ಲ. ಬದಲಿಗೆ ಕುದಿ ನೀರಿನ ಆವಿಯಿಂದ 100% ಶುಚಿಗೊಳಿಸಬಹುದು.

1 ಲೀ. ನೀರಿನಿಂದ, 1,700 ಲೀ. ಆವಿ ತಯಾರಾಗುತ್ತದೆ. ಬೇರೆ ಇತರ ಕ್ಲೀನಿಂಗ್‌ಟೂಲ್ಸ್ ‌ಸೋಂಕಲು ಸಾಧ್ಯವಿಲ್ಲದ ಜಾಗಗಳನ್ನೂ ಸ್ಟೀಂ ಕ್ಲೀನಿಂಗ್‌ ಸಮರ್ಥವಾಗಿ ನಿಭಾಯಿಸಬಲ್ಲದು.

ಈ ವಿಧಾನದಿಂದ ಕಡಿಮೆ ಕಾಲಾವಧಿ ಹಾಗೂ ಕನಿಷ್ಠ ಹಣ ಬಳಸಿ ಕೆಲಸ ಮುಗಿಸಬಹುದು.

- ಎಸ್‌. ಅಂಜಲಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ