ಭಾರತೀಯ ಸೇನೆಯು “ಆಪರೇಷನ್ ಸಿಂಧೂರ್” ನಡೆಸಿದ ಮೇಲೆ ಈ ಕಾರ್ಯಾಚರಣೆಯ ವಿವರವನ್ನು ಕರ್ನಲ್ ಸೋಫಿಯಾ ಖುರೇಷಿ ಅವರು ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಹಾಗೂ ವಿಶ್ವಕ್ಕೆ ಸ್ಪಷ್ಟವಾದ ಸಂದೇಶ ನೀಡಲಾಗಿದೆ.
ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರ ವಿವರಣೆಯು ನಿಖರವಾಗಿ ಹಾಗೂ ಸ್ಪಷ್ಟವಾಗಿತ್ತು. ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರು ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಭಾರತ ಹಾಗೂ ಪಾಕ್ ನಡುವೆ ಏನಾಗಿದೆ ಎಂದು ವಿಶ್ವಕ್ಕೆ ಮಾಹಿತಿ ನೀಡುವ ಸಂದರ್ಭದಲ್ಲಿಯೂ ಭಾರತ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ.
ಭಾರತೀಯ ಸೇನೆಯು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರ ಮೂಲಕ ಪಾಕ್ ಹಾಗೂ ಪಾಕ್ ಆಕ್ರಮಿತ ಪ್ರದೇಶದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಭಾರತ ನಡೆಸಿರುವ ಕ್ಷಿಪಣಿ ದಾಳಿಯ ವಿವರವನ್ನು ನೀಡಿದೆ. ಭಾರತೀಯ ಸೇನೆಯು ಕರ್ನಲ್ ಸೋಫಿಯಾ ಖುರೇಷಿ ಹಾಗೂ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಪಾಕ್ ಉಗ್ರರ ತಾಣದ ಮೇಲೆ ನಡೆದಿರುವ ಕ್ಷಿಪಣಿ ದಾಳಿಯ ವಿವರವನ್ನು ನೀಡಿದ್ದಾರೆ.
ಸಿಂಧೂರ ತೆಗೆದವರಿಗೆ ಪ್ರತ್ಯುತ್ತರ!
ಭಾರತೀಯ ಸೇನೆಯು ಹಿಂದೂಸ್ತಾನದ ಮಹಿಳೆಯರ ಸಿಂಧೂರ ತೆಗೆದವರಿಗೆ ಸರಿಯಾದ ಪ್ರತ್ಯುತ್ತರವನ್ನು ಉಗ್ರರ ಮೇಲೆ ದಾಳಿ ಮಾಡುವ ಮೂಲಕ ಮಾತ್ರವಲ್ಲ. ಆ ದಾಳಿಯ ವಿವರಣೆ ನೀಡುವಾಗಲೂ ಮುಂದುವರಿಸಿದೆ. ಭಾರತೀಯ ಸೇನೆಯು ಮಹಿಳಾ ಅಧಿಕಾರಿಗಳ ಮೂಲಕವೇ ವಿವರಣೆ ಕೊಡಿಸಿದೆ. ಈ ಮೂಲಕ ಉಗ್ರರು ದಾಳಿ ಮಾಡಿದ ಮೇಲೆ ಹೋಗಿ ನಿಮ್ಮ ಮೋದಿಗೆ ಹೇಳಿ ಅರ್ಥಾತ್ ಭಾರತೀಯ ಸರ್ಕಾರಕ್ಕೆ ಹೇಳಿ ಎನ್ನುವುದಕ್ಕೆ ಭಾರತ ತಕ್ಕ ಪ್ರತ್ಯುತ್ತರವನ್ನೇ ನೀಡಿದೆ.
ಸೋಫಿಯಾ ಖುರೇಷಿ:
ಭಾರತೀಯ ಸೇನೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಕರ್ನಲ್ ಸೋಫಿಯಾ ಖುರೇಷಿ, ಹಲವು ರಾಷ್ಟ್ರಗಳ ಮಿಲಿಟರಿ ತಾಲೀಮಿನ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. 18 ರಾಷ್ಟ್ರಗಳು ಭಾಗವಹಿಸಿದ್ದ ಸೇನೆಯ ತುಕಡಿಯನ್ನು ಅವರು ನಡೆಸಿದ್ದರು. ಈ ಸೇನಾ ತುಕಡಿಯಲ್ಲಿ ಭಾರತ, ಜಪಾನ್, ಚೀನಾ, ರಷ್ಯಾ, ಅಮೆರಿಕ, ಕೊರಿಯಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳು ಸೇರಿದ್ದವು. ಇದರಲ್ಲಿ ಲೆಫ್ಟಿನೆಂಟ್ ಕರ್ನಲ್ ಖುರೇಷಿ ಅವರು ತುಕಡಿಯನ್ನು ಮುನ್ನಡೆಸಿದ ಏಕೈಕ ಮಹಿಳಾ ಅಧಿಕಾರಿಯಾಗಿದ್ದರು.
ರಾತ್ರೋರಾತ್ರಿ ನಡೆದ ಏರ್ ಸ್ಟ್ರೈಕ್ ಮೇಲೆ ಮೋದಿ ನಿಗಾ ಇನ್ನು ದೇಶದಲ್ಲಿ ನಡೆದ ಹಲವು ಶಾಂತಿಪಾಲನಾ ತರಬೇತಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಖುರೇಷಿ ಅವರು ಪಾಲ್ಗೊಂಡಿದ್ದರು. ಖುರೇಷಿ ಅವರು 2010ರಿಂದ ಪಿಕೆಒಗಳಲ್ಲಿ (ಶಾಂತಿಪಾಲನಾ ಕಾರ್ಯಾಚರಣೆಗಳು) ತೊಡಗಿಸಿಕೊಂಡಿದ್ದರು. ಲೆಫ್ಟಿನೆಂಟ್ ಕರ್ನಲ್ ಖುರೇಷಿ ಅವರು ಗುಜರಾತ್ ರಾಜ್ಯಕ್ಕೆ ಸೇರಿದವರಾಗಿದ್ದಾರೆ.
ಸೋಫಿಯಾ ಖುರೇಷಿ ಅವರ ಅಜ್ಜ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಖುರೇಷಿ ಅವರು ಆರು ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಅವರು ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. 35ನೇ ವಯಸ್ಸಿನಲ್ಲಿಯೇ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ 18 ರಾಷ್ಟ್ರಗಳ ಸೇನಾ ತುಕಡಿಯಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡಿಸಿದ್ದ ಏಕೈಕ ಮಹಿಳಾ ಸೇನಾಧಿಕಾರಿ ಇವರಾಗಿದ್ದರು ಎನ್ನುವುದು ವಿಶೇಷ.