ನನ್ನ ಮೊಬೈಲ್‌ನಲ್ಲೇ ಎಲ್ಲ ಆರೋಪಗಳಿಗೂ ಸಾಕ್ಷ್ಯವಿದೆ. ಆದರೆ ಆ ಫೋನ್ ಅನ್ನೇ ಪ್ರಧಾನಿ ನರೇಂದ್ರ ಮೋದಿ ಕದ್ದಾಲಿಕೆ ಮಾಡುತ್ತಿದ್ದಾರೆ! – ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಈ ಹೇಳಿಕೆ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಪ್ರಧಾನಿಯವರಿಗೆ ನೇರ ಚರ್ಚೆಯ ಸವಾಲು ಹಾಕಿರುವ ರಾಹುಲ್, ಇಬ್ಬರೂ ಮುಖಾಮುಖಿಯಾಗಿ ಕುಳಿತು ಮಾತನಾಡಿದರೆ ದೇಶದ್ರೋಹಿ ಯಾರು, ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಇರುವವರು ಯಾರು ಎಂಬುದು ದೇಶದ ಜನರಿಗೆ ತಿಳಿಯಲಿದೆ ಎಂದು ಹೇಳಿದ್ದಾರೆ.

ಆದರೆ ಈ ಆರೋಪಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅವರೇ ಅಪನಂಬಿಕೆ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿಸಿದ್ದು ಇದು ಕಾಂಗ್ರೇಸ್ ಮುಕ್ತ ಭಾರತಕ್ಕೆ ಮುನ್ನುಡಿಯೇ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ, ಬಿಜೆಪಿ ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದೆ.

ಹಾಗಾದರೆ ರಾಹುಲ್ ಗಾಂಧಿ ಅವರ ಆರೋಪಗಳೇನು? ಸ್ಯಾಮ್ ಪಿತ್ರೋಡಾ ಏಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ? ಹಿಂದಿನ ಪೆಗಾಸಸ್ ವಿವಾದಕ್ಕೂ ಈ ಪ್ರಕರಣಕ್ಕೂ ಏನು ಸಂಬಂಧ? ಈ ಎಲ್ಲ ವಿಚಾರಗಳನ್ನು ಗಮನಿಸೋಣ.

ಇನ್‌ಸ್ಟಾಗ್ರಾಂ ಸಂವಾದದಲ್ಲಿ ಫೋನ್ ಟ್ಯಾಪಿಂಗ್ ಆರೋಪ

phones1

2026ರ ನವೆಂಬರ್ 13ರಂದು ರಾಹುಲ್ ಗಾಂಧಿ ಅವರು ಇನ್‌ಸ್ಟಾಗ್ರಾಂನಲ್ಲಿ ನಡೆಸಿದ ಆಸ್ಕ್ ಮೀ (Ask Me) ಸಂವಾದದಲ್ಲಿ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧರಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ ಕೃಷಿ ಕಾಯ್ದೆಗಳು, ಮತಗಳ್ಳತನದ ಆರೋಪ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ಚೀನಾ, ಜನರಲ್ ಎಂ.ಎಂ. ನರಾವಣೆ ಅವರ ಪುಸ್ತಕ ಮತ್ತು ಎಪ್ಸ್ಟೀನ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಮಾತನಾಡಲು ಪ್ರಯತ್ನಿಸಿದಾಗ ಮೈಕ್ರೊಫೋನ್ ಸ್ಥಗಿತಗೊಳಿಸಲಾಗುತ್ತದೆ ಎಂಬುದು ಅವರ ಮತ್ತೊಂದು ಆರೋಪ.

ನನಗೆ ಉದ್ದುದ್ದ ಭಾಷಣಗಳಿರುವ ಚರ್ಚೆ ಬೇಡ. ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ ಕುಳಿತುಕೊಳ್ಳಲಿ, ನಾನು ಮತ್ತೊಂದು ಕಡೆ ಕುಳಿತುಕೊಳ್ಳುತ್ತೇನೆ. ಅವರು ನನ್ನ ಮೇಲೆ ಆರೋಪ ಮಾಡಲಿ, ನಾನು ಅವರ ಮೇಲೆ ಆರೋಪ ಮಾಡುತ್ತೇನೆ. ಇಬ್ಬರೂ ನೇರವಾಗಿ ಮಾತನಾಡೋಣ ಎಂದು ಸವಾಲು ಹಾಕಿದರು. ಅಷ್ಟೇ ಅಲ್ಲದೆ, ಚರ್ಚೆಗೆ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ತೀರ್ಪುಗಾರರನ್ನಾಗಿ ನೇಮಿಸಿದರೂ ತಮಗೆ ಅಭ್ಯಂತರವಿಲ್ಲ ಎಂದು ಹೇಳಿದರು.

ನನ್ನೊಂದಿಗೆ ಪ್ರಧಾನಿ ಮುಖಾಮುಖಿ ಚರ್ಚೆಗೆ ಬಂದರೆ, ಅವರು ಪ್ರಧಾನಿಯಾಗಿ ಮುಂದುವರಿಯುವುದಿಲ್ಲ ಎಂಬುದಕ್ಕೆ ನಾನು ಖಾತರಿ ನೀಡುತ್ತೇನೆ ಎಂದು ರಾಹುಲ್ ಸವಾಲು ಹಾಕಿರುವುದು ನೋಡಿದಾಗ, ಪಪ್ಪೂ ಖ್ಯಾತಿಯ ರಾಹುಲ್ ಅವರ ಈ ನಡೆ, ನವಿಲು ನೋಡಿ ಕೆಂಭೂತ ಗರಿ ಕೆದರಿಕೊಂಡು ಕುಣಿಯಿತಂತೆ ಎನ್ನುವಂತಾಗಿದೆ.

ಎಲ್ಲ ಸಾಕ್ಷ್ಯವೂ ನನ್ನ ಮೊಬೈಲ್‌ನಲ್ಲಿದೆ! ಧರ್ಮಸ್ಥಳ ಬುರುಡೇ ಗ್ಯಾಂಗ್ ನೆನಪಿಸಿದ ರಾಹುಲ್

phones2

ಸಂವಾದದ ಮತ್ತೊಂದು ಸಂದರ್ಭದಲ್ಲಿ, ಪ್ರಧಾನಿ ಮೋದಿ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷ್ಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ ತಮ್ಮ ಮೊಬೈಲ್ ಫೋನ್ ಅನ್ನು ತೋರಿಸಿಸುತ್ತಾ, ನನ್ನ ಎಲ್ಲ ಆರೋಪಗಳಿಗೂ ಸಾಕ್ಷ್ಯ ಈ ಫೋನ್‌ನಲ್ಲಿದೆ. ಪ್ರಧಾನಿಯವರಿಗೆ ಅದು ಗೊತ್ತಿದೆ. ಏಕೆಂದರೆ ಅವರೇ ನನ್ನ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಆರೋಪಿಸಿರುವುದನ್ನು ನೋಡಿವರು ಸೌಜನ್ಯ ಕೇಸ್ ಸಂಬಧದಲ್ಲಿ ಬುರುಡೇ ಗ್ಯಾಂಗಿನ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಇದೇ ರೀತಿಯಲ್ಲೇ ಮೊಬೈಲ್ ಹಿಡಿದುಕೊಂಡು ನಮ್ಮ ಮೊಬೈಲ್ ನಲ್ಲಿರುವ ಸಾಕ್ಷಗಳನ್ನು ಎಸ್.ಐ.ಟಿಗೆ ಕೊಟ್ಟಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತವರ ಇಡೀ ಕುಟುಂಬ ಜೈಲಿಗೆ ಸೇರುತ್ತಾರೆ ಎಂದು ಹೇಳಿಕೊಂಡು ಓಡಾಡಿ ನಂತರದ ದಿನಗಳಲ್ಲಿ ಅವರ ಮಾತುಗಳೆಲ್ಲವೂ ಅವರಿಗೇ ತಿರುಗು ಮುರುಗಾಗಿ ಕಡೆಗೆ ಎದ್ದೆನೋ ಬಿದ್ದೆನೋ ಎಂದು ಓಡುತ್ತಿರುವುದು ನೆನಪಾಗುತ್ತಿದೆ ಎನ್ನುತ್ತಿರುವುದರಲ್ಲಿಯೂ ಸತ್ಯ ಇದೆ ಎನಿಸುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ