ಬಹುಶಃ ಈ ರೀತಿಯ ಪ್ರಶ್ನೆ ಬಹುತೇಕರ ಮನಸ್ಸಿನಲ್ಲಿದ್ದರೆ, ಅದಕ್ಕೆ ಉತ್ತರ, ಭಾರತದಲ್ಲಿ ಬಂಧನದಲ್ಲಿರುವ ಯಾವುದೇ ವ್ಯಕ್ತಿಯನ್ನು ಪೊಲೀಸರು ಹೊಡೆಯುವುದು, ಹೊಡೆಯುವುದು ಅಥವಾ ಚಿತ್ರಹಿಂಸೆ ನೀಡುವುದು ಕಾನೂನುಬಾಹಿರ. ಇಂತಹ ಕ್ರಮಗಳು ಸಾಂವಿಧಾನಿಕ ಹಕ್ಕುಗಳು (ಆರ್ಟಿಕಲ್ 21) ಮತ್ತು ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ. ಅಕಸ್ಮಾತ್ ಆತನನ್ನು ಬಂಧಿಸುವ ವೇಳೆಯಲ್ಲಿ ಪೋಲೀಸರ ಮೆಲೆ ಹಲ್ಲೆ ಮಾಡಿದರೆ ಅಥವಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮಾತ್ರ ಪೊಲೀಸರು ಆತನ ಮೇಲೆ ಸಮಂಜಸವಾದ ಬಲಪ್ರಯೋಗ ಮಾಡಬಹುದು, ಆದರೆ ಅನಗತ್ಯ ಕ್ರೌರ್ಯವು ಶಿಕ್ಷಾರ್ಹವಾಗಿದೆ.

ದುರಾದೃಷ್ಟವಶಾತ್ ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಎನ್ನುವಂತೆ, ನಮ್ಮ ದೇಶದಲ್ಲಿ ರಕ್ಷಕರೇ ಭಕ್ಷಕರಾಗಿರುವುದು ಮಾತ್ರಾ ಬೇಸರದ ಸಂಗತಿಯಾಗಿದ್ದು, ಇದಕ್ಕೆ ಪೂರಕ ಎನ್ನುವಂತೆ ಬೆಂಗಳೂರಿನ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಿರುವ ಹೈವೇ ನೆಸ್ಟ್ ಎಂಬ ಚಹಾ ಅಂಗಡಿಯ ಯುವಕನ ಮೇಲೆ ಬೆಳಗಿನ ಜಾವ ಅಲ್ಲಿನ ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತವರ ತಂಡ ಅಮಾನವೀಯವಾಗಿ ಮಾಡಿರುವ ಹಲ್ಲೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಬೆಂಗಳೂರು ಮತ್ತು ಹೈದರಾಬಾದಿನ ಆ ಹೆದ್ದಾರಿಯಲ್ಲಿ ಹಗಲು ರಾತ್ರಿ ಎನ್ನದೇ ನಿರಂತವಾಗಿ ವಾಹನಗಳು ಓಡಾಡುತ್ತಿರುತ್ತದೆ. ಇಂತಹ ಜನನಿಬಿಡ ಸ್ಥಳಗಳಲ್ಲಿ ವಾಹನ ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಕಾಫೀ, ಟೀ, ತಿಂಡಿ ಊಟಗಳ ವ್ಯವಸ್ಥೆಯನ್ನು ನೀಡುವ ಹೋಟೆಲ್ಲುಗಳು ನಾಯಿಕೊಡೆಯಂತೆ ಹೆದ್ದಾರಿಯ ಇಕ್ಕೆಲಗಳಲ್ಲಿಯೂ ಬಹುತೇಕ 24/7 ತೆರೆದುಕೊಂಡು ತಮ್ಮ ತಮ್ಮ ವ್ಯಾಪಾರ ವಹಿವಾಟುಗಳನ್ನು ಮಾಡಿಕೊಂಡು ತಮ್ಮ ಪ್ರಯಾಣಿಕರ ಹೊಟ್ಟೆಯನ್ನು ತುಂಬಿಸುವ ಮೂಲಕ ತಮ್ಮ ಹೊಟ್ಟೆಯನ್ನೂ ತುಂಬಿಸಿಕೊಳ್ಳುತ್ತಿರುತ್ತಾರೆ. ಇದಕ್ಕನುಗುಣವಾಗಿಯೇ ಎಂದಿನಂತೆ ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹೈವೇ ನೆಸ್ಟ್ ಎಂಬ ಪುಟ್ಟ ಚಹಾ ಅಂಗಡಿಯ ಯುವಕನೊಬ್ಬ ಮುಂಜಾನೆ 4 ಗಂಟೆಗೆ ಚಹಾ ಅಂಗಡಿಯನ್ನು ತೆರೆದು ತನ್ನ ದೈನಂದಿನ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ, ಆ ಸ್ಥಳಕ್ಕೆ ಬಂದ ದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಕೇಶ್ ಮತ್ತು ಅವರ ತಂಡ, ಇಷ್ಟು ಬೇಗ ಅಂಗಡಿಯನ್ನು ಏಕೆ ತೆರೆಯುತ್ತಿದ್ದೀಯಾ? ಎಂದು ಆಕ್ಷೇಪ ವ್ಯಕ್ತಪಡಿಸಿದಾಗ, ಹಾಗೇನಿಲ್ಲಾ ಸರ್ ಪ್ರತಿದಿನವೂ ಇದೇ ಸಮಯಕ್ಕೆ ನಮ್ಮ ವ್ಯಾಪಾರ ಆರಂಭವಾಗುತ್ತದೆ ಎಂದು ಆ ಹುಡುಗ ಉತ್ತರಿಸಿದ್ದಾನೆ. ಅದೇಕೋ ಕಾಣೇ, ಆ ಹುಡುಗನ ಎದುರುತ್ತರ ರಾಕೇಶ್ ಅವರ ಅಹಂಗೆ ತಾಕಿತೋ ಏನೋ? ನನಗೇ ಎದುರುತ್ತರ ನೀಡುತ್ತೀಯಾ.. ಎಂದು ತಮಗೆ ಗೊತ್ತಿರುವ ಎಲ್ಲಾ ರೀತಿಯ ಅವಾಚ್ಯಶಬ್ಧಗಳನ್ನು ಆಡುತ್ತಾ. ಏಕಾಎಕಿ ಆ ಯುವಕನನ್ನು ಅಂಗಡಿಯಿಂದ ಹೊರಗೆಳೆದು ಲಾಠಿಯಿಂದ ಮನಬಂದಂತೆ ಹಲ್ಲೆ ನಡೆಸಿರುವ ವೀಡಿಯೂ ಈಗ ಎಲ್ಲೆಡೆಯಲ್ಲಿಯೂ ವೈರಲ್ ಆಗಿದೆ.

ಸರ್ ನನ್ನನ್ನು ಹೊಡೆಯಬೇಡಿ. ಇನ್ನು ಮುಂದೆ ಇಷ್ಟು ಬೇಗ ಅಂಗಡಿಯನ್ನು ತೆರೆಯುವುದಿಲ್ಲ ಎಂದು ಪದೇ ಪದೇ ಬೇಡಿಕೊಂಡರೂ, ಕೋಣನ ಮುಂದೆ ಕಿನ್ನರಿ ಬಾರಿಸಿದ ಎನ್ನುವಂತೆ ಆ ಯುವಕನ ಆರ್ತನಾದಕ್ಕೆ ಇನ್ಸ್‌ಪೆಕ್ಟರ್ ರಾಕೇಶ್ ಅವರ ಮನಃ ಕೊಂಚವೂ ಕರಗದೇ, ಆ ಹುಡುಗನ ಮೇಲೆ ಕಿಂಚಿತ್ತೂ ದಯೆ ತೋರದೆ ಮೇಲಿಂದ ಮೇಲೆ ಆತನ ಮೇಲೆ ಬಾಸುಂಡೆ ಬರುವಂತೆ ಹೊಡೆಯುವ ಮೂಲಕ ತಮ್ಮ ಅಟ್ಟಹಾಸ ಮೆರೆದಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಅಮಾಯಕರ ಮೇಲೆ ಅನಾಗರೀಕವಾಗಿ ಈ ರೀತಿಯಾಗಿ ನಡೆದ ಹಲ್ಲೆಯನ್ನು ಕಂಡು ಬೆಚ್ಚಿಬಿದ್ದ ಅಲ್ಲಿದ್ದ ಗ್ರಾಹಕರೂ ಸಹಾ ಆ ಪೊಲೀಸರ ಈ ವರ್ತನೆಯನ್ನು ಅಮಾನವೀಯ ಎಂದಿರುವುದಲ್ಲದೇ, ಹೆದ್ದಾರಿಯಲ್ಲಿ ಸಂಚರಿಸುವ ಚಾಲಕರು ಮತ್ತು ಪ್ರಯಾಣಿಕರಿಗಾಗಿ ಮುಂಜಾನೆ ಚಹಾ ಮಾರುವುದು ಅಷ್ಟೊಂದು ಅಪರಾಧವೇ? ಇಂತಹ ಕ್ಷುಲ್ಲಕ ಕಾರಣಕ್ಕಾಗಿ ಆ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆ ಬಡ ಯುವಕನ ಮೇಲೆ ಇಷ್ಟು ಕ್ರೂರವಾಗಿ ಹಲ್ಲೆ ಮಾಡುವ ಅವಶ್ಯಕತೆ ಇತ್ತೇ? ಅಕಸ್ಮಾತ್ ಆತ ಕಾನೂನು ನಿಯಮ ಮೀರಿದ್ದರೆ, ಕಾನೂನಾತ್ಮಕವಾಗಿಯೇ ಕ್ರಮ ತೆಗೆದುಕೊಳ್ಳುವ ಬದಲು ಈ ರೀತಿ ಹಲ್ಲೆ ಮಾಡುವ ಅಧಿಕಾರ ಪೋಲಿಸರಿಗೆ ಇದೆಯೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ