ದೇಶದಲ್ಲಿ ಎಲ್ಲೇ ಉಗ್ರರ ದಾಳಿಗಳಾಗಿ ಆ ಭಯೋತ್ಪಾದನಾ ಚಟುವಟಿಕೆಯ ಹಿಂದೆ ಮುಸ್ಲಿಂ ಮತಾಂದರು ಇದ್ದಾರೆ ಅಂತಾ ಗೊತ್ತಾಗ್ತಾ ಇದ್ದಂತೆಯೇ, ನಮ್ಮ ದೇಶದಲ್ಲಿನ ಸ್ವಘೋಷಿತ ಬುದ್ದಿ ಜೀವಿಗಳು, ಎಡಬಿಡಂಗಿ ಜಾತ್ಯಾತೀತರು, ಎಡಚರರು ಮತ್ತು ಅವರನ್ನು ಸಮರ್ಥನೆ ಮಾಡುವ ಮಾಧ್ಯಮವರು ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮದಲ್ಲಿಯೂ ಗಂಟಲು ಹರಿಯುವಂತೆ ಭಯೋತ್ಪಾದನೆಗೆ ಧರ್ಮ ಇಲ್ಲಾ.. ಯಾರೋ ಒಂದಿಬ್ಬರು ಮಾಡುವ ಕುಕೃತ್ಯಕ್ಕೆ ಇಡೀ ಧರ್ಮವನ್ನೇ ದೂಷಿಸಲಾಗದು ಎಂದು ಉದ್ದುದ್ದಾ ಭಾಷಣ ಬಿಗಿತಾರೆ. ಆದರೆ ಪ್ರತೀ ಬಾರಿ ಭಾರತದಲ್ಲಿ ಆಗುವ ಕೋಮು ಸಂಘರ್ಷದ ಹಿಂದೆ ಅವರೇ ಇರ್ತಾರೆ.

ಕಾಶ್ಮೀರದ ಪೆಹಲ್ಗಾಂನಲ್ಲಿ ಕಲ್ಮಾ ಹೇಳು ಎನ್ನುತ್ತಲೇ, ಪ್ಯಾಂಟ್ ಬಿಚ್ಚಿ ಧರ್ಮ ನೋಡಿ ತಮ್ಮ ಮನೆಯವರ ಮುಂದೇ ಅಮಾಯಕರನ್ನು ಹತ್ಯೆ ಮಾಡಿದ ಘಟನೆ ಆಗಿ ಸರಿಯಾಗಿ ಒಂದು ವರ್ಷ ಆಗುವಷ್ಟರಲ್ಲೇ, ಝೈಬ್ ಝುಬೇರ್ ಅನ್ಸಾರಿ ಎಂಬಾತ ಮುಂಬೈಲ್ಲಿ ಇಬ್ಬರು ಅಮಾಯಕ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕಲ್ಮಾ ಪಠಿಸಲು ಸೂಚಿಸಿ, ಅವರಿಗೆ ಬಾರದೇ ಇದ್ದದ್ದಕ್ಕಾಗಿ ಅವರಿಗೆ ಹರಿತವಾದ ಚಾಕುವಿನಿಂದ ಇರಿದು ಪರಾರಿಯಾದ ಘಟನೆ 2026ರ ಏಪ್ರಿಲ್ 28ರಂದು ಬೆಳಗಿನ ಜಾವ ಸಂಭವಿಸಿದೆ.

ಇಸ್ಲಾಂನಲ್ಲಿ ಕಲ್ಮಾ (ಅಥವಾ ಕಲಿಮಾ) ಎಂಬುದು ಅರೇಬಿಕ್ ಪದಗುಚ್ಛವಾಗಿದ್ದು,  ಇದು ಇಸ್ಲಾಂ ಮೂಲಭೂತ ನಂಬಿಕೆಯ ಘೋಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಇಸ್ಲಾಂನಲ್ಲಿ ಆರು ಮೂಲಭೂತ ನಂಬಿಕೆಗಳನ್ನು ಒಳಗೊಂಡ ಪ್ರಾಥಮಿಕ ಕಲ್ಮಾಗಳು ಇದ್ದು ಅವು ಅಲ್ಲಾಹನ ಏಕತೆ, ಮುಹಮ್ಮದ್ (ಸ) ರ ಪ್ರವಾದಿತ್ವ, ಮತ್ತು ಪಶ್ಚಾತ್ತಾಪ, ಹೊಗಳಿಕೆ ಮತ್ತು ಅಪನಂಬಿಕೆಯನ್ನು ತಿರಸ್ಕರಿಸುವ ವಿಷಯಗಳಾಗಿವೆ. ಸರಳವಾಗಿ ಹೇಳಬೇಕೆಂದರೆ, ಕಲ್ಮಾ ಹೇಳುವ ಮೂಲಕ ತನ್ನ ಮುಸ್ಲಿಂ ಅಸ್ಮಿತೆಯನ್ನು ತೋರಿಸಿಕೊಳ್ಳುವ ವಿಧಾನವಾಗಿದೆ. ಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮಕ್ಕೆ ಸೇರುವಾಗ ಮೊದಲು ಈ ಕಲ್ಮಾವನ್ನು ಪಠಿಸಿ, ಅದರ ಮೇಲೆ ದೃಢವಾದ ನಂಬಿಕೆಯನ್ನು ಹೊಂದಬೇಕಾಗುತ್ತದೆ.

ಮುಂಬೈನ ಮುಂಬೈನ ಮೀರಾ ರೋಡಲ್ಲಿ ಇರುವ ವೋಕಾರ್ಡ್ ಆಸ್ಪತ್ರೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕಟ್ಟಡದ ಕಾಮಗಾರಿ ವಸ್ತುಗಳು, ಸಲಕರಣೆಗಳನ್ನು ನೋಡಿಕೊಳ್ಳುವ ಸಲುವಾಗಿ ಕಾವಲುಗಾರರನ್ನು ನಿಯೋಜಿಸಲಾಗಿದ್ದು, ಆ ಸ್ಥಳದಲ್ಲಿ ರಾಜ್‌ಕುಮಾರ್ ಮಿಶ್ರಾ ಹಾಗೂ ಸುಬ್ರತೋ ಸೆನ್ ಇಬ್ಬರು ಕಾವಲುಗಾರರು ರಾತ್ರಿಯ ಪಾಳಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಬೆಳಗಿನ ಜಾವ ಸರಿ ಸುಮಾರು 4 ಘಂಟೆಯ ಸಮಯದಲ್ಲಿ ಆ ಸ್ಥಳಕ್ಕೆ ಬಂದ ಸುಮಾರು 31ರ ವಯಸ್ಸಿನ ಝೈಬ್ ಝುಬೇರ್ ಅನ್ಸಾರಿ ಎಂಬಾತ, ಅಲ್ಲಿನ ಸಮೀಪದಲ್ಲಿರುವ ಮಸೀದಿಯ ವಿಳಾಸ ಕೇಳಿದ್ದಾನೆ. ಅಷ್ಟು ಹೊತ್ತಿನಲ್ಲಿ ವಿಳಾಸ ಕೇಳಿಕೊಂಡ ವ್ಯಕ್ತಿಯ ಪೂರ್ವಾಪರ ಅರಿವಿಲ್ಲದಿದ್ದ ರಾಜ್‌ಕುಮಾರ್ ಮಿಶ್ರಾ ತನಗೆ ಗೊತ್ತಿದ್ದನ್ನು ಹೇಳುತ್ತಿರುವಾಗಲೇ, ಮಧ್ಯೆ ಬಾಯಿ ಹಾಕಿರುವ ಅನ್ಸಾರಿ, ನೀನು ಹಿಂದುನಾ ಎಂದು ಕೇಳಿದ್ದಾನೆ. ಅದಕ್ಕೆ ಆತ ಹೌದು ನಾನು ಹಿಂದು ಎಂದು ಹೇಳುತ್ತಿದ್ದಂತೆಯೇ ತನ್ನ ಕಿಸೆಯಲ್ಲಿಟ್ಟುಕೊಂಡಿದ್ದ ಚಾಕುವನ್ನು ತೆಗೆದು ಕಲ್ಮಾ ಹೇಳು ಎಂದು ಆಗ್ರಹಿಸಿದ್ದಲ್ಲದೇ, ಹಿಂದೂ ಮುಂದೂ ನೋಡದೇ ಏಕಾ ಏಕಿ ರಾಜ್ ಕುಮಾರ್ ಮಿಶ್ರಾನಿಗೆ ತನ್ನ ಚಾಕುವಿನಿಂದ ಇರಿದಿದ್ದಾನೆ. ಅಚಾನಕ್ಕಾಗಿ ನಡೆದ ಈ ರೀತಿಯ ಧಾಳಿಯಿಂದ ಹಲ್ಲೆಗೊಳಗಾದ ರಾಜ್ ಕುಮಾರ್ ಮಿಶ್ರಾ ನೋವಿನಿಂದ ಜೋರಾಗಿ ಕಿರುಚಿ ಕೊಂಡಿದ್ದನ್ನು ಕೇಳಿ ಅತನ ಸಹಾಯಕ್ಕೆ ಬಂದ ಮತ್ತೊಬ್ಬ ಕಾವಲುಗಾರ ಸುಬ್ರೊತೋ ಸೇನ್ ಮೇಲೂ ಸಹಾ ಅನ್ಸಾರಿ ಚಾಕುವಿನಿಂದ ಗಂಭೀರವಾದ ಹಲ್ಲೆ ನಡೆಸಿ, ಅವರಿಬ್ಬರೂ ರಕ್ತಸಿಕ್ತರಾಗಿ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಅನ್ಸಾರಿ ಅಲ್ಲಿಂದ ಪರಾರಿ ಆಗಿದ್ದಾನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ