ಪ್ರಜಾಪ್ರಭುತ್ವ ಮತ್ತು ವ್ಯಾಪಾರ ಅಪಾಯದಲ್ಲಿ

ಮನೆ ಮನೆಗೆ ಸಾಮಗ್ರಿ ತಲುಪಿಸುವ ಪೀಳಿಗೆಗಳ ಕೆಲಸ ಈಗ ಹೊಸದೊಂದು ರೂಪ ಪಡೆದುಕೊಂಡಿದೆ. ಅದೊಂದು ಕಾಲದಲ್ಲಿ ಮಹಿಳೆಯರು ಹೊಸ್ತಿಲು ದಾಟಲು ನಿರ್ಬಂಧವಿತ್ತು. ಅಂಗಡಿಯವರೇ ಮನೆ ಬಾಗಿಲಿಗೆ ಬಂದು ಸಾಮಗ್ರಿಗಳನ್ನು ತಲುಪಿಸುತ್ತಿದ್ದರು.

ಅಮೆರಿಕಾದಲ್ಲಿ ಸೇಲ್ಸ್ ಮನ್‌ಗಳು ಒಂದು ವಿಶಿಷ್ಟ ಪೆಟ್ಟಿಗೆಯಲ್ಲಿ 1 ಕ್ವಿಂಟಾಲ್ ತನಕ ಸಾಮಾನುಗಳನ್ನು ತಲೆಯ ಮೇಲೆ ಹೊತ್ತುಕೊಂಡೇ ಮನೆಬಾಗಿಲಿಗೆ ತಂದು ಕೊಟ್ಟು ಹೋಗುತ್ತಿದ್ದರು. ಬಳಿಕ ಅಂಗಡಿಗಳು ತೆರೆದವು, ಮಾಲ್‌ಗಳು ಬಂದವು. ಈಗಂತೂ ಮೊಬೈಲ್ ‌ಮತ್ತು ಇ-ಕಾಮರ್ಸ್‌ನ ಯುಗ. ಈಗ ಶಾಪಿಂಗ್‌ ಸಾಮಾನುಗಳನ್ನು ನೋಡಿ ಅಲ್ಲ, ಬ್ರ್ಯಾಂಡ್‌ ಹೆಸರು ಮತ್ತು ಬೆಲೆಯಲ್ಲಿ ರಿಯಾಯಿತಿ ನೋಡಿ ಮಾರಲಾಗುತ್ತದೆ. ಈಗ ಉತ್ಪಾದಕರು ಮತ್ತು ಗ್ರಾಹಕರ ನಡುವೆ ಮಧ್ಯವರ್ತಿಗಳಾಗಿರುವ ಇ-ಕಾಮರ್ಸ್‌ ಕಂಪನಿಗಳಷ್ಟೇ ಉಳಿದಿವೆ. ಅವು ತಮ್ಮ ಸಾಫ್ಟ್ ವೇರ್‌ ಬಲದಿಂದ ಕೋಟಿ ಕೋಟಿ ಗಳಿಸುತ್ತಿವೆ. ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ಅಸ್ತಿತ್ವವೇ ಅಪಾಯದಲ್ಲಿದೆ. ಒಂದು ವಿಶಿಷ್ಟ ವಸ್ತು ವಿಶಿಷ್ಟ ಅಂಗಡಿಯಲ್ಲಿಯೇ ದೊರೆಯುತ್ತಿತ್ತು. ಆದರೆ ಈಗ ಇ-ಕಾಮರ್ಸ್‌ ಕಂಪನಿಗಳು ಪ್ರತಿಯೊಂದು ವಸ್ತುವನ್ನೂ ಮಾರಾಟ ಮಾಡುತ್ತಿವೆ. ಸೂಜಿಯಿಂದ ಸೀರೆ ತನಕ ಮತ್ತು ಸ್ಕ್ರೂ ಡ್ರೈವರ್‌ನಿಂದ ಹಿಡಿದು ಕಪಾಟುಗಳ ತನಕ ಏನೆಲ್ಲ ಲಭಿಸುತ್ತವೆ.

ಭಾರತ ಸರ್ಕಾರ ದೇಶವಿದೇಶದ ಇ-ಕಾಮರ್ಸ್‌ ಕಂಪನಿಗಳಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತಿದೆ. ಇದರಿಂದಾಗಿ ಕಪ್ಪು ಹಣದಲ್ಲಿ ಇಳಿಮುಖವಾಗುತ್ತದೆ ಎಂದು ಅದು ಭಾವಿಸಿತ್ತು. ಆದರೆ ಆಗುತ್ತಿರುವುದೇ ಬೇರೆ. ಯಾವ ಕಪ್ಪು ಅರ್ಥ ವ್ಯವಸ್ಥೆಯ ಭಾಗವಾಗಿತ್ತೋ, ಅದೇ ಈಗ ಕೊನೆಗೊಳ್ಳುತ್ತಿದೆ. ಹೊಸ ಸರ್ಕಾರ ಕ್ಯಾಶ್‌ಲೆಸ್‌ ವ್ಯವಹಾರಕ್ಕೆ ಎಷ್ಟೊಂದು ಒತ್ತು ಕೊಡುತ್ತಿದೆ ಎಂದರೆ, ಅದು ಬೀದಿ ಬೀದಿಯ ಅಂಗಡಿಗಳಿಂದ ಹಿಡಿದು ಸಗಟು ಮಂಡಿ ವ್ಯವಹಾರವನ್ನು ಕೊನೆಗೊಳಿಸಲು ಹುನ್ನಾರ ನಡೆಸುತ್ತಿದೆ.

ದೊಡ್ಡ ಕಂಪನಿಗಳಿಗೆ ಲಾಭ ಸಿಗಬೇಕು, ಅವರ ಷೇರುಗಳ ಬೆಲೆ ಗಗನಮುಖಿ ಆಗಬೇಕು ಎನ್ನುವ ಧೋರಣೆ ಇದೆ. ಈ ಧೋರಣೆಯಿಂದ ಲಕ್ಷಾಂತರ ಕುಟುಂಬಗಳು ದಿವಾಳಿ ಏಳುವ ಸ್ಥಿತಿ. ನಿನ್ನೆ ಮೊನ್ನೆಯವರೆಗೆ ಯಾರು ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರೊ, ಅವರು ನಿರುದ್ಯೋಗಿಗಳಾಗಬಹುದು. ಯಾರು ಬೆನ್ನ ಮೇಲೆ ಸಾಮಾನು ಹೊತ್ತುಕೊಂಡು ಹೋಗಲು ಸಿದ್ಧರಿರುತ್ತಾರೊ, ಅವರಿಗಷ್ಟೇ ಹೊಸ ನೌಕರಿಗಳು ಲಭಿಸಬಹುದು. ಅಮೆರಿಕಾದಲ್ಲಿ ಬ್ರಿಕ್‌ ಅಂಡ್‌ಮೋಟರ್ನ್‌ ಸ್ಟೋರ್ಸ್‌ ಈಗ ಮುಚ್ಚುತ್ತಿದೆ. ಏಕೆಂದರೆ  ಅದು ಇ-ಕಾಮರ್ಸ್‌ ಕಂಪನಿಗಳ ಸ್ಪರ್ಧೆ ಎದುರಿಸಲು ಆಗುತ್ತಿಲ್ಲ.

ಲಕ್ಷಾಂತರ ಪುಟ್ಟ ಮಧ್ಯಮ ವ್ಯಾಪಾರಿಗಳ ಭವಿಷ್ಯ ಅತಂತ್ರವಾಗಿದೆ. ಜೊತೆಗೆ ಶಾಪಿಂಗ್‌ನ ನೆಪದಲ್ಲಿ ಹೊರಗೆ ಸುತ್ತಾಡಲು ಹೋಗುತ್ತಿದ್ದ ಅವಕಾಶ ಕೂಡ ಕಡಿಮೆಯಾಗುತ್ತಿವೆ. ಭಾರತದಂತಹ  ದೇಶದಲ್ಲಿ ಈ ಬದಲಾವಣೆಯನ್ನು ಸರ್ಕಾರ ಒತ್ತಾಯ ಪೂರ್ವಕವಾಗಿ ನೋಟು ರದ್ಧತಿ ಹಾಗೂ ಜಿಎಸ್‌ಟಿ ಮುಖಾಂತರ ಹೇರುತ್ತಿದೆ. ಸರ್ಕಾರದ ನೋಟು ರದ್ಧತಿ ಈಗಲೂ ಜಾರಿಯಲ್ಲಿದೆ.  ಏಕೆಂದರೆ ನೋಟುಗಳ ಕೊರತೆ ಆದಾಗಿಲ್ಲ ಹಣ ಪಾವತಿಯನ್ನು ಕಂಪ್ಯೂಟರ್‌ ಮುಖಾಂತರ ಮಾತ್ರ ಮಾಡಬಹುದು. ಯಾರಿಗೆ ಕಂಪ್ಯೂಟರ್‌ ಬಗ್ಗೆ ಗೊತ್ತೇ ಇಲ್ಲ ಅಂಥವರನ್ನು ಸರ್ಕಾರ ಕತ್ತಿಯ ಬಾವಿಗೆ ನೂಕುತ್ತಿದೆ. ವ್ಯಾಪಾರಿಗಳಿಗೂ ರಿಟರ್ನ್‌ ಆನ್‌ಲೈನ್‌ನಲ್ಲೇ ಭರ್ತಿ ಮಾಡಬೇಕಿದೆ. ಇದು ನಿಜಕ್ಕೂ ಕಠಿಣ. ಈಗ ಹೊಸ ಉದ್ಯೋಗಗಳು ಮತ್ತು ಹೊಸ ವ್ಯಾಪಾರಗಳು ಕೇವಲ ಕಂಪ್ಯೂಟರ್‌ನ್ನೇ ಅವಲಂಬಿಸಿವೆ. ಅವುಗಳ ಮೇಲೆ ದೊಡ್ಡ ಕಂಪನಿಗಳು ಹಾಗೂ ಸರ್ಕಾರದ ಅಧಿಪತ್ಯ ಇರುತ್ತದೆ. ದೊಡ್ಡ ಕಂಪನಿಗಳು ಈಗ ಈಸ್ಟ್ ಇಂಡಿಯಾ ಕಂಪನಿಯ ಹಾಗೆ ದೇಶಗಳ ರಾಜರುಗಳನ್ನು ಬದಲಿಸಲಿದೆ. ಷೇರು ಮಾರುಕಟ್ಟೆಗಳ ಕಂಪನಿಗಳು ಪ್ರಜಾಪ್ರಭುತ್ವದಲ್ಲಿ ಹಸ್ತಕ್ಷೇಪ ನಡೆಸುವುದರ ಮೂಲಕ ಡೊನಾಲ್ಡ್ ಟ್ರಂಪ್‌ರಂಥವರಿಗೆ ರಾಜಪಟ್ಟ ಕೊಟ್ಟಿತು. ಪ್ರತಿ ಮನೆ ಮನೆಗೂ ಸ್ವಾತಂತ್ರ್ಯ ತಂದುಕೊಡುವ, ತನ್ನ ನಿರ್ಧಾರವನ್ನು ಸ್ಪಷ್ಟಪಡಿಸುತ್ತಿದ್ದ ಪ್ರಜಾಪ್ರಭುತ್ವ ಈಗ ಅದೃಶ್ಯವಾಗುವ ಸ್ಥಿತಿಯಲ್ಲಿದೆ.

ಯೋಚನೆ ಬದಲಿಸಿಕೊಳ್ಳುವ ಸಮಯ

ದೇಶದಲ್ಲಿ ಮಹಿಳೆಯರ ಸ್ಥಿತಿ ಹೇಗಿದೆ ಎನ್ನುವುದು ಈ ಒಂದು ಘಟನೆಯಿಂದ ತಿಳಿದು ಬರುತ್ತದೆ. ದೆಹಲಿಯಂಥ ಮಹಾನಗರದ ಒಂದು ಕಾಲೋನಿಯಲ್ಲಿ ಈ ಘಟನೆ ಘಟಿಸಿತು. ಇದು ಪುರುಷರು ಮತ್ತು ಅವರ ಕುಟುಂಬದವರ ಮಾನಸಿಕತೆಯನ್ನು ಬಿಂಬಿಸುತ್ತದೆ.

ಆ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಮನಸ್ತಾಪ ಉಂಟಾಗಿತ್ತು. ಪತ್ನಿ ಮುನಿಸಿಕೊಂಡು ತವರಿಗೆ ಹೊರಟು ಹೋದಳು. ಹೆಂಡತಿ ತವರಿಗೆ ಹೋಗುತ್ತಿದ್ದಂತೆ ಇತ್ತ ಗಂಡ ಆತ್ಮಹತ್ಯೆ ಮಾಡಿಕೊಂಡ.

ಗಂಡ ಸತ್ತಿದ್ದಾನೆ, ಹೆಂಡತಿ ಈಗಲಾದರೂ ಬಂದು ದುಃಖದ ನೆಪ ಮಾಡಿಕೊಂಡು ಇಲ್ಲಿಯೇ ಬಾಳಿ ಬದುಕುತ್ತಾಳೆಂದು ಅವರು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ಅವಳು ವಾಪಸ್‌ ಬರಲೇ ಇಲ್ಲ.

ಗಂಡನ ಸಾವಿನ 2 ತಿಂಗಳ ಬಳಿಕ ಪತಿಯ ಸಂಬಂಧಿಕರು ಹೆಂಡತಿಯ ಮನೆಗೆ ಹೋದರು. ಅದರಲ್ಲೊಬ್ಬ ಚೂರಿಯಿಂದ ಅವಳ ಹತ್ಯೆ ಮಾಡಿಬಿಟ್ಟ. ವರ್ಷದ ಹಿಂದೆ ಒಂದು ಮದುವೆ ಇಬ್ಬರ ಸಾವಿನಲ್ಲಿ ಅಂತ್ಯಗೊಂಡಿತು.

ಗಂಡಹೆಂಡತಿಯ ನಡುವೆ ಜಗಳವಾದರೆ ಅದು ಅವರ ವೈಯಕ್ತಿಕ ವಿಷಯ. ಮದುವೆಯಾಗಿ ಅನೇಕ ವರ್ಷಗಳಾಗಿದ್ದರೆ, ಅವಳಿಗೆ ಮಕ್ಕಳಿಲ್ಲದಿದ್ದರೆ ಮಹಿಳೆಯನ್ನು ಬಲವಂತವಾಗಿ ಗಂಡನೊಂದಿಗೆ ಬಂಧಿಸಿ ಇಡಲಾಗದು. ಗಂಡನ ನಿಧನಾನಂತರ ಎದೆ ಬಡಿದುಕೊಂಡು ಜೋರಾಗಿ ಅಳು ಎಂದು ಅವಳಿಗೆ ನಾಟಕ ಮಾಡುವಂತೆ ಹೇಳಲಾಗದು. ಆದರೆ ಈಗಲೂ ಕುಟುಂಬದವರ ಯೋಚನೆ ಏನೆಂದರೆ, ಹೆಂಡತಿಯ ಜೀವನ ಗಂಡನ ಆಸರೆಯಲ್ಲೇ ನಡೆಯುತ್ತದೆ ಎಂದು. ಹೆಂಡತಿ ಗಂಡನಿಗಾಗಿ ದುಃಖ ವ್ಯಕ್ತಪಡಿಸಲಿಲ್ಲ. ಅದು ಗಂಡನ ಮನೆಯವರಿಗೆ ಅವಮಾನ ಎನಿಸಿತು. ಈ ಅವಮಾನದ ಮೂಲದಲ್ಲಿರುವ ನಂಬಿಕೆ ಏನೆಂದರೆ, ಮದುವೆಯ ಬಳಿಕ ಹೆಂಡತಿ ಗಂಡನ ಗುಲಾಮಳಾಗುತ್ತಾಳೆ ಎಂದು. ಗಂಡ ಸತ್ತರೆ ಹೆಂಡತಿ ಎದೆ ಬಡಿದುಕೊಂಡು ಅಳಬೇಕು, ವಿಧವೆಯ ರೀತಿಯಲ್ಲಿ ಇರಬೇಕು, ಏನೇನು ವಿಧಿವಿಧಾನ ನಡೆಸಬೇಕೊ ಅವೆಲ್ಲವನ್ನು ಪೂರೈಸಬೇಕು ಎಂಬುದಾಗಿರುತ್ತದೆ. ಗಂಡನ ಮನೆಯರು ಹಾಗೂ ಪತಿ ಸ್ವತಃ ಅವಳನ್ನು ಗುಲಾಮಳಂತೆ ಕಾಣುತ್ತಾರೆ. ಈ ಪ್ರಕರಣ ದೆಹಲಿಯದು. ಇಲ್ಲಿನ ಜನಸಂಖ್ಯೆ ದೇಶದಲ್ಲೇ ಅತಿ ಹೆಚ್ಚು ಸಾಕ್ಷರರನ್ನು ಹೊಂದಿದೆ. ಹೆಚ್ಚು ಪ್ರಗತಿಪರ ಯೋಚನೆ ಬರುವುದು ಇಲ್ಲಿಯೇ. ಇಲ್ಲಿ ಎಂತಹ ಕೆಲವು ಜನರು ವಾಸಿಸುತ್ತಾರೆಂದರೆ, ಗಂಡ ತೀರಿಕೊಂಡ ಬಳಿಕ ಹೆಂಡತಿ ವಿಧವೆಯ ಹಾಗೆ ವಾಸಿಸಬೇಕು. ಆಗಲೇ ಗಂಡನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ಧೋರಣೆ ಹೊಂದಿರುತ್ತಾರೆ.

ಸರ್ಕಾರಕ್ಕೆ ಮೋಜು ಜನರಿಗೆ ಸಜೆ

ಬೆಲೆ ಏರಿಕೆ ಎಂಬ ಭೂತ ಈಗ ಮನೆಯ ಯಜಮಾನಿಯನ್ನು ನಡುಗಿಸುವಂತೆ ಮಾಡಿದೆ. ಪೆಟ್ರೋಲ್, ಡೀಸೆಲ್ ‌ಹಾಗೂ ಅಡುಗೆ ಅನಿಲದ ಬೆಲೆ ಯಾವ ಪರಿ ಏರಿದೆಯೆಂದರೆ, ಬೇರೆ ಕೆಲವು ವಸ್ತುಗಳ ಬೆಲೆ ಹೆಚ್ಚಲು ಕೂಡ ಇದು ಕಾರಣವಾಗಿದೆ. ಹಳೆಯ ದರಕ್ಕೆ ಒಗ್ಗಿ ಹೋಗಿದ್ದ ಜನರಿಗೆ ಈಗ ಹೊಸ ಬೆಲೆಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಈ ಸಲದ ಬೆಲೆ ಏರಿಕೆಗೆ ನೋಟು ರದ್ಧತಿ ಹಾಗೂ ಜಿಎಸ್‌ಟಿ ಎರಡೂ ನೇರ ಕಾರಣಗಳಾಗಿವೆ. ಇಂಧನ ಬೆಲೆಗಳು ವಿಶ್ವಮಟ್ಟದಲ್ಲಿ ಹೆಚ್ಚುತ್ತಿರುವುದು ಅಷ್ಟು ಹೊಣೆಗಾರ ಅಲ್ಲ.

ಸರ್ಕಾರದ ನೋಟು ರದ್ಧತಿಯಿಂದ ದೇಶದ ವ್ಯಾಪಾರ ವ್ಯವಸ್ಥೆಯೇ ಅಸ್ತ್ಯಸ್ತಗೊಂಡಿತ್ತು. ಎಲ್ಲ ತಮಾಷೆಗಳ ಬಳಿಕ ತಿಳಿದುಬಂದ ಸಂಗತಿ ಎಂದರೆ ಕೋಣೆಯಲ್ಲಿ ತುಂಬಿದ್ದ ಕಪ್ಪು ಹಣ ಬಿಳಿಯಾಗಿ ಬ್ಯಾಂಕುಗಳಿಗೆ ಬಂದಿತು. ಎಷ್ಟು ನೋಟುಗಳು ಚಲವಾಣೆಯಲ್ಲಿದ್ದವೋ, ಅವುಗಳಲ್ಲಿ ಶೇ.99ರಷ್ಟು ನೋಟುಗಳು ಬ್ಯಾಂಕುಗಳ ಮುಖಾಂತರ  ರಿಸರ್ವ್ ಬ್ಯಾಂಕ್‌ ತಲುಪಿದವು. ಈ ಅವಧಿಯಲ್ಲಿ 3 ರಿಂದ 6 ತಿಂಗಳಷ್ಟು ನಗದು ಕೊರತೆಯಿಂದ ವ್ಯಾಪಾರಿಗಳ ಸೊಂಟ ಬಿದ್ದುಹೋಯಿತು.

ದುರ್ಘಟನೆಯ ಬಳಿಕ ಡಾಕ್ಟರ್‌ಗಳ ಬಿಲ್ ಅಂತೂ ಬಂದೇ ಬರುತ್ತದೆ. ಅದಕ್ಕೆ ಮೇಲಾಗಿ ಕಂದಾಚಾರಿ ಪಂಡಿತ ಪುರೋಹಿತರ ಪೂಜೆ ಪುನಸ್ಕಾರಕ್ಕೂ ಖರ್ಚು ಮಾಡಬೇಕಾಗುತ್ತದೆ. ಅದೇ ನಿಟ್ಟಿನಲ್ಲಿ ಭಗವಾ ಸರ್ಕಾರ ಜಿಎಸ್‌ಟಿ ಭೂತವನ್ನು ಹೇರಿತು. ಆ ತೆರಿಗೆ ಎಲ್ಲರ ಜೀವನವನ್ನು ಹಸನು ಮಾಡುತ್ತದೆಂದು ಹೇಳಿತು. ಆದರೆ ಆದದ್ದು ತದ್ವಿರುದ್ಧ. ಪ್ರತಿಯೊಬ್ಬರ ಜೀವನ ಕಂಪ್ಯೂಟರ್‌ಜಾತಕದಲ್ಲಿ ಸಿಲುಕಿಕೊಂಡು ಬಿಟ್ಟಿತು. ಅದರ ಬಿಸಿ ಪ್ರತಿಯೊಬ್ಬರ ಮನೆಗೂ ತಟ್ಟಿತು. ಅಂಕಿಅಂಶಗಳಿಂದ ಅರ್ಥ ವ್ಯವಸ್ಥೆ ಹಳಿಗೆ ಬರುತ್ತಿದೆ. ಆದರೆ ವಾಸ್ತವದಲ್ಲಿ ಯಾರು ಯಾರ ವ್ಯಾಪಾರಗಳು ಸ್ಥಗಿತಗೊಂಡಿವೆಯೋ ಅದಕ್ಕೆ ಹೊಂದಿಕೊಂಡ ಮನೆಗಳು ಈಗ ಪೆರಾಲಿಸಿಸ್‌ ಹೊಡೆತಕ್ಕೆ ಸಿಲುಕಿದಂತಾಗಿವೆ.

ಬೆಲೆ ಏರಿಕೆಯ ಪರಿಣಾಮ ಖರ್ಚಿನ ಮೇಲಲ್ಲ, ಎಲ್ಲಕ್ಕೂ ಮೊದಲು ಮನಸ್ಸಿನ ಮೇಲೆ ಉಂಟಾಗುತ್ತದೆ. ಪ್ರತಿಯೊಬ್ಬರು ನಿರ್ಧಾರಿತ ಬೆಲೆಗೆ ಒಗ್ಗಿ ಹೋಗಿರುತ್ತಾರೆ. ಅದಕ್ಕೆ ತಕ್ಕಂತೆಯೇ ಅವರು ಬಜೆಟ್‌ ರೂಪಿಸುತ್ತಾರೆ. ಆದರೆ ಈ ತೆರನಾದ ಭಯಂಕರ ಎಪಿಡೆಮಿಕ್‌ ಬ್ಯಾಲೆನ್ಸ್ ಹದಗೆಡಿಸುತ್ತದೆ.

ಸರ್ಕಾರಕ್ಕೆ ಸಾಮಾನ್ಯ ಜನರ ಸಮಸ್ಯೆ ನಿವಾರಿಸುವಲ್ಲಿ ಆಸಕ್ತಿಯೇ ಇಲ್ಲ. ಸರ್ಕಾರ ಪೆಟ್ರೋಲ್ ಬೆಲೆಗಳನ್ನು ಕಡಿಮೆ ಮಾಡಲು ತಯಾರಿಲ್ಲ. ಅದರ ಮೇಲೆ ಇನ್ನಷ್ಟು ತೆರಿಗೆ ಹೇರುತ್ತಿದೆ. ವಾಸ್ತವದಲ್ಲಿ ಸರ್ಕಾರೀ ಪೆಟ್ರೋಲ್ ಡೀಸೆಲ್‌ನ ಬ್ಲ್ಯಾಕ್‌ ಮಾರ್ಕೆಟ್‌ಮಾಡುತ್ತಿದೆ. ಅದರ ವ್ಯಾಪಾರವನ್ನು ತಮ್ಮದೇ ಆದ ಕೆಲವು ವ್ಯಕ್ತಿಗಳ ಕೈಗೆ ಒಪ್ಪಿಸಿ ಅವರಿಗೆ ಲಾಭ ಮಾಡಿಕೊಡುತ್ತಿದೆ ಮತ್ತು ತಾನೂ ಲಾಭ ಹೊಡೆದುಕೊಳ್ಳುತ್ತಿದೆ. ಬೆಲೆಯೇರಿಕೆಯ ಪರಿಣಾಮವೇನೆಂದರೆ, ಭಾರತದಂತಹ ಬಡ ದೇಶದಲ್ಲಿ ಟೊಮೇಟೊ, ಈರುಳ್ಳಿ, ಆಲೂಗಡ್ಡೆ ಸ್ವಲ್ಪ ಹೆಚ್ಚು ಬೆಳೆದರೂ ಸಾಕು, ಒಮ್ಮೆಲೆ ಬೆಲೆ ಕುಸಿದು ಬೀಳುತ್ತದೆ. ಸ್ವಲ್ಪ ಅಗ್ಗವಾದ ವಸ್ತುವನ್ನು ಮನೆಯಲ್ಲಿ ಖರೀದಿಸಿ ಇಡಲೂ ಆಗದು. ಏಕೆಂದರೆ ಅಷ್ಟು ಹಣ ಜನರ ಬಳಿ ಇಲ್ಲ. ಜನರು ಈಗ ಮಕ್ಕಳ ಓದು, ಚಿಕಿತ್ಸೆ ಅಷ್ಟೇ ಏಕೆ, ಮೋಜು ಮಜಾ ಮಾಡಲು ಪ್ರವಾಸಕ್ಕೆ ಹೋಗಲು ಕೂಡ ಸಾಲ ಮಾಡುತ್ತಾರೆ. ಬೆಲೆ ಏರಿಕೆಯು ಜನರ ಅಷ್ಟಿಷ್ಟು ಉಳಿತಾಯವನ್ನೂ ನುಂಗಿಬಿಟ್ಟಿದೆ. ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕೆನ್ನುವ ಅಭ್ಯಾಸವನ್ನು ನೋಟು ರದ್ಧತಿ ಮೊದಲು ಹಾಳುಗೆಡವಿತ್ತು. ಈಗಂತೂ ಹರಿಭಜನೆ ಮಾಡಿ, ಎಟಿಎಂನ  ತಂಪು ಗಾಳಿ ಸೇವಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ