ಧೈರ್ಯಕ್ಕೆ ಮೆಚ್ಚಲೇಬೇಕು : ಮಾಡೆಲ್ ಮೆರೀಸಾ ಬಹಳಷ್ಟು ವಿವಾದಗಳಿಗೆ ಸಿಲುಕಿದ್ದಾಳೆ. ಏಕೆಂದರೆ ಈಕೆ ಯೆಹೂದಿಗಳ ಪವಿತ್ರ ಕ್ಷೇತ್ರವಾದ ಜೆರುಸಲೇಮ್ ನ ಒಂದು ಹೋಟೆಲ್‌ನ ಓಪನ್‌ ಟೆರೇಸ್‌ ಮೇಲೆ ತೆಗೆಸಿಕೊಂಡ ನಗ್ನ ಫೋಟೋ ನೆಟ್‌ ಮೂಲಕ ಜಗಜ್ಜಾಹೀರಾಗಿದೆ. ಇಂಥ ಕಂದಾಚಾರಿಗಳು ಈ ಅವಕಾಶ ಬಿಟ್ಟುಕೊಟ್ಟಾರೆಯೇ? ಸಣಕಲು ಕಡ್ಡಿ ಮಾಡೆಲ್ ಒಬ್ಬಳು ಸಾವಿರಾರು ವರ್ಷಗಳ ಹಳೆಯ ಧರ್ಮದ ವಿರುದ್ಧ ಸವಾಲು ಎಸೆದಿರುವುದು ಮೆಚ್ಚತಕ್ಕದ್ದು.

ಮ್ಯೂಸಿಕಲ್ ಕ್ರೇಝ್ : ಸ್ಟೇಜ್‌, ಮೈಕ್‌, ಲೈಟ್ಸ್ ಜೊತೆ ಲಕ್ಷಾಂತರ ಸಭಿಕರೂ ನೆರೆದಿರುವಾಗ ಯಾವ ಮಂಗಣ್ಣ ತಾನೇ ಸಿಂಗರ್‌ಆಗಲಾರ? ಇತ್ತೀಚೆಗೆ ಸ್ವೀಡನ್‌ನಲ್ಲಿ ನಡೆದ ಒಂದು ಮ್ಯೂಸಿಕಲ್ ಕನ್ಸರ್ಟ್‌ನಲ್ಲಿ ಸಂಗೀತದ ಪ್ರಭಾವ ಎಷ್ಟಾಯಿತೋ ಏನೋ, ಇಡೀ ನಗರಕ್ಕೆ ಸಿಂಗರ್‌ಗಳ ಪ್ರಭಾವವಂತೂ ಆಯಿತು.

ಇದಲ್ಲವೇ ಮಸ್ತಿ! :  ಕಡಲ ಬೀಚಿಗೆ ಹೋದ ಮೇಲೆ ಬಿಕಿನಿ ಧರಿಸದಿದ್ದರೆ ಹೇಗೆ? ಅದು ಸರಿಯಾದೀತಾ? ಯಾರಿಗೆ ತಮ್ಮ ಸುಂದರ ಮೈಕಟ್ಟಿನ ಉಬ್ಬು ತಗ್ಗುಗಳನ್ನು ಪ್ರದರ್ಶಿಸಬೇಕು ಎನಿಸುತ್ತದೋ ಅಂಥವರು ಬೀಚಿನ ಬಳಿ ಫೋಟೋಗೆ ಇಂಥ ಪೋಸ್‌ನೀಡುತ್ತಾರೆ. ಸ್ಥೂಲಕಾಯ ಹೆಂಗಸರೂ ಸಹ ತಾವು ಯಾರಿಗೇನು ಕಡಿಮೆ ಎಂಬಂತೆ ಇದೇ ಅವತಾರದಲ್ಲಿ ಪೈಪೋಟಿಗಿಳಿದಾಗ, ಪ್ರವಾಸಿಗರು ತಬ್ಬಿಬ್ಬು ಆಗುತ್ತಾರೆ.

ನಮ್ಮ ಧ್ವನಿ ಆಲಿಸಿ! : ಅಮೆರಿಕಾ ಎಷ್ಟೇ ಶ್ರೀಮಂತ ದೇಶವಾಗಿರಲಿ, ಅಲ್ಲಿನ ನಾಗರಿಕರು ಸಹ ಆರ್ಥಿಕ ಸಮಸ್ಯೆಗಳಿಂದ ತೊಳಲಾಡುತ್ತಾರೆ. ಡೊನಾಲ್ಡ್ ಟ್ರಂಪ್‌ರ ದಯೆಯಿಂದ ಎಷ್ಟೋ ಹಣಕಾಸು ಸೌಲಭ್ಯಗಳಿಗೆ ಕತ್ತರಿ ಬಿತ್ತು. ಎಷ್ಟೋ ಪಿಂಚಣಿಗರಿಗೆ ದುಡ್ಡೇ ಬರದಂತಾಗಿದೆ. ಹೀಗಾಗಿ ಇವರೆಲ್ಲ ಒಟ್ಟಾಗಿ ಈ ರೀತಿ ಪ್ರತಿಭಟಿಸಲು ಬೀದಿಗಿಳಿದಿದ್ದಾರೆ, ಪರಿಣಾಮ ಗೊತ್ತಿಲ್ಲ.

ಟ್ಯಾಲೆಂಟ್‌ ಇದೆ ದಮ್ ಕೂಡ : ಟ್ಯಾಲೆಂಟ್‌ ಹಂಟ್‌ಗಾಗಿ ಯಾವುದೇ ತರಹದ ಗುಂಪು ಒಂದುಗೂಡುತ್ತದೆ. ಡ್ಯಾನ್ಸ್ ಟ್ಯಾಲೆಂಟ್‌ಗಾಗಿ ಸ್ವೀಡನ್‌ನಲ್ಲಿ ಮಾಡಲಾದ ಈ ಹಂಟ್‌ ಜನಪ್ರಿಯವಾಯ್ತು.

ಗೆಲುವಿನ ಸಂಭ್ರಮ ಹಂಚಿಕೊಂಡ ಪರಿ : ಫುಟ್‌ಬಾಲ್ ವರ್ಲ್ಡ್ ಕಪ್‌ನ್ನು ಫ್ರಾನ್ಸ್ ಗೆದ್ದ ನಂತರ, ಫ್ರೆಂಚರು ಖುಷಿಯಲ್ಲಿ ಸಂಭ್ರಮಾಚರಣೆಗೆ ತೊಡಗಿದರು. ಈ ಮಧ್ಯೆ ಆಟಗಾರರ ಜೊತೆ ಸೆಲ್ಛಿ ಕ್ಲಿಕ್ಕಿಸಿಕೊಂಡ ಫ್ರಾನ್ಸ್ ನಲ್ಲಿ ಯಾರು ಮೋಸ್ಟ್ ಬ್ಯೂಟಿ ಎಂದು ಅಘೋಷಿತ ಕಪ್‌ ಪಡೆದರೆಂದು ಪೈಪೋಟಿ ಶುರುವಾಯಿತು. ವಿಷಯ ತಿಳಿದ ಫುಟ್‌ಬಾಲ್ ‌ಪ್ರೇಮಿ ಹುಡುಗಿಯರೆಲ್ಲ ತಮ್ಮ ಸೆಲ್ಛಿಗಳನ್ನು ಒಂದು ವೆಬ್‌ಸೈಟ್‌ಗೆ ಪೋಸ್ಟ್ ಮಾಡತೊಡಗಿದರು. ತಾವೇ `ಮಿಸ್‌ ಫ್ಯಾನ್‌' ಆಗಿ ಆಯ್ಕೆಯಾಗಬಹುದೆಂಬ ಆತ್ಮವಿಶ್ವಾಸವಿತ್ತು. ಈ ಪಟ್ಟ ಯಾರಿಗೆ ಸಿಕ್ಕಿತೋ ಗೊತ್ತಿಲ್ಲ.

ಕಲೆಗೆ ಸಂದ ಪುರಸ್ಕಾರ : ಯಾವ ರೀತಿ ವಿಶ್ವ ಸುಂದರಿ, ಭುವನ ಸುಂದರಿ ಎನಿಸಲು ಹುಡುಗಿಯರು ಚಡಪಡಿಸುತ್ತಾರೋ, ಹಾಗೆಯೇ ಪ್ಯಾರಿಸ್‌ನ ಪಡ್ಡೆಗಳು ಅಲ್ಲಿನ ಮಾಲಿನ್‌ ಕ್ಯಾಬರೆಗೆ ಹೋಗಬೇಕೆಂದು ಹಂಬಲಿಸುತ್ತಾರೆ. ಈ ಕ್ಯಾಬರೆ ಡ್ಯಾನ್ಸ್ ವಿಶ್ವವಿಖ್ಯಾತ ಎನಿಸಿದೆ. ಇಲ್ಲಿನ ನರ್ತಕಿಯರನ್ನು ಸೆಕ್ಸೀ ಡ್ಯಾನ್ಸ್ ಗಾಗಿ ಲಕ್ಷಾಂತರ ಡಾಲರ್‌ಗಳಿಗೆ ಹಾಗೆ ಕುಣಿಯುತ್ತಾರೆ ಎಂದು ಹಂಗಿಸಿದರೂ, ಇದೊಂದು ಅಪೂರ್ವ ಕಲೆಯೇ ಸರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ