ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ಇಂಟ್ರಾ: ಏಷ್ಯನ್ ಗೇಮ್ಸ್ ಅಖಾಡದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಮೈಸೂರಿನ ಮಗಳು ಪ್ರಣವಿ ಶರತ್ ಅರಸ್. ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಗಾಲ್ಫ್ ವಿಭಾಗದಲ್ಲಿ 15-ಅಂಡರ್ 265 ಸ್ಕೋರ್‌ನೊಂದಿಗೆ ಚಿನ್ನ ಗೆದ್ದ ಪ್ರಣವಿ, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಗಾಲ್ಫರ್ ಎನಿಸಿಕೊಂಡಿದ್ದಾರೆ.

ಭಾರತೀಯ ಗಾಲ್ಫ್ ಇತಿಹಾಸದಲ್ಲಿ ಕರ್ನಾಟಕದ ಹೆಮ್ಮೆಯ ಕುವರಿ, ಮೈಸೂರು ಮೂಲದ ಪ್ರಣವಿ ಶರತ್ ಅರಸ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಗಾಲ್ಫ್ ಕ್ರೀಡೆಯಲ್ಲಿ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಪ್ರಣವಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟು ಚರಿತ್ರೆ ಸೃಷ್ಟಿಸಿದ್ದಾರೆ. ಏಷ್ಯನ್ ಗೇಮ್ಸ್ ಗಾಲ್ಫ್ ಇತಿಹಾಸದಲ್ಲೇ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕ ಇದಾಗಿದ್ದು, ದೇಶದ ಕ್ರೀಡಾ ವಲಯದಲ್ಲಿ ಸಂಭ್ರಮ ಮನೆಮಾಡಿದೆ.

Pranavi urs (2)

ದೇಶದ ಕ್ರೀಡಾಭಿಮಾನಿಗಳ ಗಮನ ಸೆಳೆದಿರುವ ಈ ಚಿನ್ನದ ಹುಡುಗಿ ಒಂದು ದಿನದಲ್ಲೇ ಚಾಂಪಿಯನ್ ಆಗಿದ್ದಲ್ಲ. ಮೈಸೂರಿನ ಗಾಲ್ಫ್ ಮೈದಾನದಲ್ಲೇ ಅವರ ಕನಸಿನ ಮೊದಲ ಬೀಜ ಬಿತ್ತಲಾಗಿತ್ತು. ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್‌ಗೆ ತಂದೆ ಹಾಗೂ ಅಣ್ಣನ ಜೊತೆ ಹೋಗುತ್ತಿದ್ದ ಪುಟ್ಟ ಬಾಲಕಿ, ಗಾಲ್ಫ್​ ಆಡುವುದನ್ನು ನೋಡುತ್ತಾ ಈ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿಕೊಂಡವಳು. ಆರು ವರ್ಷದ ವಯಸ್ಸಿನಲ್ಲೇ ಗಾಲ್ಫ್ ಅಭ್ಯಾಸ ಆರಂಭಿಸಿದ ಪ್ರಣವಿ, ಏಳನೇ ವಯಸ್ಸಿನಲ್ಲಿ ಸೌತ್ ಝೋನ್ ಜೂನಿಯರ್ ಗಾಲ್ಫ್ ಟೂರ್ನಮೆಂಟ್‌ನಲ್ಲಿ ಗೆದ್ದು ತಮ್ಮ ಸಾಮರ್ಥ್ಯದ ಮೊದಲ ದೊಡ್ಡ ಸೂಚನೆ ನೀಡಿದ್ದರು.

Pranavi urs (5)

ಅಲ್ಲಿಂದ ಆರಂಭವಾದ ಪ್ರಣವಿಯ ಪಯಣ ಜೂನಿಯರ್ ಹಾಗೂ ಅಮೆಚೂರ್ ಹಂತಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿದರು. 2018ರ ಸಿಂಗಾ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್ ಸೇರಿದಂತೆ ಪ್ರಮುಖ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದರು. ನಿರಂತರ ಅಭ್ಯಾಸ, ದೈಹಿಕ ಸಿದ್ಧತೆ ಮತ್ತು ಸ್ಪರ್ಧಾತ್ಮಕ ಮನೋಭಾವವೇ ಅವರನ್ನು ಮುಂದಕ್ಕೆ ಕೊಂಡೊಯ್ದಿತು. 2020ರಲ್ಲಿ ಪ್ರಣವಿ ವೃತ್ತಿಪರ ಗಾಲ್ಫ್‌ಗೆ ಕಾಲಿಟ್ಟರು. ಅದೇ ವರ್ಷ ಹೀರೋ ವುಮೆನ್ಸ್ ಪ್ರೊ ಗಾಲ್ಫ್ ಟೂರ್‌ನ ಎರಡನೇ ಮತ್ತು ಮೂರನೇ ಲೆಗ್‌ಗಳಲ್ಲಿ ಗೆಲುವು ದಾಖಲಿಸಿ ವೃತ್ತಿಪರ ಹಂತದಲ್ಲೂ ತಮ್ಮ ಛಾಪು ಮೂಡಿಸಿದರು.

Pranavi urs (4)

ನಂತರ ಲೇಡೀಸ್ ಯುರೋಪಿಯನ್ ಟೂರ್‌ನಲ್ಲಿ ಸ್ಪರ್ಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. 2024ರ ಅಂಡಲುಸಿಯಾ ಕೋಸ್ಟಾ ಡೆಲ್ ಸೋಲ್ ಓಪನ್ ಡಿ ಎಸ್ಪಾನಾದಲ್ಲಿ ಮೂರನೇ ಸ್ಥಾನ ಹಾಗೂ ಅದೇ ವರ್ಷ ಹೆಲ್ಸಿಂಗ್‌ಬೋರ್ಗ್ ಓಪನ್ನಲ್ಲೂ ಮೂರನೇ ಸ್ಥಾನಕ್ಕೆ ಸಮನಾದ ಸಾಧನೆ ಅವರ ಬೆಳೆಯುತ್ತಿರುವ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು. 2024ರ LET ಸೀಸನ್‌ನ್ನು 17ನೇ ಸ್ಥಾನದಲ್ಲೂ ಮುಗಿಸಿದ್ದರು.

Pranavi urs (6)

ಪ್ರಣವಿಯ ಸಾಧನೆಯ ಮತ್ತೊಂದು ದೊಡ್ಡ ಮೈಲಿಗಲ್ಲು 2023ರಲ್ಲಿ ಬಂದಿತು. ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿತು. ಇದಕ್ಕೂ ಮೊದಲು 2022ರಲ್ಲೇ ಅವರನ್ನು ಭಾರತದ Target Olympic Podium Scheme (TOPS) Core Groupಗೆ ಸೇರಿಸಲಾಗಿತ್ತು. ಅಂದರೆ, ಏಷ್ಯನ್ ಗೇಮ್ಸ್ ಚಿನ್ನಕ್ಕೂ ಮುನ್ನವೇ ದೇಶದ ಕ್ರೀಡಾ ವ್ಯವಸ್ಥೆ ಪ್ರಣವಿಯ ಸಾಮರ್ಥ್ಯವನ್ನು ಗುರುತಿಸಿತ್ತು ಆದರೆ ಏಷ್ಯನ್ ಗೇಮ್ಸ್ ಚಿನ್ನದ ಕಥೆಯಲ್ಲೇ ಒಂದು ರೋಚಕ ತಿರುವಿದೆ. 2022ರ ಏಷ್ಯನ್ ಗೇಮ್ಸ್‌ಗಾಗಿ ನಡೆದ ಭಾರತೀಯ ಆಯ್ಕೆ ಟ್ರಯಲ್ಸ್‌ನ ಮೊದಲ ದಿನವೇ ಬಲ ಭುಜದ ಸ್ನಾಯು ಗಾಯಕ್ಕೆ ಒಳಗಾದ ಕಾರಣ ಪ್ರಣವಿ ಹಿಂದೆ ಸರಿಯಬೇಕಾಯಿತು. ಕೋವಿಡ್ ಕಾರಣದಿಂದ ಕ್ರೀಡಾಕೂಟ ಮುಂದೂಡಲ್ಪಟ್ಟ ನಂತರ 2023ರಲ್ಲಿ ಮತ್ತೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಾನ ಪಡೆದು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಆಡಿದರು. ಅಲ್ಲಿ ವೈಯಕ್ತಿಕ ವಿಭಾಗದಲ್ಲಿ 13ನೇ ಸ್ಥಾನ ಪಡೆದ ಅವರು, ಭಾರತೀಯ ಮಹಿಳಾ ತಂಡದ ನಾಲ್ಕನೇ ಸ್ಥಾನಕ್ಕೂ ಕೊಡುಗೆ ನೀಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ