ಬ್ರಾ ಮೂಲಕ ಪ್ರೇಮಿಯನ್ನು ಅರ್ಥೈಸಿಕೊಳ್ಳಿ : ನಿಮ್ಮ ಪ್ರೇಮಿಯ ಪ್ರೇಮ ನೈಜವೇ ಅಲ್ಲವೇ ತಿಳಿಯಲು, ಆತನನ್ನು ನಿಮ್ಮ ಬ್ರಾ ಕಳಚಲು ತಿಳಿಸಿ. ಗಾಬರಿ ಬೇಡ, ಈ ಬ್ರಾ ಒಂದು ಮೊಬೈಲ್‌ಗೆ ಸಂಬಂಧಪಟ್ಟಿದೆ, ಹೀಗಾಗಿ ಎದುರಿಗಿರುವ ವ್ಯಕ್ತಿಯ ಹೃದಯಬಡಿತವನ್ನೂ ಗುರುತಿಸಬಲ್ಲದು! ಪ್ರೇಮಿ ಅಸಲಿ ಆಗಿದ್ದರೆ ಬ್ರಾ ಕಳಚಲ್ಪಡುತ್ತದೆ, ಒತ್ತಾಯಪಡಿಸುತ್ತಿದ್ದಾನೆ ಎಂದರೆ ಖಂಡಿತಾ ಕಳಚದು. ಇದೊಂದು ಜಪಾನಿ ಆವಿಷ್ಕಾರವಾಗಿದೆ. ಇದೇ ತರಹ ಪ್ಯಾಂಟಿ ಸಹ ಸಿದ್ಧಗೊಂಡರೆ, ಅತ್ಯಾಚಾರ ಹೆಚ್ಚುತ್ತಿರುವ ದೇಶಗಳಲ್ಲಿ ಹೆಚ್ಚು ಸೇವ್ ‌ಗ್ಯಾರಂಟಿ.

samachar-2

ಸಂತಸ ಅರಳುವ ಸಮಯ : ಪಶ್ಚಿಮ ಏಷ್ಯಾದ ದೇಶ ಫ್ಯಾಲೆಸ್ತೇನ್ ಇಸ್ರೇಲ್‌ನ ವಿರುದ್ಧ ತನ್ನ ಅಸ್ತಿತ್ವಕ್ಕಾಗಿ ತೀವ್ರವಾಗಿ ಹೋರಾಡುತ್ತಿದೆ, ಹೀಗಾಗಿ ಪ್ರತಿದಿನ ಎರಡೂ ದೇಶಗಳು ಸಿಡಿಮದ್ದು ಹಾರಿಸುತ್ತಿರುತ್ತವೆ. ಅಂದಮಾತ್ರಕ್ಕೆ ಜೀವನ ನಿಂತುಹೋಗುತ್ತದೆಯೇ? ಇತ್ತೀಚೆಗೆ ನಡೆದ ಒಂದು ಸಾಮೂಹಿಕ ವಿವಾಹದಲ್ಲಿ ಅಲ್ಲಿ 300 ಜೋಡಿಗಳು ಹೊಸ ಜೀವನಕ್ಕೆ ಮೊದಲಿಟ್ಟ. ಮೇಕಪ್‌ಗಿಂತ ಹೆಚ್ಚಾಗಿ ವಧುಗಳ ಮುಖದಲ್ಲಿ ಸಂತಸ ಉಕ್ಕಿ ಅರಳುತ್ತಿದೆ, ಅಲ್ಲವೇ?

samachar-3

ಹೊಸ ವರ್ಷದ ಸಂಭ್ರಮಾಚರಣೆ : ಚೀನಾದ ಹೊಸ ವರ್ಷಾಚರಣೆ ಫೆಬ್ರವರಿ 1 ರಂದು ನಡೆಯಿತು. ಚೀನಾ ಹಾಗೂ ಇತರ ರಾಷ್ಟ್ರಗಳಲ್ಲಿ ಹರಡಿಹೋದ ಕೋಟ್ಯಂತರ ಚೀನೀಯರು ಈ ದಿನವನ್ನು ಮನಸಾರೆ ಕೊಂಡಾಡಿದರು.

samachar-4

ಕಂಗ್ರಾಟ್ಸ್ ಹೇಮಾಜಿ! : ಎವರ್‌ ಗ್ರೀನ್‌ ಡ್ರೀಮ್ ಗರ್ಲ್ ಹೇಮಾಮಾಲಿನಿ ಮಗಳ ಮದುವೆ ಮಾಡಿ ಅತ್ತೆ ಅನಿಸಿದರು, ಕೆಲವೇ ದಿನಗಳಲ್ಲಿ ಅಜ್ಜಿ ಆಗಲಿದ್ದಾರೆ. ಅವರ ಮಗಳು ಈಶಾ, ಭರತ್‌ ತಖ್ತಾನಿಯನ್ನು ವರಿಸಿದರು. ಹೇಮಾಜಿ ಧರ್ಮೇಂದ್ರಜಿ ಕಂಗ್ರಾಟ್ಸ್! ಧರ್ಮೇಂದ್ರರಿಗೆ ಅದು ಎರಡನೇ ಮದುವೆ ಇರಬಹುದು, ಹೇಮಾ ಸಂಸಾರ ನಿಭಾಯಿಸಿ ಮಕ್ಕಳನ್ನು ಸತ್ಪ್ರಜೆಗಳಾಗಿಸಿದ ವಿಧಾನ ಮಾತ್ರ ಶ್ಲಾಘನೀಯ.

samachar-5

ಹೆಚ್ಚುತ್ತಿರುವ ಕಲೆಯ ಮಹತ್ವ : ದೆಹಲಿ ಕೇವಲ ಧನದಾಹಿಗಳ ಊರಲ್ಲ, ಕಲಾ ಪ್ರೇಮಿಗಳ ತವರೂ ನಿಜ! 2008ರಿಂದ ಸತತ ನಡೆದುಕೊಂಡು ಬರುತ್ತಿರುವ ಕಲಾ ಮೇಳದಿಂದ ಇದು ತಿಳಿಯುತ್ತದೆ. ಇದಕ್ಕಾಗಿ ಜನ ಮುಗಿಬಿದ್ದು ನೋಡುತ್ತಾರೆ. ಈ ಸಲದ ಥೀಂ ಕನ್ಯಾ ಭ್ರೂಣಹತ್ಯೆಯ ವಿರುದ್ಧ ಸಿಡಿದೇಳುವುದಾಗಿತ್ತು.

samachar-6

ಮೋಜುಮಸ್ತಿ ಸಲುವಾಗಿ : ದ. ಅಮೆರಿಕಾದ ದೇಶ ಉರುಗ್ವೆಯ ಜನ ತಮ್ಮ ಮೋಜುಮಜಾ ಉಡಾಯಿಸಲು ಖ್ಯಾತರು. ಅಲ್ಲಿ ಇಡೀ ಫೆಬ್ರವರಿ ತಿಂಗಳು ಪೂರ್ತಿ ಕಾರ್ನಿವಾಲ್ ‌ಇರುತ್ತದೆ. ಈ ತರಹದ ಮೋಜಿನ ಮೆರವಣಿಗೆ ನಗರವಿಡೀ ನಡೆಯುತ್ತದೆ. ನಮ್ಮಲ್ಲಿಯೂ ಕುಂಭಮೇಳದಂಥ ಕಡೆ ಇದು ನಡೆಯುತ್ತದೆ, ಆದರೆ ಬೇರೆ ತರಹದಲ್ಲಿ. ನಮ್ಮ ಭಾರತದಂತೆಯೇ ಈ ದೇಶ ಸಹ ಬಡದೇಶವೆಂದೇ ಗುರುತಿಸಲ್ಪಟ್ಟಿದೆ.

samachar-7

ಇಂಥ ಗೂಬೆ ಎಲ್ಲೆಲ್ಲೂ ಇರಬಾರದೇ? : ವಾಶಿಂಗ್‌ ಟನ್‌ನಲ್ಲಿ ಗೂಬೆಗಳಿಗೇನೂ ಕೊರತೆ ಇಲ್ಲ. ನಮ್ಮ ವಿಧಾನಸೌಧ ಹಾಗೂ ಪಾರ್ಲಿಮೆಂಟ್‌ ತರಹ ಅಲ್ಲಿನ ಸಂಸತ್ತು ಹಾಗೂ ವೈಟ್‌ ಹೌಸ್‌ನಲ್ಲೂ ಬೇಕಾದಷ್ಟಿವೆ, ಆದರೆ ಅವೆಲ್ಲ ಕರಿಕೋಟು ಸೂಟು ಧರಿಸಿದಂಥ! ಅಸಲಿ ಐಸ್‌ ಗೂಬೆ ಉತ್ತರ ಭಾಗದಿಂದ ಹಾರಿ ಈ ನಗರಕ್ಕೆ ಅದು ಹೇಗೆ ಬಂದು ತಲುಪಿತೋ ಏನೋ? ಅದಕ್ಕೆ ಆಹಾರ ತಿನ್ನಿಸಿ, ಚಿಕಿತ್ಸೆ ನೀಡಿ, ಮತ್ತೆ ಉತ್ತರ ಧ್ರುವಕ್ಕೆ ಐಸ್‌ ಮಧ್ಯೆ ಬಿಡಲಾಯಿತು. ಇಂಥ ಗೂಬೆ ಎಲ್ಲೆಲ್ಲೂ ಇರಬಾರದೇ....?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ