``ನಮಸ್ಕಾರ..... ದೂರದರ್ಶನ ಕೇಂದ್ರ ಬೆಂಗಳೂರು. ಈಗ ಮುನ್ನೋಟ.....'' ಟಿ.ವಿ. ಆನ್‌ ಮಾಡುತ್ತಿದ್ದಂತೆ ಕೇಳಿ ಬರುತ್ತಿದ್ದ ಇಂಪಾದ ಸ್ವರವಿದು. ಆಗ ನಗುಮೊಗದೊಂದಿಗೆ, ಇಂಪಾದ ಸ್ವರದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದರು ಅಪರ್ಣಾ ನಾರಾಯಣಸ್ವಾಮಿ.

ದೂರದರ್ಶನವೇ ಆಗ ಏಕೈಕ ಮನರಂಜನೆಯ ಸಾಧನ. ಬೆಂಗಳೂರು ದೂರದರ್ಶನಕ್ಕೆ ಆಗ ಸಿಗುತ್ತಿದ್ದುದು ಕೆಲವೇ ಕೆಲವು ಗಂಟೆಗಳು ಮಾತ್ರ. ಇಂತಹ ಸ್ಥಿತಿಯಲ್ಲಿ ವೀಕ್ಷಕರನ್ನು ಕದಲದಂತೆ, ಒಂದೆಡೆ ಕುಳಿತುಕೊಳ್ಳುವಂತೆ ಮಾಡಿದ್ದು ಅಪರ್ಣಾರ ಮಾತಿನ ಮೋಡಿಯೇ ಹೌದು.

ನಿರೂಪಕಿಯಾಗಿ ಖ್ಯಾತಿ ಗಳಿಸುವ ಮುನ್ನವೇ ಅಪರ್ಣಾ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌‌ರ ಕಣ್ಣಿಗೆ ಬಿದ್ದು `ಮಸಣದ ಹೂ' ನಾಯಕಿಯಾಗಿದ್ದರು.

ಅಪರ್ಣಾ ಇಂದು ಈ ಸ್ಥಿತಿಗೆ ತಲುಪಲು ಅವರ ಅಪಾರ ಪರಿಶ್ರಮ, ಆತ್ಮವಿಶ್ವಾಸ, ತಿಳಿದುಕೊಳ್ಳಬೇಕೆಂಬ ಕುತೂಹಲವೇ ಕಾರಣ. ಅದಕ್ಕೆ ಅವರಿಗೆ ಬೆಂಬಲವಾಗಿ ನಿಂತರು ತಂದೆ ಕೆ.ಎಸ್‌. ನಾರಾಯಣಸ್ವಾಮಿ.

ಸಾಹಿತ್ಯದ ವಾತಾವರಣ

Untitled-2

ತಂದೆ ನಾರಾಯಣಸ್ವಾಮಿ ಪತ್ರಕರ್ತರು. ಕನ್ನಡದ ಪ್ರಸಿದ್ಧ ದೈನಿಕಗಳ ಸಿನಿಮಾ ಹಾಗೂ ಭಾನುವಾರದ ಪುರವಣಿ ವಿಭಾಗದಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಮನೆಯಲ್ಲಿ ಸದಾ ಸಾಹಿತ್ಯದ ಗಾಳಿಯೇ ಬೀಸುತ್ತಿತ್ತು.

ಸಾಹಿತಿಗಳು, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಆಗಾಗ ಅವರ ಮನೆಗೆ ಬರುತ್ತಿದ್ದರು. ಏನಾದರೊಂದು ಚರ್ಚೆ ಅಲ್ಲಿ ಯಾವಾಗಲೂ ನಡೆದೇ ಇರುತ್ತಿತ್ತು. ಅಪರ್ಣಾರ ಅಮ್ಮ ಪದ್ಮಾ ನಾರಾಯಣಸ್ವಾಮಿ ಮೂಲತಃ ಮೈಸೂರಿನವರು. ಅವರು ನಾಟಕ ಕಲಾವಿದೆ. ಜೊತೆಗೆ ಗಮಕ ಕಲೆಯಲ್ಲೂ ಪ್ರಾವೀಣ್ಯತೆ ಪಡೆದಿದ್ದರು. ಕನ್ನಡದ ಪತ್ರಿಕೆಗಳಿಗೆ ಲೇಖನಗಳನ್ನು, ಸಾಹಿತ್ಯ ಸಮ್ಮೇಳನದ ವರದಿಗಳನ್ನು ಬರೆಯುತ್ತಿದ್ದರು.

ಅಪರ್ಣಾ ಆಗ ಓದುತ್ತಿದ್ದುದು ಕುಮಾರ ಪಾರ್ಕ್‌ ಹೈಸ್ಕೂಲಿನಲ್ಲಿ. ಬಾಲ್ಯದಿಂದಲೇ ಪ್ರತಿಭಾನ್ವಿತೆ. ಕನ್ನಡ ಹಾಗೂ ಇಂಗ್ಲಿಷ್‌ ಕವಿತಾ ವಾಚನದಲ್ಲಿ ಪ್ರತಿವರ್ಷ ಪ್ರಥಮ ಬಹುಮಾನ ಪಡೆಯುತ್ತಿದ್ದರು. `ಪಾತಾಳದಲ್ಲಿ ಪಾಪಚ್ಚಿ' ಎಂಬ ಆಕಾಶವಾಣಿ ಕಾರ್ಯಕ್ರಮದಲ್ಲಿ ಆಗಲೇ ತಮ್ಮ ಚಮಕ್‌ ತೋರಿಸಿಬಿಟ್ಟಿದ್ದರು.

ಮಕ್ಕಳಿಗೆ ಬಿಡುವಿದ್ದಾಗೆಲ್ಲ ಅಪ್ಪ ಸಾಹಿತ್ಯ ಕಾರ್ಯಕ್ರಮಗಳಿಗೆ ಹಾಗೂ ಸಿನಿಮಾ ಶೂಟಿಂಗ್‌ಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಅಪರ್ಣಾರಿಗೆ ಬಾಹ್ಯ ಪ್ರಪಂಚದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಆಗಲೇ ಉತ್ಪತ್ತಿಯಾಯಿತೆನ್ನಬಹುದು.

ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಅಪರ್ಣಾರಿಗೆ ಆಗ ಮೌಂಟ್‌ ಕಾರ್ಮೆಲ್‌‌ನಲ್ಲಿ ಸೀಟು ಸಿಕ್ಕಿತ್ತು. ಆದರೆ ಅಲ್ಲಿನ ವಾತಾವರಣದ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದ ಅಪರ್ಣಾ ಅಲ್ಲಿ ಸೇರಲಿಚ್ಛಿಸದೆ ಮಲ್ಲೇಶ್ವರದ ಎಂಇಎಸ್‌ ಕಾಲೇಜು ಆಯ್ಕೆ ಮಾಡಿಕೊಂಡರು.

ಸಿನಿಮಾಕ್ಕೆ ಆಯ್ಕೆ

Untitled-3

ನಾರಾಯಣಸ್ವಾಮಿಯವರು ಪ್ರತಿವಾರ ನಿರ್ಬಿಡೆಯಿಂದ ಸಿನಿಮಾ ವಿಮರ್ಶೆ ಬರೆಯುತ್ತಿದ್ದರು. ಮೊದಲೇ ಪರಿಚಯವಿದ್ದ ಪುಟ್ಟಣ್ಣ ಕಣಗಾಲ್ ‌ಆಗಾಗ ಅವರ ಮನೆಗೆ ಬರುತ್ತಿದ್ದರು. ಅದೊಂದು ಸಲ ಅಪರ್ಣಾರನ್ನು ನೋಡಿ ನಿಮ್ಮ ಮಗಳನ್ನು ಹಾಕಿಕೊಂಡು `ಸ್ಕೂಲ್ ಗರ್ಲ್' ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದರು. ಆ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದ ನಾರಾಯಣಸ್ವಾಮಿಯವರು `ಮಾಡಪ್ಪ ಮಾಡು,' ಎಂದಷ್ಟೇ ಹೇಳಿದ್ದರು.

ಅದೊಂದು ದಿನ ಪುಟ್ಟಣ್ಣ ಅವರ ಮನೆಗೆ ಬಂದು, `ಮಸಣದ ಹೂ' ಚಿತ್ರಕ್ಕೆ ನಿಮ್ಮ ಮಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು. `ಸ್ಕೂಲ್ ಗರ್ಲ್' ಚಿತ್ರದ ಬಗ್ಗೆ ಹೇಳಿದಂತೆ ಈಗಲೂ ಹಾಗೆಯೇ ಹೇಳುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಭಾವಿಸಿದ್ದರು. ಆದರೆ ಮರುದಿನ ಮನೆ ಮುಂದೆ ಕಾರು ಬಂದು ನಿಂತಾಗಲೇ ಅವರಿಗೆ ತಮ್ಮ ಮಗಳು ಹೀರೋಯಿನ್‌ಆಗಿರುವುದು ಖಾತ್ರಿಯಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ