ವಿಶ್ವದ 80ಕ್ಕೂ ಹೆಚ್ಚು ದೇಶಗಳಲ್ಲಿ ಕಾಫಿ ಬೆಳೆಯಲ್ಪಡುತ್ತದೆ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಳಸಲ್ಪಡುತ್ತದೆ. ಇದು 2000ಕ್ಕೂ ಹೆಚ್ಚಿನ ಬ್ರ್ಯಾಂಡ್‌ಗಳಲ್ಲಿ ವಿಶ್ವಾದ್ಯಂತ ಹರಡಿದೆ. ಲಂಡನ್ನಿನ ಇಂಟರ್‌ ನ್ಯಾಷನಲ್ ಕಾಫಿ ಆರ್ಗನೈಝೇಷನ್‌ ಕಾಫಿ ಬೆಳೆಯುವ ಗ್ರಾಹಕ ರಾಷ್ಟ್ರಗಳ ನಡುವಣ ಸೇತುವೆಯಾಗಿದೆ.

ಭಾರತಕ್ಕೆ ಕಾಫಿ ಬಂದದ್ದು 16ನೇ ಶತಮಾನದಲ್ಲಿ. ಪಶ್ಚಿಮ ಘಟ್ಟಗಳಲ್ಲಿ 1820ರ ಹೊತ್ತಿಗೆ ಬ್ರಿಟಿಷರು ಕಮರ್ಷಿಯಲ್ ಸ್ಕೇಲ್ ಪ್ಲಾಂಟೇಷನ್‌ ಅಣಿಗೊಳಿಸಿದರು. ಇದು ಸುಮಾರು 4.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ, ವಾರ್ಷಿಕ 3.2 ಲಕ್ಷ ಟನ್‌ ಲೆಕ್ಕದಲ್ಲಿ ಬೆಳೆಯಲ್ಪಡುತ್ತದೆ. ನಮ್ಮ ದೇಶದ ಅಭಿವೃದ್ಧಿಗೊಳ್ಳದ ಪ್ರದೇಶಗಳಲ್ಲಿ ಕಾಫಿ ಸಾಮಾಜಿಕ ಆರ್ಥಿಕ ಅಭಿೃದ್ಧಿಯ ವಾಣಿಜ್ಯ ಬೆಳೆಯಾಗಿದೆ.

ಆಯ್ದ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಕಾಫಿ ಬೀಜ ಬೆಳೆಯಲಾಗುತ್ತದೆ. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ 16ನೇ ಶತಮಾನದಿಂದಲೇ ಇದನ್ನು ಬೆಳೆಯಲಾಗುತ್ತಿತ್ತು. ಆದರೆ ಸ್ವಾತಂತ್ರ್ಯದ ನಂತರ ಆಂಧ್ರ, ಒರಿಸ್ಸಾ, ಈಶಾನ್ಯ ರಾಜ್ಯಗಳಲ್ಲಿ ಇದರ ಬೆಳವಣಿಗೆ ಆಯಿತು. 1970ರ ನಂತರ ಆಂಧ್ರಪ್ರದೇಶದ ಪೂರ್ವ ಭಾಗ ಹಾಗೂ ದಕ್ಷಿಣ ಒರಿಸ್ಸಾದ ಕೊರಪುಟ ಜಿಲ್ಲೆಗಳಲ್ಲಿ (ಒಟ್ಟಾರೆ ಪೂರ್ವ ಘಟ್ಟದ ವಲಯ) ಇದು ಪ್ರಮುಖ ಬೆಳೆಯಾಯ್ತು.

1947ರ ನಂತರ ಈ ಬೆಳೆ ಗಣನೀಯವಾಗಿ ಹೆಚ್ಚಿದೆ. ವಾರ್ಷಿಕ 18,893 ಟನ್‌ ಇದ್ದದ್ದು 2001ರ ಹೊತ್ತಿಗೆ 3,18,200 ಟನ್‌ಗೆ ಏರಿದೆ.

ಪೂರ್ಪ ಪಶ್ಚಿಮ ಘಟ್ಟಗಳಲ್ಲಿ ಮರಗಳ ನೆರಳಿನಲ್ಲಿ ಕಾಫಿ ಬೆಳೆಯಲ್ಪಡುತ್ತದೆ. ಇಳುವರಿಯ ನಂತರ ಇದು ಇಂಧನ ಮೂಲವಾಗಿಯೂ ಪ್ರಧಾನವಾಗಿ ಗುರುತಿಸಲ್ಪಟ್ಟಿದೆ. ಉಪಬೆಳೆಯಾಗಿ ಮರಗಳಿಗೆ ಮೆಣಸು ಬಳ್ಳಿ ಹಬ್ಬಿಸಲಾಗುತ್ತದೆ. ಜೊತೆಗೆ ಕಿತ್ತಳೆ, ಅಡಕೆ, ವೆನಿಲಾ, ಬಾಳೆ, ನಿಂಬೆ ಇತ್ಯಾದಿಗಳನ್ನೂ ಸಾಕಷ್ಟು ಬೆಳೆಯುತ್ತಾರೆ. ಒಟ್ಟಾರೆ ಈ ಕಾಫಿ ಉದ್ಯಮ ಅರ್ಧ ಮಿಲಿಯನ್‌ಗೂ ಹೆಚ್ಚಿನ ಮಂದಿಗೆ ಪ್ಲಾಂಟೇಷನ್‌ ಎಸ್ಟೇಟ್‌ಗಳಲ್ಲಿ ಉದ್ಯೋಗ ಕಲ್ಪಿಸಿದರೆ, ಉಳಿದರ್ಧ ಮಿಲಿಯನ್‌ ಮಂದಿ ಕಾಫಿಯ ಸಂಸ್ಕರಣ, ವ್ಯಾಪಾರದಲ್ಲಿ ಉದ್ಯೋಗ ಕಂಡುಕೊಳ್ಳುವಂತಾಗಿದೆ.

ಭಾರತದಲ್ಲಿ ಕಾಫಿ ಬೆಳೆ ಪರಿಪೂರ್ಣವಾಗಿ ಯಾಂತ್ರಿಕ ನೆರವಿಲ್ಲದೆ ಕೀಳಲ್ಪಟ್ಟು, ಒಣಗಿಸಿ, ಎಲ್ಲಾ ಹಂತಗಳಲ್ಲೂ ಶಿಸ್ತಿನ ಗುಣಮಟ್ಟ ನಿಯಂತ್ರಣ ಕಾಯ್ದುಕೊಂಡು ಅಚ್ಚುಕಟ್ಟಾಗಿ ರಫ್ತಾಗುತ್ತದೆ. 13 ವಿಭಿನ್ನ ಭೌಗೋಳಿಕ ಪ್ರಾಂತ್ಯಗಳಲ್ಲಿ ಬೆಳೆಯಲ್ಪಡುವ ಕಾಫಿ ಅರೇಬಿಕಾ, ರೊಬೋಸ್ಟಾ, ರಾಯ್‌, ಮೈಸೂರು ನಗೆಟ್ಸ್, ಎಕ್ಸ್ ಟ್ರಾ ಬೋಲ್ಡ್, ಮಾನ್‌ ಸೂನ್‌ ಮಲಬಾರ್‌ ಮುಂತಾದ ಬ್ರ್ಯಾಂಡ್ ಗಳಿಂದ ಜನಪ್ರಿಯವಾಗಿದೆ. ಪ್ರಾರಂಭಿಕ ಹಂತದಿಂದಲೇ ಪ್ರಧಾನ ವಾಣಿಜ್ಯ ಬೆಳೆಯಾಗಿ ಅತ್ಯಧಿಕ ಪ್ರಮಾಣದಲ್ಲಿ ರಫ್ತಾಗಿ, ವಿದೇಶೀ ವಿನಿಮಯದಲ್ಲಿ ಸಿಂಹಪಾಲು ಗಳಿಸಿದೆ. ವಿಶ್ವಾದ್ಯಂತ ಭಾರತದ ಕಾಫಿ ತನ್ನ ವಿಶೇಷತೆಯಿಂದಾಗಿ ಹೆಚ್ಚು ಜನಪ್ರಿಯ ಎನಿಸಿದೆ. ವಿಶ್ವ ಮಾರುಕಟ್ಟೆಯಲ್ಲಿ ವಾಶ್ಡ್ ರೊಬೋಸ್ಟಾ ಹಾಗೂ ಮಾನ್‌ ಸೂನ್‌ ಮಲಬಾರ್‌ ಪ್ರಧಾನ ಎಸ್‌ ಪ್ರೆಸೋ ಬ್ಲೆಂಡ್ಸ್ ಎನಿಸಿವೆ.

ಭಾರತ ವಿಶ್ವ ಕಾಫಿ ಬೆಳೆಯಲ್ಲಿ ಬ್ರೆಝಿಲ್, ವಿಯೆಟ್ನಾಮ್, ಕೊಲಂಬಿಯಾ, ಇಂಡೋನೇಷ್ಯಾ ಹಾಗೂ ಇಥಿಯೋಪಿಯಾಗಳ ನಂತರ 6ನೇ ಸ್ಥಾನದಲ್ಲಿದೆ. ಅರೇಬಿಕಾ ಮತ್ತು ರೋಬೋಸ್ಟಾವನ್ನು 32:68 ಅನುಪಾತದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕ ರಾಜ್ಯ ಮಾತ್ರ ಭಾರತದ ಶೇ.72ರಷ್ಟು ಕಾಫಿಯನ್ನು ಒದಗಿಸುತ್ತದೆ. ಕೊಡಗು, ಚಿಕ್ಕಮಗಳೂರು, ಹಾಸನ ಈ ನಿಟ್ಟಿನಲ್ಲಿ ಕಾಫಿ ಇಳುವರಿ ನೀಡುವಲ್ಲಿ ಮುಂಚೂಣಿಯಲ್ಲಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ