ಇತ್ತೀಚೆಗೆ ಹಲವಾರು ಬುದ್ದಿ ಜೀವಿಗಳು ಅಸಹಿಷ್ಣುತೆ ಎಂಬ ಹೆಸರಿನಲ್ಲಿ ಸರ್ಕಾರ ತಮಗೆ ನೀಡಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸುವುದೇ ಒಂದು ದೊಡ್ಡ ಪ್ರಹಸನವಾಗಿದೆ. ಹಾಗೆ ಪ್ರಶಸ್ತಿಗಳನ್ನು ಹಿಂದಿರುಗಿಸುವವರು ಕಾಟಾಚಾರಕ್ಕೆ ಕೇವಲ ಪ್ರಶಸ್ತಿ ಪ್ರಮಾಣ ಪತ್ರ ಇಲ್ಲವೇ ಪದಕಗಳನ್ನು ಹಿಂದಿರುಗಿಸಿದ್ದಾರೆಯೇ ಹೊರತು ಯಾರೂ ಸಹಾ ಆ ಪ್ರಶಸ್ತಿಯೊಂದಿಗೆ ಸರ್ಕಾರ ನೀಡಿದ್ದ ಹಣವನ್ನು ಹಿಂದುರಿಗಿಸದೇ ಆವರ ಹಾರಾಟ, ಚೀರಾಟಗಳೆಲ್ಲವೂ ಹಾಸ್ಯಾಸ್ಪದ ಎನಿಸಿಕೊಂಡಿವೆ.

GP1

ಆದರೆ, ಇದಕ್ಕೆ ಅಪರೂಪದ ಅಪವಾದ ಎನ್ನುವಂತೆ, ವಿಶ್ವದ ಅತಿದೊಡ್ಡ ಪ್ರಕಾಶಕನ ಸಂಸ್ಥೆಗಳಲ್ಲಿ ಒಂದಾದ ಉತ್ತರ ಪ್ರದೇಶದ ಗೋರಖ್‌ಪುರದ ಗೀತಾ ಪ್ರೆಸ್ ಪ್ರಕಾಶನ ಸಂಸ್ಥೆಗೆ ಕೇಂದ್ರ ಸರ್ಕಾರವು 2021ರ ಗಾಂಧಿ ಶಾಂತಿ ಪ್ರಶಸ್ತಿಯ ಜೊತೆಗೆ 1 ಕೋಟಿ ಬಹುಮಾನದಲ್ಲಿ ಕೇವಲ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸಲು ಒಪ್ಪಿಕೊಂಡು ಹಣವನ್ನು ಸ್ವೀಕರಿಸಲು ನಿರಾಕರಿಸುವ ಮೂಲಕ ಎಲ್ಲರ ಹುಬ್ಬನ್ನು ಏರಿಸುವಂತೆ ಮಾಡಿದೆ ಎಂದರೂ ಅತಿಶಯವಲ್ಲ.

gandhi_prize

ಅಹಿಂಸಾತ್ಮಕ ಮತ್ತು ಇತರ ಗಾಂಧಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪತ್ರಿಕೆಗಳಿಗೆ ನೀಡಲಾಗುತ್ತಿದೆ. ಭಾನುವಾರ 18.06.2023 ರಂದು ನಮ್ಮ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ತೀರ್ಪುಗಾರರ ಸಮಿತಿಯು ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಗೋರಖ್‌ಪುರದ ಗೀತಾ ಪ್ರೆಸ್‌ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗಾಂಧಿ ಶಾಂತಿ ಪ್ರಶಸ್ತಿಯು ಮಹಾತ್ಮ ಗಾಂಧಿಯವರ 125 ನೇ ಜನ್ಮದಿನದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಆದರ್ಶಗಳಿಗೆ ಗೌರವವಾಗಿ 1995 ರಲ್ಲಿ ಸರ್ಕಾರವು ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿದ್ದು, ಈ ಪ್ರಶಸ್ತಿಯು ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ. ಪ್ರಶಸ್ತಿಯು 1 ಕೋಟಿ ರೂ., ಪ್ರಶಸ್ತಿ ಪತ್ರ, ಫಲಕ ಮತ್ತು ಸೊಗಸಾದ ಸಾಂಪ್ರದಾಯಿಕ ಕರಕುಶಲ/ಕೈಮಗ್ಗದ ವಸ್ತುವನ್ನು ಒಳಗೊಂಡಿರುತ್ತದೆ. 2019ರಲ್ಲಿ ಈ ಪ್ರಶಸ್ತಿಯನ್ನು ಒಮಾನ್ ದೇಶದ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಅವರಿಗೆ ನೀಡಲಾಗಿದ್ದರೆ, 2020ರಲ್ಲಿ ಬಾಂಗ್ಲಾದೇಶದ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ನೀಡಲಾಗಿತ್ತು.

GP4

ಗೀತಾ ಪ್ರೆಸ್ ಸಂಸ್ಥೆಯು ಪ್ರಶಸ್ತಿಗೆ ಭಾಜನರಾಗಿದ್ದಕ್ಕಾಗಿ, ಪ್ರಧಾನಿ ಮೋದಿಯವರು ಗೋರಖ್‌ಪುರದ ಗೀತಾ ಪ್ರೆಸ್‌ ಕಳೆದ 100 ವರ್ಷಗಳಲ್ಲಿ ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳನ್ನು ಹೆಚ್ಚಿಸಲು ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ತಮ್ಮ ಟ್ವೀಟ್ ಮೂಲಕ ಅಭಿನಂದಿಸಿದ್ದರು.

GP_contreversy

ಈ ವಿಷಯವನ್ನು ತಿಳಿಯುತ್ತಿದ್ದಂತೆಯೇ, ಎಂದಿನಂತೆ ಕಾಂಗ್ರೇಸ್ ಪಕ್ಷವು ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿರುವುದನ್ನು ಖಂಡಿಸಿ, ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಗೋರಖ್‌ಪುರದ ಗೀತಾ ಪ್ರೆಸ್‌ಗೆ 2021ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿರುವುದು ಒಂದು ಅಪಹಾಸ್ಯವಾಗಿದ್ದು ಇದು ಸಾವರ್ಕರ್‌ ಹಾಗೂ ಗೋಡ್ಸೆಗೆ ಪ್ರಶಸ್ತಿ ನೀಡಿದಂತೆ ಆಗಿದೆ ಎಂದು ತಮ್ಮ ಆಕ್ರೋಶವನ್ನು ಟ್ವೀಟ್ ಮುಖಾಂತರ ಹೊರಕಾಕಿದ್ದಾರೆ. ಕಾಂಗ್ರೇಸ್ಸಿನ ಆಕ್ರೋಶಕ್ಕೆ ಮೂಲವೇನು ಎಂಬುದನ್ನು ಹುಡುಕಿದಾಗ, ಅಕ್ಷಯ ಮುಕುಲ್ ಎಂಬ ಲೇಖಕರು 2015ರಲ್ಲಿ ಗೀತಾ ಪ್ರೆಸ್ ಮತ್ತು ಮೇಕಿಂಗ್ ಆಫ್ ಹಿಂದೂ ಇಂಡಿಯಾ ಎಂಬ ಪುಸ್ತಕದಲ್ಲಿ ಮಹಾತ್ಮ ಗಾಂಧಿ ಮತ್ತು ಗೀತಾ ಪ್ರೆಸ್‌ ನೊಂದಿಗೆ ಇದ್ದ ವಿರೋಧಾಭಾಸದ ಕುರಿತಾಗಿ ವಿವರಿಸಿದ್ದಾಗಿ, ಕಾಂಗ್ರೇಸ್ ಈಗ ಸೇಡನ್ನು ತೀರಿಸಿಕೊಳ್ಳುವ ಮೂಲಕ ತನ್ನ ಹಿಂದೂ ವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರಾತು ಗೊಳಿಸಿರುವುದು ವಿಪರ್ಯಾಸವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ