ಡಿಜಿಟಲ್ ಶಬ್ದದ ಬಳಕೆಯಿಂದ ಜನ ಸಾಮಾನ್ಯವಾಗಿ ಇದನ್ನು ಇಂಟರ್ ನೆಟ್ ಗೆ ಸಂಬಂಧಿಸಿದ್ದು ಎಂದೇ ಭಾವಿಸುತ್ತಾರೆ. ಆದರೆ ಇತ್ತೀಚೆಗೆ ಈ ಅಪರಾಧದ ಕುರಿತಾಗಿ ಹೆಚ್ಚು ಚರ್ಚೆ ಆಗುತ್ತಿರುವುದು ಏಕೆ ಎಂದು ನಿಮಗೆ ಗೊತ್ತೇ…..?
ನವ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಒಂದು ದುರ್ಘಟನೆ. 81ರ ಹರೆಯದ ಪೇಂಟರ್ ಮಾರಿಸ್ ಎಂಬಾತ 16ರ ಹರೆಯದ ಹುಡುಗಿಯೊಬ್ಬಳ ಜೊತೆ ತನ್ನ ಬೆರಳಿನಿಂದಲೇ ಸೆಕ್ಸ್ ನಡೆಸುತ್ತಿದ್ದ. ಆ ಹುಡುಗಿ ಹೆದರಿ ತನ್ನ ಪೋಷಕರಿಗೆ ತಿಳಿಸಲು, ಅದು ಠಾಣೆವರೆಗೂ ದೂರು ಹೋಯಿತು. ಪೊಲೀಸರು ಇದನ್ನು `ಡಿಜಿಟಲ್ ರೇಪ್’ ಕಲಂ ಅಡಿ ಮೊಕದ್ದಮೆ ದಾಖಲಿಸಿಕೊಂಡರು. ಅದಾದ ಮೇಲೆ ಈ ಶಬ್ದ ದೇಶಾದ್ಯಂತ ಹೆಚ್ಚು ಬಳಕೆಗೆ ಬಂತು. ಕಳೆದ ವರ್ಷ ದೆಹಲಿ, ಮುಂಬೈಲ್ಲಿ ಇಂಥದೇ ಘಟನೆ ಸ್ಟೇಷನ್ ಮುಟ್ಟಿದ್ದರೂ, ಅದು ಇಷ್ಟು ಹೆಸರು ಮಾಡಲಿಲ್ಲ.
ಹೆಣ್ಣುಮಕ್ಕಳ ಗುಪ್ತಾಂಗಗಳ ಕುರಿತಾಗಿ ಚೆಲ್ಲಾಟವಾಡುವ ಇಂಥ ಕುತ್ಸಿತ ಮಾನಸಿಕತೆ ಉಳ್ಳವರು, ರೇಪ್ ಎಂದರೆ ಒಲ್ಲದ ಸಂಭೋಗ ನಡೆಸುವುದು ಮಾತ್ರ ಎಂದು ಭಾವಿಸಿದ್ದರು. ಈ ಮತಿಗೆಟ್ಟವರು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಜೊತೆ ಇಂಥ ಅಶ್ಲೀಲ ಕ್ರಿಯೆ ನಡೆಸಿ, ಪೈಶಾಚಿಕ ಆನಂದ ಹೊಂದುತ್ತಾರೆ. ಪಾಪ, ಅಂಥ ಹೆಣ್ಣುಮಕ್ಕಳಿಗೆ ಈ ಕುಕೃತ್ಯದ ಹಿಂದಿನ ಉದ್ದೇಶ ಗೊತ್ತಾಗುವುದಿಲ್ಲ. ಕಚಗುಳಿ ಇಡುವಂತೆ ಎಂದು ಈ ಲಫಂಗರು ಆ ಮುಗ್ಧೆಯನ್ನು ನಂಬಿಸಿರುತ್ತಾರೆ.
ಇನ್ನೂ ಬೀಭತ್ಸಕರ ಪ್ರಕರಣಗಳಲ್ಲಿ ಇಂಥ ರಾಕ್ಷಸರು ಹೆಣ್ಣುಮಕ್ಕಳ ಅಂಗಕ್ಕೆ ಪೆನ್ಸಿಲ್, ಪ್ಲಾಸ್ಟಿಕ್, ಕಬ್ಬಿಣದ ರಾಡ್ ಬಳಸಿದ ನಿದರ್ಶನಗಳೂ ಕಂಡುಬಂದಿವೆ. ತಮ್ಮ ದುರಾಸೆ ತೀರಿಸಿಕೊಳ್ಳುವ ಇಂಥ ಪಾಪಿಗಳಿಗೆ ಎಂಥ ಶಿಕ್ಷೆ ನೀಡಿದರೂ ಸಾಲದು. ಎಷ್ಟೋ ಸಲ ಆ ಮುಗ್ಧ ಮಗಳು ಸಾನ್ನಪ್ಪುವ ಘೋರ ನಡೆದಿದೆ. ದೆಹಲಿಯ ನಿರ್ಭಯಾ ಕಾಂಡದಲ್ಲೂ ಇಂಥ ಐರನ್ ರಾಡ್ ಬಳಸಲಾಗಿತ್ತು, ಅದರಿಂದ ಅವಳು ಪಟ್ಟಿರಬಹುದಾದ ದೈಹಿಕ, ಮಾನಸಿಕ ಹಿಂಸೆಗೆ ಎಣೆಯುಂಟೇ?
ಹಿಂದೆಲ್ಲ ಇಂಥ ಘೋರ ಕೃತ್ಯವನ್ನು ಬಲಾತ್ಕಾರ, ರೇಪ್, ಅತ್ಯಾಚಾರ ಎಂದು ಪರಿಗಣಿಸುತ್ತಿರಲಿಲ್ಲ. ಹೀಗಾಗಿ ಅಂಥ ಪಾಪಿಷ್ಟರು ಶಿಕ್ಷೆ ಹೊಂದದೆ ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ಕಾನೂನಿನಲ್ಲಿ ಬದಲಾವಣೆ ಬಂದಿರುವುದರಿಂದ, ಇಂಥ ಕುಕೃತ್ಯಗಳನ್ನು ಡಿಜಿಟಲ್ ರೇಪ್ ಹೆಸರಿನಲ್ಲಿ ದಾಖಲು ಮಾಡಿಕೊಂಡು, ಶಿಕ್ಷೆ ವಿಧಿಸುವಂತೆ ಮಾಡುತ್ತಾರೆ. ರೇಪ್ ಕುರಿತಾದ ಕಾನೂನಿನ ವ್ಯಾಖ್ಯಾನದ ಅಡಿ ಬದಲಾವಣೆ ಆಗಿರುವುದರಿಂದ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುವ ಇಂಥ ದೌರ್ಜನ್ಯಕ್ಕೆ ಈಗ ತಕ್ಕ ಶಿಕ್ಷೆ ಇದೆ.
ಏನಿದು ಡಿಜಿಟಲ್ ರೇಪ್?
ಈ ಶಬ್ದ ಕೇಳಿದಾಕ್ಷಣ ಜನ ಸಾಮಾನ್ಯವಾಗಿ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುವ ನಗ್ನ ಚಿತ್ರ, ವಿಡಿಯೋ, ಅಶ್ಲೀಲ ಮೆಸೇಜ್ ಗಳ ಮೂಲಕ ಹೆಣ್ಣನ್ನು ಗೋಳು ಹೊಯ್ದುಕೊಳ್ಳುವ ಅಪರಾಧ ಎಂದು ಭಾವಿಸುತ್ತಾರೆ. ಇದಕ್ಕೆ ಕಾರಣ ಎಂದರೆ, ಡಿಜಿಟಲ್ ಶಬ್ದ ಎಂದಾಕ್ಷಣ, ಸೋಶಿಯಲ್ ಮೀಡಿಯಾಗಳಲ್ಲಿ ನಡೆಯುವ ಲೈಂಗಿಕ ಅಪರಾಧಗಳ ಚಿತ್ರ ಕಣ್ಣು ಮುಂದೆ ಬರುತ್ತದೆ.
ಕೋರ್ಟ್ ಭಾಷೆಯ ವ್ಯಾಖ್ಯಾನದ ಪ್ರಕಾರ ಇದು, ಹೆಣ್ಣು ಮಕ್ಕಳ ಗುಪ್ತಾಂಗಗಳನ್ನು ಗಂಡಸರ ಅಂಗಗಳು, ಇತರೆ ವಸ್ತುಗಳಿಂದ ಬೇಕೆಂದೇ ಪ್ರತಾಡಿಸುವುದಾಗಿದೆ. ಆಂಗ್ಲದಲ್ಲಿ ಡಿಜಿಟಲ್ ಅಂದ್ರೆ ಅಂಕಿ. ಜೊತೆಗೆ ಈ ದುಷ್ಟರು ತಮ್ಮ ದೇಹದ ಯಾವುದೇ ಅಂಗ ಬಳಸಿ ಹೀಗೆ ಕಾಡಿಸುವುದನ್ನು ಡಿಜಿಟಲ್ ಎಂದೇ ಸಂಬೋಧಿಸಲಾಗುತ್ತದೆ.
ರೇಪ್ ಮತ್ತು ಡಿಜಿಟಲ್ ರೇಪ್ ಗಳ ಉದ್ದೇಶ ಬೇರೆ ಬೇರೆಯಾದರೂ, ಇವು ಹೆಣ್ಣನ್ನು ಕಾಡಲು ಬಳಸುವ ದುರ್ಮಾರ್ಗ ಆಗಿದೆ. ಕಾನೂನು ಮಾತ್ರ ಎರಡನ್ನೂ ಒಂದೇ ಎಂದು ಶಿಕ್ಷಿಸುತ್ತದೆ. 2012ರವರೆಗೂ ಡಿಜಿಟಲ್ ರೇಪ್ ಎಂದರೆ ಚುಡಾಯಿಸುವ ನಿಟ್ಟಿನಲ್ಲೇ ಬರುತ್ತಿತ್ತು, ಅಂದ್ರೆ ಶಿಕ್ಷೆ ಬಲು ಕಡಿಮೆ. ದೆಹಲಿಯ ನಿರ್ಭಯಾ ಕಾಂಡದ ನಂತರ, ಹೆಂಗಸರ ವಿರುದ್ಧದ ಅಪರಾಧಗಳನ್ನು ನಿಭಾಯಿಸುವ ಕಾನೂನನ್ನು ಹೊಸ ದೃಷ್ಟಿಯಿಂದ ನೋಡಲಾಗುತ್ತಿದೆ. ಹೀಗಾಗಿ ರೇಪ್ ಕೆಟಗರಿಯಲ್ಲಿ ಮತ್ತೊಂದು ಹೊಸ ಕಲಂ ಜೋಡಿಸಲಾಗಿ, ಡಿಜಿಟಲ್ ರೇಪ್ ಎಂಬುದು ಬಳಕೆಗೆ ಬಂತು.
ಡಿಸೆಂಬರ್ 2012ರ ದೆಹಲಿಯ ನಿರ್ಭಯಾ ಕೇಸ್ ನಂತರ, ಲೈಂಗಿಕ ಹಿಂಸೆಗಳಿಗೆ ಸಂಬಂಧಿಸಿದ ಕಾನೂನುಗಳ ಸಮೀಕ್ಷೆ ನಡೆಸಲಾಯಿತು. ಭಾರತದ ಮಾಜಿ ಚೀಫ್ ಜಸ್ಟೀಸ್ ವರ್ಮಾರ ಅಧ್ಯಕ್ಷತೆಯಲ್ಲಿ ರಚಿಸಲಾದ ಕಮಿಟಿ ಸಲಹೆ ನೀಡಿದಂತೆ, ದಶಕಗಳ ಹಳೆಯ ಕಾನೂನು ವ್ಯವಸ್ಥೆಗಳಿಗೆ ತಿದ್ದುಪಡಿ ತರಲಾಯಿತು. 2013ರಲ್ಲಿ ರೇಪ್ ನ ವ್ಯಾಖ್ಯಾನವನ್ನು `ಪೋರ್ಸ್ಡ್ ಪೀನೋ ಜೈನ್ ಪೆನೆಂಟ್ರೇಶನ್ ‘ನಿಂದ ಬದಲಾಯಿಸಲಾಯಿತು. ಹೊಸ ವ್ಯಾಖ್ಯಾನದ ಪ್ರಕಾರ ಹೆಣ್ಣುಮಕ್ಕಳನ್ನು ಮಾರ್ಮಿಕವಾಗಿ ಹೀಗೆ ಘಾತಕ ವಸ್ತುಗಳಿಂದ ಪ್ರತಾಡಿಸುವವರನ್ನು ಶಿಕ್ಷಿಸಬೇಕು ಎಂದು, ಈ ಕುಕೃತ್ಯವನ್ನೇ `ಡಿಜಿಟಲ್ ರೇಪ್’ ಎಂದಿದ್ದಾರೆ.
ಘಾತುಕ ಪ್ರಕರಣಗಳು
ಇದರ ಮೊದಲ ಪ್ರಕರಣ ಮುಂಬೈನಲ್ಲಿ ದಾಖಲಾಯಿತು. 2 ವರ್ಷದ ಹಸುಕಂದಮ್ಮನೊಂದಿಗೆ ಇಂಥ ದುರಾಚಾರ ನಡೆಯಿತು. ಡಾಕ್ಟರ್ ಗಳ ಪರಿಶೋಧನೆಯ ನಂತರ, ಮಗುವಿನ ತೊಡೆ, ಗುಪ್ತಾಂಗಗಳಲ್ಲಿ ಗಾಯ, ಅಪರಾಧಿಯ ಬೆರಳಿನ ಗುರುತು ಕಂಡು ಬಂತು. ಅತ್ಯಾಚಾರದಷ್ಟು ಹೀನಾಯ ಅಲ್ಲದಿದ್ದರೂ, ಅದೇ ಪ್ರಮಾಣದ ದುರಾಚಾರ ಇದಾಗಿತ್ತು. ಅದೂ ಸ್ವಂತ ಸೋದರಮಾನಿಂದಲೇ! ಕೂಡಲೇ ಅವನನ್ನು ಬಂಧಿಸಿ, ಕಲಂ 376 ಪ್ರಕಾರ, ರೇಪ್ ಗೆ ಸಂಬಂಧಿಸಿದಂತೆ ಕ್ರೂರವಾಗಿ ದಂಡಿಸಲಿಲ್ಲವಾದರೂ, 3 ತಿಂಗಳ ಸೆರೆವಾಸ ವಿಧಿಸಿ ಬಿಡಲಾಯಿತು.
ಕಲಂ 376ರಲ್ಲಿ ಬದಲಾವಣೆ
ಮುಂಬೈ, ದೆಹಲಿಗಳಲ್ಲಿ ನಡೆದ ಡಿಜಿಟಲ್ ರೇಪ್ ನ 2 ಕಾಂಡಗಳಿಂದಾಗಿ, ಕಲಂ 376ರಲ್ಲಿನ ಕುಂದು ಕೊರತೆ ಗಮನಿಸಿ ವ್ಯಾಖ್ಯಾನ, ಶಿಕ್ಷೆಗಳಲ್ಲಿ ಸುಧಾರಣೆ ತರಲಾಯಿತು. ಪಾಪಿಗಳು ತಮ್ಮ ಯಾವುದೇ ದೈಹಿಕ ಅಂಗಗಳಿಂದ ಹೆಣ್ಣು ಮಕ್ಕಳನ್ನು ಗೋಳುಗುಟ್ಟಿಸಿದರೆ, ಇತರ ಅನ್ಯ ಚೂಪಾದ ವಸ್ತುಗಳನ್ನು ಬಳಸಿದ್ದರೆ, ಹಿಂದೆ ಅದು ತೀವ್ರತರ ಅಪರಾಧ ಆಗುತ್ತಿರಲಿಲ್ಲ. ಹೀಗಾಗಿಯೇ ರೇಪ್ ಗೆ ವ್ಯಾಖ್ಯಾನ ಬದಲಾಯಿಸಿ, `ಡಿಜಿಟಲ್ ರೇಪ್’ ಎಂಬ ಹೊಸ ಪದಪ್ರಯೋಗ ಸೇರಿಸಲಾಯಿತು. ಹೀಗಾಗಿ ಈಗ ಇದು ಗಂಭೀರ ಅಪರಾಧಗಳ ಪಾಲಿಗೆ ಸೇರುತ್ತದೆ.
ಇದರ ಪ್ರಭಾವವನ್ನು ದೆಹಲಿಯ ನೋಯ್ಡಾ ಪ್ರದೇಶದಲ್ಲಿ ನಡೆದ ಡಿಜಿಟಲ್ ರೇಪ್ ನಲ್ಲಿ ಗಮನಿಸಲಾಯಿತು. 81ರ ಹರೆಯದ ವ್ಯಕ್ತಿ 16ರ ಹರೆಯದ ಅಪ್ರಾಪ್ತ ಬಾಲಕಿ ಮೇಲೆ ಗೈದ ಈ ಕುಕೃತ್ಯದಿಂದಾಗಿ, ಡಿಜಿಟಲ್ ರೇಪ್ ಹೆಸರಿನಲ್ಲಿ ಬಂಧಿಸಿ, ಶಿಕ್ಷೆ ವಿಧಿಸಲಾಯಿತು. ಆ ಹುಡುಗಿ ಆರಂಭದಲ್ಲಿ ದೂರು ನೀಡಲು ತುಂಬಾ ಹೆದರುತ್ತಿದ್ದಳಂತೆ. ನಂತರ ಅಪರಾಧಿಯ ಕುಕೃತ್ಯಗಳನ್ನು ಹೇಗೋ ವಿಡಿಯೋ ರೆಕಾರ್ಡ್ ಮಾಡಿ, ದೊಡ್ಡ ಮೊತ್ತದ ಸಾಕ್ಷ್ಯಾಧಾರಗಳೊಂದಿಗೆ ಪೋಷಕರಿಗೆ ತಿಳಿಸಿ, ಅವರೊಂದಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದಳು. ಈ ರೀತಿ ಅಂತೂ ಆ ಆರೋಪಿಯನ್ನು ಕೂಲಂಕಷವಾಗಿ ವಿಚಾರಿಸಿ, ಈ ಹೊಸ ಕಾನೂನಿನ ಅನ್ವಯ ಬಂಧಿಸಿ, ಶಿಕ್ಷೆ ವಿಧಿಸಲಾಯಿತು.
– ಶೈಲಜಾ ರಾವ್