ತಮ್ಮ ಬಾಲ್ಯದಿಂದಲೇ ಕಾಸ್ಮೆಟಿಕ್‌ ಸರ್ಜನ್‌ ಆಗಬೇಕೆಂದು ಕನಸು ಕಾಣುತ್ತಿದ್ದ ಡಾ. ರಶ್ಮಿ ಶೆಟ್ಟಿ ಮೂಲತಃ ಬೆಂಗಳೂರಿನವರು. ಬೆಂಗಳೂರಿನಲ್ಲೇ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಪೂರೈಸಿದ ಆಕೆ, 1 ವರ್ಷದ ಪ್ಲಾಸ್ಟಿಕ್‌ ಸರ್ಜರಿಯ ತರಬೇತಿ ಪಡೆದುಕೊಂಡರು. ಆ ಸಮಯದಲ್ಲೇ ಅವರ ವಿವಾಹ ಮುಂಬೈನ ಒಬ್ಬ ಪ್ರಸಿದ್ಧ ವಾಣಿಜ್ಯೋದ್ಯಮಿಯೊಂದಿಗೆ ನಡೆಯಿತು.

ಮದುವೆಯ ನಂತರ ಅವರು ಮುಂಬೈಗೆ ಬಂದಾಗ, ಆಕೆ ಮೂಲತಃ ಮುಂಬೈನವರಲ್ಲ ಎಂಬ ಕಾರಣಕ್ಕೆ ಅಲ್ಲಿನ ಹೆಸರಾಂತ ನರ್ಸಿಂಗ್‌ ಹೋಮ್ ಗಳಲ್ಲಿ ಕೆಲಸ ದೊರಕಲಿಲ್ಲ. ಅವರು ಕೊನೆಗೂ ಕಷ್ಟಪಟ್ಟು ಲೀಲಾವತಿ ಆಸ್ಪತ್ರೆಯ ಐ.ಸಿ.ಯು. ಘಟಕದಲ್ಲಿ 1 ವರ್ಷದವರೆಗೂ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಆಗ ಅವರ ಗೆಳತಿಯೊಬ್ಬರಿಂದ ಅವರಿಗೆ ಮಹಾತ್ಮ ಗಾಂಧಿ ಮಿಶನ್‌ ಆಸ್ಪತ್ರೆಯಲ್ಲಿ ಒಬ್ಬ ಡರ್ಮಟಾಲಜಿಸ್ಟ್ ಆಕಸ್ಮಿಕವಾಗಿ ಬಿಟ್ಟು ಹೋಗಿರುವ ವಿಷಯ ತಿಳಿದು, ಅಲ್ಲಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿತು. ಡಾ. ರಶ್ಮಿ ಶೆಟ್ಟಿ ಉನ್ನತ ನೌಕರಿಗಾಗಿ ಎಷ್ಟೋ ಖಾಸಗಿ ಆಸ್ಪತ್ರೆಗಳಲ್ಲಿ ಹುಡುಕಾಟ ನಡೆಸಿದರು. ಆದರೆ ಪ್ರತಿ ಸಲ ಆಕೆಗೆ ನಿರಾಸೆಯೇ ಆಗುತ್ತಿತ್ತು. ಅವರಿಗಾದ ದೊಡ್ಡ ದುಃಖ ಎಂದರೆ, ಅವರ ಪತಿ ಮುಂಬೈನ ಮೂಲನಿವಾಸಿ ಆಗಿದ್ದರೂ ಅವರಿಗೆ ಕಷ್ಟ ತಪ್ಪಲಿಲ್ಲ ಎಂಬುದು. 4-5 ವರ್ಷಗಳ ಸತತ ಪರಿಶ್ರಮದ ನಂತರ, ಆಕೆ ಮುಂಬೈನ ಸಾಂತಾಕ್ರೂಜ್‌ ಹಾಗೂ ಬೀಚ್ ಕ್ಯಾಂಡಿಗಳಲ್ಲಿ `ರಾ ಸ್ಕಿನ್‌ಏಸ್ಥೆಟಿಕ್ಸ್' ಹೆಸರಿನಲ್ಲಿ ತಮ್ಮದೇ ಸ್ವಂತ ಪ್ರಾಕ್ಟೀಸ್‌ ಸೆಂಟರ್‌ ತೆರೆದರು. ಅದು ದಿನೇದಿನೇ ಅಭಿವೃದ್ಧಿ ಹೊಂದಿ, ಹೈದರಾಬಾದ್‌ನಲ್ಲೂ ಶಾಖೆ ತೆರೆಯುವಂತೆ ಆಗಿದೆ, ಬೆಂಗಳೂರಿನಲ್ಲಿ ಇಷ್ಟರಲ್ಲೇ ಆಗಲಿದೆ.

ಡಾ. ರಶ್ಮಿ ಶೆಟ್ಟಿ ನಾನ್‌ ಸರ್ಜಿಕಲ್ ಸೌಂದರ್ಯ ಚಿಕಿತ್ಸೆಗೆ ಪ್ರಸಿದ್ಧರೆನಿಸಿದ್ದಾರೆ. ಅವರು ತಮ್ಮ ಜ್ಞಾನ ಹಾಗೂ ಸಾಮರ್ಥ್ಯದ ಆಧಾರದಿಂದ, ತಮ್ಮನ್ನು ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆ್ಯಂಟಿ ಏಜಿಂಗ್‌ನ ಮಾಸ್ಟರ್‌ ಕೋರ್ಸ್‌ನಲ್ಲಿ ಅವರು ಮೇರುಸಾಧನೆ ಮಾಡಿದ್ದಾರೆ. ಫ್ರಾನ್ಸ್ ನ ಮಾಂಟೆಕಾರ್ವೋಲ್ ನಲ್ಲಿ ಆಯೋಜಿಸಲಾಗಿದ್ದ 10ನೇ ಆ್ಯಂಟಿ ಏಜಿಂಗ್ ವರ್ಲ್ಡ್ ಮೆಡಿಕಲ್ ಕಾಂಗ್ರೆಸ್‌ಗೆ ಆಹ್ವಾನಿಸಲಾಗಿದ್ದ ಏಕೈಕ ಭಾರತೀಯ ಮಹಿಳಾ ವೈದ್ಯೆ ಎಂದರೆ ಇವರು ಎಂಥ ಅತಿರಥರು ಎಂಬುದು ಗೊತ್ತಾಗುತ್ತದೆ.

ಡಾ. ರಶ್ಮಿ ಶೆಟ್ಟಿ ವಿದೇಶಗಳಲ್ಲೂ ಆ್ಯಂಟಿ ಏಜಿಂಗ್‌ಗೆ ನಾನ್‌ ಸರ್ಜಿಕಲ್ ವಿಧಾನದಲ್ಲೇ ಚಿಕಿತ್ಸೆ ನೀಡುವ ತರಬೇತಿಯನ್ನು ಪ್ಲಾಸ್ಟಿಕ್ ಸರ್ಜನ್ಸ್ ಮತ್ತು ಡರ್ಮಟಾಲಜಿಸ್ಟ್ ರಿಗೆ ನೀಡಿದ್ದಾರೆ. ಅವರೀಗ ಹಿಂದೂಸ್ಥಾನ್‌ ಯೂನಿಲಿವರ್‌ ಲಿ.ನ `ಪಾಂಡ್ಸ್ ಇಂಡಿಯಾ' ವಿಭಾಗದ ಎಕ್ಸ್ ಪರ್ಟ್‌ ಆಗಿದ್ದಾರೆ.

40ರ ಹರೆಯದ ಡಾ. ರಶ್ಮಿ ಶೆಟ್ಟಿ ಈ ಕ್ಷೇತ್ರದಲ್ಲಿ ಸುಮಾರು 14 ವರ್ಷಗಳಿಂದ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ. ಅವರು ಕೇವಲ ಒಬ್ಬ ಸರ್ಜನ್‌ ಮಾತ್ರವಲ್ಲದೆ, ಒಬ್ಬ ಭರತನಾಟ್ಯ ಕಲಾವಿದೆಯೂ ಹೌದು. ತಮ್ಮ ಬಾಲ್ಯದಿಂದಲ್ ಈಕೆ ಭರತನಾಟ್ಯದ ಕಲಿಕೆಯನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ್ದು. ಬೇಕಾದಷ್ಟು ರಂಗ ಪ್ರದರ್ಶನಗಳನ್ನೂ ನೀಡಿದ್ದಾರೆ. ಅವರೊಂದಿಗಿನ ಮಾತುಕತೆ ಬಹು ರೋಚಕ. ಅದರಲ್ಲಿನ ಪ್ರಮುಖ ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ :

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ