ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2026ರ ಸೀಸನ್​​ 19ರ ಐಪಿಎಲ್​​ ಹಂಗಾಮಾ ಭರ್ಜರಿಯಾಗಿಯೇ ಇತ್ತು. ಓಪನಿಂಗ್ ಮ್ಯಾಚ್​ ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಸನ್​ ರೈಸರ್ಸ್ ಹೈದ್ರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ರಜತ್ ಪಾಟೀದಾರ್ ನಾಯಕತ್ವದ ಆರ್ ಸಿಬಿ ತಂಡ ಹೈದ್ರಾಬಾದ್ ತಂಡದ ವಿರುದ್ಧ 6 ವಿಕೆಟ್ ಗಳ ಭರ್ಜರಿ ವಿಜಯೋತ್ಸವ ಆಚರಿಸಿತು. ಈ ಮೂಲಕ ಕಳೆದ ವರ್ಷದ ದುರಂತದ ನೆನಪಲ್ಲೇ ಶುರುವಾದ ಪಂದ್ಯ ಆರ್ ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ಸೈನ್​ ರೈಸರ್ಸ್ ಹೈದ್ರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗೆ 201 ರನ್​ ಗಳಿಸಿತು. ಇದಕ್ಕೆ ಪ್ರತಿಯಾಗಿ ಆರ್ ಸಿಬಿ ತಂಡ ಕೇವಲ 15.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿ ಮತ್ತೆ ಚಾಂಪಿಯನ್ ಆಟವಾಡಿ ಗೆಲುವು ಸಾಧಿಸಿತು.ಐಪಿಎಲ್ ನಲ್ಲಿ 287ರನ್​​ ಗಳಿಸಿ ಅತ್ಯಧಿಕ ರನ್ ಗಳಿಸಿದ ತಂಡ ಎನ್ನುವ ದಾಖಲೆ ಹೊಂದಿರುವ ಹೈದ್ರಾಬಾದ್ ಆರಂಭಿಕ ಹಿನ್ನಡೆ ಕಂಡಿತು. ಆದರೆ, ಇಶಾನ್ ಮತ್ತು ಕ್ಲಾಸೆನ್ ಅವರ 97 ರನ್ ಗಳ ಮಹತ್ವದ ಜತೆಯಾಟದಿಂದ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಆರಂಭಿಕರಾದ ಅಭಿಷೇಕ್ ಶರ್ಮಾ ಮೊದಲ ಓವರ್ ನ 4ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಆ ನಂತರ ಫೇಲ್ ಆದರು. ಇನ್ನು ಟ್ರಾವಿಸ್ ಹೆಡ್ ಕೂಡ ಕೇವಲ 11 ರನ್ ಗೆ ಸೀಮಿತವಾಗಿದ್ದು ಎಸ್​ ಆರ್ ಹೆಚ್​ ಗೆ ಆಘಾತವಾಯ್ತು. ಬಳಿಕ ಬಂದ ನಿತೀಶ್ ಕುಮಾರ್ ರೆಡ್ಡಿ ಕೂಡ ಔಟಾಗಿದ್ದು ಆರ್ ಸಿಬಿ ತಂಡದ ಮೇಲುಗೈಗೆ ಕಾರಣವಾಯಿತು. ಆರಂಭದ 6 ಓವರ್ ಗಳಲ್ಲಿ 3 ವಿಕೆಟ್ 49 ರನ್ ಗಳಿಸಿದ ಸನ್​ ರೈಸರ್ಸ್ ತಂಡ, ಹೆನ್ರಿಚ್​​​ ಕ್ಲಾಸೆನ್ ಮತ್ತು ನಾಯಕ ಇಶಾನ್ ಅವರ ಸ್ಫೋಟಕ ಆಟದಿಂದ ಚೇತರಿಸಿಕೊಂಡಿತು. ಕ್ಲಾಸೆನ್​ 31 ರನ್​ ಗಳಿಸಿ ಔಟಾದರೆ, ಇಶಾನ್ ಕಿಶನ್​ 38 ಎಸೆತಗಳಲ್ಲಿ 80 ರನ್ ಗಳಿಸಿ ಪೆವಿಯಲ್ ಗೆ ಮರಳಿದರು. ಬಳಿಕ 15 ಓವರ್ ಗಳಲ್ಲಿ 5 ವಿಕೆಟ್ ಗೆ 142 ರನ್ ಗಳಿಸಿದ್ದ ಹೈದ್ರಾಬಾದ್ ತಂಡ ಬ್ಯಾಕ್ ಟು ಬ್ಯಾಕ್ ವಿಕೆಟ್​ ಕಳೆದುಕೊಂಡರೂ  ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಆರ್ ಸಿಬಿಗೆ 202 ರನ್ ಟಾರ್ಗೆಟ್ ಕೊಟ್ಟಿತು.

ಚಾಲೆಂಜಿಂಗ್ ಮೊತ್ತದ ಗುರಿ ಬೆನ್ನಟ್ಟಿದ ಆರ್ ಸಿಬಿಗೂ ಕೂಡ ಆರಂಭಿಕ ಆಘಾತ ಎದುರಾಗಿತ್ತು. ಬಹಳ ನಿರೀಕ್ಷೆ ಇಟ್ಟಿದ್ದ ಫಿಲ್ ಸಾಲ್ಟ್​ 8 ರನ್ ಗಳಿಸಿ ಔಟಾಗ್ತಿದ್ದಂತೇ ಆರ್ ಸಿಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ, ಕ್ರೀಸ್ ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ಕೊಹ್ಲಿ ಜೊತೆಗೂಡಿದ ದೇವದತ್ ಪಡಿಕ್ಕಲ್​ ಇಬ್ಬರೂ ಕೂಡ ಕ್ಲಾಸಿಕ್ ಆಟವಾಡಿ ಹೈದ್ರಾಬಾದ್ ಬೌಲರ್ ಗಳನ್ನ ದಂಡಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ