ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಸೋಮವಾರ ಭಾರತದ ಮೂರು ವಿಶ್ವಕಪ್ ಚಾಂಪಿಯನ್‌ಗಳನ್ನು ಸನ್ಮಾನಿಸಿದರು.
ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಮಹಿಳಾ ಅಂಧ ಕ್ರಿಕೆಟ್ ತಂಡದ ನಾಯಕಿ ದೀಪಿಕಾ ಟಿಸಿ ಮತ್ತು ಭಾರತ ಪುರುಷರ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವಾರು ಸ್ಟಾರ್ ಆಟಗಾರರು ಭಾಗವಹಿಸಿದ್ದರು.
ಮುಂಬಯಿಯಲ್ಲಿ ನಡೆದ “ಯುನೈಟೆಡ್ ಇನ್ ಟ್ರಯಂಫ್” ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮೂರೂ ತಂಡಗಳ ಸದಸ್ಯರಿಗೆ ಸನ್ಮಾನ ಮಾಡಲಿತು.
2024ರ ಪುರುಷರ ಟಿ-20 ತಂಡದ ಸದಸ್ಯರು, 2025ರ ಮಹಿಳೆಯರ ಏಕದಿನ ವಿಶ್ವಕಪ್ ಹಾಗೂ ಮಹಿಳಾ ಅಂಧರ ಟಿ-20 ವಿಶ್ವಕಪ್ ವಿಜೇತ ತಂಡಗಳ ಸದಸ್ಯರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ನೀತಾ ಅಂಬಾನಿ, ಹೊಸ ವರ್ಷವನ್ನು ಬಹಳ ವಿಶೇಷ ಸಂದರ್ಭದೊಂದಿಗೆ ಪ್ರಾರಂಭಿಸುತ್ತಿದ್ದೇವೆ. ಪುರುಷರ, ಮಹಿಳೆಯರ ಮತ್ತು ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡ ಎಲ್ಲವೂ ಒಂದೇ ಸೂರಿನಡಿ ಇವೆ. ದೇಶದ ಪ್ರತಿಯೊಬ್ಬ ಭಾರತೀಯನ ಪರವಾಗಿ, ನಮಗೆ ತುಂಬಾ ಸಂತೋಷವನ್ನು ನೀಡಿದ್ದಕ್ಕಾಗಿ ನಾವು ಇಂದು ಅವರನ್ನು ಗೌರವಿಸಲಿದ್ದೇವೆ" ಎಂದು ನೀತಾ ಅಂಬಾನಿ ಹೇಳಿದರು.
”ಭಾರತ ಹಾಗೂ ಭಾರತೀಯರ ಹೃದಯದಲ್ಲಿ ಕ್ರೀಡೆ ನೆಲೆಸಿದೆ. ಅವರು ಸಾಧಿಸಿದ ವಿಜಯೋತ್ಸವದಲ್ಲಿ ನಾವು ಇಂದು ಪಾಲ್ಗೊಂಡಿದ್ದೇವೆ. ಅವರ ವಿಜಯೋತ್ಸವವನ್ನು ನಾವು ನಮ್ಮ ವಿಜಯೋತ್ಸವದಂತೆ ಆಚರಿಸುತ್ತಿದ್ದೇವೆ . ಇದಕ್ಕಿಂತ ಸಂತೋಷ ಬೇರೊಂದಿಲ್ಲ” ಎಂದರು.
ಸೂಪರ್ಸ್ಟಾರ್ಸ್ ಸಂಗಮ: ವಿಶ್ವಕಪತ್ ವಿಜೇತ ತಂಡದ ಸದಸ್ಯರಾದ ಜಸ್ಪ್ರೀತ್ ಬೂಮ್ರಾ, ಸೂರ್ಯಕುಮಾರ್ ಯಾದವ್, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್ ಮತ್ತು ಗಂಗಾ ಕದಮ್ ಗೌರವಕ್ಕೆ ಪಾತ್ರರಾದರು. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಮತ್ತು ರವಿಚಂದ್ರನ್ ಅಶ್ವಿನ್, ಮುರಳಿಕಾಂತ್ ಪೆಟ್ಕರ್, ದೀಪಾ ಮಲಿಕ್ ಮತ್ತು ದೇವೇಂದ್ರ ಝಹಾರಿಯಾ ಸೇರಿದಂತೆ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ದಂತಕಥೆಗಳು ಮತ್ತು ಬಾಲಿವುಡ್ ಸ್ಟಾರ್ ನಟರಾದ ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರ ಉಪಸ್ಥಿತಿಯು ಭಾರತದ ಐಕಾನ್‌ಗಳ ಅಪರೂಪದ ಸಂಗಮವನ್ನು ಸೃಷ್ಟಿಸಿತ್ತು.





