ಪಾಲಿಗೆ ಬಂದದ್ದನ್ನು ಪಂಚಾಮೃತ ಎಂದು ಭಾವಿಸಿ. ಶಿಸ್ತಿಗೆ ಮೊದಲ ಆದ್ಯತೆ ನೀಡಿ. ಆರೋಗ್ಯಕರ, ಪೌಷ್ಟಿಕ ಆಹಾರವನ್ನೇ ಸೇವಿಸಿ. ನಿಯಮಿತ ವ್ಯಾಯಾಮ, ವಾಕಿಂಗ್ ರೂಢಿಸಿಕೊಳ್ಳಿ.`ಪಾರ್ವತಿ' ಎಂದೇ ಮನೆಮನೆಗೂ ನಿತ್ಯ ಟಿ.ವಿ.ಯಲ್ಲಿ ಹಾಜರಾಗಿ ರಾಷ್ಟ್ರಾದ್ಯಂತ ಎಲ್ಲರ ಮನಗೆದ್ದ ಸಾಕ್ಷಿ ತನ್ವರ್ ಯಾರಿಗೆ ತಾನೇ ಗೊತ್ತಿಲ್ಲ? ಟಿ.ವಿ. ಆ್ಯಂಕರ್ ಆಗಿ ಕೆರಿಯರ್ ಆರಂಭಿಸಿದ ಈಕೆ, ಮುಂದೆ ಏಕ್ತಾ ಕಪೂರ್‌ರ `ಕಹಾನಿ ಘರ್‌ಘರ್ ಕಿ' ಮೆಗಾ ಸೋಪ್‌ನಲ್ಲಿ ಅಪ್ಪಟ ಆದರ್ಶ ಸೊಸೆಯ ಪಾತ್ರದಲ್ಲಿ ಮಿಂಚಿದರು. ಇದಾಗಿ ಹಲವು ವರ್ಷಗಳ ನಂತರ ಅದೇ ಬ್ಯಾನರ್‌ನಲ್ಲಿ `ಬಡೇ ಅಚ್ಚೆ ಲಗ್ತೆ ಹೈ' ಧಾರಾವಾಹಿಯಲ್ಲಿ ಪ್ರಿಯಾ ಕಪೂರ್ ಆಗಿ ಈಕೆ ಆದರ್ಶ ಪತ್ನಿಯಾಗಿ ರಾರಾಜಿಸುತ್ತಿದ್ದಾರೆ. ತಮ್ಮ ವಿಭಿನ್ನ, ವಿಶಿಷ್ಟ ಪಾತ್ರಗಳಿಂದಾಗಿ ಈಕೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ರಾಜಾಸ್ಥಾನದ ಆಳ್ವರ್ ಜಿಲ್ಲೆಗೆ ಸೇರಿದ ಮಧ್ಯಮ ವರ್ಗದ ಅಪ್ಪಟ ಸಾಂಪ್ರದಾಯಿಕ ಕುಟುಂಬದ ಹುಡುಗಿ ಸಾಕ್ಷಿ, ಮನೆಯಲ್ಲಿ ಎಲ್ಲರ ಮುದ್ದಿನ ಸದಸ್ಯೆ. ಹಲವು ಕೇಂದ್ರೀಯ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಸಾಕ್ಷಿ, ದೆಹಲಿಯಲ್ಲಿ ತಮ್ಮ ಸ್ನಾತಕ ಪದವಿ ಪಡೆದ ಮೇಲೆ, ಅಡ್ಮಿನಿಸ್ಟ್ರೇಟಿವ್ ಸರ್ವೀಸ್‌ಮಾಸ್ ಕಮ್ಯುನಿಕೇಶನ್ ಪರೀಕ್ಷೆಯ ತಯಾರಿಯಲ್ಲಿದ್ದರು. ಯಾರೋ ಪರಿಚಿತರ ಸಲಹೆಯಂತೆ ಟಿ.ವಿ.ಯ ಆಡಿಶನ್‌ಗೆ ಹೋದಾಗ, ಅಲ್ಲಿ ಸೆಲೆಕ್ಟ್ ಆದರು. ಅಲ್ಲಿಂದ ತಮ್ಮ ಕೆರಿಯರ್ ಆರಂಭಿಸಿದರು.
ಸದಾ ಹಸನ್ಮುಖಿ ಸ್ವಭಾವದ ಸಾಕ್ಷಿ, ಇತ್ತೀಚೆಗೆ ತಮ್ಮ ಕೆಲಸದಿಂದಾಗಿ ಬಹಳ ಬಿಝಿ.
ಯಾವುದೇ ಬ್ರ್ಯಾಂಡ್‌ಗೆ ಕಮಿಟ್ ಆಗುವ ಮುನ್ನ ಯಾವ ವಿಷಯಕ್ಕೆ ಹೆಚ್ಚಿನ ಗಮನ ಕೊಡುತ್ತೀರಿ?
ಎಲ್ಲಕ್ಕೂ ಮೊದಲು ಯಾವುದೇ ಬ್ರ್ಯಾಂಡ್ ಇರಲಿ, ಅದರ ಗುಣ ಅಸಲಿಯೇ ಎಂದು ಪರೀಕ್ಷಿಸುತ್ತೇನೆ. ಅದರ ಅಂಬಾಸ್‌ಡರ್ ಆದ ನಾನು ಜನರ ವಿಶ್ವಾಸ ಉಳಿಸಿಕೊಳ್ಳಬೇಕಿದೆ. ಹೀಗಾಗಿ ಅದನ್ನು ಮೊದಲು ನನ್ನ ಮೇಲೆ ಪ್ರಯೋಗಿಸಿಕೊಳ್ಳುತ್ತೇನೆ.
ನಮ್ಮ ದೇಶದ ಮಹಿಳೆಯರು ತಮ್ಮ ಆರೋಗ್ಯದ ಕುರಿತು ಎಷ್ಟು ಜಾಗೃತರು?
ನಮ್ಮ ದೇಶದ ಮಹಿಳೆಯರು ತಮ್ಮ ಆರೋಗ್ಯದ ಕುರಿತು ಕಿಂಚಿತ್ತೂ ಗಮನ ನೀಡುವುದಿಲ್ಲ. ಬೆಳಗ್ಗೆ ಎದ್ದು ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕಳುಹಿಸುವುದು, ಗಂಡನನ್ನು ಆಫೀಸಿಗೆ ಕಳುಹಿಸಿ, ಅತ್ತೆ ಮಾವಂದಿರನ್ನು ನೋಡಿಕೊಳ್ಳುವುದರಲ್ಲಿ ಅವರ ದಿನ ಕಳೆದೇ ಹೋಗಿರುತ್ತದೆ. ನಾನು ಈ ಎಲ್ಲಾ ಗೃಹಿಣಿಯರಿಗೂ ಹೇಳುವುದಿಷ್ಟೆ. ಇಷ್ಟೆಲ್ಲ ಕೆಲಸ ಮಾಡಬೇಕೆಂದರೆ ಆರೋಗ್ಯದ ದೃಷ್ಟಿಯಿಂದ ನೀವು ಫಿಟ್ ಆಗಿರಲೇಬೇಕು. ಇದರ ಎನರ್ಜಿಗೋಸ್ಕರ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಈಕೆ ರಾತ್ರಿಯ ಊಟ ಮಾಡುವಷ್ಟರಲ್ಲಿ ಮನೆ ಮಂದಿ ಮಲಗಿರುತ್ತಾರೆ, ಮತ್ತೆ ಇಡೀ ದಿನ ಹಸಿದುಕೊಂಡೇ ಬೇರೆಲ್ಲ ಕೆಲಸ ಮಾಡಬೇಕು. ಹೀಗೆ ನಿರ್ಲಕ್ಷಿಸದೆ ಬೆಳಗಿನ ಉಪಾಹಾರ ಅಗತ್ಯ ಸ್ವೀಕರಿಸಿ.
ನಿಮ್ಮ ಈ ಬ್ಯೂಟಿಫುಲ್ ಕೇಶ ಸೌಂದರ್ಯದ ಗುಟ್ಟೇನು?
ಎಲ್ಲವನ್ನೂ ಅಮ್ಮನೇ ನೋಡಿಕೊಳ್ತಾರೆ. ಅವರಿಗೂ ದಟ್ಟ, ಉದ್ದನೇ ಕಪ್ಪು ಕೂದಲಿದೆ. ನಾವು ಪೌಷ್ಟಿಕ ಆಹಾರ ಸೇವಿಸುವುದರಿಂದ ಮಾತ್ರ ಕೂದಲು ಸೊಂಪಾಗುತ್ತದೆ ಎನ್ನುತ್ತಾರೆ. ಹೀಗಾಗಿ ಪೌಷ್ಟಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ.