ಮಂಡ್ಯದ ಬಳಿಯ ರೈತರಾದ ರಾಮಯ್ಯನವರ ಬಳಿ 2 ಎಕರೆ ಜಮೀನಿತ್ತು. ಅವರು ಅದರಲ್ಲಿ ವೈಜ್ಞಾನಿಕ ರೀತಿಯಲ್ಲಿ ವ್ಯವಸಾಯ ಮಾಡಲು ಇಚ್ಛಿಸುತ್ತಿದ್ದರು. ಅದಕ್ಕೆ ಅವರಿಗೆ ಹಣದ ಅವಶ್ಯಕತೆ ಇತ್ತು. ಬ್ಯಾಂಕ್‌ನಿಂದ ಪಡೆದ ಸಾಲದ ಹಣವನ್ನು ಅವರು ತಮ್ಮದೇ ಆದ ರೀತಿಯಲ್ಲಿ ಖರ್ಚು ಮಾಡಬೇಕೆಂದಿದ್ದರು. ಹೀಗಾಗಿ ಅವರು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಉಪಯೋಗಿಸಿದರು. ಅದರಿಂದ ಅವರಿಗೆ 3 ಲಕ್ಷ ರೂ. ಲೋನ್‌ ಸಿಕ್ಕಿತು. ಅವರು ಮೆಂತ್ಯದ ಬೆಳೆ ಬೆಳೆದರು. ಅದರಲ್ಲಿ ಲಾಭ ಬಂದಾಗ ಮೊದಲು ಅವರು ಬ್ಯಾಂಕ್‌ ಸಾಲ ತೀರಿಸಿದರು. ಈಗ ರಾಮಯ್ಯನವರು ಇತರರ ಜಮೀನುಗಳನ್ನು ಬಾಡಿಗೆಗೆ ತೆಗೆದುಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಗ್ರಾಮೀಣ ಬ್ಯಾಂಕ್‌ಗಳು ಆರಂಭವಾಗಿದ್ದರಿಂದ ರೈತರಿಗೆ ಬಹಳ ಲಾಭವಾಗಿದೆ. ಅವರು ಸಾಲ ಪಡೆಯಲು ಅತ್ತಿತ್ತ ಅಲೆದಾಡಬೇಕಾಗಿಲ್ಲ.

ವ್ಯವಸಾಯ ಹಾಗೂ ಇತರ ಅಗತ್ಯಗಳಿಗೆ ಎಲ್ಲ ರೀತಿಯ ಬ್ಯಾಂಕ್‌ ಲೋನ್‌ಗಳು ಸಿಗುತ್ತಿವೆ. ಅದರಿಂದ ಹಳ್ಳಿಗಳು ಮತ್ತು ರೈತರ ಅಭಿವೃದ್ಧಿಯ ಹಾದಿ ಸುಗಮವಾಗುತ್ತಿದೆ.

ಸ್ವಲ್ಪ ದೂರದಲ್ಲೇ ಇವರು ಪ್ರತಾಪ್‌ರವರ ಬಳಿ ವ್ಯವಸಾಯಕ್ಕೆ ಯೋಗ್ಯವಾದ 6 ಎಕರೆ ಜಮೀನಿತ್ತು. ಆದರೆ ಅವರು ವ್ಯವಸಾಯಕ್ಕಿಂತ ಹೆಚ್ಚು ಮಹತ್ವವನ್ನು ವ್ಯಾಪಾರಕ್ಕಾಗಿ ಕೊಡುತ್ತಿದ್ದರು. ಅವರು ಹಳ್ಳಿಯ ಒಬ್ಬ ಲೇವಾದೇವಿಗಾರರಿಂದ 50 ಸಾವಿರ ರೂ. ಸಾಲ ಪಡೆದು ಕಬ್ಬಿಣದ ವಸ್ತುಗಳ ವ್ಯಾಪಾರ ಆರಂಭಿಸಿದರು. ಆದರೆ ಪ್ರತಾಪ್‌ ಎಷ್ಟು ಪರಿಶ್ರಮದಿಂದ ಕೆಲಸ ಮಾಡಿದರೂ ಸಾಲ ತೀರಿಸಲಾಗಲಿಲ್ಲ. ಅವರಿಗೆ ಸಾಲ ಹಾಗೂ ಅದರ ಮೇಲಿನ ಬಡ್ಡಿ ಹೊರೆಯಾಗತೊಡಗಿತು.

ಒಂದು ದಿನ ಪ್ರತಾಪ್‌ ತಮ್ಮ ಗೆಳೆಯರೊಂದಿಗೆ ಈ ವಿಷಯ ಪ್ರಸ್ತಾಪಿಸಿದರು. ಆ ಗೆಳೆಯರು ಆಗಾಗ್ಗೆ ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದರು. ತಮ್ಮ ಕೆಲಸ ಮುಗಿದ ನಂತರ ಸಾಲ ತೀರಿಸುತ್ತಿದ್ದರು. ಇದರಿಂದ ಮುಂದೆಯೂ ಅವರು ಬ್ಯಾಂಕ್‌ನಿಂದ ಸಾಲ ಪಡೆಯಲು ಸುಲಭವಾಗುತ್ತಿತ್ತು. ಗೆಳೆಯನೊಂದಿಗೆ ಪ್ರತಾಪ್‌ ಬ್ಯಾಂಕ್‌ ಮ್ಯಾನೇಜರ್‌ನ್ನು ಭೇಟಿಯಾಗಿ ತಮ್ಮ ಸಮಸ್ಯೆ ತಿಳಿಸಿದರು. ನಂತರ ಪ್ರತಾಪ್‌ ಬ್ಯಾಂಕ್‌ನಿಂದ ಶೇ.8ರ ಬಡ್ಡಿಯಲ್ಲಿ 1 ಲಕ್ಷ ರೂ. ಸಾಲ ಪಡೆದರು. ಅದರಿಂದ ಅವರು ಲೇವಾದೇವಿಗಾರರ ಸಾಲವನ್ನು ಪೂರ್ತಿಯಾಗಿ ತೀರಿಸಿದರು. ನಂತರ ಅವರು ಕಬ್ಬಿಣದ ಅಂಗಡಿಯೊಂದಿಗೆ ವ್ಯವಸಾಯವನ್ನೂ ಮಾಡಲು ತೊಡಗಿದರು. ಕೆಲವೇ ತಿಂಗಳುಗಳಲ್ಲಿ ಅವರು ಬ್ಯಾಂಕ್‌ನ ಪೂರ್ತಿ ಸಾಲ ತೀರಿಸಿದರು.

“ಒಂದು ವೇಳೆ ಬ್ಯಾಂಕ್‌ ನನಗೆ ಸಾಲ ಕೊಡದಿದ್ದರೆ ನಾನು ಇಡೀ ಜೀವನದಲ್ಲಿ ಲೇವಾದೇವಿಗಾರರ ಸಾಲ ತೀರಿಸಲು ಸಾಧ್ಯವಾಗುತ್ತಿರಲಿಲ್ಲ,” ಎಂದು ಪ್ರತಾಪ್‌ ಹೇಳುತ್ತಾರೆ.

ಗ್ರಾಮೀಣ ಬ್ಯಾಂಕಿಂಗ್‌ನ ಅಗತ್ಯ

ಬ್ಯಾಂಕುಗಳ ರಾಷ್ಟ್ರೀಕರಣದ ಹಿಂದಿನ ಅತ್ಯಂತ ದೊಡ್ಡ ಕಾರಣ ಬ್ಯಾಂಕುಗಳನ್ನು ಹಳ್ಳಿಗಳವರೆಗೆ ವಿಸ್ತಾರಗೊಳಿಸುವುದಾಗಿತ್ತು. ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿಗೆ ಹಳ್ಳಿಯವರನ್ನು ಲೇವಾದೇವಿಗಾರರ ಕಪಿಮುಷ್ಟಿಯಿಂದ ಬಿಡಿಸಬೇಕಾಗಿದ್ದರೆ ಬ್ಯಾಂಕುಗಳನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗಬೇಕು ಅನ್ನಿಸಿತ್ತು.

ಹಳ್ಳಿಗಳಲ್ಲಿ ಬ್ಯಾಂಕುಗಳನ್ನು ತೆರೆಯುವುದರಿಂದ ಹೆಚ್ಚಿನ ಲಾಭ ಬರದಿದ್ದುದರಿಂದ ಹಳ್ಳಿಗಳಲ್ಲಿ ಬ್ಯಾಂಕ್‌ನ ಶಾಖೆಗಳನ್ನು ತೆರೆಯಲು ಸಿದ್ಧರಿರಲಿಲ್ಲ. ಹೀಗಾಗಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿ ಅವುಗಳ ಶಾಖೆಗಳನ್ನು ಹಳ್ಳಿಗಳಲ್ಲಿ ತೆರೆಯಲು ಆರಂಭಿಸಲಾಯಿತು.

ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕುಗಳಿಗೆ ಜಮೆ ಮಾಡಿದ ಹಣದಲ್ಲಿ ಶೇ.60ರಷ್ಟನ್ನು ಸಾಲ ನೀಡಬೇಕೆಂದು ಗೈಡ್‌ ಲೈನ್ ನೀಡಿತು. ಅದನ್ನು ಬ್ಯಾಂಕಿನ ಭಾಷೆಯಲ್ಲಿ ಸಿಡಿಓ ರೇಶಿಯೋ ಎನ್ನುತ್ತಾರೆ. ಒಟ್ಟು ಸಾಲದಲ್ಲಿ ಶೇ.40ರಷ್ಟನ್ನು ಪ್ರಾಥಮಿಕತೆ ಪಡೆದ ಕ್ಷೇತ್ರಗಳಿಗೆ ಮತ್ತು ಶೇ.40 ರಷ್ಟನ್ನು ಗ್ರಾಮೀಣ ಕೃಷಿ ಕ್ಷೇತ್ರಗಳಿಗೆ ಕೊಡಲಾಯಿತು.

ರಾಷ್ಟ್ರೀಕರಣದ ನಂತರ ಹಳ್ಳಿಗಳಲ್ಲಿ ಗ್ರಾಮೀಣ ಬ್ಯಾಂಕ್‌ಗಳನ್ನು ತೆರೆಯಲಾಯಿತು.

ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ಶಾಖೆಗಳನ್ನು ಗ್ರಾಮೀಣ ಭಾಗಗಳಲ್ಲಿ ತೆರೆದವು. ನಂತರವೇ ಸ್ವಯಂ ಸಹಾಯ ಗ್ರೂಪ್‌, ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಕಿಸಾನ್‌ ವಿಮೆ, ಬೆಳೆಯ ವಿಮಾ ಯೋಚನೆ, ಕೃಷಿಗಾಗಿ ಸಾಲ ಕೊಡಲು ಆರಂಭಿಸಿದವು.

ರೈತರನ್ನು ಜಾಗೃತಗೊಳಿಸಲು ಬ್ಯಾಂಕುಗಳು ಹಳ್ಳಿಗಳಲ್ಲಿ ಕಿಸಾನ್‌ ಕ್ಲಬ್‌ಗಳನ್ನು ಆರಂಭಿಸಿವೆ. ಬ್ಯಾಂಕುಗಳು ಹಳ್ಳಿಗಳಲ್ಲಿ ಕಿಸಾನ್‌ಕ್ಲಬ್‌ಗಳ ಮೂಲಕ ತಮ್ಮ ಕೃಷಿಯ ಅಭಿವೃದ್ಧಿಯ ಯೋಜನೆಗಳನ್ನು ಪ್ರಚುರಪಡಿಸುತ್ತವೆ. ಕಿಸಾನ್‌ ಕ್ಲಬ್‌ಗಳನ್ನು ನಡೆಸಲು ಬ್ಯಾಂಕ್ ಆರ್ಥಿಕ ಸಹಾಯ ನೀಡುತ್ತದೆ. ಬ್ಯಾಂಕ್‌ನಿಂದ ಪಡೆದ ಸಾಲವನ್ನು ಹೇಗೆ ಸದುಪಯೋಗ ಮಾಡಿಕೊಳ್ಳುವುದು ಎಂದು ಕ್ಲಬ್ ರೈತರಿಗೆ ತಿಳಿಸಿಕೊಡುತ್ತದೆ. ರೈತರು ಕ್ಲಬ್‌ಗಳ ಮೂಲಕ ಸಾಲ ಪಡೆಯಲು ಬ್ಯಾಂಕಿಗೆ ಬರುತ್ತಾರೆ. ಇದರಲ್ಲಿ ಸರ್ಕಾರಿ ನೌಕರರ ಹಸ್ತಕ್ಷೇಪ ಕಡಿಮೆಯಾಗುತ್ತದೆ.

ರೈತರೇ ಬ್ಯಾಂಕಿನ ಶಕ್ತಿ

1990ರ ನಂತರ ದೇಶದಲ್ಲಿ ಪ್ರೈವೇಟ್‌ ಬ್ಯಾಂಕ್‌ಗಳು ಹೆಚ್ಚಾದಾಗ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಅನೇಕ ರೀತಿಯ ಸವಾಲುಗಳನ್ನು ಒಡ್ಡಿದವು. ಪ್ರೈವೇಟ್‌ ಬ್ಯಾಂಕ್‌ಗಳು ಸರ್ಕಾರಿ ಬ್ಯಾಂಕ್‌ಗಳಿಗಿಂತ ಒಳ್ಳೆಯ ಸೌಲಭ್ಯಗಳನ್ನು ಕೊಡಲಾರಂಭಿಸಿದಾಗ ಬಹಳಷ್ಟು ಗ್ರಾಹಕರು ಅತ್ತ ವಾಲತೊಡಗಿದರು. ಪ್ರೈವೇಟ್‌ ಬ್ಯಾಂಕ್‌ಗಳು ಅಭಿವೃದ್ಧಿ ಸಾಧಿಸಿದವು ಮತ್ತು ತಮ್ಮ ಶಾಖೆಗಳನ್ನು ಕಂಪ್ಯೂಟರೀಕರಣಗೊಳಿಸಿದವು. ಅದರಿಂದ ಅವುಗಳ ಖರ್ಚು ಕಡಿಮೆಯಾಯಿತು. ಸರ್ಕಾರಿ ಬ್ಯಾಂಕ್‌ಗಳಿಗೆ ನಷ್ಟವಾಗತೊಡಗಿದಾಗ ಅವಕ್ಕೆ ಗ್ರಾಮೀಣ ಬ್ಯಾಂಕಿಂಗ್‌ ಸದೃಢ ಆಧಾರ ಎನ್ನಿಸಿತು. ಇಂದು ಸದೃಢವಾಗಿರುವ ಗ್ರಾಮೀಣ ಅರ್ಥ ವ್ಯವಸ್ಥೆ ಸರ್ಕಾರಿ ಬ್ಯಾಂಕ್‌ಗಳಿಗೆ ದೊಡ್ಡ ಆಸರೆಯಾಗಿದೆ. ಅದನ್ನು ಯಾವುದೇ ಪ್ರೈವೇಟ್‌ ಬ್ಯಾಂಕ್‌ ಎದುರಿಸಲಾಗುತ್ತಿಲ್ಲ.

ಹಳ್ಳಿಯವರಿಗೆ ಹೇಗೆ ಗ್ರಾಮೀಣ ಬ್ಯಾಂಕ್‌ ವರದಾನವಾಗಿದೆಯೋ ಹಾಗೆಯೇ ಬ್ಯಾಂಕ್‌ಗಳಿಗೆ ಹಳ್ಳಿಯವರು ಸದೃಢ ಆಧಾರವಾಗಿದ್ದಾರೆ. ಗ್ರಾಮೀಣ ಬ್ಯಾಂಕಿಂಗ್‌ ಇಲ್ಲದೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಪ್ರೈವೇಟ್‌ ಬ್ಯಾಂಕ್‌ಗಳೊಂದಿಗೆ ಸ್ಪರ್ಧಿಸಲಾಗುವುದಿಲ್ಲ.

ಗ್ರಾಮೀಣ ಬ್ಯಾಂಕ್‌ಗಳು ಪ್ರಾಮಾಣಿಕತೆಯಿಂದ ತಮ್ಮ ಸೇವೆಯನ್ನು ಕೊಡುವಂತಾಗಬೇಕು ಮತ್ತು ಹಳ್ಳಿಯವರು ತಾವು ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಸಾಲದ ಹಣವನ್ನು ಬಡ್ಡಿಸಹಿತ ಸರಿಯಾದ ಸಮಯಕ್ಕೆ ಬ್ಯಾಂಕ್‌ಗೆ ಕಟ್ಟುತ್ತಿರಬೇಕು. ಇದರಿಂದ ಬ್ಯಾಂಕ್‌ ಮತ್ತು ರೈತ ಇಬ್ಬರಿಗೂ ಒಳಿತಾಗುತ್ತದೆ. ಎಲ್ಲಿ ರೈತರು ಸಂತೋಷವಾಗಿರುತ್ತಾರೋ ಅಲ್ಲಿ ಬ್ಯಾಂಕ್‌ ಅಭಿವೃದ್ಧಿಯ ಹಾದಿಯಲ್ಲಿರುತ್ತದೆ.

– ಸಿ.ಕೆ. ಅಶ್ವಿನಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ