ಪ್ರಾಣಕ್ಕೆ ಬದಲು ಪ್ರಾಣ : ಎಷ್ಟು ಸರಿ?
ಅತ್ಯಾಚಾರಿಗಳಿಗೆ ಸಾಮಾನ್ಯವಾಗಿ ಗಲ್ಲು ಶಿಕ್ಷೆ ವಿಧಿಸಲು ಮನವಿ ಮಾಡಲಾಗುತ್ತದೆ. ಆದರೆ ಕೋರ್ಟುಗಳು ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸದೇ ಬರ್ಬರತೆಯಿಂದ ಕೂಡಿದ ಸಾಮೂಹಿಕ ಹತ್ಯಾಕಾಂಡಗಳಲ್ಲಿ ಸಿಕ್ಕಿಬಿದ್ದವರಿಗೆ ಗಲ್ಲು ಶಿಕ್ಷೆ ವಿಧಿಸುತ್ತವೆ. ಆಜೀವ ಕಾರಾಗೃಹ ಶಿಕ್ಷೆಯನ್ನು ಬಹಳಷ್ಟು ಅಪರಾಧಗಳಿಗೆ ವಿಧಿಸಲಾಗುತ್ತಿದೆ. ಅದಕ್ಕಿಂತ ದೊಡ್ಡ ಶಿಕ್ಷೆ ಎಂದರೆ ಗಲ್ಲು ಶಿಕ್ಷೆಯೇ ಆಗಿದೆ.
ಕ್ರೂರ ಅಪರಾಧಿಗಳು ಸೇಡು ತೀರಿಸಿಕೊಳ್ಳುವುದನ್ನು ತಡೆಯಲು ಗಲ್ಲು ಶಿಕ್ಷೆ ನೀಡಬೇಕೆಂದು ಕೆಲವರು ಹೇಳುತ್ತಾರೆ. ಆದರೆ ಅಪರಾಧ ಘಟಿಸಿದ ನಂತರ ಗಲ್ಲು ಶಿಕ್ಷೆ ವಿಧಿಸುವಲ್ಲಿ ಕನಿಷ್ಠ 10 ವರ್ಷಗಳು ಆಗುತ್ತವೆ.
ಅಮೆರಿಕಾದಲ್ಲಿ ಮರಣದಂಡನೆ ನೀಡಲಾಗುತ್ತದೆ. ಪ್ರತಿ ವರ್ಷ ಸುಮಾರು 35-40 ಅಪರಾಧಿಗಳಿಗೆ ?ಶಿಕ್ಷೆ ನೀಡಲಾಗುತ್ತದೆ. ಆದರೆ ಈ ನಡುವೆ ಶಿಕ್ಷೆಯಾಗುತ್ತಿಲ್ಲ. ಸರ್ಕಾರ ಅಥವಾ ಕೋರ್ಟಿನ ಮನಸ್ಸು ಕರಗುತ್ತಿದೆ ಎಂದಲ್ಲ. ಆದರೆ ಅಲ್ಲಿ ಕೆಮಿಕಲ್ ಇಂಜೆಕ್ಷನ್‌ನಿಂದ ನೋವು ರಹಿತ ಮರಣದಂಡನೆ ಕೊಡುವುದಿದ್ದು ಅದಕ್ಕೆ ಬೇಕಾದ ಕೆಮಿಕಲ್ಸ್ ಸಿಗುತ್ತಿಲ್ಲ.
ಮಾನವತಾವಾದಿಗಳು ಔಷಧ ಕಂಪನಿಗಳಿಗೆ ಮರಣದಂಡನೆ ನೀಡುವಲ್ಲಿ ಉಪಯೋಗಿಸುವ ಕೆಮಿಕಲ್ಸ್ ತಯಾರಿಸಬಾರದು ಎಂದು ಒತ್ತಡ ಹಾಕಿದ್ದಾರೆ. ಹೀಗಾಗಿ ಈ ಇಂಜೆಕ್ಷನ್ ಸಿಗುವುದೇ ಇಲ್ಲ.
ಭಾರತದಲ್ಲಿ ಮರಣ ದಂಡನೆಯನ್ನು ಗಲ್ಲಿಗೆ ಹಾಕುವುದರ ಮೂಲಕ ಕೊಡುತ್ತಿದ್ದು, ಅದು ಬಹಳ ಕ್ರೂರ ವಿಧಾನವಾಗಿದೆ. ಆದರೆ ಅದಕ್ಕೂ ಲಿವರ್ ಎಳೆದು ಕಾಲ ಕೆಳಗಿನ ಹಲಗೆಯನ್ನು ಸರಿಸುವವರು ಈಗ ಸಿಗುತ್ತಿಲ್ಲ. ಅಂದಹಾಗೆ ಗಲ್ಲಿಗೇರಿಸುವವರಿಗೆ ಸಾಮಾಜಿಕ ಬಹಿಷ್ಕಾರ ಇರುತ್ತದೆ. ಹೀಗಾಗಿ ಈ ಕಾರ್ಯಕ್ಕೆ ಎಷ್ಟೇ ಹಣ ಕೊಟ್ಟರೂ ಜನ ಸಿಗುವುದು ಕಡಿಮೆ.
ಪ್ರಾಣಕ್ಕೆ ಬದಲು ಪ್ರಾಣ ಎನ್ನುವ ಸಿದ್ಧಾಂತ ತಪ್ಪು. ಇದರಿಂದ ಅಪರಾಧಗಳು ನಿಂತಿಲ್ಲ. ಮರಣದಂಡನೆ ಅಪರಾಧಿಗಳ ಮನಸ್ಸಿನಲ್ಲಿ ಭಯ ಉಂಟು ಮಾಡುವುದಿಲ್ಲ. ಅಪರಾಧ ಮಾಡುವಾಗ ಅವರಲ್ಲಿ ಆವೇಶ, ಉನ್ಮಾದ ತುಂಬಿರುತ್ತದೆ. ತಾನು ಉಳಿದುಕೊಳ್ಳುತ್ತೇನೆ ಎಂಬ ತಪ್ಪು ತಿಳಿವಳಿಕೆ ಸಾಮಾನ್ಯವಾಗಿ ಅವರಲ್ಲಿರುತ್ತದೆ.
ಎಂಥದೇ ಅಪರಾಧವಾಗಲಿ, ಮರಣದಂಡನೆ ಶಿಕ್ಷೆ ಕ್ರೂರತೆಯ ಪ್ರತೀಕವಾಗಿದೆ. ಅವರ ಮನೆಯವರಿಗೆ ಇದೊಂದು ಭಯಂಕರ ಶಿಕ್ಷೆ. ಆಜೀವ ಕಾರಾಗೃಹಾಸದಲ್ಲಿ ತೋರಿದ ಒಳ್ಳೆಯ ವರ್ತನೆಗಾಗಿ ಸ್ವಲ್ಪ ಕಾಲದ ರಿಯಾಯಿತಿ ಸಿಗುವ ಭರವಸೆ ಇರುತ್ತದೆ.
ಅಪರಾಧಿಯಿಂದ ತೊಂದರೆಗೀಡಾದವರ ಬಗ್ಗೆ ಯೋಚಿಸುತ್ತಾ ಅಪರಾಧಿಯ ಮನೆಯವರ ಬಗ್ಗೆಯೂ ಯೋಚಿಸಬೇಕಾಗಿದೆ. ವಿಶೇಷವಾಗಿ ಸಭ್ಯ ಸಮಾಜದಲ್ಲಿ.
1984 ಮತ್ತು 2002ರ ದಂಗೆಗಳಲ್ಲಿ ಕೊಲೆಗಡುಕರಿಗೆ ಶಿಕ್ಷೆ ಸಿಗಲಿಲ್ಲ ಎಂದಾಗ, ಸಿಖ್ಖರು ಮತ್ತು ಮುಸ್ಲಿಮರನ್ನು ಕೊಂದದ್ದಕ್ಕೆ ಸಿಕ್ಕ ಪ್ರತಿಫಲವಿದು ಎಂದು ಅವರು ಹೆಮ್ಮೆ ಪಡುವಂತಿಲ್ಲ. ಅವರ ಮನಸ್ಸಿನಲ್ಲಿ ಏನಿದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಅವರು ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ.
ಅಪರಾಧಿಗಳು ಒಂದು ವೇಳೆ ಕಲ್ಲಿನಂಥ ಹೃದಯಿಗಳಾಗಿದ್ದರೆ ಅವರಿಗೇನೂ ಪಶ್ಚಾತ್ತಾಪವಾಗುವುದಿಲ್ಲ. ಆದರೆ ಅಂತಹ ಅಪರಾಧಿಯನ್ನು ಹಿಡಿಯಲಾಗುವುದಿಲ್ಲ ಅಥವಾ ಸಾಕ್ಷಿಗಳನ್ನು ಬೆದರಿಸಿ ಬಿಡುಗಡೆಯಾಗುತ್ತಾರೆ. ಮರಣದಂಡನೆಯ ಶಿಕ್ಷೆಯನ್ನು ಬಹಳಷ್ಟು ಜನರು ಅಪರಾಧ ನಡೆಯುತ್ತಿರುವುದನ್ನು ಕಣ್ಣಾರೆ ಕಂಡಿರಬೇಕು ಅಥವಾ ಅಪರಾಧಿಯ ಮನೆಯವರ ಬಳಿ ವಕಾಲತ್ತಿಗೆ ಹಣ ಇರಲಿಲ್ಲವೆಂದಾಗ ಇಂತಹವರಿಗೆ ಮರಣದಂಡನೆ ವಿಧಿಸಲ್ಪಡುತ್ತದೆ. ಅದು ತಪ್ಪು. ಏಕೆಂದರೆ ಜನರಿಗೆ ಆ ತಿಂಗಳು ಯಾರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು, ಅಪರಾಧಿ ಯಾವ ಅಪರಾಧ ಮಾಡಿದ್ದಾನೆ ಎಂದು ನೆನಪೇ ಇರುವುದಿಲ್ಲ.