ಸ್ಯಾಂಡಲ್​ವುಡ್​ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಈ ಸಂಬಂಧ ನಟ ಭಾಸ್ಕರ್ ಶೆಟ್ಟಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಈ ಪ್ರಕರಣ ಸಂಬಂಧ ವಾಸುದೇವರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ʻಫೀನಿಕ್ಸ್’ ಸಿನಿಮಾ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಒಟ್ಟು 3 ಕೋಟಿ 85 ಲಕ್ಷ ಹಣ ಪಡೆದು, ಹಣ ವಾಪಸ್ ನೀಡದೇ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಹಣ ವಾಪಸ್ ಕೇಳಲು ಮನೆಗೆ ತೆರಳಿದ್ದ ಸಂದರ್ಭದಲ್ಲಿ ದೂರುದಾರರಿಗೆ ಬೆದರಿಕೆ ಕೂಡ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ದೂರಿನ ಪ್ರಕಾರ, ಭಾಸ್ಕರ್ ಅವರು ಈ ಹಿಂದೆ ನಟ ದರ್ಶನ್ ಅವರ 'ಯೋಧ' ಚಿತ್ರದಲ್ಲಿ ಓಂ ಪ್ರಕಾಶ್ ರಾವ್ ಅವರೊಂದಿಗೆ ಕೆಲಸ ಮಾಡಿದ್ದರು. 'ಫೀನಿಕ್ಸ್' (Phoenix) ಸಿನಿಮಾ ನಿರ್ಮಾಣಕ್ಕಾಗಿ ಈ ಹಣವನ್ನು ಕೋರಲಾಗಿತ್ತು ಎಂದು ವರದಿಯಾಗಿದೆ. ಈ ಹಣವನ್ನು ಕೇವಲ ವೈಯಕ್ತಿಕ ಸಾಲವಾಗಿ ಪಡೆದಿರಲಿಲ್ಲ; ಬದಲಿಗೆ, ಆ ಚಿತ್ರದ ನಿರ್ಮಾಣಕ್ಕೆ ಆರ್ಥಿಕ ಬೆಂಬಲ ನೀಡುವಂತೆ ಭಾಸ್ಕರ್ ಅವರನ್ನು ಕೋರಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 3.85 ಕೋಟಿ ರೂ.ಗಳಷ್ಟು ವಂಚನೆ ನಡೆದಿದೆ ಎನ್ನಲಾಗಿದೆ.

ಭಾಸ್ಕರ್ ಶೆಟ್ಟಿ ಅವರಿಂದ 40 ಲಕ್ಷ ರೂ.ಗಳನ್ನು ಪಡೆಯಲಾಗಿತ್ತು ಮತ್ತು ವಾಸುದೇವ ಎಂಬುವವರಿಂದ 3 ಕೋಟಿ ರೂ.ಗಿಂತ ಹೆಚ್ಚಿನ ಹಣ ಪಡೆಯಲಾಗಿತ್ತು. ಈ ಹಣ ವಾಪಸ್ ಕೇಳಿದಾಗ ಅದನ್ನು ಮರುಪಾವತಿಸಿದೆ, ವಂಚಿಸಿದ್ದಾರೆ ಎಂದು ದೂರಿದ್ದಾರೆ.

ಹಣ ಮರುಪಾವತಿಯ ಬಗ್ಗೆ ವಿಚಾರಿಸಲು ನಿರ್ದೇಶಕರ ನಿವಾಸಕ್ಕೆ ಹೋದಾಗ ತಮ್ಮನ್ನು ನಿಂದಿಸಿ, ಅವಮಾನಿಸಲಾಯಿತು ಎಂದೂ ಅವರು ಆರೋಪಿಸಲಾಗಿದೆ.

ಈ ಕುರಿತು ಮಾತನಾಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್​, “ನಾನು ದುಡ್ಡು ತಕ್ಕೊಂಡು, ಸಾಲ ಮಾಡಿ ಸಿನಿಮಾ ಮಾಡುವವನು, ಅಡ್ಜಸ್ಟ್​ಮೆಂಟ್​ ಎನ್ನುವುದು ನನ್ನ ಜೀವನದಲ್ಲೇ ಇಲ್ಲ. ನನಗೆ ಸಿನಿಮಾ ಮೇಲೆ ಅಪಾರ ಪ್ರೀತಿಯಿದೆ. ಅದಕ್ಕಾಗಿ  ನಾನು ಈ ರೀತಿ ಇದ್ದೇನೆ” ಎಂದಿದ್ದಾರೆ.

ಈ ಚಿತ್ರಕ್ಕೆ ನಾನು ನಿರ್ಮಾಪಕ. ನಾನು ಕಷ್ಟಪಟ್ಟು, ನನ್ನ ಸ್ನೇಹಿತರ ವಲಯದಿಂದ ದುಡ್ಡು ತೆಗೆದುಕೊಂಡು ಬಂದಿದ್ದೇನೆ. ಇದರಲ್ಲಿ ನನ್ನ ಹೆಂಡತಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅವರ ಅಕೌಂಟ್​ ಹಣ ಹಾಕಿದ್ದಾರೆ. ಅದನ್ನು ನಾನೇ ಹಾಕಿಸಿದ್ದು, ಅದಕ್ಕೆ ನಾನೇ ಹೊಣೆ. ನನ್ನ ಹೆಂಡತಿ ಮತ್ತು ಮಗ ಇದಕ್ಕೆ ಕಾರಣವಲ್ಲ. ನಾನು ಸಿನಿಮಾ ಮಾಡೇ ಮಾಡುತ್ತೇನೆ. ಎಲ್ಲಾ ಸರಿಯಾಗಬೇಕು ಎಂದು ಓಂ ಪ್ರಕಾಶ್​ ರಾವ್​ ಹೇಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ